Header Ads

test

ಇಂಟ್ರೆಸ್ಟಿಂಗ್ : ಅಂಬಾನಿ ಯಾವ ಫೋನ್ ಉಪಯೋಗಿಸುತ್ತಾರೆಂದು ಗೊತ್ತಾ.?!!

ದೇಶದೆಲ್ಲೆಡೆ ಜನರು ಜಿಯೋ ಜಪ ಮಾಡುತ್ತಿದ್ದಾರೆ. ಇಂದಿನ ಲೈಫ್ ಸ್ಟೈಲ್ ಗೆ ಅತ್ಯಗತ್ಯವಾಗಿ ಬೇಕಾಗಿರುವ ಇಂಟರ್ ನೆಟ್ ಡೇಟಾ ವನ್ನು ಉಚಿತವಾಗಿ ನೀಡುತ್ತಿರುವ ಅಂಬಾನಿ ಕುಟುಂಬವನ್ನು ಜನರು ದೇವರಂತೆ ನೋಡುತ್ತಿದ್ದಾರೆ. 4 ಜಿ ಸಪೋರ್ಟ್ ಮಾಡುವ ಫೋನ್ ಇದ್ದರೆ ಸಾಕು.ಒಂದು ವರ್ಷದ ಕಾಲ ಉಚಿತವಾಗಿ ಡೇಟಾ ನೀಡುತ್ತಿದ್ದಾರೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ , ಸ್ಮಾರ್ಟ್ ಫೋನ್ ಗಳಿಲ್ಲದಿರುವ 50 ಕೋಟಿ ಜನರಿಗೆ ಸ್ಮಾರ್ಟ್ ಫೋನ್ ಭಾಗ್ಯವನ್ನು ನೀಡುವುದಲ್ಲದೆ ಉಚಿತವಾಗಿ ಡೇಟಾ ವನ್ನೂನೀಡುತ್ತಿರುವುದಾಗಿ ರಿಲಯನ್ಸ್ ಸಂಸ್ಥೆಯ 40 ನೇ ವಾರ್ಷಿಕೋತ್ಸವದಲ್ಲಿ ಪ್ರಕಟಿಸುವುದರ ಮೂಲಕ ಸಂಚಲನವನ್ನು ಉಂಟುಮಾಡಿದ್ದಾರೆ. 125 ಕೋಟಿ ಜನಸಂಖ್ಯೆ ಹೊಂದಿರುವ ದೇಶವೀಗ ಅಂಬಾನಿ ಬರೆದಿರುವ ರೂಟ್ ಪ್ಲಾನ್ ನಲ್ಲಿ ಪಯಣಿಸುತ್ತಿದೆ.


