Header Ads

test

ಆತನನ್ನು ನೋಡಲು...ದಿನಕ್ಕೆ 4-5 ಸಲ ನದಿಗೆ ಸ್ನಾನಕ್ಕೆ ಹೋಗುತ್ತಿದ್ದೆ.!

ಪ್ರೀತಿ ಯಾವಾಗ ಹುಟ್ಟುತ್ತದೋ, ಯಾಕೆ ಹುಟ್ಟುತ್ತದೋ ಸಹ ಗೊತ್ತಾಗಲ್ಲ ಎನ್ನುತ್ತಾರಲ್ಲವೇ..! ಪ್ರೀತಿಗೆ ಕಣ್ಣಿಲ್ಲ, ಏನಿದ್ದರೂ ಹೃದಯದಲ್ಲಿ ಮಾತ್ರ ಅದನ್ನು ನೋಡಲು ಸಾಧ್ಯ ಎನ್ನುತ್ತಾರೆ..! ಸೇಮ್ ಟು ಸೇಮ್ ಈ ಯುವತಿ ಲವ್ ಸ್ಟೋರಿ ಸಹ ಅಂತಹದ್ದೇ... ಸುಖಾಂತವಾಗಿ ಮುಗಿದ ಈ 24 ವರ್ಷದ ಯುವತಿ ಲವ್ ಸ್ಟೋರಿಯನ್ನು ಆಕೆ ಮಾತುಗಳಲ್ಲೇ ಕೇಳೋಣ.!


"ನಮ್ಮ ಮನೆ ಗಂಗಾ ನದಿಗೆ ಹತ್ತಿರಲ್ಲಿತ್ತು. ನನ್ನ ಚಿಕ್ಕಂದಿನಿಂದ ನಿತ್ಯ ಬೆಳಗ್ಗೆ ನನ್ನ ಗೆಳತಿಯರ ಜತೆಗೆ ಆ ನದಿ ದಡದಲ್ಲಿ ಸ್ನಾನ ಮಾಡುತ್ತಿದ್ದೆ... ಎಂದಿನಂತೆ ಒಂದು ದಿನ ನನ್ನ ಗೆಳತಿಯರ ಜತೆಗೆ ಸ್ನಾನಕ್ಕೆ ಹೋಗುತ್ತಿದ್ದಾಗ ನದಿ ಬಳಿಯ ಒಂದು ಅಂಗಡಿಯಲ್ಲಿ ಓರ್ವ ವ್ಯಕ್ತಿ ಕಾಣಿಸಿದ.. ಆತ ಆ ಅಂಗಡಿಯಲ್ಲಿ ಕೆಲಸ ಮಾಡಲು ಬಂದ ಹುಡುಗ. ನೋಡಿದ ಕೂಡಲೆ ತುಂಬಾ ಇಷ್ಟವಾದ... ಎಷ್ಟು ಎಂದರೆ ಆತ ನನಗಾಗಿಯೇ ಹುಟ್ಟಿದ್ದಾನಾ..? ಎಂಬಷ್ಟು..! ಆ ರೀತಿ ಕೆಲವು ದಿನಗಳ ಕಾಲ ಆತನನ್ನು ನೋಡಿತ್ತಾ ನದಿಗೆ ಹೋಗುತ್ತಿದ್ದೆ.. ಆ ರೀತಿ ಆರಂಭವಾಯಿತು ನನ್ನ ಕಣ್ಣಿನ ನೋಟದ ಪ್ರೀತಿ ಆತನ ಮೇಲೆ.

ನಿತ್ಯ ನಾನು ಆತನನ್ನು ನೋಡುವುದು, ಆತ ನನ್ನನ್ನು ನೋಡುವುದು, ಕಣ್ಣಿನ ನೋಟದಲ್ಲೇ ನಸು ನಗುವುದು ನಡೆಯುತ್ತಿತ್ತು. ಅಗತ್ಯ ಇಲ್ಲದಿದ್ದರೂ ಆ ಅಂಗಡಿಗೆ ಹೋಗಿ ಏನೇನೋ ಸರಕುಗಳನ್ನು ಕೊಳ್ಳುತ್ತಿದ್ದೆ.... ಅವನನ್ನು ಹೆಚ್ಚು ಹೊತ್ತು ನೋಡಬಹುದು ಎಂಬ ಕಾರಣದಿಂದ.! ಕೆಲವು ದಿನಗಳಾದರೆ ನಿತ್ಯ 4-5 ಸಲ ಸ್ನಾನಕ್ಕೆ ನದಿಗೆ ಹೋಗುತ್ತಿದ್ದೆ. ಆ ದಾರಿಯಲ್ಲಿ ಆತನನ್ನು ನೋಡಬಹುದು ಎಂಬ ಉದ್ದೇಶದಿಂದ... ಈ ಕ್ರಿಯೆಯಲ್ಲಿ ಒಂದು ದಿನ ಆತನ ಬಳಿಗೆ ಹೋದೆ....ನನ್ನಲ್ಲಿನ ಪ್ರೀತಿಯನ್ನು ಆತನಿಗೆ ತಿಳಿಸಬೇಕು ಎಂಬ ಉದ್ದೇಶದಿಂದ... ಆದರೆ ಅಚ್ಚರಿ ಎಂಬಂತೆ ಆತನೇ ನನಗೆ ಐ ಲವ್ ಯೂ ಹೇಳಿಬಿಟ್ಟ. ಮದುವೆಗೆ ರೆಡಿಯಾದೆವು... ಮನೆಯಲ್ಲಿ ಹೇಳಿದ್ದಕ್ಕೆ ಅಪ್ಪ ಅಮ್ಮ ಇಬ್ಬರೂ ಬೈದರು... ಆಗಲ್ಲ ಎಂದರು. ಆದರೂ ಕಾದೆವು... ನಮ್ಮ ಜವಾಬ್ದಾರಿಗಳನ್ನು ನೆರವೇರಿಸುತ್ತಾ ಒಪ್ಪಿಸುವ ಪ್ರಯತ್ನಗಳನ್ನು ಮಾಡಿದೆವು. ಕೊನೆಯದಾಗಿ 2 ವರ್ಷಗಳ ಬಳಿಕ ನಮ್ಮ ಪೇರೆಂಟ್ಸ್ ನಮ್ಮ ಮದುವೆಗೆ ಒಪ್ಪಿಕೊಂಡರು. ಈಗ ನಮಗೆ ಒಂದು ಮಗು ಇದೆ... ಅವಳ ಹೆಸರು ಏನು ಗೊತ್ತಾ... ಸ್ವೇಚ್ಛ.! ನಮ್ಮವರು ನಾನು ತುಂಬಾ ಹ್ಯಾಪಿ.!"

No comments