Header Ads

test

ಈ ರೀತಿ ನಿಮ್ಮ ಮೊಬೈಲ್‌ಗೆ ಮೆಸೇಜ್ ಬಂದಿದೆಯಾ ಆದರೆ ಎಚ್ಚರ.! ಮಹಿಳೆಯೊಬ್ಬರ ಲೈವ್ ಎಕ್ಸ್‌ಪೀರಿಯನ್ಸ್

ತಂತ್ರಜ್ಞಾನವನ್ನು ಬಳಸಿಕೊಂಡು ತುಂಬಾ ಬುದ್ಧಿವಂತಿಕೆಯಿಂದ ಅದನ್ನು ಬಳಸುತ್ತಾ ಕೆಲವರು ಜನರನ್ನು ಹೇಗೆಲ್ಲಾ ಮೋಸ ಮಾಡುತ್ತಿದ್ದಾರೆ ಅಂತ ನಿತ್ಯ ನಾವು ನೋಡುತ್ತಿದ್ದೇವೆ. ದಿನಕೊಂದು ತಂತ್ರ ಬಳಸಿ ಸೈಬರ್ ಕಳ್ಳರು ಮೋಸ ಮಾಡುತ್ತಾ ಜರನ್ನು ದೋಚುತ್ತಿದ್ದಾರೆ. ಇದರಿಂದ ಜನ ಲಬೋ ದಿಬೋ ಅನ್ನದೆ ಬೇರೆ ವಿಧಿಯಿಲ್ಲದಂತಾಗಿದೆ. ಈ ರೀತಿಯ ಘಟನೆಗಳ ಬಗ್ಗೆ ತುಂಬಾ ಎಚ್ಚರದಿಂದ ಇರುವುದು ಅಗತ್ಯ. ಇಲ್ಲದಿದ್ದರೆ ಮೋಸಗಾರರ ಬಲೆಗೆ ಬಿದ್ದು ನಷ್ಟ ಮಾಡಿಕೊಳ್ಳಬೇಕಾಗುತ್ತದೆ. ಪುಣೆ ಮೂಲದ ಮಹಿಳೆಯೊಬ್ಬರು ಸಹ ಸ್ವಲ್ಪ ಇದೆ ರೀತಿ ಮೋಸ ಹೋದರು. ಆದರೆ ತುಂಬಾ ಬುದ್ಧಿವಂತಿಕೆಯಿಂದ ಆಲೋಚಿಸಿದ ಕಾರಣ ಸೈಬರ್ ಕಳ್ಳನೊಬ್ಬನಿಂದ ಪಾರಾದರು. ಇಷ್ಟಕ್ಕೂ ನಡೆದದ್ದೇನೆಂದರೆ.


ಆಕೆ ಹೆಸರು ಪವಿತ್ರಾ. ಇರುವುದು ಪುಣೆಯಲ್ಲಿ. ಆಕೆ ತನ್ನ ಮಗನಿಗಾಗಿ ತಂದಿದ್ದ ಸ್ಟ್ರೋಲರ್ (ಚಿಕ್ಕಮಕ್ಕಳನ್ನು ಕೂರಿಸಿಕೊಂಡು ತಳ್ಳುವ ಗಾಡಿ) ನಿರುಪಯುಕ್ತವಾಗಿದ್ದ ಕಾರಣ ಅದನ್ನು ಮಾರಲು ಓಎಲ್‌ಎಕ್ಸ್ ಎಂಬ ವೆಬ್‍ಸೈಟ್‍ನಲ್ಲಿ ಪೋಸ್ಟ್ ಮಾಡಿದರು. ಆದರೆ ಅದನ್ನು ಅಲ್ಲಿ ಹಾಕಿದಾಗಿನಿಂದ ಯಾರೂ ಅದನ್ನೂ ಕೊಳ್ಳಲಿಲ್ಲ. ಇದರಿಂದ ಆ ಸಂಗತಿಯನ್ನು ಆಕೆ ಮರೆತೇ ಹೋದರು. ಒಂದು ದಿನ ಇದ್ದಕ್ಕಿದ್ದಂತೆ ವ್ಯಕ್ತಿಯೊಬ್ಬ ಆಕೆಗೆ ಫೋನ್ ಮಾಡಿ ತಾನು ಆ ಗಾಡಿಯನ್ನು ಕೊಳ್ಳುವುದಾಗಿ ಹೇಳಿದ. ಅದಕ್ಕಾಗಿ ಎಷ್ಟು ಆಗುತ್ತದೋ ಅಷ್ಟನ್ನು ಖಾತೆಗೆ ಜಮೆ ಮಾಡುತ್ತೇನೆಂದು, ಖಾತೆ ಡೀಟೇಲ್ಸ್ ಆಕೆಯನ್ನು ಕೇಳಿದ. ಇದಕ್ಕೆ ಆಕೆ ಮೆಸೇಜ್ ರೂಪದಲ್ಲಿ ಉತ್ತರಿಸಿದರು. ಖಾತೆ ನಂಬರ್ ಹೇಳಿದ ಕಾರಣ, ಆ ಖಾತೆಗೆ ಹಣ ಜಮೆ ಆಗಿರುವಂತೆ ಮೊದಲೇ ಸಿದ್ಧ ಮಾಡಿಟ್ಟುಕೊಂಡಿದ್ದ ಪರಿಕರವೊಂದರ ಸಹಾಯದಿಂದ ಆಕೆಗೆ ಮೆಸೇಜ್ ಕಳುಹಿಸಿದ. ಇದರಿಂದ ಪವಿತ್ರಾ ನಿಜವಾಗಿಯೂ ಹಣ ಕ್ರೆಡಿಟ್ ಆಗಿದೆ ಎಂದುಕೊಂಡರು.

