Header Ads

test

ಈ ಸ್ವೀಟ್ ಕೆಜಿ 9000 ರೂಪಾಯಿಗಳಂತೆ..! ಅಷ್ಟು ಬೆಲೆ ಯಾಕೆ ಗೊತ್ತಾ.? ಹೇಗೆ ತಯಾರಿಸುತ್ತಾರೆಂದರೆ?

ಮಾರುಕಟ್ಟೆಯಲ್ಲಿ ನಮಗೆ ಸಾಕಷ್ಟು ರೀತಿಯ ಸ್ವೀಟ್ಸ್ ಲಭಿಸುತ್ತವೆ. ಯಾವುದೇ ಸ್ವೀಟ್ ಆದರೂ ಕೆಜಿ ಬೆಲೆ ಅಬ್ಬಬ್ಬಾ ಎಂದರೆ ರೂ.300ರ ಆಸುಪಾಸಿನಲ್ಲಿರುತ್ತದೆ. ಇನ್ನೂ ಕೆಲವು ವಿಶೇಷ ಸ್ವೀಟ್‌ಗಳ ಬೆಲೆ ರೂ.600 ರಿಂದ ರೂ.800ರಷ್ಟಿರಬಹುದು. ಆದರೆ ನಾವೀಗ ತಿಳಿಸಲಿರುವ ಸ್ವೀಟ್ ಬೆಲೆ ಎಷ್ಟು ಗೊತ್ತಾ...? ಗೊತ್ತಾದರೆ ಶಾಕ್ ಆಗುತ್ತೀರ. ಕೆಜಿ ಸ್ವೀಟ್ ಬೆಲೆ ಬರೋಬ್ಬರಿ ರೂ.9 ಸಾವಿರ. ಹೌದು ಆ ಸ್ವೀಟ್ ಬೆಲೆ ಅಕ್ಷರಶಃ ರೂ.9 ಸಾವಿರ. ಇಷ್ಟಕ್ಕೂ ಅಷ್ಟೆಲ್ಲಾ ಬೆಲೆ ಇರಲು ಆ ಸ್ವೀಟ್‌ನಲ್ಲಿ ಏನಿದೆ ಅಂತಹ ಸ್ಪೆಷಲ್ ಅಂತೀರ..? ಏನೂ ಇಲ್ಲ... ಆ ಸ್ವೀಟ್‌ನಲ್ಲಿ ಚಿನ್ನ ಬಳಸುತ್ತಾರೆ. ಹಾಗಾಗಿ ಅಷ್ಟು ಬೆಲೆ...!


ಗುಜರಾತ್‌ನಲ್ಲಿನ ಸೂರತ್‌ನಲ್ಲಿ 24 ಕ್ಯಾರೆಟ್ಸ್ ಮಿಠಾಯಿ ಮ್ಯಾಜಿಕ್ ಎಂಬ ಒಂದು ಸ್ವೀಟ್ ಸ್ಟಾಲ್ ಇದೆ. ಅಲ್ಲಿ ಮೇಲೆ ತಿಳಿಸಿದ ಚಿನ್ನದ ಸ್ವೀಟ್‌ಗಳನ್ನು ತಯಾರಿಸುತ್ತಾರೆ. ಆ ಸ್ವೀಟ್‍ಗಳ ಮೇಲೆ ಚಿನ್ನದ ಲೇಪನ ಇರುತ್ತದೆ. ಅಂದರೆ ಬೇರೆ ಅಂಗಡಿಗಳಲ್ಲಿನ ಸ್ವೀಟ್ ಮಳಿಗೆಗಳಲ್ಲಿ ಲಭಿಸುವ ಕೆಲವು ಸಿಹಿ ತಿಂಡಿಗಳ ಮೇಲೆ ಬೆಳ್ಳಿ ಲೇಪನ ಹಾಕುತ್ತಾರೆ ಅಲ್ಲವೇ. ಅದೇ ರೀತಿ ಆ ಶಾಪ್‌ನಲ್ಲಿನ ಸಿಹಿ ತಿಂಡಿಗಳ ಮೇಲೆ ಚಿನ್ನದ ಲೇಪನ ಇರುತ್ತದೆ. ಹಾಗಾಗಿ ಆ ಸ್ವೀಟನ್ನು ಗೋಲ್ಡನ್ ಸ್ವೀಟ್ ಎಂದು ಕರೆಯುತ್ತಾರೆ. ಇನ್ನು ಈ ಸ್ವೀಟ್ ಬೆಲೆ.. ಮೊದಲೇ ತಿಳಿಸಿದೆವಲ್ಲವೇ.. ಕೆಜಿ ರೂ. 9 ಸಾವಿರ.