ಒಂದು ದೇಶದ ಸೆಲ್ ಫೋನ್ ಗಳ ಉಪಯೋಗವನ್ನೇ ತನ್ನ ಮುಷ್ಟಿಯಲ್ಲಿ ಹಿಡಿದಿಟ್ಟಿರುವ ಅಂಬಾನಿ ಕುಟುಂಬ ಯವ ಫೋನನ್ನು ಉಪಯೋಗಿಸುತ್ತಿದ್ದಾರೆಂಬ ಕುತೂಹಲ ಎಲ್ಲರಲ್ಲೂ ಇರುತ್ತದೆ. ಇದೀಗ ಈ ಸುದ್ದಿ ದೇಶದ ಜನರಿಗೆ ಆಸಕ್ತಿದಾಯಕವಾಗಿ ಪರಿಣಮಿಸಿದೆ.ಪ್ರಪಂಚದಲ್ಲೇ ಅತ್ಯಂತ ಧನಿಕರಲ್ಲಿ ಒಬ್ಬರಾದ ರಿಲಯನ್ಸ್ ಇಂಡಸ್ಟ್ರೀಸ್ ಒಡೆಯ ಮುಖೇಶ್ ಅಂಬಾನಿ, ಆತನ ಕುಟುಂಬದ ಸದಸ್ಯರ ಜೀವನ ಶೈಲಿ ಅವರ ಅಂತಸ್ಥಿಗೆ ತಕ್ಕಂತೆಯೇ ಇರುತ್ತದೆ. 12 ಸಾವಿರ ಕೋಟಿ ಬೆಲೆಯ ಕಣ್ಣು ಕುಕ್ಕುವ ಮನೆ ಕಟ್ಟಿಸಿದ್ದರೂ, 25 ಕೋಟಿ ರೂಗಳ ಕಾರು ಖರೀದಿಸಿದರೂ ಅದೆಲ್ಲವೂ ಒಬ್ಬ ಮುಖೇಶ್ ಅಂಬಾನಿಗೇ ಸಾದ್ಯ. ಸುಮಾರು 160 ಐಷಾರಾಮಿ ಕಾರುಗಳು ಆತನ ಮನೆಯ ಮುಂದೆ ನಿಂತಿರುತ್ತವೆ. ಇವು ಸಾಲದೆಂಬಂತೆ, ವಿಮಾನಗಳು, ಹಡಗುಗಳು, ಹೀಗೆ ಹೇಳುತ್ತಾ ಹೋದರೆ ಇನ್ನೂ ಎಷ್ಟೆಷ್ಟೋ. ಮುಖೇಶ್ ಅಂಬಾನಿ ಮಡದಿ ನೀತಾ ಉಪಯೋಗಿಸುತ್ತಿರುವ ಮೊಬೈಲ್ ಫೋನ್ ಈಗ ಚರ್ಚೆಗೊಳಪಟ್ಟಿದೆ. ಆ ಮೊಬೈಲ್ ಬೆಲೆಯನ್ನು ಕೇಳಿದರೆ ಯಾರಾದರೂ ಅಚ್ಚರಿಗೊಳ್ಳಲೇ ಬೇಕು. ಇದರ ಬೆಲೆ.ಕೇವಲ 312 ಕೋಟಿ ರೂಪಾಯಿಗಳು. ಪ್ರಪಂಚದಲ್ಲೇ ಅತ್ಯಂತ ಬೆಲೆಬಾಳುವ’ ಫಾಲ್ಕನ್ ಸೂಪರ್ ನೋವಾ ಐ ಫೋನ್ 6 ಪಿಂಕ್ ಡೈಮಂಡ್ ಫೋನ್’ ಅನ್ನು ಆಕೆ ಉಪಯೋಗಿಸುತ್ತಿದ್ದಾರೆ. ನಾವು ಯಾವ ಅಂಗಡಿಯಲ್ಲಿ ಆ ಫೋನನ್ನು ಖರೀದಿಸಬಹುದು ಇಲ್ಲವೆ ನೋಡಬಹುದು ಎಂದು ಮಾತ್ರ ಕೇಳಬೇಡಿ. ಯಾಕೆಂದರೆ.

ಆ ಫೋನ್ ಗಳನ್ನು ಕೇವಲ ಆರ್ಡರ್ ಕೊಟ್ಟರೆ ಮಾತ್ರ ತಯಾರು ಮಾಡುತ್ತಾರೆ. ಫೋನ್ ತಯಾರಿಯಲ್ಲಿ ಸಂಪೂರ್ಣವಾಗಿ ಬಂಗಾರವನ್ನು ಉಪಯೋಗಿಸಿದ್ದಾರೆ. ನೀತಾ ಅಂಬಾನಿ ಉಪಯೋಗಿಸುತ್ತಿರುವ ಫೋನ್ ಹಿಂಭಾಗದಲ್ಲಿ ಗುಲಾಬಿ ಬಣ್ಣದ ವಜ್ರವನ್ನೂ ಅಳವಡಿಸಿದ್ದಾರಂತೆ. ಮುಖೇಶ್ ಅಂಬಾನಿ ಕುಟುಂಬ ಸದಸ್ಯರೆಲ್ಲರೂ ಅತ್ಯಂತ ಬೆಲೆಬಾಳುವ ಫೋನ್ ಗಳನ್ನೇ ಉಪಯೋಗಿಸುತ್ತಿದ್ದಾರೆ. ಇಷ್ಟು ಬೆಲೆಬಾಳುವ ಫೋನ್ ಗಳನ್ನು ಉಪಯೋಗಿಸುತ್ತಿರುವ ಅಂಬಾನಿಗಳು.ಸಾಮಾನ್ಯರಿಗಾಗಿ 4 ಜಿ ತಾಂತ್ರಿಕತೆಯಿಂದ ಕೂಡಿದ ಜಿಯೋ ಫೋನ್ ಗಳನ್ನು ಉಚಿತವಾಗಿ ನೀಡುತ್ತಿರುವುದು ಗಮನಾರ್ಹ. ಜಿಯೋ ಫೋನ್ ಗಾಗಿ ಕೇವಲ 1500 ರೂ. ಮುಂಗಡವಾಗಿ ಪಾವತಿಸಿದರೆ ಸಾಕು. ಮೂರು ವರ್ಷಗಳ ನಂತರ ಆ ಮೊತ್ತವನ್ನು ಹಿಂದಿರುಗಿಸುವುದಾಗಿ ಪ್ರಕಟಿಸಿದ್ದಾರೆ.

1 comment: