Header Ads

test

ಗ್ರೀನ್ ಟೀ ಕುಡಿಯುತ್ತಿದ್ದೀರಾ? ಆದರೆ ಈ ಎಚ್ಚರಿಕೆಗಳು ನಿಮಗಾಗಿ!

ಗ್ರೀನ್ ಟೀ ಕುಡಿಯುವುದರಿಂದ ಮಾನವನ ದೇಹಕ್ಕೆ ಸಿಗುವ ಪ್ರಯೋಜನಗಳು ಅಮೋಘ. ಗ್ರೀ ಟೀಯಲ್ಲಿ ಹೆಚ್ಚಾಗಿ ಆಂಟಿ ಬಯೋಟಿಕ್ಸ್, ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತವೆ. ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಇನ್ನೂ ಹೇಳಬೇಕೆಂದರೆ ಆಂಟಿ ಏಜಿಂಗ್ ಪ್ರಾಪರ್ಟೀಸ್ ಸಹ ಇವೆ. ರುಚಿ ಕಹಿ ಅನ್ನಿಸಿದರೂ. ಗ್ರೀನ್ ಟಿಯಲ್ಲಿ ಇಷ್ಟೆಲ್ಲಾ ಲಾಭಗಳಿವೆ ಎಂದು ತಜ್ಞರು ಹೇಳುತ್ತಿದ್ದಾರೆ. ಹಾಗಿದ್ದರೆ ಆ ರೀತಿಯ ಗ್ರೀನ್ ಟೀ ಕುಡಿಯುವ ವಿಚಾರದಲ್ಲಿ ಮಾತ್ರ ಕೆಲವು ಎಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದು ತಜ್ಞರು ಸೂಚಿಸುತ್ತಿದ್ದಾರೆ. ಗ್ರೀನ್ ಟೀ ಒಳಿತು ಮಾಡಿದರೂ.ಅದರ ವಿಚಾರದಲ್ಲಿ ಕೆಲವು ಪದ್ಧತಿಗಳನ್ನು ಪಾಲಿಸಬೇಕು. ಅವು ಏನೆಂದರೆ.



2. ಖಾಲಿ ಹೊಟ್ಟೆಯಲ್ಲಿ ಕುಡಿಯಬಾರದು. ಬೆಳಗ್ಗೆ ಎದ್ದಕೂಡಲೆ ಗ್ರೀನ್ ಟೀ ಕುಡಿದರೆ ತುಂಬಾ ಒಳ್ಳೆಯದು ಎಂಬುದು ಕೇವಲ ನಂಬಿಕೆ ಅಷ್ಟೆ. ಗ್ರೀನ್ ಟೀಯಲ್ಲಿ ಕೆಫಿನ್ ಇರುತ್ತದೆ. ಖಾಲಿ ಹೊಟ್ಟೆಯಲ್ಲಿ ಅದನ್ನು ತೆಗೆದುಕೊಳ್ಳುವುದರಿಂದ ಯಾವುದೇ ರೀತಿಯಲ್ಲೂ ಒಳಿತಲ್ಲ.

3.ಊಟ ಮಾಡಿದ ಕೂಡಲೆ ಬೇಡ. ಬೆಳಗ್ಗೆ, ಮಧ್ಯಾಹ್ನ.  ಊಟ ಮಾಡಿದ ಕೂಡಲೆ ಟೀ ಕುಡಿಯುವುದು ತುಂಬಾ ಮಂದಿಗೆ ಅಭ್ಯಾಸ. ಆದರೆ ಗ್ರೀ ಟೀ ವಿಚಾರದಲ್ಲಿ ಇದು ಒಳ್ಳೆಯದಲ್ಲ. ತಿಂದ ಬಳಿಕ ಅರ್ಧ ಗಂಟೆಯಿಂದ ನಲವತ್ತೈದು ನಿಮಿಷಗಳ ಬಳಿಕ ಕುಡಿಯುವುದು ಒಳ್ಳೆಯದು. ತಿಂದ ಕೂಡಲೆ ಗ್ರೀನ್ ಟೀ ಕುಡಿದರೆ ಇದು ಜೀರ್ಣಕ್ರಿಯೆಯನ್ನು ಡೈಲ್ಯೂಟ್ ಮಾಡುತ್ತದೆ.

4. ಸಂಜೆ ಹೊತ್ತು ಬೇಡ. ಸಂಜೆ ಹೊತ್ತು ಗ್ರೀನ್ ಟೀ ಕುಡಿಯುವುದರಿಂದ ಅಷ್ಟು ಒಳ್ಳೆಯದಾಗಲ್ಲ. ಇದರಿಂದ ರಾತ್ರಿ ಹೊತ್ತು ನಿದ್ರಾಹೀನತೆ ಕಾಡುತ್ತದೆ. ನಿದ್ದೆ ಮೇಲೆ ಪ್ರಭಾವ ಬೀರುತ್ತದೆ. ಅದೇ ರೀತಿ ಆ ಸಮಯದಲ್ಲಿ ಈ ಟೀಯಿಂದ ಸ್ಟ್ರೆಸ್ ಹೆಚ್ಚಾಗುತ್ತದೆ.

5. ಮರುಬಳಕೆ ಬೇಡ. ಗ್ರೀನ್ ಟೀ ಬ್ಯಾಗನ್ನು ಮತ್ತೆ ಮತ್ತೆ ಬಳಸಬಾರದು. ಒಮ್ಮೆ ಮಾತ್ರ ಬಳಸಿ ಬಿಸಾಕಬೇಕು.
6. ಹೆಚ್ಚಿನ ನೀರು ಒಳಿತು.ಒಂದು ಗ್ರೀನ್ ಟೀ ಬ್ಯಾಗನ್ನು ಕಪ್ ನೀರಿನಲ್ಲಿ ಮಾತ್ರ ಬಳಸಬೇಕು ಎಂದೇನು ಇಲ್ಲ. ಹೆಚ್ಚು ಬಿಸಿ ನೀರನ್ನು ಬೆರೆಸಿಕೊಂಡು ಕುಡಿಯುವುದು ಒಳ್ಳೆಯದು.

No comments