Header Ads

test

ಮಕ್ಕಳು ಆಗದಿರಲು.ನಮಗೆ ಗೊತ್ತಿಲ್ಲದ ಒಂದು ಕಾರಣ ಯಾವುದು ಗೊತ್ತಾ?

ಸ್ಮಾರ್ಟ್‍ಫೋನ್.ಇದು ಈಗ ಎಲ್ಲರಿಗೂ ಮದ್ಯಪಾನ, ಧೂಮಪಾನದಂತೆ ಒಂದು ವ್ಯಸನವಾಗಿ ಬದಲಾಗಿದೆ. ಬೆಳಗ್ಗೆ ನಿದ್ದೆಯಿಂದ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ, ಇನ್ನೂ ಹೇಳುತ್ತಾ ಹೋದರೆ ಹಾಸಿಗೆ ಪಕ್ಕದಲ್ಲೇ ಯಾವಾಗಲೂ ಕೈಗೆಟುಕುವಂತೆ ಇಟ್ಟುಕೊಳ್ಳುವುದು ಎಲ್ಲರಿಗೂ ಅಭ್ಯಾಸವಾಗಿದೆ. ಈ ಹಿನ್ನೆಲೆಯಲ್ಲಿ ಮೊಬೈಲ್ ಫೋನ್ಸ್‌ನಿಂದ ಬರುವ ರೇಡಿಯೇಷನ್ಸ್‌ನಿಂದ ನಮ್ಮ ದೇಹ ಅನಾರೋಗ್ಯಗಳಿಗೆ ಗುರಿಯಾಗುತ್ತಿದೆ ಎಂದು ವೈದ್ಯರು ಎಚ್ಚರಿಸುತ್ತಲೇ ಬಂದಿದ್ದಾರೆ. ಆದರೆ ಕೆಲವು ವಿಜ್ಞಾನಿಗಳು ಮಾಡಿದ ತಾಜಾ ಸಂಶೋಧನೆಯಲ್ಲಿ ಗೊತ್ತಾಗಿದ್ದೇನೆಂದರೆ, ರಾತ್ರಿ ಹೊತ್ತು ಫೋನ್ ಬಳಸುವುದು, ಅಥವಾ ಪಕ್ಕದಲ್ಲೇ ಇಟ್ಟುಕೊಂಡು ಮಲಗುವಂತಹ ಕೆಲಸಗಳನ್ನು ಮಾಡಿದರೆ ಅಂತಹವರಿಗೆ ಸಂತಾನಹೀನತೆ ಸಮಸ್ಯೆ ಹೆಚ್ಚಾಗಿರುತ್ತದೆ ಎಂದು ತಿಳಿದುಬಂದಿದೆ.ಕ್ಯಾಲಿಫೋರ್ನಿಯಾ ಯೂನಿವರ್ಸಿಟಿ, ಒಕಾಸಾ ಯೂನಿವರ್ಸಿಟಿ, ಜಪಾನ್ ಸೈನ್ಸ್ ಅಂಡ್ ಟೆಕ್ನಾಲಜಿ ಏಜೆನ್ಸಿಯಂತಹ ಯೂನಿವರ್ಸಿಟಿಗಳು, ಕಂಪೆನಿಗಳು ರಾತ್ರಿ ಹೊತ್ತು ಮೊಬೈಲ್ ಫೋನ್ ಬಳಸುವುದು, ಅದರಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಇತ್ತೀಚೆಗೆ ಸಂಶೋಧನೆಗಳನ್ನು ನಡೆಸಿದರು. ಇದಕ್ಕಾಗಿ ಅವರು ಕೆಲವು ಇಲಿಗಳನ್ನು ತಮ್ಮ ಸಂಶೋಧನೆಗೆ ಬಳಸಿಕೊಂಡರು. ಅವುಗಳಲ್ಲಿ ಕೆಲವನ್ನು ಹಾಗೆಯೇ ಬಿಟ್ಟರೆ, ಕೆಲವು ಇಲಿಗಳ ಮೇಲೆ ಮೊಬೈಲ್ ಡಿಸ್‌ಪ್ಲೇಯಿಂದ ಬರುವ ಬೆಳಕನ್ನು ಪ್ರಸಾರ ಮಾಡಿದರು. ಇದರಿಂದ ಕೊನೆಗೆ ಗೊತ್ತಾಗಿದ್ದೇನೆಂದರೆ, ಸಾಮಾನ್ಯ ಇಲಿಗಳು ಋತುಚಕ್ರ ಬರುವ ಸಮಯಕ್ಕೆ ಶೇ.71ರಷ್ಟು ಸಂತಾನೋತ್ಪತ್ತಿಗೆ ಅನುಕೂಲವಾಗಿದ್ದವೆಂದು, ಅದೇ ಬೆಳಕು ಪ್ರಸಾರವಾದ ಇಲಿಗಳ ಸಾಮರ್ಥ್ಯ ಶೇ.10ಕ್ಕೆ ಕುಸಿಯಿತೆಂದು ಗುರುತಿಸಿದರು. ಅಂದರೆ ಮೊಬೈಲ್ ಡಿಸ್‌ಪ್ಲೇಯಿಂದ ಬರುವ ಬೆಳಕಿನಿಂದ ಇಲಿಗಳಲ್ಲಿ ಸಂತಾನೋತ್ಪತ್ತಿ ಅವಕಾಶ ಶೇ.60ರಷ್ಟು ಇಳಿಕೆಯಾಗಿದೆ ಎಂಬುದು ಸಾಬೀತಾಯಿತು. ಈ ಸಂಶೋಧನೆ ಇಲಿಗಳ ಮೇಲೆ ಮಾಡಿದರೂ ಅದು ಮನುಷ್ಯರಿಗೂ ಅನ್ವಯಿಸುತ್ತದೆಂದು ಸಂಶೋಧಕರು ತಿಳಿಸಿದ್ದಾರೆ.

