Header Ads

test

ನಿಮ್ಮ ಫೋನಲ್ಲಿ ಮೆಮೋರಿ ಕಾರ್ಡ್ ಸಡನ್ನಾಗಿ ಕೆಲಸ ಮಾಡುತ್ತಿಲ್ಲವೇ ,ಮುಖ್ಯವಾದ ಫೋಟೋಗಳು ಡಿಲೀಟ್ ಆಗಿದೆಯೇ.

ಸೆಕ್ಯುರ್ ಡಿಜಿಟಲ್‌‌‌.ಈ ಹೆಸರು ಕೇಳುವುದಕ್ಕೆ ಹೊಸದಾಗಿ ಇದ್ದರೂ.ನೀವು ಇದನ್ನು ದಿನ ಬಳಕೆ ಮಾಡುತ್ತೀರ. ಹೌದು ಸೆಕ್ಯುರ್ ಡಿಜಿಟಲ್ ಎಂದರೆ ಎಸ್ಡಿ ಕಾರ್ಡ್ (SD card) ಎಂದರ್ಥ. ಈ ಎಸ್ಡಿ ಕಾರ್ಡ್ ಫೋನ್, ಕ್ಯಾಮರಾ, Mp3 ಪ್ಲೇಯರ್ ನಂತಹವನ್ನು ಬಳಸುತ್ತಿರುವ ಪ್ರತಿ ಒಬ್ಬರಿಗೂ ಅನ್ವಯ.ಕೇವಲ ಫೋನ್ಸ್ ನಲ್ಲೆ ಅಲ್ಲದೆ ಡಿಜಿಟಲ್ ಕ್ಯಾಮರಾಗಳಲ್ಲಿ, Mp3 ಪ್ಲೇಯರ್ಗಳಲ್ಲಿ ಹೀಗೆ ಎಷ್ಟೋ ವಸ್ತುಗಳಲ್ಲಿ ಎಸ್ಡಿ ಕಾರ್ಡ್ಗಳನ್ನು ಬಳಸುತ್ತಿರುತ್ತೇವೆ. ಆಗಾಗ ಈ ಎಸ್ಡಿ ಕಾರ್ಡ್ಗಳು ಹಾಳಾಗುತ್ತಿರುತ್ತದೆ. ಸರಿಯಾಗಿ ಕೆಲಸ ಮಾಡದಿರುವುದು, ಅದರಲ್ಲಿ ಖಾಲಿ ಇರುವ, ಫೈಲ್ಸ್ ಕಾಪಿ ಆಗದಿರುವುದು ನಂತಹವು ನಡೆಯುತ್ತಿರುತ್ತದೆ. ಹೀಗೆ ಯಾಕಾಗುತ್ತದೆ? ಇಂತಹ ಸಮಯದಲ್ಲಿ ಏನು ಮಾಡಬೇಕೆನ್ನುವ ವಿಷಯಗಳನ್ನು ತಿಳಿದುಕೊಳ್ಳೋಣ!!


ಎಸ್ಡಿ ಕಾರ್ಡು ಫೇಲ್ ಆಗುವುದಕ್ಕೆ ಅನೇಕ ಕಾರಣಗಳು ಇರುತ್ತವೆ. ಅದರಲ್ಲಿ ಹೆಚ್ಚು ಪರ್ಸೆಂಟೇಜ್ ಯೂಸರ್ ನಿರ್ಲಕ್ಷ್ಯಣದ ಕಾರಣವಾಗಿ ಕಾಣಿಸಿಕೊಳ್ಳುತ್ತದೆ. ಕೆಲವು ಸಂದರ್ಭಗಳಲ್ಲಿ ಎಸ್ಡಿ ಕಾರ್ಡ್ ಫುಲ್ ಆಗುವುದರಿಂದ ಬ್ಲಾಂಕ್ ಎಂದು ತೋರಿಸುತ್ತದೆ. ಈ ಸಮಸ್ಯೆಗಳಿಗೆ ಪ್ರಧಾನ ಕಾರಣ ತಪ್ಪಾದ ಫಾರ್ಮೆಟ್ ( Wrong Format ). ಒಂದೇ ಕಾರ್ಡನ್ನು ಬೇರೆ ಬೇರೆ ಡಿವೈಸ್ ಗಳಲ್ಲಿ ಬಳಸುವುದರಿಂದ, ಈ ಸಮಸ್ಯೆಗಳು ಎದುರಾಗುತ್ತವೆ. ಹಾಗೆ ಆಗಬಾರದೆಂದರೆ ಒಂದೇ ಡಿವೈಸ್ ನಲ್ಲಿ ಬಳಸುವುದು ಒಳ್ಳೆಯದು.ಕೆಲವು ಸಂದರ್ಭಗಳಲ್ಲಿ ಕಂಪ್ಯುಟರ್ ಗೆ ಕನೆಕ್ಟ್ ಆದರೂ ಸಹ ಕಾರ್ಡನ್ನು ಸರಿಯಾದ ಪದ್ದತಿಯಲ್ಲಿ ( Safely Remove ) ಡಿಸ್ಕನೆಕ್ಟ್ ಮಾಡದಿದ್ದರೆ ಎಸ್ಡಿ ಕಾರ್ಡ್ ಕ್ರ್ಯಾಶ್ ಆಗುವ ಸಾದ್ಯತೆ ಜಾಸ್ತಿ. ಹಾಗೆಯೇ ಕ್ಯಾಮರಾದಲ್ಲಿ, ಇತರೆ ಡಿವೈಸ್ ಗಳಲ್ಲಿ ಎಜೆಕ್ಟ್ ( Eject ) ಆಪ್ಷೆನ್ ಖಂಡಿತವಾಗಿ ಆಯ್ಕೆ ಮಾಡಬೇಕು.

