Header Ads

test

ಮಂಗಳವಾರ "ತಲೆಸ್ನಾನ" ಮಾಡಬಾರದು ಎನ್ನುತ್ತಾರೆ.. ಯಾಕೆ ಗೊತ್ತಾ..? ಅದರ ಹಿಂದಿರುವ ಕಾರಣಇದೇ...!

ಈಗಲೂ ನಮ್ಮ ಮನೆಗಳಲ್ಲಿ ಮಂಗಳವಾರ, ಗುರುವಾರದಂದು ತಲೆಸ್ನಾನ ಮಾಡಬೇಡ ಎಂದು ಹಿರಿಯರು ಹೇಳುತ್ತಿರುತ್ತಾರೆ. ಇದು ಅನಾದಿ ಕಾಲದಿಂದ ಒಂದು ನಂಬಿಕೆಯಂತೆ ಬರುತ್ತಿದೆ. ಆದರೆ ಇದರ ಹಿಂದೆ ಒಂದು ಚಿಕ್ಕ ಲಾಜಿಕ್ ಇದೆಯಂತೆ..! ಈ ಹಿಂದೆ ಹೆಣ್ಣುಮಕ್ಕಳು ಸ್ನಾನ ಮಾಡಬೇಕಾದರೆ.... ಸರೋವರ, ನದಿಗಳ ಬಳಿ ಮಾಡುತ್ತಿದ್ದರು.. ಕಾಲಕ್ರಮೇಣ ಹೊರಗಡೆ ಸ್ನಾನ ಮಾಡುವುದು ಅಷ್ಟು ಶ್ರೇಯಸ್ಕರ ಅಲ್ಲ ಎಂದು ಭಾವಿಸಿದ ಬಳಿಕ ತಡಿಕೆಗಳನ್ನು ಹಾಕಿಕೊಂಡು ಸ್ನಾನ ಮಾಡಲು ಆರಂಭಿಸಿದರು.


ಈಗಿನಂತೆ ಆಗ... ನೀರನ್ನು ಮನೆಯಲ್ಲಿ ತುಂಬಿಸಿ ಇಟ್ಟುಕೊಳ್ಳುವ ವ್ಯವಸ್ಥೆಯಾಗಲಿ.... ಮನೆಯಲ್ಲೇ ನಳ ಏರ್ಪಾಟು ಮಾಡಿಕೊಳ್ಳುವ ಅವಕಾಶವಾಗಲಿ ಇರಲಿಲ್ಲ. ನೀರು ಬೇಕು ಎಂದರೆ....ಕೊಳ, ಸರೋವರದಿಂದ ಮಡಿಕೆಯಲ್ಲಿ ನೀರು ತಂದುಕೊಳ್ಳಬೇಕಾಗಿತ್ತು. ಇದರ ಜತೆಗೆ ಹೆಣ್ಣುಮಕ್ಕಳ ಸ್ನಾನ ಎಂದರೆ.... ಕನಿಷ್ಟ ಏನಿಲ್ಲ ಎಂದರೂ ಎರಡು ಬಿಂದಿಗೆ ನೀರು ಬೇಕಾಗಿತ್ತು.. ಇದರ ಜತೆಗೆ ತಲೆಸ್ನಾನ ಎಂದರೆ.... ಇನ್ನೂ ಹೆಚ್ಚುವರಿಯಾಗಿ ಎರಡು ಬಿಂದಿಗೆ ನೀರು ಅಗತ್ಯವಿತ್ತು.

ಸೋ... ಅಷ್ಟೆಲ್ಲಾ ಕಷ್ಟಪಟ್ಟು... ಅಷ್ಟು ದೂರದಿಂದ ನೀರನ್ನು ತಂದುಕೊಳ್ಳುವುದು ಯಾಕೆ? ಅಂತ, ಇದರ ಜತೆಗೆ ನೀರಿನ ಉಳಿತಾಯ...ಮಂಗಳವಾರ, ಗುರುವಾರಗಳಂದು ತಲೆಸ್ನಾನ ಮಾಡಬಾರದು ಎಂಬ ನಿಯಮ ಪ್ರಚಾರಕ್ಕೆ ಬಂತಂತೆ. ಅಷ್ಟೇ ಅಲ್ಲ ಮಹಿಳೆಯರು ಪ್ರತಿದಿನ ತಲೆಸ್ನಾನ ಮಾಡಿದೆ ಅವರ ಕೂದಲು ಬೇಗ ಒಣಗದ ಕಾರಣ...ವಿಪರೀತ ತಲೆನೋವು, ಹಣೆನೋವು ಬರುವ ಅವಕಾಶಗಳು ಇರುವ ಕಾರಣ ಈ ನಿಯಮ ಜಾರಿಗೆ ಬರಲು ಸಾಧ್ಯವಾಯಿತಂತೆ..!

ಆದರೆ ಈಗ ನೀರು ಇರುವ ಮನೆಗಳಲ್ಲೂ ಸಹ ಮಂಗಳವಾರ, ಗುರುವಾರ ತಲೆಸ್ನಾನ ಮಾಡಬೇಡ ಎಂದು ಹೇಳುತ್ತಿರುತ್ತಾರೆ. ಯಾಕೆಂದರೆ ಅವರಿಗೆ ಕಾರಣ ಗೊತ್ತಿಲ್ಲ. ಇಂದಿನಿಂದ ಯಾರಾದರೂ ಮಂಗಳವಾರ, ಗುರುವಾರ ತಲೆಸ್ನಾನ ಮಾಡಬಾರದು ಎಂದರೆ ಅವರಿಗೆ ಈ ಕಥೆ ಹೇಳಿ. ನಂಬದಿದ್ದರೆ ಅವರನ್ನು ಪಕ್ಕಕ್ಕೆ ಸರಿಸಿ ನೀವು ತಲೆಸ್ನಾನ ಮಾಡಿಕೊಂಡು ಬನ್ನಿ.

No comments