Header Ads

test

ಶಾಸ್ತ್ರದ ಪ್ರಕಾರ ಸ್ತ್ರೀ, ಪುರುಷರು ಯಾವ್ಯಾವ ದಿನಗಳಲ್ಲಿ ತಲೆಸ್ನಾನ ಮಾಡಿದರೆ ಆರ್ಥಿಕ ಪರವಾದಸಮಸ್ಯೆಗಳು, ಆಪತ್ತುಗಳು ಬರುತ್ತದೆ ಗೊತ್ತಾ?

ಸ್ತ್ರೀಯರಿಗೆ.
ತಲೆಸ್ನಾನ ಮಾಡಿದ ದಿನ ಯಾರಾದರೂ ಮುತ್ತೈದೆ ಮನೆಗೆ ಬಂದರೆ ಆಕೆಯ ಹಣೆಗೆ ತಿಲಕವಿಟ್ಟು ಅರಿಶಿಣ, ಕುಂಕುಮ, ಮಣ್ಣಿನ ಬಳೆಗಳನ್ನು ದಾನ ಮಾಡಿದರೆ ಶುಭವಾಗುತ್ತದೆ ಎನ್ನುತ್ತಾರೆ. ಮಹಿಳೆಯರು ತಲೆಸ್ನಾನ ಮಾಡುವ ಮುನ್ನ ಮೈಗೆ ಎಣ್ಣೆ, ಮುಖಕ್ಕೆ ಅರಿಶಿಣ ಹಚ್ಚಿಕೊಳ್ಳಬೇಕು. ಊಟಕ್ಕೂ ಮುನ್ನವೇ ತಲೆಗೆ ಎಣ್ಣೆ ಇಟ್ಟುಕೊಂಡು ಸ್ನಾನ ಮಾಡಬೇಕು. ಇನ್ನು ಈಗ ಯಾವ ದಿನ ತಲೆಸ್ನಾನ ಮಾಡಿದರೆ ಯಾವ ರೀತಿಯ ಪ್ರತಿಫಲ ಸಿಗುತ್ತದೆ ಎಂಬುದನ್ನು ನೋಡೋಣ.


ಸೋಮವಾರ ತಲೆಗೆ ಸ್ನಾನ ಮಾಡಿದರೆ ನಿತ್ಯ ಸೌಭಾಗ್ಯದಿಂದ ಇರುತ್ತಾರೆ.
ಸ್ತ್ರೀಯರು ಶುಕ್ರವಾರ, ಮಂಗಳವಾರ ತಲೆಸ್ನಾನ ಮಾಡಬಾರದು. ಮಾಡಲೇಬೇಕಾದರೆ ಶುಕ್ರವಾರ, ಮಂಗಳವಾರ ತಲೆಸ್ನಾನ ಮಾಡಬಹುದು.
ಮಹಿಳೆಯರು ಬುಧವಾರ ತಲೆಸ್ನಾನ ಮಾಡಿದರೆ ಗಂಡ ಹೆಂಡತಿ ನಡುವೆ ಅನ್ಯೋನ್ಯತೆ ಇನ್ನಷ್ಟು ಹೆಚ್ಚುತ್ತದೆ.
ಮಹಿಳೆಯರು ಶನಿವಾರ ತಲೆಸ್ನಾನ ಮಾಡಿದರೆ ಐಶ್ವರ್ಯ ಕೂಡಿಬರುತ್ತದೆ.

ಪುರುಷರು ಯಾವ್ಯಾವ ದಿನ ತಲೆಸ್ನಾನ ಮಾಡಿದರೆ ಯಾವ ರೀತಿಯ ಪ್ರತಿಫಲ ಸಿಗುತ್ತದೆ ಎಂಬುದನ್ನು ನೋಡೋಣ.

ಸೋಮವಾರ ತಲೆಸ್ನಾನ ಮಾಡಿದರೆ ಸೌಂದರ್ಯ ಇನ್ನಷ್ಟು ಹೆಚ್ಚುತ್ತದೆ.
ಮಂಗಳವಾರ ತಲೆಸ್ನಾನ ಮಾಡಿದರೆ ವಿಪರೀತ ದುಃಖಕ್ಕೆ ಕಾರಣವಾಗುತ್ತದೆ.
ಬುಧವಾರ ತಲೆಸ್ನಾನ ಮಾಡಿದರೆ ಲಕ್ಷ್ಮಿ ಕೃಪೆ ಸಿಗುತ್ತದೆ.
ಗುರುವಾರ ತಲೆಸ್ನಾನ ಮಾಡಿದರೆ ಆರ್ಥಿಕ ನಷ್ಟಗಳು ವಿಪರೀತ ಪ್ರಮಾಣದಲ್ಲಿ ಆಗುತ್ತದೆ.
ಶುಕ್ರವಾರ ತಲೆಸ್ನಾನ ಮಾಡಿದರೆ ಊಹಿಸಲಾಗದ ಆಪತ್ತುಗಳು ಸಂಭವಿಸುತ್ತವೆ.
ಪುರುಷರು ಶನಿವಾರ ತಲೆಸ್ನಾನ ಮಾಡಿದರೆ ಮಹಾ ಭೋಗ ಸಿಗುತ್ತದೆ.
ಭಾನುವಾರ ತಲೆಸ್ನಾನ ಮಾಡಿದರೆ ತಾಪದ ಜತೆಗೆ ಆ ಬಯಕೆಗಳು ಹೆಚ್ಚಾಗುತ್ತವೆ.

