Header Ads

test

ಒಂದು ಕಾಲದಲ್ಲಿ ರೈಲಿನಲ್ಲಿ ಭಿಕ್ಷೆ ಬೇಡುತ್ತಿದ್ದ ಆತ.ಈಗ ಬೀದಿ ಬಾಲಕರ ಜೀವನದಲ್ಲಿ ಬೆಳಕುತುಂಬುತ್ತಿದ್ದಾನೆ.!

ಈತನ ಹೆಸರು ಅಮೀನ್ ಶೇಕ್ ವಯಸ್ಸು 25 ವರ್ಷಗಳು. ಆತನಿಗೆ 5 ವರ್ಷ ಇದ್ದಾಗ ಸ್ಥಳೀಯವಾಗಿದ್ದ ಕೆಫೆಗಳಲ್ಲಿ ಟಿ ಕೊಡುತ್ತಾ ಕಪ್‌ಗಳನ್ನು ತೆಗೆಯುತ್ತಾ ಕೆಲಸ ಮಾಡುತ್ತಿದ್ದ. ಆದರೆ ಒಂದು ದಿನ ಅಮೀನ್ ಕಪ್ ತರುತ್ತಾ ಅವನ್ನು ಕೆಳಗೆ ಬೀಳಿಸಿದ ಕಾರಣ ಆತನಿಗೆ ತುಂಬಾ ಭಯವಾಯಿತು. ಹೋಟೆಲ್ ಜತೆಗೆ ಮನೆ ಬಳಿ ಸಹ ತನ್ನನ್ನು ಹೊಡೆಯುತ್ತಾರೆಂದು ಭಯಬಿದ್ದು ಆತ ಯಾರಿಗೂ ಹೇಳದೆ ಓಡಿಹೋದ. ಆ ರೀತಿ ಓಡಿಹೋದ ಆತ ಮಲದ್ ರೈಲ್ವೇ ಸ್ಟೇಷನ್‌ನಲ್ಲಿ ವಾಸಿಸುತ್ತಿದ್ದ. ರೈಲುಗಳಲ್ಲಿ ಶೂಗಳಿಗೆ ಪಾಲಿಶ್ ಮಾಡುತ್ತಾ, ಡಸ್ಟ್ ಬಿನ್‌ಗಳಲ್ಲಿ ಹಾಕಿರುತ್ತಿದ್ದ ಆಹಾರವನ್ನು ತಿನ್ನುತ್ತಾ, ರೈಲುಗಳಲ್ಲಿ ಹಾಡು ಹಾಡುತ್ತಾ ಭಿಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ. ಆ ರೀತಿ ಆತ 8 ವರ್ಷ ವಯಸ್ಸಿನ ತನಕ ಕಳೆದ. ಹೀಗಿರಬೇಕಾದರೆ ಒಮ್ಮೆ ಸ್ನೇಹಾ ಸದನ್ ಎಂಬ ಸ್ವಯಂ ಸೇವಾ ಸಂಸ್ಥೆಯ ಸಿಸ್ಟರ್ ಸೆರಾಫಿನಾ ಆತನನ್ನು ರೈಲಿನಲ್ಲಿ ನೋಡಿ ಅಯ್ಯೋ ಪಾಪ ಎಂದು ಕನಿಕರಿಸಿ, ಆತನನ್ನು ಅಲ್ಲಿಂದ ಕರೆತಂದಳು. ಈ ಘಟನೆಯೇ ಅಮೀನ್ ಜೀವನದಲ್ಲಿ ಮಹತ್ತರ ತಿರುವು ನೀಡಿತು.


ಆ ಸಂಸ್ಥೆಗೆ ಹೋದ ಅಮೀನ್ ಅಲ್ಲೇ 10 ವರ್ಷಗಳ ಕಾಲ ಇದ್ದ. ಆ ಸಮಯದಲ್ಲಿ ಓದಿನ ಜತೆಗೆ, ಡ್ರೈವಿಂಗ್, ಮೆಯಿಂಟೆನೆನ್ಸ್‌ನಂತಹ ಹಲವು ಕೋರ್ಸ್‍ಗಳಲ್ಲಿ ಶಿಕ್ಷಣ ಪಡೆದ. ಆ ಬಳಿಕ ಆ ಸಂಸ್ಥೆ ಸಹಕಾರದಿಂದ ಯೂಸ್ಟನ್ ಎಂಬ ಫಾರಿನರ್ ಬಳಿ ಡ್ರೈವರ್ ಕಮ್ ಮ್ಯಾನೇಜರ್ ಆಗಿ ಸೇರಿದ. ಹೀಗಿರಬೇಕಾದರೆ ಫಾರಿನರ್ ಬಳಿ ಇದ್ದ ಕಾರಣ ಇಂಗ್ಲಿಷ್ ಚೆನ್ನಾಗಿ ಬಂತು. ಆದರೆ ಆತನಿಗೆ ಬಾರ್ಸಿಲೋನಾಗೆ ಹೋಗಿ ಬರಬೇಕು ಎಂದಿದ್ದ ಕಾರಣ ಮತ್ತೆ ಸ್ನೇಹಾ ಸದನ್‌ ಆಶ್ರಯಿಸಿದ. ಅವರು ಆತನಿಗೆ ಸಹಾಯ ಮಾಡಿದರು. ಆ ರೀತಿಯಾಗಿ ಅಮೀನ್ ಬಾರ್ಸಿಲೋನಾಗೆ ಭೇಟಿ ನೀಡಿದ. ಆ ಟೂರ್‌ನಿಂದ ಅಮೀನ್‌ಗೆ ಒಂದು ಟ್ರಾವೆಲ್ಸ್ ವ್ಯಾಪಾರ ಇಡಬೇಕು ಎನ್ನಿಸಿತು. ಹಾಗಾಗಿ ಮತ್ತೆ ಆ ಸಂಸ್ಥೆ ಸಹಕಾರದಿಂದ ಸ್ವಂತ ಟ್ರಾವೆಲ್ ವ್ಯಾಪಾರ ಪ್ರಾರಂಭಿಸಿದ. ಮುಂಬೈಗೆ ಬರುವ ಫಾರಿನರ್‌ಗಳಿಗೆ ಆ ನಗರವನ್ನು ತೋರಿಸುವ ಟೂರಿಸ್ಟ್ ವಾಹನಗಳನ್ನು ಅಮೀನ್ ನಡೆಸುತ್ತಿದ್ದ. ಒಳ್ಳೆಯ ಲಾಭವೂ ಬರುತ್ತಿತ್ತು. ಕಡೆಗೆ ತನ್ನಂತಹ ಮಕ್ಕಳಿಗೆ ಸಹಾಯ ಮಾಡಬೇಕೆಂದುಕೊಂಡು ಮುಂಬೈನಲ್ಲೇ ಬಾಂಬೆ ಟು ಬಾರ್ಸಿಲೋನಾ ಕೆಫೆ ಎಂಬ ಹೋಟೆಲ್ ಪ್ರಾರಂಭಿಸಿದ. ಅಲ್ಲಿಗೆ ಯಾರು ಬೇಕಾದರೂ ಹೋಗಬಹುದು. ಇಷ್ಟವಾದರೆ ಆಹಾರ, ಟೀ ಕೊಂಡುಕೊಳ್ಳಬಹುದು. ಅದರಲ್ಲಿ ಬಂದ ಹಣವನ್ನು ಅಮೀನ್ ತನ್ನಂತಹ ಮಕ್ಕಳ ಕ್ಷೇಮಕ್ಕಾಗಿ ಬಳಸುತ್ತಾನೆ. ಆ ಹೋಟೆಲ್‌ನಲ್ಲಿರುವ ಇನ್ನೊಂದು ವಿಶೇಷತೆ ಎಂದರೆ ಅಮೀನ್ ತಾನು ಕಾಪಾಡಿದ ಬೀದಿ ಮಕ್ಕಳು ಹಾಕಿದ ಪೇಯಿಂಟಿಂಗ್ಸ್, ತಯಾರಿಸಿದ ಹಸ್ತಕಲಾ ವಸ್ತುಗಳನ್ನು ಆ ಹೋಟೆಲ್‌ನಲ್ಲಿ ಪ್ರದರ್ಶಿಸುತ್ತಿದ್ದ. ಇದರಿಂದ ಅಲ್ಲಿಗೆ ಬರುವವರಿಗೆ ಆಯಾ ಉತ್ಪನ್ನಗಳನ್ನು ಕೊಳ್ಳಲು ಪ್ರಾರಂಭಿಸಿದರು. ಆ ರೀತಿ ಬಂದ ಹಣವನ್ನೂ ಅಮೀನ್ ಆ ಬೀದಿ ಬಾಲಕರಿಗೆ ಕೊಡುತ್ತಿರುವುದು ವಿಶೇಷ.

ಈಗ ಅಮೀನ್‌ಗೆ 25 ವರ್ಷ. ತನ್ನ ಮೇಲೆ ಆಧಾರ ಪಟ್ಟಿರುವ ಅದೆಷ್ಟೋ ಮಂದಿ ಬೀದಿ ಬಾಲಕರಿಗೆ ಹೊತ್ತು ಹೊತ್ತಿಗೆ ಊಟ ಹಾಕುತ್ತಿದ್ದಾನೆ. ತನ್ನ ಕಾಲ ಮೇಲೆ ತಾವು ನಿಲ್ಲುವಂತೆ ಆರ್ಥಿಕ ಸ್ವಾವಲಂಭನೆ ಸಾಧಿಸುತ್ತಿದ್ದಾರೆ. ಇದೆಲ್ಲಾ ಅಮೀನ್‍ನಿಂದ ಸಾಧ್ಯವಾಯಿತು. ತನ್ನ ಜೀವನದಲ್ಲಿ ನಡೆದ ಘಟನೆ ಹೇಗೆ ಮಹತ್ತರ ತಿರುವು ನೀಡಿತೋ ಅದೇ ರೀತಿ ತನ್ನಂತಹ ಮಕ್ಕಳ ಜೀವನವೂ ಸಹ ತಿರುವು ಪಡೆಯಬೇಕು ಎಂಬುದು ಆತನ ಸಂಕಲ್ಪ. ಆತನ ಬಯಕೆಗಳು ನೆರವೇರಲಿ ಎಂದು ನಾವೂ ಕೋರಿಕೊಳ್ಳೋಣ.

No comments