Header Ads

test

ನೀವು ಮೂತ್ರಮಾಡುವ ರೀತಿಯನ್ನು ನೋಡಿ. ಕ್ಯಾನ್ಸರ್ ಬರುವ ಅವಕಾಶವಿದೆಯೋ, ಇಲ್ಲವೋ ಹೇಳಬಹುದು.!

ಈಗ ನಾವು ಹೇಳಲು ಹೊರಟಿರುವುದು ಪುರುಷರಿಗಾಗಿ. ಅವರು ಮೂತ್ರಮಾಡುವ ವಿಧಾನದ ಮೇಲೆ ಈ ಅಂಶ ಆಧಾರ ಪಟ್ಟಿದೆ. ಪುರುಷರೆಲ್ಲರಿಗೂ ಲಿಂಗ ಒಂದೇ ಗಾತ್ರವಿರುವುದಿಲ್ಲವೆಂಬ ಸಂಗತಿ ನಿಮಗೆಲ್ಲರಿಗೂ ತಿಳಿದಿರುವಂತದ್ದೇ. ಅದೇ ರೀತಿ ಅದರ ಆಕಾರದಲ್ಲಿಯೂ ಅಲ್ಪ ಸ್ವಲ್ಪ ವ್ಯತ್ಯಾಸವಿರುತ್ತದೆ. ಕೆಲವರ ಲಿಂಗ ನೇರವಾಗಿದ್ದರೆ, ಕೆಲವರಿಗೆ ಒಂದು ಕಡೆಗೆ ಸ್ವಲ್ಪ ಬಾಗಿದಂತಿರುತ್ತದೆ. ಇಂತಹವರು ಮೂತ್ರವನ್ನು ನೇರವಾಗಿ ವಿಸರ್ಜಿಸಲಾರರು. ಅಷ್ಟೇ ಏಕೆ ನೇರವಾದ ಲಿಂಗವನ್ನು ಹೊಂದಿರುವವರೂ ಸಹ ಕೆಲವರು ನೇರವಾಗಿ ಮೂತ್ರವಿಸರ್ಜನೆ ಮಾಡಲು ಕಷ್ಟಪಡುತ್ತಾರೆ.



ಒಂದು ವೇಳೆ ಹಾಗೆ ನೇರವಾಗಿ ಮೂತ್ರ ವಿಸರ್ಜಿಸಲು ಕಷ್ಟಪಡುತ್ತಿದ್ದರೆ ಅಂತಹವರಿಗೆ ಕ್ಯಾನ್ಸರ್ ಬರುತ್ತದೆಂದು ತಿಳಿಯಬೇಕು ಎಂದು American Society for Reproductive Medicine ಸಂಸ್ಥೆಯವರು ತಿಳಿಸಿದ್ದಾರೆ.ಇವರು 15 ಲಕ್ಷ ಪುರುಷರನ್ನು ಪರೀಕ್ಷಿಸಿದರು. ಅವರ ಲಿಂಗದ ಗಾತ್ರ, ಆಕಾರ,ಮತ್ತು ಅವರು ಮೂತ್ರ ವಿಸರ್ಜಿಸುವ ವಿಧಾನ ಹಾಗೂ ಅವರಿಗಿರುವ ವ್ಯಾಧಿಗಳ ಬಗ್ಗೆ ಸಂಶೋಧನೆ ನಡೆಸಿದರು. ಈ ನಿಟ್ಟಿನಲ್ಲಿ ತಿಳಿದು ಬಂದದ್ದು ಏನೆಂದರೆ.

ಲಿಂಗ ಒಂದು ಕಡೆ ಬಾಗಿದಂತಿದ್ದು, ನೇರವಾಗಿ ಮೂತ್ರ ವಿಸರ್ಜಿಸಲಾಗದಿದ್ದರೆ, ಅಂತಹವರಿಗೆ ಜೀರ್ಣಾಶಯ, ಚರ್ಮ ಹಾಗೂ ವೃಷಣಗಳ ಕ್ಯಾನ್ಸರ್ ಬರುತ್ತದೆಂದು ತಿಳಿಯಬೇಕು. ಈ ನಿಟ್ಟಿನಲ್ಲಿ ಲಿಂಗ ಒಂದು ಕಡೆ ಬಾಗಿದಂತಿರುವವರನ್ನು ಪರಿಶೀಲಿಸಿದ ನಂತರವೇ ಈ ನಿರ್ಣಯಕ್ಕೆ ಬರಲಾಯಿತು. ಹೀಗೆ ಲಿಂಗ ಬಾಗಿರುವುದನ್ನು Peyronie’s Disease  ಎನ್ನುತ್ತಾರೆ.ಈ ವ್ಯಾಧಿಯಿಂದ ನರಳುತ್ತಿರುವವರಿಗೆ ಕ್ಯಾನ್ಸ್ರ್ ಬರುವ ಸಾಧ್ಯತೆಗಳು ಹೆಚ್ಚು. ಇಂತಹವರಿಗೆ ವೃಷಣಗಳ ಕ್ಯಾನ್ಸರ್ ಬರುವ ಸಾಧ್ಯತೆ ಶೇ. 40 ಇರುತ್ತಂತೆ. ಸ್ಕಿನ್ ಕ್ಯಾನ್ಸರ್ ಬರುವ ಸಾಧ್ಯತೆ 29%, ಜೀರ್ಣಾಶಯ ಕ್ಯಾನ್ಸರ್ ಬರುವ ಸಾಧ್ಯತೆ ಶೇ.40% ಇರುತ್ತದೆಂದು ವೈದ್ಯರು ತಿಳಿಸಿದ್ದಾರೆ. ಆದರೆ. ಇದರ ಬಗ್ಗೆ ಇನ್ನೂ ಹೆಚ್ಚು ಸಂಶೋಧನೆಗಳನ್ನು ನಡೆಸಿದ ನಂತರ ತಿಳಿಸುತ್ತೇವೆಂದು ವಿಜ್ಞಾನಿಗಳು ತಿಳಿಸಿದ್ದಾರೆ.

No comments