ರಾತ್ರಿ ಹೊತ್ತು ಮೊಬೈಲ್ ಫೋನ್ ಬಳಸುವುದರಿಂದ, ಫೋನನ್ನು ಪಕ್ಕದಲ್ಲೇ ಇಟ್ಟುಕೊಳ್ಳುವುದರಿಂದ ಸಂತಾನೋತ್ಪತ್ತಿ ಮೇಲೆ ಅದು ಪ್ರಭಾವ ತೋರುವುದಷ್ಟೇ ಅಲ್ಲ, ಇನ್ನೂ ಅದೆಷ್ಟೋ ಅನಾರೋಗ್ಯ ಸಮಸ್ಯೆಗಳು ಸಹ ಬರುತ್ತವೆ. ನಮ್ಮ ದೇಹದಲ್ಲಿ ನಡೆಯುವ ಜೀವಕ್ರಿಯೆಗಳಿಗೆ ತೊಂದರೆಯಾಗುತ್ತದಂತೆ. ಹಾರ್ಮೋನ್ ಅಸಮತೋಲನ ಉಂಟಾಗುತ್ತದೆ. ನಿದ್ರಾಹೀನತೆ ಸಹ ಬರುತ್ತದೆ. ದೇಹಕ್ಕೆ ಮುಖ್ಯವಾಗಿ ಬೇಕಾಗಿರುವ ಮೆಲಟೋನಿನ್ ಎಂಬ ಹಾರ್ಮೋನ್ ಉತ್ಪತ್ತಿ ಕಡಿಮೆಯಾಗುತ್ತದಂತೆ. ನೀರಸ, ಹೃದಯ ಸಮಸ್ಯೆಗಳು, ಹೃದಯಾಘಾತ, ಸ್ಥೂಲಕಾಯ, ಮಧುಮೇಹದಂತಹ ಅನಾರೋಗ್ಯ ಸಮಸ್ಯೆಗಳು ಬರುವ ಅವಕಾಶಗಳು ಇರುತ್ತವಂತೆ. ಅಷ್ಟೇ ಅಲ್ಲ ಚರ್ಮ ಶೀಘ್ರವಾಗಿ ಪ್ರಭಾವಕ್ಕೊಳಗಾಗಿ ವೃದ್ದಾಪ್ಯ ಸಂಕೇತಕಗಳು ಕಾಣಿಸುತ್ತವೆ. ಆದಕಾರಣ, ಮೊಬೈಲ್ ಫೋನನ್ನು ರಾತ್ರಿ ಹೊತ್ತು ಬಳಸುವುದನ್ನು ಬಿಡಿ. ಅಷ್ಟೇ ಅಲ್ಲ, ಅದನ್ನು ಪಕ್ಕದಲ್ಲಿ ಇಟ್ಟುಕೊಂಡು ಮಲಗಬೇಡಿ.

No comments