ಮುಟ್ಟಿನ ಸಮಯದಲ್ಲಿ ಬರುವ ಹೊಟ್ಟೆ ನೋವಿನಿಂದ ಪಾರಾಗಲು ಮಹಿಳೆಯರು ಈ 13 ಟಿಪ್ಸ್ ಪಾಲಿಸಬೇಕು.!
ಮಹಿಳೆಯರಿಗೆ ಋತು ಸಮಯದಲ್ಲಿ ಉಂಟಾಗುವ ತೊಂದರೆಗಳು ಒಂದೆರಡಲ್ಲ. ತೀವ್ರ ರಕ್ತಸ್ರಾವದ ಜತೆಗೆ ಮೈಕೈ ನೋವು ಇರುತ್ತದೆ. ಕೆಲವರಿಗೆ ಹೊಟ್ಟೆಯಲ್ಲಿ ವಿಪರೀತ ನೋವು ಬರುತ್ತದೆ. ಹೊಟ್ಟೆ ತಿರುಗಿದಂತೆ, ಹಿಡಿದುಕೊಂಡಂತೆ ಆ ನೋವು ಇರುತ್ತದೆ. ಇದರಿಂದ ಏನು ಮಾಡಬೇಕು ಎಂದು ಅವರಿಗೆ ಅರ್ಥವಾಗಲ್ಲ. ಆ ಸ್ಥಿತಿಯಲ್ಲಿ ಯಾರೇ ಆಗಲಿ ಆಸ್ಪತ್ರೆಗೆ ಹೋಗುತ್ತಾರೆ. ವೈದ್ಯರು ಬರೆದುಕೊಡುವ ಔಷಧಿಗಳನ್ನು ಹಾಕಿಕೊಳ್ಳುತ್ತಾರೆ. ಇದರಿಂದ ನೋವಿನಿಂದ ಉಪಶಮನ ಪಡೆಯುತ್ತಾರೆ. ಆದರೆ ಇದಿಷ್ಟೇ ಅಲ್ಲದೆ ಕೆಳಗೆ ತಿಳಿಸಿದ ಹಲವು ಸೂಚನೆಗಳನ್ನು ಪಾಲಿಸಿದರೆ ಸಾಕು, ಇದರಿಂದ ಮುಟ್ಟಿನ ಸಮಯದಲ್ಲಿ ಬರುವ ಹೊಟ್ಟೆ ನೋವಿನಿಂದ ಹೊರಬೀಳಬಹುದು. ಹಾಗಿದ್ದರೆ ಆ ಸೂಚನೆಗಳು ಏನು ಎಂದು ಈಗ ತಿಳಿದುಕೊಳ್ಳೋಣವೇ.!
1. ಮುಟ್ಟಿನ ಸಮಯದಲ್ಲಿ ಬರುವ ಹೊಟ್ಟೆ ನೋವಿನಿಂದ ಉಪಶಮನ ಸಿಗಬೆಕಾದರೆ ಹೀಟ್ ಪ್ಯಾಡ್ಸ್ ಇಟ್ಟುಕೊಳ್ಳಬೇಕು. ಬಿಸಿ ನೀರಿನಲ್ಲಿ ಬಟ್ಟೆಯನ್ನು ಇಟ್ಟು ಬಿಸಿ ಮಾಡಬೇಕು. ಅಥವಾ ಸ್ವಲ್ಪ ಉಪ್ಪು ಬಿಸಿ ಮಾಡಿ ಅದನ್ನು ವಸ್ತ್ರದಲ್ಲಿ ಕಾವು ಕೊಟ್ಟರೆ ಹೊಟ್ಟೆ ನೋವು ಕಡಿಮೆಯಾಗುತ್ತದೆ.
2. ಬಿಸಿ ನೀರಿನ ಸ್ನಾನ ಮಾಡಿದರೆ ಮೈಕೈ ನೋವಷ್ಟೇ ಅಲ್ಲ, ಹೊಟ್ಟೆ ನೋವಿನಿಂದಲೂ ಸಹ ಉಪಶಮನ ಪಡೆಯಬಹುದು. ತಣ್ಣೀರಿನ ಸ್ನಾನ ಮಾತ್ರ ಮಾಡಬಾರದು. ಆ ರೀತಿ ಮಾಡಿದರೆ ನೋವು ಹೆಚ್ಚಾಗುತ್ತದೆ.
3. ಲವಂಗ, ನೀಲಗಿರಿ, ರೋಸ್, ಎಳ್ಳೆಣ್ಣೆಯಂತಹವನ್ನು ಎಸೆನ್ಷಿಯಲ್ ಎಣ್ಣೆಗಳೊಂದಿಗೆ ಹೊಟ್ಟೆ ಮೇಲೆ ಮಸಾಜ್ ಮಾಡಿಕೊಂಡರೆ ರಿಲೀಫ್ ಸಿಗುತ್ತದೆ.
4. ಅರಿಶಿಣ, ಶುಂಠಿ, ದಾಲ್ಚಿನ್ನಿ, ಕಪ್ಪು ಮೆಣಸಿನ ಪುಡಿ, ಜೇನು ಬೆರೆಸಿ ತಯಾರಿಸಿದ ಹರ್ಬಲ್ ಟೀಯನ್ನು ಕುಡಿದರೂ ಎಲ್ಲಾ ವಿಧವಾದ ನೋವುಗಳಿಂದ ಮುಕ್ತಿ ಪಡೆಯಬಹುದು.
