Header Ads

test

ತೂಕ ಕಡಿಮೆಯಾಗಬೇಕೆಂದು ರಾತ್ರಿ ಹೊತ್ತು ಅನ್ನಕ್ಕೆ ಬದಲಾಗಿ "ಚಪಾತಿ" ತಿನ್ನುತ್ತಿದ್ದೀರಾ.? ಆದರೆ ಈ 5ವಿಷಯಗಳನ್ನು ಕಡ್ಡಾಯವಾಗಿ ತಿಳಿದುಕೊಳ್ಳಿ.

ಸ್ಥೂಲಕಾಯ ಎಂಬುದು ಇಂದು ಎಲ್ಲರನ್ನೂ ಬಾಧಿಸುತ್ತಿದೆ. ಬದಲಾದ ಜೀವನ ಶೈಲಿ, ಮಾಲಿನ್ಯ, ಆಹಾರಾಭ್ಯಾಸಗಳಿಂದ ಹೆಚ್ಚುತ್ತಿರುವ ದೇಹದ ತೂಕ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಇದರಿಂದ ಬೊಜ್ಜನ್ನು ಕರಗಿಸಿಕೊಳ್ಳಲು ಮಾಡುವ ಮೊದಲ ಕೆಲಸಗಳಲ್ಲಿ ತಿನ್ನುವ ಆಹಾರವನ್ನು ಕಡಿಮೆ ಮಾಡಿಕೊಳ್ಳುವುದು ಅಥವಾ ಅನ್ನಕ್ಕೆ ಬದಲಾಗಿ ಚಪಾತಿಗಳನ್ನು ತಿನ್ನುವುದು... ವೈದ್ಯರು ಸಹ ಇತ್ತೀಚೆಗೆ ನೈಟ್ ಟೈಮ್ ಚಪಾತಿ ತಿನ್ನಿ ಎಂದು ಸಲಹೆ ನೀಡುವ ಕಾರಣ ಹೆಚ್ಚಿನವರು ಇದರ ಕಡೆಗೆ ಆಸಕ್ತಿ ತೋರುತ್ತಿದ್ದಾರೆ... ಆದರೆ ಚಪಾತಿ ತಿನ್ನುವವರು ಕೆಲವು ವಿಷಯಗಳನ್ನು ತಿಳಿದುಕೊಳ್ಳಬೇಕು.


ಚಪಾತಿಗಳನ್ನು ತುಂಬಾ ಕಡಿಮೆ ಎಣ್ಣೆಯಲ್ಲಿ ಉರಿಯುವುದರಿಂದ ಉಪಯೋಗಗಳು ಇನ್ನಷ್ಟು ಹೆಚ್ಚಾಗಿ ಇರುತ್ತವೆ. ಎಣ್ಣೆ ಬಳಸದಿದ್ದರೆ ಇನ್ನೂ ಉತ್ತಮ.

ಕೆಲಸದ ಒತ್ತಡದಲ್ಲಿ ನಡುರಾತ್ರಿಯಲ್ಲಿ ಊಟ ಮಾಡಿದ ಕೂಡಲೆ ನಿದ್ದೆಗೆ ಜಾರುತ್ತಿದ್ದಾರೆ. ಆದರೆ ಈ ರೀತಿ ಮಾಡುವುದು ಆರೋಗ್ಯಕ್ಕೆ ಹಾನಿಕರ... ಭೋಜನ ಮಾಡಲು, ನಿದ್ದೆ ಮಾಡುವ ನಡುವೆ ಗ್ಯಾಪ್ ಇದ್ದರೆ ಒಳ್ಳೆಯದು. ಆ ರೀತಿ ಮಾಡಲು ಸಾಧ್ಯವಾಗದವರಿಗೆ ಚಪಾತಿ ಉತ್ತಮ ಆಹಾರ.

ತಟ್ಟೆ ತುಂಬಾ ಊಟ ಮಾಡಿದರೂ 2,3 ಚಪಾತಿ ತಿಂದರೂ ಒಂದೇ ಎಂದು ವೈದ್ಯರು ಹೇಳುತ್ತಿದ್ದಾರೆ. ಅನ್ನಕ್ಕಿಂತ ಚಪಾತಿ ದೇಹಕ್ಕೆ ಹೆಚ್ಚು ಶಕ್ತಿಯನ್ನು ನೀಡುತ್ತದೆ. ಯಾವುದೇ ಆಗಲಿ ಅತಿಯಾದರೆ ಒಳ್ಳೆಯಲ್ಲ. ಅತಿಯಾದರೆ ಅಮೃತವೂ ವಿಷವಾಗುತ್ತದೆ ಎನ್ನುತ್ತಾರಲ್ಲ ಹಾಗೆ. ಆದಕಾರಣ ಚಪಾತಿಗಳನ್ನು ಮಿತವಾಗಿ ತಿನ್ನಬೇಕು. ತಟ್ಟೆ ತುಂಬಾ ಅನ್ನ ತಿನ್ನುತ್ತೇವಲ್ಲಾ ಎಂದು ತಟ್ಟೆ ತುಂಬಾ ಚಪಾತಿ ತಿಂದರೆ... ಏನೂ ಉಪಯೋಗ ಇರಲ್ಲ.

ನಮ್ಮ ದೇಶದಲ್ಲಿ ಹೆಚ್ಚಿನ ಮಂದಿ ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ... ಚಪಾತಿ ತಿನ್ನುವುದರಿಂದ ಈ ಸಮಸ್ಯೆಯಿಂದ ಹೊರಬೀಳಬಹುದು. ಗೋಧಿಯಲ್ಲಿ ಕಬ್ಬಿಣದ ಅಂಶ ಹೆಚ್ಚಾಗಿ ಇರುವ ಕಾರಣ ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ.

ನಿದ್ದೆ ಮಾಡುವಾಗ ಶಕ್ತಿ ಅಷ್ಟಾಗಿ ಖರ್ಚಾಗಲ್ಲ. ನಮ್ಮಲ್ಲಿನ ಕ್ಯಾಲರಿಗಳು ದಹಿಸಲ್ಲ. ಹಾಗಾಗಿ ರಾತ್ರಿ ಸಮಯ ಅನ್ನ ತಿನ್ನುವುದರಿಂದ ಅದು ಖರ್ಚಾಗದೆ ಕೊಬ್ಬಾಗಿ ಬದಲಾಗುತ್ತದೆ. ಈ ಮೂಲಕ ದಪ್ಪ ಆಗುವ ಅಪಾಯ ಇದ್ದೇ ಇದೆ.

ಗೋಧಿಯಲ್ಲಿ ಯಾವುದೇ ರೀತಿಯ ಕೊಬ್ಬು ಇರಲ್ಲ. ಹೆಚ್ಚಾಗಿ ವಿಟಮಿನ್ ಬಿ, ಇ, ಕಾಪರ್, ಅಯೋಡಿನ್, ಜಿಂಕ್, ಮ್ಯಾಂಗನೀಸ್, ಸಿಲಿಕಾನ್, ಮೆಗ್ನಿಷಿಯಂ, ಕ್ಯಾಲ್ಸಿಯಂನಂತಹ ಅದೆಷ್ಟೋ ಖನಿಜಾಂಶಗಳಿರುತ್ತವೆ.

1 comment: