Header Ads

test

ಕಾರ್ ಡ್ರೈವರ್ ನಿಂದ ಅತ್ಯಾಚಾರಕ್ಕೆ ಒಳಗಾದ ಯುವತಿ ಬರೆದ ಪತ್ರ.! ಓದಿದರೆ ನಿಮ್ಮ ಕಣ್ಣಲ್ಲಿ ನೀರು ಬರುತ್ತೆ.!

ಎಂದಿನಂತೆ ಆಫೀಸಿನಿಂದ ಮರಳಿ ಬರುತ್ತಿದ್ದೆ.ಮಾಡುವುದು ಸಾಫ್ಟ್‌ವೇರ್ ಕೆಲಸವಾದ ಕಾರಣ.ಕೆಲಸ ಮುಗಿಯುವ ಹೊತ್ತಿಗೆ ಸಮಯ ರಾತ್ರಿ 10 ದಾಟಿತ್ತು. ಅತ್ತ ಹೊರಡುತ್ತಿದ್ದ ಕ್ಯಾಬನ್ನು ನಿಲ್ಲಿಸಿ, ಹತ್ತಿದೆ.ಮಳೆ ಬಿದ್ದಿದ್ದ ಕಾರಣ.ಕಾರು ತುಂಬಾ ನಿಧಾನಕ್ಕೆ ಸಾಗುತ್ತಿತ್ತು.ಮೇಡಂ ವೆದರ್ ತುಂಬಾ ಕೂಲಾಗಿದೆ ಒಂದು ಕಪ್ ಕಾಫಿ ಕುಡಿಯುತ್ತೇನೆ ಎಂದ.  ಪಕ್ಕದಲ್ಲೇ ಫೇಮಸ್ ಟೀ ಸ್ಟಾಲ್ ಇದೆ ಅಲ್ಲೇ ನಿಲ್ಲಿಸುತ್ತೇನೆ ಎಂದ ಡ್ರೈವರ್. ಸರಿ ಅಂದೆ ನಾನು. ಕಾರು ರೂಟು ಬದಲಾಯಿಸಿ, ಕಡುಕತ್ತಲಿನ ಪ್ರದೇಶದಲ್ಲಿ ನಿಲ್ಲಿಸಿತು.! ಅಲ್ಲಿಯವರೆಗೂ ನನಗೆ ಅರ್ಥವಾಗಲಿಲ್ಲ.ನಾನು ಮನುಷ್ಯನ ಮುಖವಾಡ ತೊಟ್ಟಿರುವ ಮೃಗವೊಂದರ ಕೈಗೆ ಸಿಕ್ಕಿಬಿದ್ದಿದ್ದೆ.ಕಾರು ನಿಂತಿತು. ಮೊದಲು.ತಿಕ್ಷಣವೂ ನನಗೆ ನರಕ ಯಾತನೆ ನೀಡಿದ ಆ ಮಾನವಮೃಗ. ತನ್ನ ಬಲವನ್ನೆಲ್ಲಾ ನನ್ನ ದೇಹದ ಮೇಲೆ ತೋರಿಸಿದ. ಅಣ್ಣಾ , ನಾನು ನಿನ್ನ ತಂಗಿಯಂತಹವಳು ಎಂದು ಕಾಲು ಹಿಡಿದುಕೊಂಡೆ.? ಅವನು ನನ್ನಲ್ಲಿನ ಹೆಣ್ತವನ್ನು ನೋಡಿದನೇ ಹೊರತು.ತಂಗಿಯನ್ನು ನೋಡಲಿಲ್ಲ. ಮೊದಲ ಸಂಬಳದಲ್ಲಿ ಅದೆಷ್ಟೋ ಪ್ರೀತಿಯಿಂದ ಖರೀದಿಸಿದ್ದ ಡ್ರೆಸನ್ನು.ದೇಹದ ಮೇಲಿರದಂತೆ  ಹರಿದುಬಿಟ್ಟ. ನನ್ನ ಆರ್ತನಾದ.ಮತ್ತಿನಲ್ಲಿ ಮಿಂದೆದ್ದಿರುವ ಆತನ ಕಿವಿಗೆ ಯಾವುದೇ ವಿಧದಲ್ಲೂ ಬೀಳಲಿಲ್ಲ.ಕಾಮವಾಂಛೆಯಿಂದ ತುಂಬಿತುಳುಕುತ್ತಿದ್ದ ಆತನಿಗೆ ತಾಯಿ-ತಂಗಿಯಂತಹ ಬಂಧಗಳು.ಮಾನವೀಯತೆ-ದಯೆ-ದಾಕ್ಷಿಣ್ಯದಂತಹ ಮಾನವ ಮೌಲ್ಯಗಳು ಯಾವುದೇ ವಿಧದಲ್ಲೂ ತಡೆಯಲು ಸಾಧ್ಯವಾಗಲಿಲ್ಲ. ಆ ಮೃಗದ ಕಾರಣ ನನ್ನ ದೇಹ ಹಣ್ಣುಗಾಯಿ, ನೀರುಗಾಯಿ ಆಗಿತ್ತು.

ಹಾಲುಣಿಸುವಾಗಲೇ ,ನನ್ನ ಮಗ ಮುಂದೆ ಈ ರೀತಿ ಸಿಗರೇಟ್‌ನಿಂದ ಸುಡುವಂತಹ ನೀಚನಾಗುತ್ತಾನೆಂದು ಮೊದಲೇ ಗೊತ್ತಿದ್ದರೆ.ಇವನ ತಾಯಿ ಇವನಿಗೆ ಹಾಲುಣಿಸುತ್ತಿರಲಿಲ್ಲ.ಹುಟ್ಟಿದಾಗಲೇ ಕತ್ತು ಹಿಚುಕಿ ಸಾಯಿಸುತ್ತಿದ್ದಳೇನೋ?

ಬಿಡಿಸಿಕೊಳ್ಳಬೇಕೆಂದು ಎಷ್ಟೇ ಪ್ರಯತ್ನಿಸಿದರೂ. ಹೊರಬೀಳದ ಸ್ತ್ರೀ ಬಲಹೀನತೆಯನ್ನು ನೋಡಿ ಆತ ಈ ರೀತಿ ನಗುತ್ತಾನೆಂದು.ಪರಸ್ತ್ರೀಯನ್ನು ತನ್ನ ದುರ್ಬುದ್ಧಿಯಿಂದ ಹೀಗೆ ಮಾಡುತ್ತಾನೆಂದು ಮೊದಲೇ ಗೊತ್ತಿರುತ್ತಿದ್ದರೆ.ಇವನ ತಾಯಿ ಚಂದಮಾಮನನ್ನು ತೋರಿಸುತ್ತಾ ತಿನ್ನಿಸುವ ತುತ್ತಿನಲ್ಲಿ ಅಂದೇ ವಿಷ ಬೆರೆಸಿ ಸಾಯಿಸುತ್ತಿದ್ದಳೇನೋ?

ಹುಲಿ ತನ್ನ ಪಂಜಾದಿಂದ ಜಿಂಕೆಗಳನ್ನು ಬೇಟೆಯಾಡಿದಂತೆ.ಆತನ ಉಗುರನ್ನು ಈ ರೀತಿಯಾಗಿ  ಮಹಿಳೆಯೊಬ್ಬಳ ಮೇಲೆ ಹಾಕಿ ಪರಚುತ್ತಾನೆಂದು ಮೊದಲೇ ಗೊತ್ತಿದ್ದರೆ.ಚಿಕ್ಕಂದಿನಲ್ಲೇ ಇವನ ತಾಯಿ ಇಕ್ಕಳದಿಂದ ಇವನ ಉಗುರುಗಳನ್ನು ಬುಡಸಮೇತ ಕೀಳುತ್ತಿದ್ದಳೇನೋ?

ನಾಯಿಯಂತೆ ಮೈ ಮೇಲೆ  ಮುಗಿ ಬಿದ್ದು.ಮೂತಿ ನೆಕ್ಕುತ್ತಾನೆಂದು ಮೊದಲೇ ಗೊತ್ತಿದ್ದರೆ.ಇವನ ತಾಯಿ ಇವನನ್ನು ಶಾಲೆಗೆ ಕಳುಹಿಸುವಾಗ ,ಬಿಸಿಮಾಡಿದ ಸಟ್ಟುಗದಿಂದ ಇವನ ಮೂತಿ ಮೇಲೆ ನಾಲ್ಕು ಬರೆ ಎಳೆಯುತ್ತಿದ್ದಳೇನೋ?

ಬಲವಂತದಿಂದ ಸ್ತ್ರೀಯೊಬ್ಬಳ ದೇಹದಮೇಲೆ  ಈ ರೀತಿ ರಾಕ್ಷಸನಂತೆ ಆಕ್ರಮಣ ಮಾಡುತ್ತಾನೆಂದು  ಮೊದಲೇ ಗೊತ್ತಿದ್ದರ.ಇವನ ತಾಯಿ ತೊಟ್ಟಿಲು ತೂಗುವಾಗಲೇ.ಅಲ್ಲಿಂದಲೇ ಕೆಳಗೆ ತಳ್ಳಿ ಪೀಡೆ ತೊಲಗಿತು ಎಂದು ಕೈತೊಳೆದುಕೊಳ್ಳುತ್ತಿದ್ದಳೇನೋ?

ಜನ್ಮಸ್ಥಾನವನ್ನು.ಕಾಮಕ್ರೀಡೆ ಸ್ಥಳವಾಗಿ ಪರಿಗಣಿಸಿ ಈ ರೀತಿ ರೊಚ್ಚಿಗೇಳುತ್ತಾನೆಂದು.ಮೊದಲೇ ಗೊತ್ತಿದ್ದರೆ.ಇವನ ತಾಯಿ ಅಸಲು ಅಲ್ಲಿಂದಲೇ ಇವನನ್ನು ಹೊರಗೆ ಬರಲು ಬಿಡದೆ.ಅಬಾರ್ಷನ್ ಹೆಸರಿನಲ್ಲಿ ವೈದ್ಯರ ಕತ್ತರಿಗೆ ಬಲಿಕೊಡುತ್ತಿದ್ದಳೇನೋ?

ಉಸಿರಾಡದಂತೆ.ಮೇಲೆ ಬಿದ್ದು ತೊಳಲಾಡುವಂತೆ ಮಾಡಿ.ಮಾನ ಹರಣಮಾಡುವ ನೀಚನಾಗಿ.ಬದಲಾಗುತ್ತಾನೆಂದು ಮೊದಲೇ ಗೊತ್ತಿದ್ದರೆಇವನ ತಾಯಿ.ತಲೆದಿಂಬಿನಿಂದ ಇವನು ಉಸಿರಾಡದಂತೆ ಮಾಡಿ ಸತ್ತನಲ್ಲ ನಾಳೆಯ ರಾಕ್ಷಸ ಎಂದು ಮೊದಲೇ ಸಂಭ್ರಮಿಸುತ್ತಿದ್ದಳೇನೋ?

No comments