ಅಷ್ಟೆಲ್ಲಾ ದುಬಾರಿ ಬೆಲೆ ಇದ್ದರೂ ಗೋಲ್ಡ್ ಸ್ವೀಟ್‌ಗಳನ್ನು ಬಹಳಷ್ಟು ಮಂದಿ ಖರೀದಿಸುತ್ತಾರೆ ಎಂದು ಮಳಿಗೆಯ ಮಾಲೀಕ ಹೇಳುತ್ತಾರೆ. ಬಂಗಾರದಲ್ಲಿ ಆಂಟಿ ಇನ್‌ಫ್ಲಾಮೇಟರಿ ಗುಣಗಳು ಇರುತ್ತವೆ. ಇವು ದೇಹದಲ್ಲಿನ ನೋವುಗಳು, ಊತವನ್ನು ಕಡಿಮೆ ಮಾಡುತ್ತವೆ. ಇದರಿಂದ ಕ್ಯಾನ್ಸರ್‌ ಬಾರದಂತೆ ಇರುತ್ತದೆ ಎಂದು ಅವರು ಹೇಳುತ್ತಾರೆ. ಸೋನಾ-ಚ್ಯವನಪ್ರಾಶ್ ಹೇಗೆ ನಮ್ಮ ಆರೋಗ್ಯಕ್ಕೆ ಸಹಕಾರಿಯೋ ಈ ಗೋಲ್ಡ್ ಸ್ವೀಟ್‌ನಿಂದಲೂ ನಮಗೆ ಆರೋಗ್ಯ ಸಿಗುತ್ತದೆ ಎನ್ನುತ್ತಾರೆ.

ಇನ್ನು ಕಳೆದ ಆಗಸ್ಟ್‌ನಲ್ಲಿ ರಕ್ಷಾ ಬಂಧನ್ ಸಂದರ್ಭದಲ್ಲಿ ಪ್ರಾರಂಭವಾದ ಈ ಗೋಲ್ಡ್ ಸ್ವೀಟ್ಸ್ ತಯಾರಿ ಈಗಲೂ ಮುಂದುವರೆಯುತ್ತಿದೆ. ಗ್ರಾಹಕರು ಹೆಚ್ಚೆಚ್ಚು ಸ್ವೀಟ್ಸ್ ಖರೀದಿಸುತಿರುವ ಕಾರಣ ಅವನ್ನು ತಯಾರಿಸಲಾಗುತ್ತಿದೆ ಎಂದು ಅಂಗಡಿ ಮಾಲೀಕ ಹೇಳಿದ್ದಾರೆ. ಅದೇನೇ ಇರಲಿ... ಗೋಲ್ಡ್ ಸ್ವೀಟ್‌ಗಳ ಕಥೆ ಚೆನ್ನಾಗಿದೆ ಅಲ್ಲವೇ...! ಇನ್ನು ಮುಂದೆ ಅತ್ಯಂತ ದುಬಾರಿ ಸ್ವೀಟ್ ಯಾವುದು ಎಂದರೆ.... ಈ ಸ್ವೀಟ್‌ಗಳು ನೆನಪಾಗುತ್ತದೆ...! ಮರೀಬೇಡಿ.

No comments