Header Ads

test

12 ವರ್ಷ ತುಂಬದ ಅಪ್ರಾಪ್ತೆಯರೇ ಇಲ್ಲಿ ತಾಯಿಯರಾಗಿದ್ದಾರೆ.!

ಬಂಧುಗಳ ಕಾಮ ವಾಂಛೆಗೆ ಗುರಿಯಾಗಿ, ತಮ್ಮದಾದ ಬಾಲ್ಯದ ಜೀವನಕ್ಕೆ ದೂರವಾಗಿ, ದುರ್ಭರ ಜೀವನವನ್ನು ನಡೆಸುತ್ತಿರುವ ಸಂತ್ರಸ್ತ ಬಾಲಕಿಯರು ತಾಯ್ತನ ಪಡೆದಿದ್ದನ್ನು ಫೊಟೊಗಳ ಸಹಿತ ,ಪ್ರಕಟಿಸಿ. ನಮ್ಮ ಸಮಾಜದಲ್ಲಿ ಆಗುತ್ತಿರುವ ಅನ್ಯಾಯವನ್ನು ಬೆಳಕಿಗೆ ತಂದವರು ಫೋಟೊ ಜರ್ನಲಿಸ್ಟ್ 'ಲಿಂಡಾ ಪರ್ಸೇಲ್' ಹಲವು ವರ್ಷ ಶ್ರಮ ವಹಿಸಿ.ದಕ್ಷಿಣ ಅಮೆರಿಕದ ಗ್ವಾಟೆಮಾಲ ದಲ್ಲಿ ಅತ್ಯಾಚಾರಕ್ಕೆ ಗುರಿಯಾಗಿ, ಬಾಲ್ಯದಲ್ಲಿಯೇ ಮಾತೃತ್ವವನ್ನು ಅನುಭವಿಸುತ್ತಿರುವ ಅನೇಕ ಅಪ್ರಾಪ್ತ ಬಾಲಕಿಯರ ಪ್ರಕರಣಗಳನ್ನು, ಫೋಟೊ ಸಮೇತ ಒಟ್ಟುಗೂಡಿಸಿ ಬೆಳಕಿ ತಂದರು. ಈಗ ಈ ಘಟನೆ ಪ್ರಪಂಚದೆಲ್ಲೆಡೆ ಚರ್ಚೆಗೊಳಗಾಗಿದೆ.11 ನೇ ವಯಸ್ಸಿಗೆ ವಿವಾಹ.13ನೇ ವಯಸ್ಸಿಗೆ ಗರ್ಭಧಾರಣೆ.ಪ್ರಸವದಲ್ಲೇ ಮೃತ್ಯು:ಅಲೀಸಿಯಾ ಎಂಬ ಹುಡುಗಿಗೆ 11 ನೇ ವರ್ಷಕ್ಕೇ ವಿವಾಹ ಮಾಡಿದರು, 13 ನೇ ವಯಸ್ಸಿಗೆ ಗರ್ಭವತಿಯಾದಳು. ಶಸ್ತ್ರ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ಅತಿ ಕಷ್ಟದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದಳು. ಪ್ರಸವಿಸಿದ ಒಂದು ಗಂಟೆಯೊಳಗೆ ತಾಯಿ,ಮಗು ಇಬ್ಬರೂ ಇಹಲೋಕ ತ್ಯಜಿಸಿದರು.


13 ರ ವಯಸ್ಸಿನಲ್ಲಿ.ಕಂಕುಳಲ್ಲಿ ಮಗು.ಆಟವಾಡುತ್ತಾ.ಮಟಕ್ವೆಸ್ಕಿಂಟ್ಲ ಪ್ರದೇಶದ ಲಿಲಿಯನ್ ಗೆ ಈಗ 13 ವರ್ಷ . ಪ್ರತಿ ದಿನವೂ ತನ್ನ ಸೋದರ ಮಾವನಿಂದ ಅತ್ಯಾಚಾರಕ್ಕೆ ಒಳಗಾಗುತ್ತಿದ್ದಳು. 11 ವರ್ಷ ಪ್ರಾಯದಲ್ಲಿ, ಮನೆಯ ಹಿತ್ತಲಲ್ಲಿ ಆಟವಾಡುತ್ತಿರುವಾಗ ಅತ್ಯಾಚಾರಕ್ಕೆ ಗುರಿಯಾದಳು. ಕೆಲವು ತಿಂಗಳುಗಳ ನಂತರ ಆಕೆ ಗರ್ಭವತಿಯೆಂದು ತಿಳಿಯಿತು. ಈಗಾಕೆ ಒಂದು ಮಗುವಿನ ತಾಯಿ. ತನ್ನ ಮಗು ಹಾಗೂ ತಮ್ಮನೊಂದಿಗೆ ಪ್ರತೀ ದಿನ ಆಟವಾಡುತ್ತಿರುತ್ತಾಳೆ.