ಮಾಘಸ್ನಾನದ ಮಹಿಮೆ
ಕಾರ್ತಿಕಮಾಸದ ದೀಪಕ್ಕೆ ಎಷ್ಟು ಪ್ರಾಶಸ್ತ್ಯವಿದೆಯೋ ಮಾಘಮಾಸದ ಸ್ನಾನಕ್ಕೆ ಮತ್ತು ದಾನಕ್ಕೆ ಅಷ್ಟೇ ಪ್ರಾಶಸ್ತ್ಯವಿದೆ.

ಶಾಸ್ತ್ರ, ವಚನ, ವೈಶಾಖ, ಕಾರ್ತಿಕ ಮಾಘ ಮಾಸಗಳಲ್ಲಿ ಸ್ನಾನ, ದಾನ ಜಪಾದಿ ಸತ್ಕಾರ್ಯಗಳನ್ನು ಮಾಡದೇ ವೃಥಾ ಕಾಲ ಕಳೆಯಬಾರದು. ನದಿ, ಸರೋವರ ಹಾಗೂ ಸಮುದ್ರಗಳಲ್ಲಿ ಸ್ನಾನ ಮಾಡಿ ಅಲ್ಲಿರುವ ದೈವೀಶಕ್ತಿಯನ್ನು ಪಡೆದು ಪಾಪಕ್ಷಯ ಮಾಡಿಕೊಳ್ಳುವುದೇ ಸ್ನಾನದ ಮಹಿಮೆ ಆಗಿದೆ.

ಮಾಘಮಾಸದಲ್ಲಿ ಇಡೀ ಭೂಮಂಡಲ ಪವಿತ್ರವಾಗಿರುತ್ತದೆ. ಈ ಮಾಸದಲ್ಲಿ ಬರುವ ಅಮವಾಸ್ಯೆಯಂದು ಪ್ರಯಾಗ ತೀರ್ಥ ಕ್ಷೇತ್ರದಲ್ಲಿ ಸಮಸ್ತ ತೀರ್ಥಗಳ ಸಂಗಮವಾಗುತ್ತದೆ ಎನ್ನುವ ಅಂಶ ಮಹಾಭಾರತದ ಅನುಶಾಸನ ಪರ್ವದಲ್ಲಿ ಇದೆ. ಈ ದಿನದಂದು ಮೌನವನ್ನು ಆಚರಿಸುತ್ತಾ ಸ್ನಾನ ಮಾಡುವುದು ಪ್ರಧಾನವಾಗಿದ್ದರಿಂದ ಇದು ಮೌನಿ ಅಮಮಾಸ್ಯೆ ಎಂತಲೂ ಕರೆಯುತ್ತಾರೆ.

ಮಾಘಮಾಸದಲ್ಲಿ ಪ್ರಯಾಗ ಕ್ಷೇತ್ರ, ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡುವುದರಿಂದ ಇಡೀ ಒಂದು ಕಲ್ಪ ತಪಸ್ಸು ಮಾಡಿದ ಫಲ ದೊರೆಯುತ್ತದೆ. ಪ್ರಯಾಗಕ್ಕೆ ಹೋಗಲು ಆಗದೇ ಇರುವವರು ಪ್ರಯಾಗ ತೀರ್ಥ ಕ್ಷೇತ್ರವನ್ನು ಮನಸ್ಸಿನಲ್ಲಿ ಧ್ಯಾನಿಸುತ್ತಾ ಸ್ನಾನವನ್ನಾಚಾರಿಸಿದರೂ ಆ ಪುಣ್ಯ ಫಲ ಸಿಗುತ್ತದೆ. ಇಡೀ ತಿಂಗಳು ಸ್ನಾನವನ್ನು ಆಚರಿಸುವುದಕ್ಕೆ ಸಾಧ್ಯವಿಲ್ಲದವರು ಮಾಘ ಶುಕ್ಲ, ತ್ರಯೋದಶಿ, ಚತುದರ್ಶಿ, ಹುಣ್ಣಿಮೆ ದಿನಗಳಲ್ಲಿ ಸೂರ್ಯೋದಯದ ಸಮಯಕ್ಕೆ ಮೊದಲೇ ಸ್ನಾನ ಆಚರಿಸಿ ದಾನ ಮಾಡಬೇಕು.

No comments