ಆದರೆ ಆ ಗಾಡಿಯ ಖರೀದಿ ರೂ.3,500. ಆದರೆ ಆ ವ್ಯಕ್ತಿ ಕಳುಹಿಸಿದ ಮೆಸೇಜ್‌ನಲ್ಲಿ ರೂ.13,500 ಕ್ರೆಡಿಟ್ ಆದಂತೆ ಇತ್ತು. ಇದರಿಂದ ರೂ.10 ಸಾವಿರ ಬೈ ಮಿಸ್ಟೇಕ್ ಹೆಚ್ಚಾಗಿ ಹಾಕಿದೆ ಎಂದು ಆ ವ್ಯಕ್ತಿ ಆಕೆಗೆ ಹೇಳಿದ. ಇದರಿಂದ ಆಕೆ ನಿಜ ಎಂದು ತಿಳಿದುಕೊಂಡು ರೂ.10 ಸಾವಿರ ಟ್ರಾನ್ಸ್‌ಫರ್ ಮಾಡಲು ಸಿದ್ಧವಾದರು. ಆದರೆ ಯಾವುದಕ್ಕೂ ಒಮ್ಮೆ ನೆಟ್‍ಬ್ಯಾಂಕಿಂಗ್ ಮೂಲಕ ಚೆಕ್ ಮಾಡಿಕೊಳ್ಳೋಣ ಎಂದುಕೊಂಡು ಹಾಗೆಯೇ ಮಾಡಿದರು. ನೋಡಿದರೆ ಅದರಲ್ಲಿ ಹಣವೇನು ಕ್ರೆಡಿಟ್ ಆಗಿರಲಿಲ್ಲ. ಇದರಿಂದ ಆ ವ್ಯಕ್ತಿ ಹಣ ಹಾಕಿದಂತೆ, ಬ್ಯಾಂಕ್‍ನವರು ಕಳುಹಿಸಿದಂತೆ ಸುಳ್ಳು ಮೆಸೇಜ್ ಕಳುಹಿಸಿದ್ದ. ಇದರಿಂದ ಆ ವ್ಯಕ್ತಿ ಪವಿತ್ರಾ ಅವರಿಗೆ ಪದೇಪದೇ ಫೋನ್ ಮಾಡುತ್ತಿದ್ದ. ಬೈ ಮಿಸ್ಟೇಕ್ ರೂ.10 ಸಾವಿರ ಕ್ರೆಡಿಟ್ ಆಗಿದೆ ಎಂದೂ, ಕೂಡಲೆ ಆ ಮೊತ್ತವನ್ನು ತನ್ನ ಖಾತೆಗೆ ಟ್ರಾನ್ಸ್‌ಪರ್ ಮಾಡಬೇಕೆಂದು, ತನ್ನ ತಾಯಿ ಆಸ್ಪತ್ರೆಯಲ್ಲಿದ್ದಾರೆಂದು ಆಕೆಗೆ ಹೇಳಿದ. ಆದರೆ ಆಕೆ ಫೋನ್ ಎತ್ತಲಿಲ್ಲ. ಮೆಸೇಜ್ ಒಂದನ್ನು ಹಾಕಿದ. ನಿಮ್ಮ ಟ್ರಿಕ್ಸ್ ಇನ್ನು ಸಾಕು. ನನಗೆ ಹಣ ಟ್ರಾನ್ಸ್‌ಫರ್ ಆಗಿಲ್ಲ. ನನ್ನನ್ನು ಮೋಸ ಮಾಡಲು ಪ್ರಯತ್ನಿಸಬೇಡ.ಎಂದು ಆ ವ್ಯಕ್ತಿಗೆ ಮೆಸೇಜ್ ಹಾಕಿದ್ದರು. ಈ ಹಿನ್ನೆಲೆಯಲ್ಲಿ ತನಗಾದ ಅನುಭವವನ್ನು ಪುಣೆ ಸೈಬರ್ ಸೆಲ್ ಪೊಲೀಸರಿಗೆ ದೂರು ನೀಡಿದರು. ನೋಡಿದರಲ್ಲವೆ.ಮೋಸಗಾರರು ಯಾವೆಲ್ಲಾ ರೀತಿ ದೋಚುತ್ತಾರೆ ಎಂದು. ನಿಮಗೂ ಈ ರೀತಿಯ ಘಟನೆಗಳು ಎದುರಾಗಬಹುದು. ಹಾಗಾಗಿ ಎಚ್ಚರದಿಂದಿರಿ. ಬ್ಯಾಂಕ್‍ನಿಂದ ಮೆಸೇಜ್ ಬಂದಂತೆ ಮೆಸೇಜ್ ಬಂದರೆ ಮೊದಲು ಪರೀಕ್ಷಿಸಿಕೊಳ್ಳಿ. ಇಲ್ಲದಿದ್ದರೆ ಸೈಬರ್ ಅಪರಾಧಿಗಳ ಜಾಲದಲ್ಲಿ ಬೀಳಬೇಕಾಗುತ್ತದೆ.

No comments