ಸಾಟಿ ಮಕ್ಕಳೊಂದಿಗೆ ಆಟವಾಡುತ್ತಾ.14 ವರ್ಷದ ಹುಡುಗನೊಂದಿಗೆ 12 ವರ್ಷ ವಯಸ್ಸಿನ 'ಹೈದೀ' ಯ ಮದುವೆಯಾಯಿತು.ಒಂದೇ ವರ್ಷದಲ್ಲಿ ಒಂದು ಮಗುವನ್ನೂ ಹಡೆದಳು. ಹೈದೀ ಕಂಕುಳಲ್ಲಿ ತನ್ನ ಮಗುವನ್ನಿಟ್ಟುಕೊಂಡು ಸಾಟಿ ಮಕ್ಕಳೊಂದಿಗೆ ಆಟವಾಡುತ್ತಿರುತ್ತಾಳೆ.

53 ರ ಮುದುಕನೊಂದಿಗೆ 11 ರ ಅಪ್ರಾಪ್ತೆಯ ಮದುವೆ. ಮಗು ಹುಟ್ಟಿದಮೇಲೆ ಇಹಲೋಕ ತ್ಯಜಿಸಿದ ಗಂಡ:ರಕ್ಷಣೆಯಿಲ್ಲದಿರುವುದು, ದುರ್ಬಲ ಕಾನೂನು, ಅನಕ್ಷರತೆ.ಆರೋಗ್ಯದ ಬಗ್ಗೆ ಕನಿಷ್ಟ ಜ್ಞಾನ ಇಲ್ಲದಿರುವುದರಿಂದ.ಇಲ್ಲಿ ಈ ಸಮಸ್ಯೆ ತೀವ್ರವಾಗಿದೆ. ವಾಂಛೆ ಉಂಟಾದ ಕೂಡಲೇ ಕೈಗೆಟಕುವ ಅಪ್ರಾಪ್ತೆಯರನ್ನು ಭೋಗಿಸುವುದು ಇಲ್ಲಿನ ಜನಕ್ಕೆ ಅಭ್ಯಾಸವಾಗಿಬಿಟ್ಟಿದೆ. ಅದರ ಪಲಿತಾಂಶವೇ ಸದರಿ ಅಪ್ರಾಪ್ತ ಬಾಲಕಿಯರು ಗರ್ಭವತಿಯರಾದಾಗ ವಿಧಿಯಿಲ್ಲದೆ ಪೋಷಕರು ಮದುವೆ ಮಾಡುತ್ತಿದ್ದಾರೆ. ಸಾಧ್ಯವಾದರೆ, ಬೇರೆಯವರಿಗೆ ಕೊಟ್ಟು ಮದುವೆ ಮಾಡುವುದು ಇಲ್ಲದಿದ್ದರೆ ಅತ್ಯಾಚಾರ ಮಾಡಿದ ವ್ಯಕ್ತಿಯೊಡನೆ ಮದುವೆ.ಅಪ್ರಾಪ್ತೆಯರ ಮೇಲೆ ಅತ್ಯಾಚಾರ, ಬಾಲ್ಯದಲ್ಲಿಯೇ ತಾಯಿಯಾದ ಮಕ್ಕಳ ಬಗ್ಗೆ ವಿಶ್ಲೇಷಣಾತ್ಮಕವಾಗಿ ಬರೆದು ಪ್ರಕಟಿಸಿದ 'ಲಿಂಡ ಪರ್ಸೇಲ್' ಗೆ ಧನ್ಯವಾದಗಳು.

No comments