Header Ads

test

ಮೈಲಿಗಲ್ಲುಗಳ ಮೇಲೆ ಇರುವ ಬಣ್ಣಗಳನ್ನು ಎಂದಾದರು ಗಮನಿಸಿದ್ದೀರಾ.? ಯಾವ ಬಣ್ಣಕ್ಕೆ ಏನು ಅರ್ಥಗೊತ್ತಾ.?

ನಾವು ಯಾವುದಾದರೂ ಊರಿಗೆ ರಸ್ತೆ ಮೇಲೆ ಹೋಗುತ್ತಿದ್ದಾಗ ನಡುವೆ ರಸ್ತೆ ಇಕ್ಕೆಲಗಳಲ್ಲಿ ಮೈಲಿಗಲ್ಲುಗಳು ಕಾಣಿಸುತ್ತವೆ ಅಲ್ಲವೇ. ನಾವು ಇನ್ನೆಷ್ಟು ದೂರ ಹೋದರೆ ಗಮ್ಯಸ್ಥಾನ ತಲುಪುತ್ತೇವೆ, ನಾವು ಯಾವ ಊರಿಗೆ ಹತ್ತಿರದಲ್ಲಿದ್ದೇವೆ, ಯಾವುದಕ್ಕೆ ಎಷ್ಟು ದೂರದಲ್ಲಿದ್ದೇವೆ ಎಂದು ಗೊತ್ತಾಗುತ್ತದೆ. ಇದರಿಂದ ಅಷ್ಟು ಕಿಲೋ ಮೀಟ‌ರ್‌ಗಳಿಗೆ ಅನುಗುಣವಾಗಿ ಸಾಧ್ಯವಾದರೆ ವೇಗ ಹೆಚ್ಚಿಸಿ ಪ್ರಯಾಣಿಸುತ್ತೇವೆ. ಗಮ್ಯಸ್ಥಾನಕ್ಕೆ ಹತ್ತಿರವಾಗುತ್ತಿದ್ದೇವೆ ಎಂದರೆ ಸ್ಪೀಡ್ ನಿಧಾನವಾಗುತ್ತಾ ಹೋಗುತ್ತದೆ. ಈ ರೀತಿ ಅನೇಕ ವಿಧವಾಗಿ ಆ ಮೈಲಿಗಲ್ಲುಗಳು ನಮಗೆ ಉಪಯೋಗಕ್ಕೆ ಬರುತ್ತವೆ. ಅವುಗಳಿಂದ ದೂರವನ್ನು ಸಹ ತಿಳಿದುಕೊಳ್ಳಬಹುದು. ಆದರೆ ನಮಗೆ ಕಾಣಿಸುವ ಮೈಲಿಗಲ್ಲುಗಳ ಮೇಲಿನ ಭಾಗದಲ್ಲಿ ಒಂದೊಂದು ಬಣ್ಣ ಇರುತ್ತದೆ ಗಮನಿಸಿದ್ದೀರಾ.? ಆ ರೀತಿ ಮೈಲಿಗಲ್ಲುಗಳ ಮೇಲಿನ ಭಾಗದಲ್ಲಿ ಬಣ್ಣಗಳನ್ನು ಯಾಕೆ ಹಾಕುತ್ತಾರೆ ಗೊತ್ತಾ.? ಅದನ್ನೇ ಈಗ ತಿಳಿದುಕೊಳ್ಳೋಣ ಬನ್ನಿ.


ಮೈಲಿಗಲ್ಲುಗಳ ಮೇಲಿನ ಭಾಗದಲ್ಲಿ ಹಳದಿ ಬಣ್ಣ ಇದ್ದರೆ ನಾವು ರಾಷ್ಟ್ರೀಯ ಹೆದ್ದಾರಿ ಮೇಲೆ ಪ್ರಯಾಣಿಸುತ್ತಿದ್ದೀವಿ ಎಂದು ತಿಳಿದುಕೊಳ್ಳಬೇಕು. ನಮ್ಮ ದೇಶದಲ್ಲಿ ಕೇವಲ ಕೆಲವು ಮಾತ್ರ ರಾಷ್ಟ್ರೀಯ ಹೆದ್ದಾರಿಗಳು ಇವೆ. ಅವುಗಳ ಮೇಲೆ ಇರುವ ಮೈಲಿಗಲ್ಲುಗಳನ್ನು ಮೇಲಿನ ಭಾಗದಲ್ಲಿ ಈ ರೀತಿ ಹಳದಿ ಬಣ್ಣದಲ್ಲಿ ಬರೆಯುತ್ತಾರೆ. ಹಾಗಾಗಿ ಇದು ರಾಷ್ಟ್ರೀಯ ಹೆದ್ದಾರಿ ಎಂದು ಗೊತ್ತಾಗುತ್ತದೆ.ಮೈಲಿಗಲ್ಲುಗಳ ಮೇಲಿನ ಭಾಗದಲ್ಲಿ ಎಲೆಹಸಿರು ಬಣ್ಣ ಇದ್ದರೆ ಅವು ಸ್ಟೇಟ್ ಹೈವೇಗಳೆಂದು ತಿಳಿದುಕೊಳ್ಳಬೇಕು. ಅವನ್ನು ಆಯಾ ರಾಜ್ಯ ಸರಕಾರಗಳೇ ನಿರ್ಮಿಸುತ್ತವೆ. ಅವುಗಳ ನಿರ್ವಹಣೆಯನ್ನು ರಾಜ್ಯ ಸರಕಾರಗಳು ನೋಡಿಕೊಳ್ಳುತ್ತವೆ.ಮೈಲಿಗಲ್ಲುಗಳ ಮೇಲೆ ಬಿಳಿ ಅಥವಾ ಕಪ್ಪು ಬಣ್ಣ ಇದ್ದರೆ ನಾವು ಪ್ರಯಾಣಿಸುತ್ತಿರುವುದು ದೊಡ್ಡ ನಗರ ಅಥವಾ ಜಿಲ್ಲೆ ಎಂದು ತಿಳಿದುಕೊಳ್ಳಬೇಕು. ಇಂತಹ ಹೆದ್ದಾರಿಗಳನ್ನು ಆ ನಗರ ಅಥವಾ ಜಿಲ್ಲಾ ಅಭಿವೃದ್ಧಿ ಇಲಾಖೆ ನಿರ್ವಹಿಸುತ್ತದೆ.ಇನ್ನು ಮೈಲಿಗಲ್ಲುಗಳ ಮೇಲೆ ಆರೆಂಜ್ ಅಥವಾ ಕೆಂಪು ಬಣ್ಣ ಹಚ್ಚಿದ್ದರೆ ನಾವು ಗ್ರಾಮದಲ್ಲಿ ಇದ್ದೇವೆಂದು ತಿಳಿದುಕೊಳ್ಳಬೇಕು. ಅದೇ ರೀತಿ ಈ ರಸ್ತೆಗಳನ್ನು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ನಿರ್ಮಿಸಿದ್ದಾರೆ ಎಂದು ತಿಳಿದುಕೊಳ್ಳಬೇಕು.

No comments