Header Ads

test

'ಆತ್ಮ' ದ ತೂಕ 21 ಗ್ರಾಂಗಳು.1907 ರಲ್ಲಿ ಹೇಳಿದ ವಿಜ್ಞಾನಿ.!? ವಿವರಣೆ ಇಲ್ಲಿದೆ.

ಪ್ರತಿಯೊಬ್ಬ ಮನುಷ್ಯನಲ್ಲೂ ಆತ್ಮವಿರುತ್ತದೆ. ಮನುಷ್ಯನ ನಿಧನದ ನಂತರ ಆತನಿಂದ ಬೇರ್ಪಟ್ಟು,ಪರಮಾತ್ಮನಲ್ಲಿ ಲೀನವಾಗುತ್ತದೆಂದು ಪುರಾಣಗಳಲ್ಲಿ ಹೇಳಲಾಗಿದೆ. ಇದು ನಿಜವೇ. ?ನಿಜವಾಗಿಯೂ ಆತ್ಮವೆಂಬದು ಇದೆಯೇ? ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಿರಬೇಕಾದರೆ. ಅಮೆರಿಕಾ ದೇಶದ ಒಬ್ಬ ವಿಜ್ಞಾನಿ.ಹೌದು, ಮನುಷ್ಯನಿಗೆ ಆತ್ಮವಿರುತ್ತದೆ, ಅದರ ತೂಕ 21 ಗ್ರಾಂ ಎಂದು ಪ್ರಯೋಗಗಳ ಮೂಲಕ ನಿರೂಪಿಸಿದ್ದಾನೆ.ಬಹಳಷ್ಟು ಮಂದಿ ಡಾಕ್ಟರುಗಳು ಈ ವಿಷಯವನ್ನು ವಿರೋಧಿಸಿದರೂ.ಅದನ್ನು ವೈಜ್ಞಾನಿಕವಾಗಿ ಸುಳ್ಳೆಂದು ನಿರೂಪಿಸುವಲ್ಲಿ ವಿಫಲರಾಗಿದ್ದಾರೆ.


1907 ರಲ್ಲಿ ಮೆಕ್ ಡಗೆಲ್ ಎಂಬ ಡಾಕ್ಟರ್ ಹಾಗು ವಿಜ್ಞಾನಿ. ಮರಣ ಶಯ್ಯೆಯಲ್ಲಿರುವ ವ್ಯಕ್ತಿ ಮಲಗಿದ್ದ ಹಾಸಿಗೆಗೆ ತೂಕಮಾಡುವ ಸಾಧನವನ್ನು ಅಳವಡಿಸಿದ.ರೋಗಿ ಸಾಯುವುದಕ್ಕೂ ಕೆಲವು ನಿಮಿಷಗಳ ಮುಂಚೆ ಆತನ ತೂಕವನ್ನು, ಅದೇರೀತಿ ಸತ್ತ ನಂತರದ ತೂಕವನ್ನು ನೋಡಿದಾಗ ಈ ಎರಡೂ ತೂಕಗಳ ನಡುವೆ 25 ಗ್ರಾಂಗಳಷ್ಟು ವ್ಯತ್ಯಾಸವಿರುವುದಾಗಿ ತಿಳಿಯಿತು. ಕಡಿಮೆಯಾದ 21 ಗ್ರಾಂ ತೂಕವನ್ನೇ ಮನುಷ್ಯನ ಆತ್ಮದ ತೂಕವೆಂದು ಪ್ರಕಟಿಸಿದ.ಆದರೆ ಡಗೆಲ್ ಪ್ರತಿಪಾದಿಸಿದ್ದನ್ನು ಅನೇಕ ಡಾಕ್ಟರ್ ಗಳು ಒಪ್ಪಿಕೊಳ್ಳಲಿಲ್ಲ.ಮನುಷ್ಯ ಸತ್ತ ನಂತರ . ಆತನ ಶ್ವಾಸ ಕ್ರಿಯೆ ನಿಂತುಹೋಗುತ್ತದೆ.ಹೃದಯ,ಶ್ವಾಸಕೋಶಗಳು ನಿಷ್ಕ್ರಿಯಗೊಳ್ಳುತ್ತವೆ. ಇನ್ನೂ ಶರೀರದ ಒಳಗೆ ಜರುಗುವ ಅನೇಕ ಪ್ರಕ್ರಿಯೆಗಳು ನಿಂತುಹೋಗುತ್ತವೆ.ಹೀಗಾಗಿ ಸತ್ತ ಮನುಷ್ಯನ ತೂಕದಲ್ಲಿ 21 ಗ್ರಾಂ ವ್ಯತ್ಯಾಸ ಬರುತ್ತದೆಂದು ಡಾಕ್ಟರ್ ಗಳ ವಾದ.ಈ ಬಾರಿ ಡಗೆಲ್ .ನಾಯಿಗಳ ಮೇಲೆ ತನ್ನ ಪ್ರಯೋಗವನ್ನು ನಡೆಸಿದ.ಸಾಯುವುದಕ್ಕೆ ಮುಂದಿನ ಹಾಗೂ ಸತ್ತ ನಂತರದ ತೂಕಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲವೆಂದು ನಿರೂಪಿಸಿದ. ಅಂದರೆ ಆತ್ಮವೆಂಬುದು ಕೇವಲ ಮನುಷ್ಯರಲ್ಲಿ ಮಾತ್ರ ಇರುತ್ತದೆ.ಹಾಗಾಗಿ ಮನುಷ್ಯ ಸತ್ತ ನಂತರದ ತೂಕದಲ್ಲಿ 21 ಗ್ರಾಂಗಳ ವ್ಯತ್ಯಾಸ ಇರುತ್ತದೆಂದು ತಿಳಿಸಿದ.ಅಲ್ಲದೆ,ಶ್ವಾಸ ಕ್ರಿಯೆ ನಿಂತ ಮೇಲೆ ಒಂದು ನಿಮಿಷಕ್ಕೆ ಮನುಷ್ಯನ ತೂಕ 0.5 ಗ್ರಾಂಗಳಂತೆ ಮಾತ್ರ ಕಡಿಮೆಯಾಗುತ್ತದೆಂದು ನಿರೂಪಿಸಿದ.vಅಂದರೆ ಈ 21 ಗ್ರಾಂ ತೂಕ 'ಆತ್ಮ' ದ್ದೇ ಎಂಬುದು ಆತನ ವಾದ. ವಿಜ್ಞಾನ ಈ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವ ವರೆಗೂ  ಆತ್ಮ ದ ತೂಕ 21 ಗ್ರಾಂ ಎಂದು ಹೇಳಬಹುದು.

No comments