Header Ads

test

ಈ 5 ವಸ್ತುಗಳು ನಿಮ್ಮ ಪರ್ಸ್ ನಲ್ಲಿದ್ದರೆ ಕೂಡಲೇ ತೆಗೆದುಹಾಕಿ. ಇಲ್ಲದಿದ್ದರೆ ನಿಮ್ಮ ಕೈಯಲ್ಲಿ ಹಣನಿಲ್ಲುವುದಿಲ್ಲ.!

ಗಂಡಸರಾಗಲಿ.ಹೆಂಗಸರಾಗಲಿ ಹಣವನ್ನಿಡಲು ಪರ್ಸ್ ಗಳನ್ನು ಉಪಯೋಗಿಸುತ್ತಾರೆ. ಹಣವನ್ನಲ್ಲದೆ, ಕ್ರೆಡಿಟ್/ಡೆಬಿಟ್ ಕಾರ್ಡ್ ಗಳು, ಇತರೆ ಕಾರ್ಡ್ ಗಳು, ಫೋಟೊಗಳು ಮುಂತಾದವುಗಳನ್ನೂ ಪರ್ಸ್ ನಲ್ಲಿ ಇರಿಸಿಕೊಳ್ಳುತ್ತಾರೆ. ಆದರೆ, ಹಣ, ಕ್ರೆಡಿಟ್ ಕಾರ್ಡ್ /ಡೆಬಿಟ್ ಕಾರ್ಡ್ ಗಳಾದರೆ ಪರವಾಗಿಲ್ಲ.ಫೋಟೊ ಹಾಗೂ ಇತರೆ ವಸ್ತುಗಳಾದರೆ.ನಾವು ಸ್ವಲ್ಪ ಯೋಚಿಸಲೇ ಬೇಕು ಇಲ್ಲದಿದ್ದರೆ.ಅವುಗಳಿಂದ ಆರ್ಥಿಕ ಸಮಸ್ಯೆಗಳು ಎದುರಾಗುತ್ತವಂತೆ.! ಈ ನಿಟ್ಟಿನಲ್ಲಿ ಪರ್ಸ್ ನಲ್ಲಿ ಇಟ್ಟುಕೊಳ್ಳ ಬಾರದ ವಸ್ತುಗಳ ಬಗ್ಗೆ ತಿಳಿದುಕೊಳ್ಳೋಣ.


ಫ್ಯಾಮಿಲಿ ಫೋಟೊ, ಸತ್ತವರ ಫೋಟೊ.
ಪರ್ಸ್ ಗಳಲ್ಲಿ ಕುಟುಂಬ ಸದಸ್ಯರುಗಳಿಗೆ ಸಂಬಂಧಿಸಿದ ಫೋಟೊ ಗಳನ್ನು ಅಥವಾ ಮರಣಿಸಿದವರ ಫೋಟೊಗಳನ್ನು ಇಟ್ಟುಕೊಳ್ಳಲೇ ಬಾರದಂತೆ. ಒಂದು ವೇಳೆ ಹಾಗೇನಾದರು ಇಟ್ಟಲ್ಲಿ, ನೆಗೆಟಿವ್ ಎನರ್ಜಿ ಉಂಟಾಗಿ ಆರ್ಥಿಕ ಸಮಸ್ಯೆಗಳು ತಲೆದೋರುತ್ತವಂತೆ. ಚೀನಾದವರು ಅನುಸರಿಸುವ 'ಫೆಂಗ್ಶೂ' ವಾಸ್ತು ಶಾಸ್ತ್ರದಲ್ಲಿ ಇದರ ಕುರಿತು ಹೀಗೆ ಹೇಳಲಾಗಿದೆ. ಈ ಹಿಂದೆ ಹೇಳಲಾದ ಫೋಟೊಗಳಲ್ಲದೆ ದೆವ್ವಗಳನ್ನು ಹೋಲುವ ಚಿನ್ಹೆಗಳು, ಯುದ್ಧ, ಹಿಂಸೆ, ಅಶ್ಲಿಲಕ್ಕೆ ಸಂಬಂಧಿಸಿದ ಫೋಟೊಗಳನ್ನು ಸಹ ಪರ್ಸ್ ಗಳಲ್ಲಿ ಇಡಬಾರದಂತೆ. ಒಂದು ವೇಳೆ ಹಾಗೇನಾದರೂ ಇಟ್ಟಲ್ಲಿ ಹಲವು ಸಮಸ್ಯೆಗಳು ಎದುರಾಗಿ ಇದ್ದ ಹಣವೆಲ್ಲಾ ಖರ್ಚಾಗುತ್ತದಂತೆ.

ನೆಲದ ಮೇಲೆ ಪರ್ಸ್.
ಬಹಳಷ್ಟು ಮಹಿಳೆಯರು ತಮ್ಮ ಪರ್ಸ್ ಗಳನ್ನು ಇಲ್ಲವೆ ಹ್ಯಾಂಡ್ ಬ್ಯಾಗ್ ಗಳನ್ನು ನೆಲದ ಮೇಲೆ ಇಡುತ್ತಾರೆ. ಹೆಚ್ಚಾಗಿ ವಾಷ್ ರೂಂ, ರೆಸ್ಟೋರೆಂಟ್, ಥಿಯೇಟರ್ ಗಳಿಗೆ ಹೋದಾಗ ಸಾಮಾನ್ಯವಾಗಿ ಹೀಗೆ ಮಾಡುತ್ತಾರೆ. ಆದರೆ, ಯಾವುದೇ ಕಾರಣಕ್ಕೂ ಹೆಂಗಸರಾಗಲಿ, ಹಂಡಸರಾಗಲಿ ತಮ್ಮ ಪರ್ಸ್ ಗಳನ್ನು ನೆಲದ ಮೇಲೆ ಇಡಲೇ ಬಾರದಂತೆ. ಹಾಗೆ ಇಡುವುದರಿಂದ ಹಲವು ಸಮಸ್ಯೆಗಳು ಎದುರಾಗುತ್ತವಂತೆ.

ಅನವಶ್ಯಕವಾದ ಕಸ.
ಎಟಿಎಂ ಸ್ಲಿಪ್ ಗಳು, ರಸೀಥಿಗಳು, ಚಾಕ್ಲೇಟ್ ರ್ಯಾಪರ್ ಗಳು.ಮೊದಲಾದ ಅಗತ್ಯವಿಲ್ಲದವುಗಳನ್ನು ಪರ್ಸ್ ಗಳಲ್ಲಿ ಇಡಬಾರದು. ಹೆಚ್ಚಾಗಿ ಮಹಿಳೆಯರು ಹೀಗೆ ಮಾಡುತ್ತಿರುತ್ತಾರೆ. ಗಂಡಸರೂ ಸಹ ಇದಕ್ಕೆ ಹೊರತಾಗಿಲ್ಲ. ಹೀಗೆ ಮಾಡುವುದರಿಂದ ಹಣ ಉಳಿಯುವುದಿಲ್ಲವಂತೆ. ಪರ್ಸ್ ಯಾವಾಗಲೂ ಶುಭ್ರವಾಗಿದ್ದು, ಅನಗತ್ಯ ವಸ್ತುಗಳಿಂದ ತುಂಬಿರದಿದ್ದರೆ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗುತ್ತವಂತೆ.

ನಾಣ್ಯಗಳು.
ಸಾಮಾನ್ಯವಾಗಿ, ಸ್ತ್ರೀ ಪುರುಷರು ತಮ್ಮ ಪರ್ಸ್ ಗಳಲ್ಲಿ ನಾಣ್ಯಗಳನ್ನು ಹಾಗೂ ನೋಟುಗಳನ್ನು ಒಟ್ಟಿಗೆ ಇಟ್ಟುಕೊಂಡಿರುತ್ತಾರೆ. ಹಾಗೆ ಇಟ್ಟುಕೊಳ್ಳಬಾರದಂತೆ. ನಾಣ್ಯಗಳನ್ನು ಹಾಗೂ ನೋಟುಗಳನ್ನು ಬೇರೆಬೇರೇ ಯಾಗಿಯೇ ಪರ್ಸ್ ನಲ್ಲಿ ಇಡಬೇಕಂತೆ. ಹೀಗೆ ಮಾಡುವುದರಿಂದ ಆರ್ಥಿಕ ಸಮಸ್ಯೆಗಳು ಇರುವುದಿಲ್ಲವಂತೆ.

ಕೀಲಿ ಕೈಗಳು ( Keys).
ಬಿಗದ ಕೈಗಳನ್ನು ಸಹ ಕೆಲವರು ತಮ್ಮ ಪರ್ಸ್ ಗಳಲ್ಲಿ ಅಥವಾ ಹ್ಯಾಂಡ್ ಬ್ಯಾಗ್ ಗಳಲ್ಲಿ ಇಟ್ಟುಕೊಂಡಿರುತ್ತಾರೆ. ಹಾಗೆ ಮಾಡುವುದರಿಂದ ನೆಗೆಟಿವ್ ಎನರ್ಜಿ ಉಂಟಾಗಿ ಆರ್ಥಿಕ ಸಮಸ್ಯೆಗಳು ಎದುರಾಗುತ್ತವಂತೆ. ಆದುದರಿಂದ ಬೀಗದ ಕೈಗಳನ್ನು ಪ್ರತ್ಯೇಕವಾಗಿ ಇಟ್ಟುಕೊಳ್ಳಬೇಕು.

No comments