ಕೆಲವು ಜನರು ಎಸ್ಡಿ ಕಾರ್ಡ್ಗಳು ಫಿಜಿಕಲ್ ಡ್ಯಾಮೆಜ್ ಮಾಡುತ್ತಿರುತ್ತೇವೆ. ಹೀಗೆ ಮಾಡುವುದರಿಂದ ಫಿಸಿಕಲ್ ಡ್ಯಾಮೆಜ್ ಆಗುತ್ತದೆ. ನಿಮ್ಮ ಕಾರ್ಡ್ ರೀಡರ್ ಸ್ಲೋ ಆಗಿದ್ದರು, ಮೆಮೊರಿ ಕಾರ್ಡ್ ತೆಗೆದುಕೊಳ್ಳುವುದು ಆಲಸ್ಯ/ನಿಧಾನವಾಗುತ್ತದೆ. ಲೇಟೆಸ್ಟ್ ವರ್ಷನ್ ಕಾರ್ಡ್ ರೀಡರ್ ಬಳಸುವುದು ಒಳ್ಳೆಯದು.ನೀವು ಬಳಸುತ್ತಿರುವ ಎಸ್ಡಿ ಕಾರ್ಡ್ ಹಳೆಯ ವರ್ಷನ್ ಆದರೆ ರೈಟಿಂಗ್ ಸ್ಪೀಡ್ ತುಂಬಾ ನಿಧಾನವಾಗಿರುತ್ತದೆ. ಆದ್ದರಿಂದ, ನಿಮ್ಮ ಕಾರ್ಡನ್ನು ಸಹ ಲೆಟೆಸ್ಟ್ ವರ್ಷನ್ ಗೆ ಅಪ್ ಗ್ರೇಡ್ ಮಾಡಿಕೊಳ್ಳುವುದು ಒಳ್ಳೆಯದು.ಸಡನ್ನಾಗಿ ಕೆಲಸ ಮಾಡುವುದನ್ನು ನಿಲ್ಲಿಸಿದರೆ ಕಾರ್ಡ್'ನಲ್ಲಿರುವ ಡೇಟಾವನ್ನು ರಿಕವರಿ ಹೇಗೆ ಮಾಡಬೇಕೊ ಮತ್ತೊಂದು ಪೇಜ್ನಲ್ಲಿ..ನಿಮ್ಮ ಫೊನ್ನಲ್ಲಿ ಮೆಮೊರಿ ಕಾರ್ಡ್ ಸಡನ್ನಾಗಿ ಕೆಲಸ ಮಾಡುತ್ತಿಲ್ಲವೇ ಮುಖ್ಯವಾದ ಫೋಟೊಗಳು ಡಿಲಿಟ್ ಆಗಿದ್ಯಾ.

ಸಡನ್ನಾಗಿ ಕೆಲಸ ಮಾಡುವುದು ನಿಲ್ಲಿಸಿರುವ ಮೆಮೊರಿ ಕಾರ್ಡ್ ನಲ್ಲಿರುವ ಡೆಟಾವನ್ನು ರಿಕವರಿ ಮಾಡುವುದಕ್ಕೆ ಸರ್ವೀಸ್ ಸೆಂಟರ್ಗಳಿಗೆ ತೆಗೆದುಕೊಂಡು ಹೋದರೆ ಅವರು ನಮ್ಮ ಹತ್ತಿರದಿಂದ ಹಣವನ್ನು ವಸೂಲಿ ಮಾಡುತ್ತಾರೆ. ಹಾಗಲ್ಲದೇ ನಾವೇ ಸ್ವತಃ ಕೆಲವು ಟೂಲ್ಸ್ ಉಪಯೋಗಿಸಿ ಹಾಳಾದ ಮೆಮೋರಿ ಕಾರ್ಡ್ ನಲ್ಲಿರುವ ಡೇಟಾವನ್ನು ಮತ್ತೇ ಪಡೆಯಬಹುದು.

ಈಗ ನಾವು ಕೆಲವು‌ ರಿಕವರಿ ಸಾಪ್ಟ್ ವೇರ್ ಬಗ್ಗೆ ತಿಳಿಯೊಣ.

1. Data Recovey Software
2. Card Recovery Pro
3. PhotoRec
4. Recover My Files
5. Wonder Share recovery tool
Android ಫೋನ್ಗಳು ಮತ್ತು ಟಾಬ್ಲೇಟ್ ಗಳಲ್ಲಿರುವ ಡೇಟಾ ರಿಕವರಿ ಸಾಫ್ಟ್ ವೇರ್.

ನೀವು ನಿಮ್ಮ Android ಸಾಧನದಿಂದ ತೆಗೆದ ಫೈಲ್ಗಳನ್ನು, ಫೋಟೋಗಳು, ವೀಡಿಯೋಗಳು ಇಲ್ಲವೇ ಸಂಪರ್ಕಗಳನ್ನು ಮರಳಿ ಪಡೆಯಬೇಕಾದರೆ ಈ ಪ್ರಯೋಜನಗಳಿಗಾಗಿ ಪ್ರತ್ಯೇಕವಾಗಿ ರೂಪಿಸಿದ ಪ್ರೊಗ್ರಾಮ್ಗಳು ಇರುತ್ತವೆ. ಅದರಲ್ಲಿ ಮುಖ್ಯವಾಗಿ ಹೇಳಿಕೊಳ್ಳುವ ಆಂಡ್ರಾಯ್ಡ್ Wondershare ಡಾಕ್ಟರ್ ಡೇಟಾ ರಿಕವರಿ Fone. ಅದರ ಮೂಲಕ ನಾವು ಕಳೆದುಕೊಂಡ ಡೇಟಾವನ್ನು ಮರಳಿ ಪಡೆಯಬಹುದು.

‌* ಮೊದಲಿಗೆ wonder share data recovery tool ಅನ್ನು ಓಪನ್ ಮಾಡಬೇಕು. ಅದರಲ್ಲಿ ನಮಗೆ ನಾಲ್ಕು options ಗಳು ಕಾಣಿಸುತ್ತದೆ.

1. Last file recovery
2. partition recovery
3. Raw file recovery
4. resume recovery

* ನೀವು Raw file recovery option ನನ್ನು ಆಯ್ಕೆ ಮಾಡಿಕೊಳ್ಳಿ.

* ಮತ್ತೇ window ದಲ್ಲಿ ನಿಮಗೆ ಬೇರೆ ಬೇರೆ file types ತೋರಿಸುತ್ತದೆ. mp3, video, pictures all type files ಎನ್ನುವ options ತೋರಿಸುತ್ತದೆ.

* ಮತ್ತೊಂದು ಸ್ಟೆಪ್ನಲ್ಲಿ ನೀವು ಯಾವ location ನಲ್ಲಿ ಆದರೆ ಫೈಲ್ಸ್ ಡಿಲೇಟ್ ಆಗಿದಿಯೋ ಆ ಲೊಕೇಷನ್ ಸೆಲೆಕ್ಟ್ ಮಾಡಿ.

* ಈಗ ನಿಮಗೆ ಎರಡು ಆಪ್ಷನ್ ಕಾಣಿಸುತ್ತದೆ. ಇದರಲ್ಲಿ deep scan ಮೋಡ್ ಸೆಲೆಕ್ಟ್ ಮಾಡಿ.
1. deep scan mode
2. ENable raw file recovery

*ಈಗ ನೀವು ಕಳೆದುಕೊಂಡ ಫೈಲ್ಸ್ ಗಳು ಎಲ್ಲಾ ಕಾಣಿಸುತ್ತದೆ. ಕೆಳಗೆ ರಿಕವರಿ ಎನ್ನುವ option ಮೇಲೆ ಕ್ಲಿಕ್ ಮಾಡಿದರೆ ಸಾಕು. ನಿಮ್ಮ ಫೈಲ್ಸ್ ಎಲ್ಲಾ ರಿಕವರಿ ಆಗುತ್ತದೆ.

No comments