Header Ads

test

ಇಂಜಿನಿಯರಿಂಗ್ ಓದಿದ ಈ ಯುವಕ. ರೈಲ್ವೆ ಸ್ಟೇಷನ್'ನಲ್ಲಿ ಕೂಲಿ ಕೆಲಸ ಮಾಡುತ್ತಾ. ತನ್ನ ಹೆಂಡತಿಯನ್ನುM.Tech ಓದಿಸುತ್ತಿದ್ದಾನೆ.

ಹೆಚ್ಚುತ್ತಿರುವ ಜನಸಂಖ್ಯೆ… ಇದರಿಂದಾಗಿ ಅನೇಕ ಕ್ಷೇತ್ರಗಳಲ್ಲಿ ಜನರ ನಡುವೆ ಹೆಚ್ಚಿದ ಪೈಪೋಟಿ. ಇನ್ನೂ ಶಿಕ್ಷಣ ಕ್ಷೇತ್ರದಲ್ಲಿ ಅಭ್ಯರ್ಥಿಗಳ ನಡುವಿನ ಪೈಪೋಟಿ ಅಷ್ಟಿಷ್ಟಲ್ಲ. ಒಳ್ಳೆಯ ಯುನಿವರ್ಸಿಟಿಯಲ್ಲಿ ಓದುವುದಕ್ಕೆ ಸೀಟ್ ವಿಷಯದಲ್ಲಿ ಪೈಪೋಟಿ, ಸೀಟ್ ಸಿಕ್ಕ ಮೇಲೆ ರ್ಯಾಂಕ್’ಗಾಗಿ ಪೈಪೋಟಿ, ರ್ಯಾಂಕ್ ಬಂದ ಮೇಲೆ ಉದ್ಯೋಗಕ್ಕಾಗಿ ಪೈಪೋಟಿ, ಇದರಿಂದ ನಮ್ಮ ದೇಶದಲ್ಲಿ ಲಕ್ಷಾಂತರ ಜನ ವಿದ್ಯಾರ್ಥಿಗಳು ನಿರುದ್ಯೋಗಿಗಳಾಗಿದ್ದಾರೆ. ಹೀಗಾಗಿ ತುಂಬಾ ಜನಕ್ಕೆ ತಮ್ಮ ಪ್ರತಿಭೆಗೆ ತಕ್ಕ ಕೆಲಸಕ್ಕಾಗಿ ಕಾಯುತ್ತಿದ್ದಾರೆ ಹೊರತು ಯಾವುದೋ ಒಂದು ಕೆಲಸ ಮಾಡೋಣ ಎಂದುಕೊಳ್ಳುವುದಿಲ್ಲ. ಆದರೆ ಆ ಯುವಕ ಇದ್ದನೇ ಯೋಚಿಸಿದ. ಬಿ.ಟೆಕ್ ಓದಿದ ತನಗೆ ತಕ್ಕ ಉದ್ಯೋಗ ಸಿಗಲು ಲೇಟ್ ಆಗುತ್ತದೆ ಎಂದು ಅರ್ಥ ಮಾಡಿಕೊಂಡ. ಯಾರೂ ಮಾಡದ ಸಾಹಸವನ್ನು ಮಾಡಿದ. ತನ್ನ ಗುರಿ ಸಾಧಿಸುವ ತನಕ ಹೀಗೆ ಮಾಡಿದರೆ ತಪ್ಪೇನು ಎಂದು ಭಾವಿಸಿದ. ಆತನ ಹೆಸರು ಮೋಹಿತ್.


ವಯಸ್ಸು 25 ವರ್ಷ. 2015 ರಲ್ಲಿ ಪಂಜಾಬಿನ ಫರಿದ್’ಕೋಟ್’ನ ಒಂದು ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ವಿಭಾಗದಲ್ಲಿ ಬಿ.ಟೆಕ್ ಮಾಡಿದ. ಎಲ್ಲಾ ಮಧ್ಯಮವರ್ಗದ ಕುಟುಂಬದಂತೆ ಮೋಹಿತ್ ಕುಟಂಬದಲ್ಲೂ ಆರ್ಥಿಕ ಸಮಸ್ಯೆಗಳು ದಿನೇ ದಿನೇ ಹೆಚ್ಚಾದವು. ಜೊತೆಗೆ ಮೋಹಿತ್’ಗೆ ನಾಲ್ಕು ಜನ ತಂಗಿಯರು, ಇಬ್ಬರು ತಮ್ಮುಂದಿರು ಕೂಡ ಇದ್ದಾರೆ. ಅವರೆಲ್ಲರ ಪೋಷಣೆಯ ಜವಾಬ್ದಾರಿಯನ್ನು ಮೊಹಿತ್ ತಂದೆಗೆ ನೋಡಿಕೊಳ್ಳಲಾಗಲಿಲ್ಲ. ಹಾಗಾಗಿ ಮೊಹಿತ್ ಕುಟುಂಬದ ಜವಾಬ್ದಾರಿಯನ್ನು ನನ್ನ ಭುಜದ ಮೇಲೆ ವಹಿಸಿಕೊಂಡ. ಇಂದಿನ ದಿನಗಳಲ್ಲಿ ಪದವಿ ಪೂರೈಸಿದವರಿಗೆ ಉದ್ಯೋಗ ಸಿಗುವುದು ಕಷ್ಟವಾಗಿರುವುರಿಂದ ಮೊಹಿತ್’ಗೂ ಎಲ್ಲಿಯೂ ಸರಿಯಾದ ಉದ್ಯೋಗ ಸಿಗಲಿಲ್ಲ. ಆದರೆ ಮೊಹಿತ್ ಎದೆಗುಂದಲಿಲ್ಲ. ತನಗೆ ಸಮೀಪವಿರುವ ರೈಲ್ವೆ ಸ್ಟೇಷನ್’ನಲ್ಲಿ ಕೂಲಿಯಾಗಿ ಜೀವನ ಪ್ರಾರಂಭಿಸಿದ.

