Header Ads

test

ಗುಡಿಯಲ್ಲಿ ಕನಿಷ್ಠ 3 ಪ್ರದಕ್ಷಿಣೆ ಮಾಡಬೇಕು ಅಂತಾರೆ..! ಯಾಕೆ ಗೊತ್ತಾ..? ಅದರ ಹಿಂದಿನ ಕಾರಣ ಇಲ್ಲಿದೆ.!

ನಾವು ದೇವಸ್ಥಾನಕ್ಕೆ ಹೋದಾಗ ಪ್ರದಕ್ಷಿಣೆ ಮಾಡುತ್ತೇವೆ... ಸಾಮಾನ್ಯವಾಗಿ ಮೂರು, ಐದು, ಒಂಬತ್ತು, ಹನ್ನೊಂದು ಹೀಗೆ ನಮಗಿಷ್ಟವಾದಂತೆ ಪ್ರದಕ್ಷಿಣೆ ಮಾಡುತ್ತೇವೆ. ಕೆಲವರು ದೇವರೇ ನಿನ್ನ ಸುತ್ತ 108 ಪ್ರದಕ್ಷಿಣೆ ಮಾಡುತ್ತೇನೆ ನನ್ನ ಬಯಕೆ ಈಡೇರಿಸು ಎಂದು ಬೇಡಿಕೊಳ್ಳುತ್ತಾರೆ. ಆ ರೀತಿ ಗುಡಿಯಲ್ಲಿ ಹನ್ನೊಂದು ಪ್ರದಕ್ಷಿಣೆ ಮಾಡಿ ಕೋರಿಕೊಂಡರೆ ಖಚಿತವಾಗಿ ಈಡೇರುತ್ತದಂತೆ. ಈ ರೀತಿಯ ಅದೆಷ್ಟೋ ಮಾತುಗಳನ್ನು ಕೇಳಿರುತ್ತೀರ.. ಆದರೆ ಎಷ್ಟು ಪ್ರದಕ್ಷಿಣೆಗಳನ್ನು ಮಾಡಬೇಕು... ಆ ಪ್ರದಕ್ಷಿಣೆಗಳ ವಿಶೇಷತೆ ಏನು ಎಂಬುದನ್ನು ಈಗ ತಿಳಿದುಕೊಳ್ಳೋಣ.


ದೇವರ ಸುತ್ತ ಪ್ರದಕ್ಷಿಣೆ ಮೂರು ಸಲ ಮಾಡಬೇಕು. ಹೆಚ್ಚು ಪ್ರದಕ್ಷಿಣೆ ಮಾಡಿದರೆ ನಮ್ಮ ಕೋರಿಕೆ ನೆರವೇರುತ್ತದೆ ಎಂಬುದು ನಮ್ಮ ಭ್ರಮೆ.. ಕೆಲವರು ದೇವರ ಸುತ್ತ ಇಷ್ಟು ಪ್ರದಕ್ಷಿಣೆ ಮಾಡುತ್ತೇನೆ ಎಂದು ಬೇಡಿಕೊಂಡಿದ್ದೆ ಎನ್ನುತ್ತಾರೆ. ಹರಕೆ ತೀರಿಸಿದರೇನೇ ಬಯಕೆಗಳು ಈಡೇರುತ್ತವೆ ಎಂಬುದು ನಮ್ಮ ಭ್ರಮೆ ಎನ್ನುತ್ತಿದ್ದಾರೆ ತಿಳಿದವರು. ಕೇವಲ ಮೂರು ಪ್ರದಕ್ಷಿಣೆಗಳ ಮೂಲಕ ನಮಗೆ ತ್ರಿಗುಣಾತ್ಮಕವಾದ ಶಿವನ ದರ್ಶನ ಲಭಿಸುತ್ತದೆ.. ಆ ಮೂರು ಪ್ರದಕ್ಷಿಣೆಗಳಿಗೆ ಮೂರು ಲಕ್ಷಣಗಳಿವೆ. ಅವೇನೆಂದು ತಿಳುದುಕೊಂಡು ಈ ಸಲ ಗುಡಿಗೆ ಹೋದಾಗ ಆಚರಿಸಿ.

ಮೊದಲ ಪ್ರದಕ್ಷಿಣೆ ಮಾಡಿ ತಮೋ ಗುಣ ಬಿಡಬೇಕು... ಕ್ರೌರ್ಯ, ನಿದ್ದೆ, ಸೋಮಾರಿತನ ಬಿಡಬೇಕು.. ಶಿಸ್ತನ್ನು ಹೊಂದಿರಬೇಕು. ಎರಡನೇ ಪ್ರದಕ್ಷಿಣೆ ಮಾಡಿ ರಜೋ ಗುಣ ಬಿಡಬೇಕು.. ಇತರರ ಜತೆಗೆ ಸ್ಪರ್ಧಿಸುವುದು, ಇತರ ಬಗ್ಗೆ ಕೋಪ, ದ್ವೆಷ, ದಳ್ಳುರಿ ಬಿಡಬೇಕು. ಮೂರನೇ ಪ್ರದಕ್ಷಿಣೆ ಮಾಡಿ ಸತ್ಯಗುಣ ಬಿಡಬೇಕು.. ಎಲ್ಲರಿಗಿಂತಲೂ ನಾನೇ ದೊಡ್ಡವ, ನಾನೇ ಒಳ್ಳೆಯವ, ನನ್ನಷ್ಟು ಯಾರೂ ಇಲ್ಲ ಎಂಬ ಲಕ್ಷಣಗಳನ್ನು ಬಿಡಬೇಕು.

No comments