Header Ads

test

ತೂಕ ಕಡಿಮೆ ಮಾಡುವ ಬ್ರೇಕ್ ಫಾಸ್ಟ್‌ಗಳು... ಟ್ರೈ ಮಾಡಿ ಬಳುಕುವ ಬಳ್ಳಿಯಂತೆ ಬದಲಾಗಿ!!

ತೂಕ ಕಡಿಮೆ ಮಾಡಿಕೊಳ್ಳಲು ವ್ಯಾಯಾಮಕ್ಕೆ ಎಷ್ಟು ಪ್ರಾಮುಖ್ಯತೆ ಇದೆಯೋ, ಅಷ್ಟೇ ಪ್ರಾಮುಖ್ಯತೆ ನಮ್ಮ ಡಯಟ್ ಮೇಲೂ ಇರುತ್ತದೆ. ಹಾಗಾಗಿ ಹೊಟ್ಟೆ ಕರಗಿಸಿಕೊಳ್ಳಬೇಕು ಎನ್ನುವವರು ಮುಖ್ಯವಾಗಿ ಡಯಟ್ ಮೇಲೆ ವಿಶೇಷ ಕಾಳಜಿಯನ್ನು ಅಗತ್ಯವಾಗಿ ತೋರಬೇಕು. ಮೊದಲು ದಿನಚರಿಯನ್ನು ಒಂದು ಹೆಲ್ತಿ ಬ್ರೇಕ್ ಫಾಸ್ಟ್‌ನೊಂದಿಗೆ ಆರಂಭಿಸಬೇಕು. ಲಂಚ್ ಮಿತವಾಗಿ ತೆಗೆದುಕೊಳ್ಳಬೇಕು ಅದೇ ರೀತಿ ಡಿನ್ನರ್ ಸಹ ತುಂಬಾ ಸಿಂಪಲ್ ಊಟವನ್ನು ಆಯ್ಕೆ ಮಾಡಿಕೊಳ್ಳಬೇಕು. ತೂಕ ಕಡಿಮೆ ಮಾಡುವ ಕ್ರಮದಲ್ಲಿ ನೀವು ಬೆಳಗ್ಗೆ ತೆಗೆದುಕೊಳ್ಳುವ ಅಲ್ಪಾಹಾರ ತುಂಬಾ ಎಫೆಕ್ಟೀವ್ ಆಗಿ ಕೆಲಸ ಮಾಡುತ್ತದೆ.


ಕೆಳಗೆ ಲಿಸ್ಟ್ ಮಾಡಿರುವ ಅಲ್ಪಾಹಾರಗಳು ನಿಮ್ಮ ತೂಕವನ್ನು ಕಡಿಮೆ ಮಾಡಲ್ ಸಾಕಷ್ಟು ಸಹಕಾರಿ. ಅದೇ ರೀತಿ ಈ ಬ್ರೇಕ್ ಫಾಸ್ಟ್ ಐಟಂಸ್ ಸಂಪೂರ್ಣ ಪೋಷಕಾಂಶಗಳನ್ನು ಹೊಂದಿರುತ್ತವೆ. ಜೊತೆಗೆ ರುಚಿಯಾಗಿಯೂ ಇರುತ್ತವೆ. ನಿಮ್ಮನ್ನು ಆರೋಗ್ಯವಾಗಿ ಇಡುತ್ತವೆ.

ಕಿಚಡಿ:
ನಿಮ್ಮ ದಿನಚರಿಯನ್ನು ಆರೋಗ್ಯಕರವಾದ ಕಿಚಡಿಯಿಂದ ಆರಂಭಿಸಿ. ಇದು ಒಂದು ಬ್ರೇಕ್ ಫಾಸ್ಟ್ ಐಡಿಯಾ. ದಾಲ್ ಕಿಚಡಿ ಅಥವಾ ಬಾರ್ಲಿ ಕಿಚಡಿ ತುಂಬಾ ಕಡಿಮೆ ಮಲಾಸೆ ದಿನಸಿಗಳು, ಖಾರ ಕಡಿಮೆ ಹಾಕಿಕೊಂಡರೆ, ಅದು ನಿಮಗೆ ಇನ್ನಷ್ಟು ಹೆಚ್ಚು ಪೋಷಕಗಳನ್ನು ಒದಗಿಸುತ್ತದೆ. ಕಿಚಡಿ ಹೊಟ್ಟೆ ತುಂಬಿಸುವ ಬ್ರೇಕ್ ಫಾಸ್ಟ್ ಆಯ್ಕೆ. ಅಷ್ಟೇ ಅಲ್ಲ ಇದು ಖಚಿತವಾಗಿ ನಿಮ್ಮನ್ನು ತೂಕ ಹೆಚ್ಚಾಗಲು ಬಿಡಲ್ಲ.

