Header Ads

test

ಜನವರಿ 1,2019 ಈ ರೀತಿ ಮಾಡಿದರೆ.ಹಣದ ಕೊರತೆ ಇರುವುದಿಲ್ಲ.!!

ಮುಂಬರುವ 2019 ಜನವರಿ 1 . ಹೊಸವರ್ಷವೆಂದರೇನೆ ಉಲ್ಲಾಸ ,ಉತ್ಸಾಹ, ಆಸೆ ಆಕಾಂಕ್ಷೆಗಳಿಂದ ಪ್ರ್ರಾರಂಭವಾಗುತ್ತದೆ. ಗರಿಗೆದರುವ ಆಲೋಚನೆಗಳು, ಭವಿಷ್ಯದ ಬಗ್ಗೆ ಹಲವು ರೀತಿಯ ನೀರೀಕ್ಷೆಗಳನ್ನು ಇರಿಸಿಕೊಂಡಿರುತ್ತೇವೆ. ಹಿಂದಿನ ವರ್ಷಗಳಲ್ಲಿ ಅನುಭವಿಸಿದ ಕಷ್ಟಗಳೆಲ್ಲವೂ ಈ ವರ್ಷ ಕರಗಿ ನೀರಾಗಿ ಸುಖಮಯ ಜೀವನ ನಡೆಸಬೇಕೆಂದು ಆಶಿಸುತ್ತೇವೆ. ಹೊಸ ವರ್ಷದಂದು ಹೊಸ ಜೀವನ ಪ್ರಾರಂಭ ಆಗಬೇಕೆಂದು ಆಸೆಪಡುತ್ತೇವೆ. ತಮ್ಮ ಮನಸ್ಸಿನಲ್ಲಿರುವ ಕೋರಿಕೆಗಳು ನೆರವೇರಬೇಕೆಂದು ಇಷ್ಟ ದೇವರಲ್ಲಿ ಪ್ರಾರ್ಥಿಸುತ್ತೇವೆ. ಜನವರಿ 1 ಬಂತೆಂದರೆ ಸಾಕು ದೇವಾಲಯ, ಚರ್ಚ್, ಮಸೀದಿ ಹೀಗೆ ಆಯಾ ಧರ್ಮಗಳ ಜನರು ಅಲ್ಲಿಗೆ ಹೋಗಿ ಪ್ರಾರ್ಥಿಸುತ್ತಾರೆ.



ಹಿಂದೂ ಸಂಪ್ರದಾಯದಲ್ಲಿ, ತಮ್ಮ ಕೋರಿಕೆ ನೆರವೇರಬೇಕೆಂದರೆ, ಹಣದ ಅಡಚಣೆ ದೂರವಾಗಬೇಕೆಂದರೆ, ದೇವರ ಆಶೀರ್ವಾದ ದೊರೆಯಬೇಕೆಂದರೆ ಈ ರೀತಿ ಮಾಡುವುದರಿಂದ ಇಷ್ಟಾರ್ಥ ಸಿದ್ಧಿಸುತ್ತದಂತೆ. ಮಾನಸಿಕ ಸಮಸ್ಯೆಗಳು ದೂರವಾಗಿ ನಾವಂದುಕೊಂಡಂತೆ ನಡೆಯುತ್ತದಂತೆ ಸಾಧ್ಯವಾದಲ್ಲಿ ರುದ್ರಾಕ್ಷಿ ಮಾಲೆಯನ್ನು ಉಪಯೋಗಿಸಿ ಮಹಾ ಮೃಜ್ಯುಂಜಯ ಮಂತ್ರವನ್ನು 108 ಸಲ ಜಪಿಸಿದರೆ, ಶಿವ ಪ್ರಸನ್ನನಾಗುತ್ತಾನಂತೆ. ಪಾಯಸವನ್ನು ತಯಾರಿಸಿ ಬಡ ಬಗ್ಗರಿಗೆ ಹಂಚಿದಲ್ಲಿ ಪುಣ್ಯ ಫಲ ಲಭಿಸುತ್ತದೆ. ಬಿಳಿ ಹಸುವಿಗೆ ರೊಟ್ಟಿಯನ್ನು ತಿನ್ನಿಸಬೇಕು. ಹೀಗೆ ಸಾಧ್ಯವಾದಷ್ಟು ದಿನಗಳು ನಡೆದುಕೊಂಡಲ್ಲಿ ಶುಕ್ರಗ್ರಹ ಬಲಿಷ್ಟನಾಗುತ್ತಾನೆ. ಅಂದರೆ, ಶುಕ್ರಮಹಾದೆಶೆ ನಡೆಯಲು ಅನುಕೂಲಕರವಾಗಿರುತ್ತದೆ.

ಆರ್ಥಿಕ ತೊಂದರೆಗಳು ನಿಮಗಿದ್ದಲ್ಲಿ ಶಿವಾಲಯದಲ್ಲಿ ಅಥವಾ ನಿಮಗಿಷ್ಟವಾದ ದೇವಾಲಯದಲ್ಲಿ ಹತ್ತು ಜನರಿಗೆ ಅನ್ನದಾನ ಮಾಡಬೇಕು. ಹೊಸ ವರ್ಷದ ಮೊದಲ ದಿನ ಈ ರೀತಿ ಮಾಡಿದಲ್ಲಿ ಬಡವರ ಆಶೀರ್ವಾದ ನಿಮಗೆ ದೊರೆತು, ಎಲ್ಲವೂ ಶುಭವಾಗುತ್ತದೆ.ಧನಪ್ರಾಪ್ತಿಗಾಗಿ ಹಿಟ್ಟಿನಿಂದ ಮಾಡಿದ ಪದಾರ್ಥಗಳನ್ನು ಮೀನುಗಳಿಗೆ ಆಹಾರವನ್ನಾಗಿ ನೀಡಬೇಕು. ಹೊಸ ವರ್ಷದಲ್ಲಿ ಯಾವುದಾದರೂ ಒಂದು ಕೆಲಸ ಮಾಡಿಯೇ ತೀರಬೇಕೆಂದು ದೃಢ ಸಂಕಲ್ಪ ಮಾಡಬೇಕು. ಆತ್ಮ ವಿಶ್ವಾಸದಿಂದ ಮುನ್ನುಗ್ಗಬೇಕು. ಈರೀತಿ ಮಾಡುವುದರಿಂದ ನಿಮಗೆ ಧನಪ್ರಾಪ್ತಿಯಾಗುತ್ತದೆ.ಮೇಲೆ ತಿಳಿಸಿದಂತೆ ಮಾಡಿದಲ್ಲಿ ವರ್ಷವಿಡೀ ನೀವು ಸುಖ ಸಂತೋಷದಿಂದ ಇರುತ್ತೀರಿ.

No comments