ಅಂದಿನ ದಿನಗಳಲ್ಲಿ ದಿನಕ್ಕೆ 400 ರೂಪಾಯಿಯಿಂದ 500 ರೂಪಾಯಿವರೆಗೂ ಸ್ಟೇಷನ್’ನಲ್ಲಿ ಲಾನಿವೇದಿತುತ್ತಾ ಸಂಪಾದಿಸುತ್ತಿದ್ದ. ಆದರೆ ಕೆಲವು ದಿನಗಳ ನಂತರ ಅಲ್ಲಿಯೂ ಪೈಪೋಟಿ ಹೆಚ್ಚಿ, ಸಂಪಾದನೆ ಕಡಿಮೆ ಆಯಿತು. ಆತ ಕೆಲಸ ಮಾಡುವ ಸ್ಟೇಷನ್’ಗೆ ಎರಡುಮೂರು ಸಾರಿ ಬಂದ ಮಂತ್ರಿಗಳ ಬಳಿ ತನ್ನ ನೋವು ಹೇಳಿಕೊಂಡರೂ ಯಾವುದೇ ಪ್ರಯೋಜನವಾಗಲಿಲ್ಲ. ಹೀಗೆ ಜೀವನ ಸಾಗಿಸುತ್ತಿರುವಾಗ ಅಲ್ಲಿಯೇ ನಿವೇತಾ ಎಂಬ ಯುವತಿಯ ಪರಿಚಯವಾಗುತ್ತದೆ‌. ಪರಿಚಯ ಪ್ರೀತಿಯಾಗಿ ಇಬ್ಬರು ಮದುವೆ ಮಾಡಿಕೊಳ್ಳುತ್ತಾರೆ. ಮದುವೆಯಾದ ನಿವೇತಾ ಕಾಲೇಜೊಂದಲ್ಲಿ ಎಮ್.ಟೆಕ್ ಓದುತ್ತಿದ್ದಳು. ಇವರಿಬ್ಬರ ಬಗ್ಗೆ ತಿಳಿದ ಮಹಾರಾಜ ರಂಜಿತ್ ಸಿಂಗ್ ಪಂಜಾಬ್ ಟೆಕ್ನಿಕಲ್ ಯುನಿವರ್ಸಿಟಿ ವೈಸ್ ಚಾನ್ಸಲರ್ ಅವರನ್ನು ತಮ್ಮ ಕಾಲೇಜಿಗೆ ಕರೆಸಿಕೊಂಡು ಇಬ್ಬರಿಗೂ ಅವರ ಶಿಕ್ಷಣಕ್ಕೆ ತಕ್ಕಂತೆ ಕಾಲೇಜೊಂದರಲ್ಲಿ ಕೆಲಸ ಕೊಡಿಸುವುದಾಗಿ ಹೇಳಿದರು. ಅವರು ಮಾತಿನಂತೆ ಮೊಹಿತ್’ಗೆ ಉದ್ಯೋಗ ಕೊಟ್ಟರು. ಆದರೆ ಹೆಂಡತಿ ನಿವೇತಾ ಎಂ.ಟೆಕ್ ಪೂರ್ಣಗೊಳಿಸಿದ ನಂತರ ಕೆಲಸ ಕೂಡವುದಾಗಿ ಹೇಳಿದರು. ಈಗ ಮೊಹಿತ್ ನಿತ್ಯ ಕಾಲೇಜ್ ಹೋಗಿ ಉದ್ಯೋಗ ಮಾಡುತ್ತಿದ್ದಾನೆ. ಗುರಿ ಸಾಧಿಸಿದ ಖುಷಿ ಅವನಲ್ಲಿದೆ. ಇದು ಪಂಜಾಬಿನ ಮೊಹಿತ್ ಸ್ಟೊರಿ. ಇಷ್ಟೇ ಅಲ್ಲ, ದೇಶದಲ್ಲಿ ಇನ್ನೂ ಎಷ್ಟೋ ಲಕ್ಷಾಂತರ ಜನ ನಿರುದ್ಯೋಗಿಗಳಾಗಿ ಸರಿಯಾಗಿ ಉದ್ಯೋಗಾವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ. ಸರ್ಕಾರ ಶಿಕ್ಷಣ ಕೊಡಿಸುವುದು ಅಷ್ಟೇ ಅಲ್ಲ ಅವರಿಗೆ ಸರಿಯಾಗಿ ಉದ್ಯೋಗ ದೊರೆಯುವಂತೆ ಮಾಡಬೇಕು.

No comments