Header Ads

test

ಅಂತರ್ಜಾತೀಯ ವಿವಾಹ ಮಾಡಿಕೊಂಡರೆ ಯಾವ್ಯಾವ ರಾಜ್ಯದಲ್ಲಿ ದಂಪತಿಗಳು ಎಷ್ಟು ನಗದು ಪುರಸ್ಕಾರಪಡೆಯಬಹುದು ಗೊತ್ತಾ..?

ಒಂದು ಕಾಲದಲ್ಲಿ ಹೇಗೋ ಏನೋ ಈಗಲಾದರೆ ಅಂತರ್ಜಾತೀಯ ವಿವಾಹಗಳ ಸಂಖ್ಯೆ ಹೆಚ್ಚಾಗಿಯೇ ಇದೆ. ಮದುವೆಯಾಗಬೇಕು ಎಂಬ ಯುವತಿ ಯುವಕರಲ್ಲಿ ಧೈರ್ಯ ತುಂಬಲು, ಸಮಾಜದಲ್ಲಿನ ದುರಾಚಾರಗಳನ್ನು ದೂರ ಮಾಡಲು, ತಂದೆತಾಯಿಯ ಆಲೋಚನೆಗಳು ಬದಲಾಗಿರುವ ಕಾರಣ ಬಹಳಷ್ಟು ಮಂದಿ ಅಂತರ್ಜಾತೀಯ ವಿವಾಹಗಳನ್ನು ಅಂಗೀಕರಿಸುತ್ತಿದ್ದಾರೆ. ಆದರೆ ಗ್ರಾಮೀಣ ಭಾಗಗಳಲ್ಲಿ ಇಂತಹ ಮದುವೆಗಳನ್ನು ಆಗುವವರನ್ನು ಅಸ್ಫುರ್ಶರಂತೆ ಕಾಣುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಅವರ ಮೇಲೆ ದೈಹಿಕ ಹಲ್ಲೆ ಮಾಡಿ ನವ ದಂಪತಿಗಳ ಪ್ರಾಣ ತೆಗೆಯುತ್ತಿರುವ ಘಟನೆಗಳೂ ವರದಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಅಂತರ್ಜಾತೀಯ ವಿವಾಹ ಮಾಡಿಕೊಂಡವರಿಗೆ ಆರ್ಥಿಕ ಸಮಸ್ಯೆಗಳು ಬರದಂತೆ ನಮ್ಮ ದೇಶದ ಕೆಲವು ರಾಜ್ಯಗಳಲ್ಲಿ ಸರಕಾರಗಳು ವಿಶೇಷ ಯೋಜನೆಗಳ ಮೂಲಕ ಆರ್ಥಿಕ ಸಹಾಯವನ್ನು ನೀಡುತ್ತಿವೆ.ಅಂತರ್ಜಾತೀಯ ವಿವಾಹ ಮಾಡಿಕೊಂಡ ದಂಪತಿಗಳಿಗೆ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಸ್ಕೀಮ್ ಫಾರ್ ಸೋಷಿಯಲ್ ಇಂಟಿಗ್ರೇಷನ್ ತ್ರೂ ಇಂಟರ್ ಕ್ಯಾಸ್ಟ್ ಮ್ಯಾರೇಜಸ್ ಎಂಬ ಯೋಜನೆಯಡಿ ರೂ.2.50 ಲಕ್ಷಗಳನ್ನು ನೀಡಬೇಕೆಂದು ಕೇಂದ್ರ ಸರಕಾರ ಯಾವಾಗಲೋ ಒಂದು ಯೋಜನೆಯನ್ನು ರೂಪಿಸಿದೆ. ಇನ್ನು ಒರಿಸ್ಸಾ ಸರಕಾರ ಅಂತರ್ಜಾತೀಯ ವಿವಾಹ ಮಾಡಿಕೊಂಡ ದಂಪತಿಗಳಿಗೆ ರೂ. 50 ಸಾವಿರದಿಂದ 1 ಲಕ್ಷದ ತನಕ ಆರ್ಥಿಕ ಸಹಾಯ ಮಾಡಲಿದೆ. ಆ ರಾಜ್ಯದಲ್ಲಿ 2010ರಿಂದ 2016ರ ನಡುವಿನ ಕಾಲದಲ್ಲಿ 4100 ಮಂದಿ ಈ ಯೋಜನೆಯ ಫಲಾನುಭವ ಪಡೆದಿದ್ದಾರೆ. ಕೇವಲ ಒರಿಸ್ಸಾ ಮಾತ್ರವಲ್ಲದೆ ಇತರೆ ರಾಜ್ಯಗಳಲ್ಲೂ ಈ ರೀತಿಯ ಯೋಜನೆಗಳಿವೆ.

ಬಿಹಾರ್‌ನಲ್ಲಿ ಅಂತರ್ಜಾತೀಯ ವಿವಾಹ ಮಾಡಿಕೊಂಡ ದಂಪತಿಗಳಿಗೆ ರೂ.1 ಲಕ್ಷದವರೆಗೂ ಆರ್ಥಿಕ ಸಹಕಾರ ನೀಡುತ್ತಾರೆ. ಹರ್ಯಾಣದಲ್ಲಿ ಈ ವಿವಾಹ ಮಾಡಿಕೊಂಡ ಎಸ್ಸಿಗಳಿಗೆ ರೂ.1.01 ಲಕ್ಷ ಕೊಡುತ್ತಾರೆ. ಹೀಗೆ ಇದುವರೆಗೂ ಆ ರಾಜ್ಯಗಳಲ್ಲಿ 161 ಮಂದಿಗೆ ರೂ.1 ಕೋಟಿತನಕ ನೀಡಲಾಗಿದೆ. ಕರ್ನಾಟಕದಲ್ಲಿ ಅಂತರ್ಜಾತೀಯ ವಿವಾಹ ಮಾಡಿಕೊಂಡ ಯುವತಿಗೆ ರೂ.3 ಲಕ್ಷ, ಯುವಕರಿಗೆ ರೂ.2 ಲಕ್ಷ ಕೊಡುತ್ತಿದ್ದಾರೆ. ರಾಜಸ್ಥಾನದಲ್ಲಿ ಈ ಮೊತ್ತ ರೂ.5 ಲಕ್ಷದಷ್ಟಿದೆ. ಸದ್ಯಕ್ಕೆ ಈ ರೀತಿಯ ಆರ್ಥಿಕ ಸಹಕಾರವನ್ನು ಗರಿಷ್ಠವಾಗಿ ನೀಡುತ್ತಿರುವ ರಾಜ್ಯ ರಾಜಸ್ಥಾನ. ಶೀಘ್ರದಲ್ಲೇ ಮಹಾರಾಷ್ಟ್ರ ಸಹ ಇದೇ ರೀತಿಯ ಯೋಜನೆ ರೂಪಿಸಲು ಚಿಂತಿಸಿದೆ. ಎಲ್ಲಾ ರಾಜ್ಯಗಳಲ್ಲೂ ಈ ಯೋಜನೆ ಜಾರಿಗೆ ತಂದರೆ ಆಗ ಅಂತರ್ಜಾತೀಯ ವಿವಾಹ ಮಾಡಿಕೊಂಡು ಹಿರಿಯರಿಂದ ದೂರವಾಗಿರುವವರಿಗೆ ಆರ್ಥಿಕ ಸಮಸ್ಯೆಗಳು ಕಡಿಮೆಯಾಗುತ್ತವೆ.

No comments