Header Ads

test

ಸೀತಾಫಲದ ಲಾಭಗಳು ಗೊತ್ತಾದರೆ.ಅವನ್ನು ನೀವು ಈಗಲೇ ತಿನ್ನುತ್ತೀರ.!

ಸೀತಾಫಲ.ಈ ಕಾಲದಲ್ಲಿ ನಮಗೆ ಲಭಿಸುವ ಹಣ್ಣುಗಳಲ್ಲಿ ಇದೂ ಒಂದು. ಇದರಲ್ಲಿ ವಿಟಮಿನ್ ಎ, ಮೆಗ್ನಿಷಿಯಮ್, ಪೊಟ್ಯಾಷಿಯಂ, ಫೈಬರ್, ವಿಟಮಿನ್ ಬಿ6, ಕ್ಯಾಲ್ಸಿಯಂ,ವಿಟಮಿನ್ ಸಿ, ಐರನ್‌ನಂತಹ ಅತ್ಯಂತ ಮುಖ್ಯವಾದ ಪೋಷಕಗಳು ಅದೆಷ್ಟೋ ಇವೆ. ಇದನ್ನು ನಿತ್ಯ ನಾವು ಆಹಾರದ ಭಾಗವಾಗಿ ತಿನ್ನುವುದರಿಂದ ನಮಗೆ ಅದೆಷ್ಟೋ ವಿಧದ ಅನಾರೋಗ್ಯಗಳು ದೂರವಾಗುತ್ತವೆ. ಸೀತಾಫಲವಷ್ಟೇ ಅಲ್ಲ ಇದರ ಎಲೆಗಳು, ತೊಗಟೆ, ಬೇರು.ಹೀಗೆ ಎಲ್ಲಾ ಭಾಗಗಳು ನಮಗೆ ಸಾಕಷ್ಟು ಉಪಯುಕ್ತ. ಅವುಗಳಿಂದ ಆಗುವ ಲಾಭಗಳ ಬಗ್ಗೆ ಈಗ ತಿಳಿದುಕೊಳ್ಳೋಣ.


ದೇಹದ ಮೇಲೆ ಬೆವರಿನ ಗುಳ್ಳೆಗಳಾದರೆ ಸೀತಾಫಲ ಎಲೆಗಳನ್ನು ತೆಗೆದುಕೊಂಡು, ಅರೆದು ಆ ಮಿಶ್ರಣವನ್ನು ಕಟ್ಟಬೇಕು. ಇದರಿಂದ ಬೆವರಿನ ಗುಳ್ಳೆಗಳ ಸಮಸ್ಯೆ ನಿವಾರಣೆಯಾಗುತ್ತದೆ. ಸೀತಾಫಲದ ಎಲೆಗಳಿಂದ ತೆಗೆದ ರಸವನ್ನು ನಿತ್ಯ ಬೆಳಗ್ಗೆ ಒಂದು ಟೀಸ್ಫೂನ್ ಪ್ರಮಾಣದಲ್ಲಿ ಕುಡಿಯುತ್ತಿದ್ದರೆ ಮಹುಮೇಹ ನಿಯಂತ್ರಣಕ್ಕೆ ಬರುತ್ತದೆ. ಅಷ್ಟೇ ಅಲ್ಲದೆ ತೂಕ ಸಹ ಕಡಿಮೆಯಾಗುತ್ತಾರೆ. ಸೀತಾಫಲದ ಗಿಡದಿಂದ ತೆಗೆದ ತೊಗಟೆಯನ್ನು ನೀರಿನಲ್ಲಿ ಹಾಕಿ ಅದರಿಂದ ಕಷಾಯ ಮಾಡಿಕೊಂಡು ಕುಡಿದರೆ ಡಯೇರಿಯಾದಂತಹ ಅನಾರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತವೆ. ಸೀತಾಫಲ ಎಲೆಗಳನ್ನು ನೀರಿನಲ್ಲಿ ಹಾಕಿ ಕಷಾಯ ಮಾಡಿಕೊಂಡು ಕುಡಿದರೆ ನೆಗಡಿ ಕಡಿಮೆಯಾಗುತ್ತದೆ. ಸೀತಾಫಲವನ್ನು ಬೆಳಗ್ಗೆ ಅಲ್ಪಾಹಾರವಾಗಿ ತಿಂದರೆ ಇದರಿಂದ ಸ್ನಾಯುಗಳು, ನರಗಳ ಬಲಹೀನತೆ ಕಡಿಮೆಯಾಗುತ್ತದೆ. ದೇಹಕ್ಕೆ ಬೇಕಾದ ಶಕ್ತಿ ಲಭಿಸುತ್ತದೆ. ವಿಟಮಿನ್ ಎ ಹೆಚ್ಚಾಗಿ ಇರುವುದರಿಂದ ಕಣ್ಣಿನ ರೋಗಗಳು ನಿವಾರಣೆಯಾಗುತ್ತವೆ. ದೃಷ್ಟಿ ಸಮಸ್ಯೆಗಳು ದೂರವಾಗುತ್ತವೆ. ಸೀತಾಫಲದಲ್ಲಿರುವ ಮೆಗ್ನಿಷಿಯಂ ಹೃದಯ ಕಾಯಿಲೆಗಳು ಬರದಂತೆ ತಡೆಯುತ್ತದೆ. ಇವುಗಳಲ್ಲಿ ಇರುವ ಪೋಷಕಗಳು ದೇಹದಲ್ಲಿ ಸೇರಿಕೊಂಡ ಕೊಬ್ಬನ್ನು ಕರಗಿಸುತ್ತದೆ. ಸೀತಾಫಲವನ್ನು ನಿತ್ಯ ಸೇವಿಸಿದರೆ ಹೊಟ್ಟೆಯಲ್ಲಿರುವ ಜಂತುಹುಳುಗಳ ಸಾಯುತ್ತವೆ. ಅಲ್ಸರ್ ನಿವಾರಣೆಯಾಗುತ್ತದೆ. ಗ್ಯಾಸ್, ಅಸಿಡಿಟಿ, ಅಜೀರ್ಣ, ಮಲಬದ್ಧತೆಯಂತಹ ಜೀರ್ಣ ಸಂಬಂಧಿ ಸಮಸ್ಯೆಗಳು ಗುಣವಾಗುತ್ತವೆ.

ರಕ್ತ ಕಡಿಮೆ ಇರುವವರು ಸೀತಾಫಲ ತಿನ್ನುವುದು ಉತ್ತಮ. ಇದರಿಂದ ರಕ್ತ ಹೆಚ್ಚುತ್ತದೆ. ದೇಹ ತುಂಬಾ ಬಿಸಿಯಾಗಿರುವವರು ಸೀತಾಫಲವನ್ನು ತಿಂದರೆ ಕೂಡಲೆ ಉಷ್ಣತೆಯಿಂದ ಉಪಶಮನ ಪಡೆಯಬಹುದು. ಚಿಕ್ಕಮಕ್ಕಳು, ಬಾಣಂತಿಯರು ಸೀತಾಫಲ ಒಳ್ಳೆಯ ಪೋಷಕಾಂಶಗಳನ್ನು ನೀಡುತ್ತದೆ. ಅವರಿಗೆ ಸೂಕ್ತ ಶಕ್ತಿ ಲಭಿಸುತ್ತದೆ. ಬೆಳೆಯುತ್ತಿರುವ ಮಕ್ಕಳು ನಿತ್ಯ ಸೀತಾಫಲವನ್ನು ತಿನ್ನುತ್ತಿದ್ದರೆ ಅದರಿಂದ ಕ್ಯಾಲ್ಸಿಯಂನಂತಹ ಪೋಷಕಗಳು ಹೆಚ್ಚಾಗಿ ಲಭಿಸುತ್ತವೆ. ಇದರಿಂದ ಮೂಳೆಗಳು ಬಲವಾಗುತ್ತವೆ. ದೇಹದಲ್ಲಿನ ವ್ಯರ್ಥಗಳನ್ನು ಹೊರಗೆ ಕಳುಹಿಸುವಲ್ಲಿ ಸೀತಾಫಲ ತುಂಬಾ ಉಪಯುಕ್ತ. ರಕ್ತ ಶುದ್ಧಿ ಸಹ ಆಗುತ್ತದೆ. ಸೀತಾಫಲದ ತಿರುಳನ್ನು ತೆಗೆದುಕೊಂಡು ರಸದಂತೆ ಮಾಡಿ ಅದಕ್ಕೆ ಹಾಲು ಬೆರೆಸಿ ಮಕ್ಕಳಿಗೆ ಕುಡಿಸಬೇಕು. ಇದರಿಂದ ಅವರಿಗೆ ಶಕ್ತಿ ಲಭಿಸುತ್ತದೆ.