5. ಮುಟ್ಟಾದಾಗ ಶೃಂಗಾರದಲ್ಲಿ ಪಾಲ್ಗೊಳ್ಳಬಾರದೆಂದು ಬಹಳಷ್ಟು ಮಂದಿ ಹೇಳುತ್ತಾರೆ. ಆದರೆ ಸಾಧ್ಯವಾದರೆ ಶೃಂಗಾರದಲ್ಲಿ ಪಾಲ್ಗೊಂಡರೆ ಒಳ್ಳೆಯದು. ನೋವಿನಿಂದ ಉಪಶಮನ ಸಿಗುತ್ತದೆ.
6. ಮುಟ್ಟಿನ ಸಮಯದಲ್ಲಿ ತಕ್ಕಷ್ಟು ನಿದ್ದೆ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಅದು ನೋವುಗಳ ತೀವ್ರತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಆದಕಾರಣ ಸೂಕ್ತ ನಿದ್ದೆ ಮಾಡಿದರೆ ಮುಟ್ಟಿನ ಸಮಯದಲ್ಲಿ ಬರುವ ನೋವುಗಳಿಂದ ಹೊರ ಬೀಳಬಹುದು.
7. ಮುಟ್ಟಿನ ಸಮಯದಲ್ಲಿ ನಿತ್ಯ ನೀರನ್ನು ಚೆನ್ನಾಗಿ ಕುಡಿಯುತ್ತಾ ಇರಬೇಕು. ಇದರಿಂದ ದೇಹ ಹೈಡ್ರೇಟೆಡ್ ಆಗುತ್ತದೆ. ಪ್ರತಿಫಲವಾಗಿ ಸ್ನಾಯುಗಳ ಚಲನೆ ಸರಾಗವಾಗುತ್ತದೆ. ಆಗ ನೋವು ಕಡಿಮೆ ಮಾಡುತ್ತವೆ.
8. ಮೆಂತ್ಯೆ, ಶುಂಠಿ, ದಾಲ್ಚಿನ್ನಿ ಚಕ್ಕೆಯಂತಹ ಮಸಾಲಾ ಇರುವ ಆಹಾರವನ್ನು ಹೆಚ್ಚು ತಿನ್ನಬೇಕು. ಇವು ನೋವು, ಊತವನ್ನು ಕಡಿಮೆ ಮಾಡುತ್ತವೆ.
9. ಕ್ಯಾಲ್ಸಿಯಂ, ವಿಟಮಿನ್ ಡಿ, ಒಮೆಗಾ 3 ಫ್ಯಾಟಿ ಆಸಿಡ್ಸ್, ಮೆಗ್ನಿಷಿಯಂ, ವಿಟಮಿನ್ ಇ ಹೆಚ್ಚಾಗಿ ಇರುವ ಆಹಾರ ತೆಗೆದುಕೊಳ್ಳಬೇಕು. ಹಾಲು, ಮೊಟ್ಟೆ, ನಟ್ಸ್, ಮೀನು, ಲಿವರ್ನಂತಹ ಆಹಾರ ತೆಗೆದುಕೊಂಡರೆ ನೋವಿನಿಂದ ಉಪಶಮನ ಪಡೆಯಬಹುದು.
10. ವಾಕಿಂಗ್, ಸೈಕ್ಲಿಂಗ್ನಂತಹ ಹಗುರವಾದ ವ್ಯಾಯಾಮಗಳನ್ನು ಮಾಡಿದರೂ ಸಾಕು. ಮುಟ್ಟಿನ ಸಮಯದಲ್ಲಿ ಬರುವ ನೋವುಗಳಿಂದ ಮುಕ್ತಿ ಪಡೆಯಬಹುದು.
11. ಕಾಫಿ, ಟೀ, ಆಲ್ಕೋಹಾಲ್, ಸೋಡಾ ಡ್ರಿಂಕ್ಸ್ ಕುಡಿಯಬಾರದು. ಇವು ನೋವುಗಳನ್ನು ಇನ್ನಷ್ಟು ಹೆಚ್ಚಿಸುತ್ತವೆ.
12. ಹೊಕ್ಕಳಿಗೆ ಸರಿಯಾಗಿ 2 ಬೆರಳ ಕೆಳಗೆ ಅಥವಾ ಹಿಮ್ಮಡಿ ಮೇಲೆ ಬೆರಳುಗಳಿಂದ ಮೃದುವಾಗಿ ಆಕ್ಯುಪ್ರೆಷರ್ ಮಸಾಜ್ ಮಾಡಿಕೊಳ್ಳಬೇಕು. ಇದರಿಂದ ಹೊಟ್ಟೆನೋವಿನಿಂದ ಉಪಶಮನ ಸಿಗಲಿದೆ.
13. ನಿತ್ಯ ಯೋಗಾ, ಮೆಡಿಟೇಷನ್ ಮಾಡುವ ಮೂಲಕ ಮಾನಸಿಕ ಆತಂಕ ಕಡಿಮೆಯಾಗುತ್ತದೆ. ಪ್ರಾಣಾಯಾಮ ಮಾಡಿದರೆ ಓವರ್ ಆಲ್ ಆಗಿ ದೇಹ ಸದೃಢವಾಗಿ ಬದಲಾಗುತ್ತದೆ.

Post a Comment