Header Ads

test

ಸಂದರ್ಶನಕ್ಕೆ ಬಂದ ಆ ಇಬ್ಬರು ಹುಡುಗಿಯರು ಯಾರು ಗೊತ್ತಾ.? ಗೊತ್ತಾದರೆ ಖಚಿತವಾಗಿ ಶಾಕ್ ಆಗ್ತೀರ.!

ಒಂದು ಕಡೆ ಸಂದರ್ಶನ ನಡೆಯುತ್ತಿದೆ.ಆಗಲೇ ಅಲ್ಲಿಗೆ ಒಂದು ಆಟೋ ಬಂದು ನಿಂತಿತು. ಆಟೋದಿಂದ ಹಿರಿಯರೊಬ್ಬರು, ಅವರ ಜತೆಗೆ ಇಬ್ಬರು ಹುಡುಗಿಯರು ಇಳಿದು ಸಂದರ್ಶನ ನಡೆಯುತ್ತಿದ್ದ ಸ್ಥಳಕ್ಕೆ ನಡೆದುಕೊಂಡು ಬರುತ್ತಿದ್ದಾರೆ. ಅಷ್ಟೇ ಅಲ್ಲಿಯವರೆಗೂ ಅಲ್ಲಿ ನಿಶಬ್ದವಾಗಿದ್ದ ವಾತಾವರಣ ಒಮ್ಮೆಲೆ ಗದ್ದಲಕ್ಕೆ ಒಳಗಾಯಿತು.ಅಧಿಕಾರಿಗಳು ಎದ್ದುನಿಂತು ಆಟೋದಲ್ಲಿ ಬಂದ ವ್ಯಕ್ತಿಗೆ ನಮಸ್ಕಾರ ಮಾಡಿ ಆ ಇಬ್ಬರು ಹುಡುಗಿಯರಿಗೆ ಯಾವುದೇ ಸಂದರ್ಶನ ಇಲ್ಲದೆ ಉದ್ಯೋಗ ನೀಡಲು ರೆಡಿಯಾಗುತ್ತಿದ್ದರು. ಆ ಹಿರಿಯ ವ್ಯಕ್ತಿ ಪ್ರತಿ ನಮಸ್ಕಾರ ಮಾಡಿದರು. ಕಟ್ ಮಾಡಿದರೆ ಅವರೊಬ್ಬರ ರಾಜ್ಯದ ಮುಖ್ಯಮಂತ್ರಿ ಮಗ, ಆ ಇಬ್ಬರು ಹುಡುಗಿಯರು ಮುಖ್ಯಮಂತ್ರಿ ಸೋದರ ಸೊಸೆಯರು ಎಂದು ಗೊತ್ತಾಗುತ್ತದೆ. ಇಂತಹ ಕಥೆಗಳು ಸಿನಿಮಾಗಳಲ್ಲಿ ಆದರೆ ತುಂಬಾ ಚೆನ್ನಾಗಿರುತ್ತವೆ. ಅದೆ ನಿಜಜೀವನದಲ್ಲಿ ನಡೆದರೆ.ನಿಜವಾಗಿ ನಡೆದಿದೆ ಉತ್ತರಖಂಡದಲ್ಲಿ.


ಉತ್ತರಖಂಡ ರಾಜ್ಯದಲ್ಲಿನ ಹರಿದ್ವಾರ್‌ನಲ್ಲಿ ಜಾಬ್ ಮೇಳಾ ನಡೆಯುತ್ತಿದೆ. ಅಲ್ಲಿಗೆ ಆಟೋದಲ್ಲಿ ಬಂದ ತನ್ನ ಇಬ್ಬರು ಮೊಮ್ಮಕ್ಕಳೊಂದಿಗೆ ಬಂದ ಹಿರಿಯರು ಬೇರಾರು ಅಲ್ಲ ಸಿಎಂ ಯೋಗಿ ಆದಿತ್ಯನಾಥ್ ತಂದೆ ಆನಂದ್ ಸಿಂಗ್.ಇಬ್ಬರು ಮಕ್ಕಳು ಯೋಗಿ ಸೋದರ ಸೊಸೆಯರಾದ ಲಕ್ಷ್ಮಿ ರಾವತ್, ಅರ್ಚನಾ. ಅವರನ್ನು ನೋಡಿ ಅಲ್ಲಿನ ಅಧಿಕಾರಿಗಳು ರಾಜಮರ್ಯಾದೆ ಮಾಡಲು ಮುಂದಾದರು. ಆದರೆ ಯೋಗಿ ಅವರ ತಂದೆ ಅದನ್ನು ನಯವಾಗಿ ನಿರಾಕರಿಸಿದರು, ಅಷ್ಟೇ ಅಲ್ಲದೆ ಮೊಮ್ಮಕ್ಕಳನ್ನು ಸಾಲಿನಲ್ಲಿ ಉದ್ಯೋಗದ ಸಂದರ್ಶನಕ್ಕೆ ಕಳುಹಿಸಿದರು. ತಮಗೆ ಯಾವುದೇ ಮರ್ಯಾದೆಗಳನ್ನು ದಯವಿಟ್ಟು ಮಾಡಬೇಡಿ ಎಂದು ವಿನಂತಿಸಿಕೊಂಡರು. ಸಂದರ್ಶನಕ್ಕೆ ಹೋಗುತ್ತಿದ್ದರೆ, ಸಂದರ್ಶನವನ್ನು ಹೇಗೆ ಎದುರಿಸಬೇಕು, ಉದ್ಯೋಗವನ್ನು ಹೇಗೆ ಸಂಪಾದಿಸಬೇಕು ಎಂಬುದು ಗೊತ್ತಾಗುತ್ತದೆ. ರೆಕಮಂಡೇಷನ್ ಮೂಲಕ ಉದ್ಯೋಗ ಗಳಿಸಿದರೆ ಪ್ರತಿಭೆ ಇರುವವರ ಪರಿಸ್ಥಿತಿ ಏನು.. ಒಂದು ವೇಳೆ ನನ್ನ ಮಗ ಇವರ ಉದ್ಯೋಗಕ್ಕೆ ಶಿಫಾರಸು ಮಾಡಿದರೂ ನಾನು ತಿರಸ್ಕರಿಸುತ್ತೇನೆ ಎಂದು ಅಲ್ಲಿನ ಮಾಧ್ಯಮಗಳಿಗೆ ತಿಳಿಸಿದರು ಆನಂದ್ ಸಿಂಗ್.

ನಿಜ ಅಲ್ಲವೇ.ಪ್ರತಿಯೊಬ್ಬರೂ ಏನೋ ಒಂದು ಶಿಫಾರಸಿನ ಮೂಲಕ ಉದ್ಯೋಗಗಳನ್ನು ಗಳಿಸಿದರೆ ನಿಜವಾದ ಪ್ರತಿಭೆ ಇರುವವರು ಯಾವುದೇ ರೆಕಮಂಡೇಷನ್ ಇಲ್ಲದೆ ಉದ್ಯೋಗ ಸಿಗದೆ ಹಿಂದುಳಿಯುತ್ತಿದ್ದಾರೆ. ಕೆಲವರು ಉದ್ಯೋಗ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.ಎಲ್ಲರೂ ಆದಿತ್ಯನಾಥ್ ಅವರ ತಂದೆಯ ರೀತಿ ಯೋಚಿಸಿದರೆ ಚೆನ್ನಾಗಿರುತ್ತದೆ ಅಲ್ಲವೇ.?

No comments