ಸೀತಾಫಲ ಎಲೆಗಳನ್ನು ನುಣ್ಣಗೆ ಅರೆದು ಹಚ್ಚಿಕೊಂಡರೆ ಗಾಯಗಳು, ಕಜ್ಜಿ, ಗಜಕರ್ಣದಂತಹ ಸಮಸ್ಯೆಗಳು ನಿವಾರಣೆಯಾಗುತ್ತದೆ. ಇವುಗಳ ಎಲೆಗಳನ್ನು ನುಣ್ಣಗೆ ಅರೆದು ಬೋರಿಕ್ ಪೌಡರ್ ಬೆರೆಸಿ ಮಂಚ, ಕುರ್ಚಿಗಳ ಮೂಲೆಗಳಲ್ಲಿ ಇಟ್ಟರೆ ತಿಗಣೆ ಸಮಸ್ಯೆ ಇರಲ್ಲ. ಸೀತಾಫಲ ಬೀಜಗಳನ್ನು ಪುಡಿಮಾಡಿ ತಲೆಗೆ ಹಚ್ಚಿಕೊಂಡರೆ ಹೇನಿನ ಸಮಸ್ಯೆ ಇರಲ್ಲ. ಆದರೆ ಕಣ್ಣಿಗೆ ಬೀಳದಂತೆ ಎಚ್ಚರವಹಿಸಬೇಕು. ಗರ್ಭಿಣಿಯರು ಈ ಹಣ್ಣನ್ನು ಸಾಧ್ಯವಾದಷ್ಟು ಕಡಿಮೆ ತಿನ್ನಬೇಕು. ಅಕಸ್ಮಾತ್ ಬೀಜ ಏನಾದರೂ ಹೊಟ್ಟೆಗೆ ಹೋದರೆ ಗರ್ಭಸ್ರಾವ ಆಗುವ ಅಪಾಯ ಇದೆ. ಸೀತಾಫಲವನ್ನು ಅತಿಯಾಗಿ ಒಮ್ಮೆಲೆ ತಿನ್ನಬಾರದು. ಇದರಿಂದ ಹೊಟ್ಟೆಯಲ್ಲಿ ಉರಿ, ಉಬ್ಬಸ ಉಂಟಾಗುತ್ತದೆ. ಅಂತಹ ಸಂದರ್ಭದಲ್ಲಿ ಬಿಸಿ ನೀರು ಕುಡಿದರು, ಅರ್ಧ ಸ್ಫೂನು ಓಂಕಾಳು ಅಥವಾ ಸ್ವಲ್ಪ ಉಪ್ಪು ಜಗಿದರೂ ಫಲಿತಾಂಶ ಇರುತ್ತದೆ. ಅದೇ ರೀತಿ ಮಧುಮೇಹ ಇರುವವರು, ಸ್ಥೂಲಕಾಯ ಸಮಸ್ಯೆ ಇರುವವರು ಈ ಹಣ್ಣನ್ನು ವೈದ್ಯರ ಸಲಹೆ ಮೇರೆಗೆ ತಿನ್ನಬೇಕು. ಇಲ್ಲದಿದ್ದರೆ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗುವ ಸಾಧ್ಯತೆಗಳಿರುತ್ತವೆ.

No comments