Header Ads

test

ವಾರಕ್ಕೊಮ್ಮೆಯಾದರೂ ದಾಳಿಂಬೆ ಹಣ್ಣನ್ನು ಸೇವಿಸಬೇಕು.ಪುರುಷರು ಇದರ ರಸವನ್ನು ಕುಡಿಯುತ್ತಿದ್ದರೆ.ತುಂಬಾಒಳ್ಳೆಯದು.

"ದಾಳಿಂಬೆ" ಹಣ್ಣಿನಲ್ಲಿ ಹಲವು ಆರೋಗ್ಯಕರ ಉಪಯೋಗಗಳಿಗೆ. ಉಷ್ಣಾಂಶ ವಾತಾವರಣ ಇರುವ ಪ್ರದೇಶಗಳಲ್ಲಿ ಹೆಚ್ಚಾಗಿ ಬೆಳೆಯುವ ದಾಳಿಂಬೆ ನಮಗೂ ಹೆಚ್ಚಾಗಿ ದೊರೆಯುತ್ತದೆ. ಆಗಾಗ ದಾಳಿಂಬೆಯನ್ನು ಆಹಾರದಲ್ಲಿ ಬಳಸುವುದರಿಂದ ಆಗುವ ಲಾಭಗಳನ್ನು ತಿಳಿಯೋಣ.

1. ದಾಳಿಂಬೆಯಲ್ಲಿ ವಿಟಮಿನ್ ಎ, ಸಿ, ಇ, ಬಿ5, ಪ್ಲೇವನಾಯ್ಡ್ಸ್, ಆಂಟಿ ಆಕ್ಸಿಡೆಂಟ್ ಗಳು ಹೇರಳವಾಗಿರುತ್ತವೆ. ಇವು ಕ್ಯಾನ್ಸರ್ ಕಣಗಳನ್ನು ನಾಶಗೊಳಿಸಲು ಕಾರಣವಾಗುವ ಫ್ರೀ ರಾಡಿಕಲ್ಸ್ ನ ವಿರುದ್ಧವಾಗಿ ಹೋರಾಡುತ್ತವೆ. ವೃದ್ಧಾಪ್ಯವನ್ನು ದೂರ ಮಾಡುತ್ತವೆ. ಅಲ್ಜೀಮರ್ಸ್, ಬ್ರೆಸ್ಟ್ ಹಾಗೂ ಸ್ಕಿನ್ ಕ್ಯಾನ್ಸರ್ ಬರದಂತೆ ತಡೆಗಟ್ಟುತ್ತದೆ.



2. ದಾಳಿಂಬೆ ಸಹಜವಾದ ಆಸ್ಪಿರಿನ್ ಗುಣಗಳನ್ನು ಹೊಂದಿರುತ್ತದೆ. ರಕ್ತ ಪ್ರಸಾರ ವೇಗವಾಗಿ ನಡೆಯುವಂತೆ ಕಾರ್ಯ ನಿರ್ವಹಿಸುತ್ತದೆ. 1/4 ಕಪ್ಪು ರಸವನ್ನು ಪ್ರತಿದಿನ ಕುಡಿಯುವುದರಿಂದ ಹೃದಯವನ್ನು ಚೆನ್ನಾಗಿ ಕಾಪಡಿಕೊಳ್ಳಬಹುದು.

3. ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು. ಆಸ್ಟಿಯೋ ಆರ್ಥರೈಟಿಸ್ ನಿಂದ ಬಳಲುವವರಿಗೆ ಅದ್ಭುತವಾದ ಔಷಧವಿದು.

