Header Ads

test

ಭಕ್ತರಿಗೆ ಗಣೇಶನ ಬಹಿರಂಗ ಪತ್ರ . ಅವರೇಗೆ ನನ್ನ ಭಕ್ತರಾಗುತ್ತಾರೆ ಎಂದು ಪ್ರಶ್ನೆಗಳ ಸುರಿಮಳೆ.

ಪ್ರೀತಿಯ ಭಕ್ತರಿಗೆ.ಪ್ರೀತಿಯಿಂದ ನಿಮ್ಮ ಏಕದಂತ ಬರೆಯುವುದೇನೆಂದರೆ.ಪ್ರೀತಿಯ ಭಕ್ತರಿಗೆ.ಪ್ರೀತಿಯಿಂದ ನಿಮ್ಮ ಏಕದಂತ ಬರೆಯುವುದೇನೆಂದರೆ.ನವರಾತ್ರಿಗಳು ಭಕ್ತಿಯಿಂದ ನೀವು ಮಾಡುವ ಪೂಜೆಗಳಿಗೆ ಧನ್ಯವಾದಗಳು. ಆದರೆ ಈ ದಿನ ನಾನು ನಿಮಗೆ ಕೆಲವೊಂದು ವಿಷಯಗಳನ್ನು ಹೇಳಬೇಕೆಂದಿದ್ದೇನೆ.

ನನ್ನಮ್ಮ ನನ್ನನ್ನು ಮಣ್ಣಿನಿಂದ, ಅರಿಶಿಣದಿಂದ ಮಾಡಿದ್ದಳು. ನೀವೇನೋ ನನ್ನನ್ನು ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ಮಾಡುತ್ತಿದ್ದೀರಾ... ನನ್ನನು ಯಾರು ಪೂಜಿಸುತ್ತಾರೋ ಆ ಕುಟುಂಬ ಯಜಮಾನನ ಅಂಗುಷ್ಟ (ಹೆಬ್ಬೆರಳು) ಎತ್ತರ ಮಾತ್ರ ನನ್ನ ಪ್ರತಿಮೆ ಇರಬೇಕೆಂದು ವೇದಗಳಲ್ಲಿ ಹೇಳಿದ್ದಾರೆ. ನನ್ನ ವಿಗ್ರಹಳನ್ನು ಅದೆಷ್ಟು ದೊಡ್ಡದಾಗಿ ಮಾಡುತ್ತಿದ್ದೀರೋ.ಅಂಗುಷ್ಟದಷ್ಟು ಎತ್ತರ ಇದ್ದರೂ, 50 ಅಡಿ ಎತ್ತರ ಇದ್ದರೂ ನನ್ನ ದೃಷ್ಟಿ ನಿಮ್ಮ ಭಕ್ತಿಯ ಮೇಲೆ ಇರುತ್ತದೆಯೇ ಹೊರತು ಎತ್ತರದ ಮೇಲೆ ಅಲ್ಲ ಎಂಬುದನ್ನು ಗಮನಿಸಿ.

ನನ್ನ ವಿಗ್ರಹದ ಮುಂದೆ ವೇದ ಪಾರಾಯಣ ಇಲ್ಲ, ಸುಶ್ರಾವ್ಯವಾದ ಸಂಗೀತ ಇಲ್ಲ. ಅದೇನೋ.ಕಿವಿಗಡಚಿಕ್ಕುವಂತಹ ಹಾಡುಗಳನ್ನು ಹಾಕಿ ನನ್ನ ದೊಡ್ಡ ಕಿವಿಗಳೇ ಮುಚ್ಚಿಹೋಗುತ್ತಿವೆ, ಇನ್ನು ನಿಮ್ಮ ಅಬ್ಬರಕ್ಕೆ ನಮ್ಮ ಮೂಷಿಕನ ಪರಿಸ್ಥಿತಿ ಹೇಳುವಂತಿಲ್ಲ.
ವಿವಿಧ ರೀತಿಯ ಭಕ್ಷ್ಯಗಳು, ನೈವೇದ್ಯಕ್ಕೆ ಕೊರತೆ ಇಲ್ಲದಿದ್ದರೂ ವಿಸರ್ಜನೆ ದಿನ ತಿಳಿದುಕೊಂಡರೆ ನೀವು ಇಡುತ್ತಿರುವ ನೈವೇದ್ಯಗಳೆಲ್ಲಾ ಕಹಿ ಅನ್ನಿಸುತ್ತಿವೆ.


