Header Ads

test

ಆ ಅಜ್ಜಿ 72 ವರ್ಷಗಳ ವಯಸ್ಸಲ್ಲಿ ಗಂಡುಮಗುಗೆ ಜನ್ಮ ನೀಡಿದಳು. ಹೇಗೆ ಗೊತ್ತಾ.?

ಮೆನೋಪಾಸ್. 45 ವರ್ಷ ದಾಟಿದ ಮಹಿಳೆಯರಿಗೆ ಮುಟ್ಟು ನಿಲ್ಲುವ ಪ್ರಕ್ರಿಯೆ. ಆ ರೀತಿ ಆದ ಬಳಿಕ ಇನ್ನು ಮಕ್ಕಳಾಗುವುದು ಅಸಾಧ್ಯ. ಈ ಹಂತದಲ್ಲಿ ಮಹಿಳೆಯರಿಗೆ ಮೆನೋಪಾಸ್ ಎಂಬುದು ಇತರೆ ಅನಾರೋಗ್ಯ ಸಮಸ್ಯೆಗಳನ್ನೂ ಸಹ ತಂದೊಡುತ್ತದೆ. ಆ ವಿಚಾರ ಪಕ್ಕಕ್ಕಿಟ್ಟರೆ.ಮೆನೋಪಾಸ್ ವಯಸ್ಸು ದಾಟಿ ಬಹಳ ವರ್ಷಗಳಾದ ಮೇಲೆ ಮಕ್ಕಳನ್ನು ಹೆರಲು ಅವಕಾಶ ಇದೆಯಾ? ಸಾಧ್ಯವೇ ಇಲ್ಲ. ಆದರೆ.ಆ ವೃದ್ಧೆ 72ರ ವಯಸ್ಸಿನಲ್ಲಿ ಆರೋಗ್ಯವಾಗಿರುವಂತಹ ಗಂಡುಮಗುವಿಗೆ ಜನ್ಮ ನೀಡಿದ್ದಾರೆ. ಮೆನೋಪಾಸ್ ದಾಟಿ ಎಷ್ಟೋ ವರ್ಷಗಳು ಆಗುತ್ತಿದ್ದರೂ ಆಕೆ ಮಗುವಿಗೆ ಜನ್ಮ ನೀಡಿರುದು ವಿಶೇಷ. ಇದರಿಂದ ಈಗ ಅಜ್ಜಿ ಅತಿ ಹೆಚ್ಚು ವಯಸ್ಸಿನಲ್ಲಿ ಮಗುವಿಗೆ ಜನ್ಮ ನೀಡಿದ ತಾಯಿಯಾಗಿ ದಾಖಲೆ ಸೃಷ್ಟಿಸಿದ್ದಾರೆ.


ಅವರ ಹೆಸರು ಮೊಹಿಂದರ್ ಸಿಂಗ್, ದಲ್ಜಿಂದರ್ ಕೌರ್. ಮೊಹಿಂದರ್ ವಯಸ್ಸು 79 ವರ್ಷಗಳು. ದಲ್ಜಿಂದರ್ ವಯಸ್ಸು 72 ವರ್ಷಗಳು. ಇವರಿಗೆ 46 ವರ್ಷಗಳ ಹಿಂದೆ ಮದುವೆಯಾಗಿತ್ತು. ಆದರೆ ಇವರಿಗೆ ಮಕ್ಕಳಿರಲಿಲ್ಲ. ಒಂದಷ್ಟು ಅನಾಥ ಮಕ್ಕಳನ್ನು ದತ್ತು ತೆಗೆದುಕೊಳ್ಳಿ ಎಂಬ ಸಲಹೆಗಳನ್ನು ನೀಡಿದರು. ಆದರೆ ಅದನ್ನು ಇವರು ಕೇಳಲಿಲ್ಲ.ಕಡೆಗೆ ಇವರಿಗೆ ಮಕ್ಕಳು ಬೇಕೆಂಬ ಕೋರಿಕೆ ಹೆಚ್ಚಾಯಿತು. ಇವರು ತಮ್ಮ ಹರ್ಯಾಣ ರಾಜ್ಯದಲ್ಲಿನ ಒಂದು ಸಂತಾನೋತ್ಪತ್ತಿ ಕೇಂದ್ರೆಕ್ಕೆ ಹೋದರು. ಅವರು ಐವಿಎಫ್ (IVF) ಟ್ರೀಟ್‌ಮೆಂಟ್ ಆರಂಭಿಸಿದರು. ಇದರಿಂದ ಗರ್ಭಿಣಿಯಾದ ದಲ್ಜಿಂದರ್ ಇತ್ತೀಚೆಗೆ ಮಗುವಿಗೆ ಜನ್ಮ ನೀಡಿದರು.

ದಲ್ಜಿಂದರ್ ಕೌರ್ ಆ ರೀತಿಯಾಗಿ 72ರ ವಯಸ್ಸಿನಲ್ಲಿ ಮಗುವಿಗೆ ಜನ್ಮ ನೀಡುವ ಮೂಲಕ ಈಗ ವಿಷಯ ವೈರಲ್ ಆಗಿದೆ. ಅಷ್ಟೆಲ್ಲಾ ವಯಸ್ಸಾಗಿದ್ದರೂ ಅದೂ ಐವಿಎಫ್ ಟ್ರೀಟ್‌ಮೆಂಟ್ ಮೂಲಕ ಮಗುವಿಗೆ ಜನ್ಮ ನೀಡುವ ಮೂಲಕ ಜಾಗತಿಕ ದಾಖಲೆ ನಿರ್ಮಿಸಿದ್ದಾರೆ. ಅತಿ ಹೆಚ್ಚು ವಯಸ್ಸಿನಲ್ಲಿ ಐವಿಎಫ್ ಮೂಲಕ ಮಗುವನ್ನು ಹೆತ್ತ ಮಹಿಳೆಯಾಗಿ ಆಕೆ ದಾಖಲೆ ಸೃಷ್ಟಿಸಿದ್ದಾರೆ. ಆದರೆ ತಮಗೆ ಈಗಾಗಲೆ 70ಕ್ಕೂ ಹೆಚ್ಚು ವಯಸ್ಸು ಆಗಿದ್ದರೂ ಹುಟ್ಟಿದ ಮಗುವನ್ನು ಎಚ್ಚರಿಕೆಯಿಂದ ನೋಡಿಕೊಳ್ಳುತ್ತೇವೆಂದು, ದೊಡ್ಡವನನ್ನಾಗಿ ಮಾಡುತ್ತೇವೆಂದು ಅವರು ಹೇಳುತ್ತಿದ್ದಾರೆ. ಅವರ ಕನಸು ನೆರವೇರಲಿ ಎಂದು ಆಶಿಸೋಣ.

No comments