4. ಲೈಂಗಿಕ ಸಾಮರ್ಥ್ಯ ಹೆಚ್ಚಿಸಲು ಉಪಯೋಗವಾಗುತ್ತದೆ. ಸಂತಾನ ಸಾಫಲ್ಯತೆಯನ್ನು ಹೆಚ್ಚಿಸುವ ಶಕ್ತಿ ಇದೆ. ಗರ್ಭಸ್ಥ ಶಿಶುಗಳ ಬೆಳವಣಿಗೆಗೆ ಅಗತ್ಯವಾದ ಫೋಲಿಕ್ ಆಸಿಡ್ ಹೇರಳವಾಗಿರುತ್ತದೆ. ಗರ್ಭಿಣಿ ಸ್ತ್ರೀಯರು ಪ್ರತಿದಿನ ಒಂದು ಲೋಟ ದಾಳಿಂಬೆ ರಸವನ್ನು ತೆಗೆದುಕೊಳ್ಳುವುದರಿಂದ ತಿಂಗಳು ತುಂಬದೆ ಪ್ರಸವವಾಗುವ ಗಂಡಾಂತರ ತಪ್ಪುತ್ತದೆ ಎಂದು ಅಧ್ಯಯನಗಳಲ್ಲಿ ತಿಳಿಸಿವೆ.

5. ವಯಸ್ಸಾಗುತ್ತಾ ಹೋದಂತೆ ದೇಹದ ಮೇಲೆ ಕಾಣಿಸಿಕೊಳ್ಳುವ ಸುಕ್ಕನ್ನು ನಿವಾರಿಸುತ್ತದೆ. ಲೂಸ್ ಮೋಷನ್ ನಿಂದ ಬಳಲುತ್ತಿರುವವರಿಗೆ ತುಂಬಾ ಒಳ್ಳೆಯದು. ಇದರಲ್ಲಿರುವ ಆಂಟಿ ಬ್ಯಾಕ್ಟೀರಿಯಲ್, ಆಂಟಿ ವೈರಲ್ ಗುಣಗಳು ಬಾಯಿಯ ಹುಣ್ಣಿಗೆ ಉಪಶಮನ ನೀಡುತ್ತದೆ. ಅಲ್ಸರ್ ಅನ್ನು ನಿವಾರಿಸುತ್ತದೆ. ವಸಡುಗಳನ್ನು ಬಲಪಡಿಸುತ್ತದೆ.

6. ಋತುಸ್ರಾವದಲ್ಲಿ ಬರುವ ಕೆಲವು ಸಮಸ್ಯೆಗಳಿಗೆ ಹಾಗೂ ಅಂಗಸ್ತಂಭ ಸಮಸ್ಯೆಗಳನ್ನು ತೊಲಗಿಸುವಲ್ಲಿ ಕಾರ್ಯ ನಿರ್ವಹಿಸುತ್ತದೆ. ಇದರಲ್ಲಿನ ರಾಸಾಯನಗಳು ಕೊಲೆಸ್ಟ್ರಾಲ್ ನಿಂದಾಗುವ ಅನಾಹುತಗಳನ್ನು ನಿಯಂತ್ರಿಸುತ್ತವೆ. ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ರಕ್ತನಾಳಗಳು ಮುಚ್ಚಿಹೋಗದಂತೆ ಮಾಡುತ್ತದೆ.

7. ಕ್ಯಾನ್ಸರ್ ನಂತಹ ಖಾಯಿಲೆಗಳು ಬರದಂತೆ ತಡೆಯುತ್ತದೆ. ಮೂತ್ರ ಪಿಂಡ ಸಮಸ್ಯೆಗಳಿಂದ ಉಪಶಮನವಾಗುತ್ತದೆ. ಜೀರ್ಣಕ್ರಿಯೆಯನ್ನು ವೃದ್ಧಿಸುತ್ತದೆ. ದಾಳಿಂಬೆ ರಸವನ್ನು ಮೈಮೇಲೆ ಹಚ್ಚುವುದರಿಂದ ಅಲರ್ಜಿ, ಕೀಟಗಳು ಕಚ್ಚುವುದರಿಂದ ಆದ ಗಾಯಗಳು ಗುಣವಾಗುತ್ತವೆ. ಇದರ ಸಿಪ್ಪೆಯೂ ಗಾಯಗಳಿಗೆ ಔಷಧಿಯಂತೆ ಕೆಲಸ ಮಾಡುತ್ತದೆ. ಊತವನ್ನು ನಿಯಂತ್ರಿಸುತ್ತದೆ. ದಾಳಿಂಬೆ ಎಲೆಗಳ ಎಣ್ಣೆಯನ್ನು ಊತ ಇರುವ ಕಡೆ ಹಚ್ಚುವುದರಿಂದ ಊತ ಕಡಿಮೆಯಾಗುತ್ತದೆ.

No comments