ಪೋಹಾ (ಅವಲಕ್ಕಿಯಿಂದ ತಯಾರಿಸುವ ಅಲ್ಪಾಹಾರ):
ಪೋಹಾ ಬ್ರೇಕ್ ಫಾಸ್ಟ್‌ಗೆ ಒಂದು ಪರ್ಫೆಕ್ಟ್ ಆಯ್ಕೆ. ಇದು ನಿಮ್ಮ ಹೊಟ್ಟೆಗೆ ಹಗುರವಾಗಿ ಇರುತ್ತದೆ. ತುಂಬಾ ಹೆಚ್ಚು ಕ್ಯಾಲರಿಗಳನ್ನು ಹೊಂದಿರುವ ಪೋಹಾ ಕಣ್ಣಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ದಾಲಿಯಾ:
ದಾಲಿಯಾ ಅಥವಾ ಗೋಧಿ ರವ್ವೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನೀವು ವೇಯ್ಟ್ ಲಾಸ್‌ನಲ್ಲಿ ಇದ್ದಾಗ ಗೋಧಿ ರವ್ವೆ ಉಪ್ಪಿಟ್ಟು ತುಂಬಾ ಒಳಿತು ಮಾಡುತ್ತದೆ. ಇದು ಫೈಬರ್ ಮತ್ತು ಕಾರ್ಬೊಹೈಡ್ರೇಟ್ಸ್‌ನಿಂದ ತುಂಬಿರುತ್ತದೆ. ಅಷ್ಟೇ ಅಲ್ಲ ತುಂಬಾ ಕಡಿಮೆ ಕ್ಯಾಲರಿಗಳನ್ನು ಗೋಧಿ ರವ್ವೆಯಿಂದ ಸುಲಭವಾಗಿ ಮತ್ತು ಶೀಘ್ರವಾಗಿ ಅಲ್ಪಾಹಾರವನ್ನು ತಯಾರಿಸಿಕೊಳ್ಳಬಹುದು.

ಮಲ್ಟಿಗ್ರೇಯಿನ್ ದೋಸೆ:
ನೀವು ತೂಕ ಕಡಿಮೆಯಾಗಬೇಕೆಂದು ಬಯಸುತ್ತಿದ್ದರೆ ದೋಸೆ ಸಹ ಸೂಕ್ತ ಆಯ್ಕೆಯಾಗುತ್ತದೆ. ಮುಖ್ಯವಾಗಿ ದೋಸೆಗೆ ಕಡಿಮೆ ಎಣ್ಣೆಯನ್ನು ಬಳಸಬೇಕು. ಅಥವಾ ನಾನ್ ಸ್ಟಿಕ್ ಪಾನ್‌ನೊಂದಿಗೆ ದೋಸೆ ತಯಾರಿಸಿ ತೆಗೆದುಕೊಳ್ಳಬಹುದು. ಇದು ಹೆಲ್ತಿ ಬ್ರೇಕ್ ಫಾಸ್ಟ್ ಆಯ್ಕೆ.

ಎಗ್ ಸ್ಯಾಂಡ್‍ವಿಚ್:
ಗೋಧಿಯಿಂದ ತಯಾರಿಸಿದ ಬ್ರೆಡ್ ಮತ್ತು ಸಾಲ್ಟ್ ಪೆಪ್ಪರ್ ಹಾಕಿದ ಎಗ್ ಫ್ರೈ, ಆರೋಗ್ಯಕರವಾದ ಬ್ರೇಕ್ ಫಾಸ್ಟ್ ಐಟಂ. ಮೊಟ್ಟೆಯಲ್ಲಿ ಅಧಿಕ ಪೋಷಕಾಂಶಗಳು ಇದ್ದು ಶಕ್ತಿಯನ್ನು ನೀಡುವುದರ ಜತೆಗೆ ತೂಕವನ್ನೂ ಪರಿಣಾಮಕಾರಿಯಾಗಿ ಕಡಿಮೆ ಮಾಡುತ್ತದೆ.

ಸ್ಟೀಮ್ಡ್ ಇಡ್ಲಿ:
ತೂಕ ಕಡಿಮೆಯಾಗಲು ಹಬೆಯಲ್ಲಿ ಬೇಯಿಸಿದ ಪದಾರ್ಥಗಳೆಲ್ಲಾ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ. ಆದಾಕಾರಣ, ನೀವು ಹೆಲ್ತಿಯಾಗಿ ಇದ್ದುಕೊಂಡು ತೂಕ ಕಡಿಮೆ ಮಾಡಿಕೊಳ್ಳಬೇಕು ಎಂದರೆ ಗೋಧಿ ರವ್ವೆ ಅಥವಾ ರಾಗಿ ಇಡ್ಲಿಯನ್ನು ಹೆಲ್ತಿ ಬ್ರೇಕ್ ಫಾಸ್ಟ್ ಆಗಿ ಆಯ್ಕೆ ಮಾಡಿಕೊಳ್ಳಬೇಕು.

ಓಟ್ಸ್:
ಹೆಲ್ತಿ ಬ್ರೇಕ್ ಫಾಸ್ಟ್‌ಗೆ ಓಟ್ಸ್ ಮತ್ತು ಹೆಲ್ತಿ ಫ್ರೂಟ್ಸ್, ಹಾಲು ಮಿಕ್ಸ್ ಮಾಡಿಕೊಂಡು ತೆಗೆದುಕೊಳ್ಳಬೇಕು. ಈ ರೀತಿ ತೆಗೆದುಕೊಳ್ಳುವುದರಿಂದ ನಿಮಗೆ ಇಷ್ಟ ಇಲ್ಲದಿದ್ದರೂ ಉಪ್ಪಿಟ್ಟು ಅಥವಾ ದೋಸೆ ರೂಪದಲ್ಲಿ ತೆಗೆದುಕೊಳ್ಳಬಹುದು.

No comments