ಒಂದೊಂದು ಬೀದಿಯಲ್ಲಿ ನೂರಾರು ನನ್ನ ವಿಗ್ರಹಗಳನ್ನು ಇಟ್ಟು, ನನಗೆ ಪಾರ್ಟಿಗಳ, ಜಾತಿಗಳನ್ನು ಅಂಟಿಸಿ. ನನ್ನೊಂದಿಗೆ ನಾನೇ ಸ್ಪರ್ಧಿಸುವಂತೆ ಮಾಡಿ ತಮಾಷೆ ನೋಡುತ್ತಿದ್ದಾರೆ.ಇನ್ನು ನನ್ನನ್ನು ನಿಮಗೆ ಇಷ್ಟವಾದಂತೆ ಬದಲಾಯಿಸಿಕೊಂಡಿದ್ದೀರಿ ಬಾಹುಬಲಿ, ಸೂಪರ್ ಮ್ಯಾನ್, ಸ್ಪೈಡರ್‌ಮ್ಯಾನ್, ಅವತಾರ್ ಹೀಗೆ ವಿಧವಿಧವಾಗಿ ಮಾಡಿ ಅವಮಾನಿಸುತ್ತಿದ್ದಾರೆ, ನಿಮ್ಮ ಮನೆಯಲ್ಲಿನ ಹಿರಿಯರನ್ನು ಈ ರೀತಿ ವಿವಿಧ ಆಕಾರಗಳಲ್ಲಿ ಫೋಟೋಗಳಲ್ಲಿ ನೋಡಿಕೊಳ್ಳುತ್ತೀರಾ? ನನ್ನನ್ನು ದೇವರೆಂದು ಹೇಳುತ್ತಾ ಏನೀ ಹುಚ್ಚಾಟ? ನಾನು ನಿಮಗೆ ಹುಚ್ಚು ಎಂದುಕೊಳ್ಳಬೇಕೆ? ಅಥವಾ ಇನ್ನೇನಾದರೂ?

ವಿಸರ್ಜನೆ ದಿನ ಭಕ್ತಿಯ ಹೆಸರಿನಲಿ ಮಾಡುವ ಕೆಲಸಗಳು ಅಷ್ಟಿಷ್ಟಲ್ಲ. ನನ್ನ ವಿಗ್ರಹದ ಹಿಂದೆ ಕ್ವಾರ್ಟರ್ ಬಾಟಲ್‌ಗಳ ಕೇಸುಗಳು, ಗುಡುಂಬಾ ಕ್ಯಾನ್‌ಗಳು, ನನ್ನ ವಿಗ್ರಹದ ಮುಂದೆ ಕುಡಿದು ತೂರಾಡುತ್ತಾ ವಿಚಿತ್ರ ವಿನ್ಯಾಸಗಳು, ಅಬ್ಬರಿಸುವ ಡ್ರಮ್‌ಗಳು, ಮೈಕಿನ ರಣಧ್ವನಿ.
ಕುಡಿದು ಮೈರತು ನೀವು ಹಾಕುವ ಕೇಕೆಗೆ ನಿಮ್ಮ ಬಾಯಿಂದ ಬರುವ ’ಸಂಸ್ಕೃತ’ದ ಪನ್ನೀರು ನನ್ನ ಮೇಲೆ ಚಿಮುಕಿಸುತ್ತಾ ನನ್ನನ್ನು ಮೆರವಣಿಗೆ ಮಾಡುತ್ತೀರ, ನಿಮ್ಮ ಬಳಿ ಬರುವ ಆ ಕೆಟ್ಟ ಎಣ್ಣೆ ವಾಸನೆಗಿಂತ ಬೆಂಗಳೂರಿನ ಕೆರೆಗಳಲ್ಲಿನ ನೀರು ಅದೆಷ್ಟೋ ಉತ್ತಮ ಅನ್ನಿಸುತ್ತದೆ.
ಇಂತಹವರನ್ನು ನನ್ನ ಭಕ್ತರು ಎಂದು ಹೇಗೆ ಅಂಗೀಕರಿಸಲಿ? ನೀವೇ ಹೇಳಿ

No comments