Header Ads

test

ಅವರು ಅಂದು ದೇಶಕ್ಕಾಗಿ ಹೋರಾಡಿದ ವೀರ ಸೈನಿಕ. ಇಂದು ಭಿಕ್ಷೆ ಬೇಡುತ್ತಾ ಜೀವನ ಸಾಗಿಸುತ್ತಿದ್ದಾರೆ.

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳಾಯಿತು. ಈ ಸಂದರ್ಭದಲ್ಲಿ ಇತ್ತೀಚೆಗೆ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮವನ್ನೂ ಅದ್ದೂರಿಯಾಗಿ ಆಚರಿಸಿಕೊಂಡೆವು. ಬಹಳಷ್ಟು ಮಂದಿ ಸ್ವಾತಂತ್ರ್ಯ ಸಮರ ಯೋಧರನ್ನು, ಮಹಾ ನೇತಾರರನ್ನು, ಹಿರಿಯ ನಾಯಕರನ್ನು ನೆನೆಯುತ್ತಾ ಅವರು ನಮ್ಮ ದೇಶಕ್ಕೆ ಯಾವ ರೀತಿ ಸ್ವಾತಂತ್ರ್ಯ ತಂದುಕೊಟ್ಟರು ಎಂದು ನೆನಪಿಸಿಕೊಂಡಿದ್ದೇವೆ. ಆದರೆ ಅಂತಹ ಮಹಾ ಹೋರಾಟದ ಕೆಲವು ಯೋಧರನ್ನು ಮರೆತಿದ್ದೇವೆ. ಈಗಷ್ಟೇ ಅಲ್ಲ ಸ್ವಾತಂತ್ರ್ಯ ಬಂದಂದಿನಿಂದ ನಾವು ಅವರ ಬಗ್ಗೆ ಆಲೋಚಿಸಿಲ್ಲ. ಪ್ರತಿವರ್ಷ ಮರೆಯುತ್ತಲೇ ಇದ್ದೇವೆ. ಇನ್ನು ಸರಕಾರಗಳು, ರಾಜಕೀಯ ಮುಖಂಡರ ಬಗ್ಗೆ ಹೇಳಬೇಕಾದ ಅಗತ್ಯವಿಲ್ಲ. ಯಾಕೆಂದರೆ ಅವರಿಗೆ ಜನರ ಸಮಸ್ಯೆಗಳೇ ನೆನಪಿರಲ್ಲ. ಇನ್ನು ಆ ರೀತಿಯ ಹೋರಾಟದ ಯೋಧರು ಹೇಗೆ ನೆನಪಿರುತ್ತಾರೆ ಹೇಳಿ. ಈ ಹಿನ್ನೆಲೆಯಲ್ಲಿ ಅವರ ಬಗ್ಗೆ ಹಾಗೂ ಅವರ ದಾರುಣ ಜೀವನದ ಬಗ್ಗೆ ಈಗ ತಿಳಿದುಕೊಳ್ಳೋಣ.


ಆತನ ಹೆಸರು ಶ್ರೀಪಜಿತ್. ಉತ್ತರಪ್ರದೇಶದಲ್ಲಿನ ಝಾನ್ಸಿಯಲ್ಲಿ ಇರುತ್ತಾರೆ. ಈಗ ಅವರ ವಯಸ್ಸು 90 ವರ್ಷ. ಒಂದು ಕಾಲದಲ್ಲಿ ನೇತಾಜಿ ಸುಭಾಷ್ ಚಂದ್ರಬೋಸ್ ಭಾಷಣದಿಂದ ಪ್ರೇರಣೆ ಪಡೆದು ತಾನೂ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಜಿಗಿದರು. ನೇತಾಜಿ ಅವರ ಇಂಡಿಯನ್ ನ್ಯಾಷನಲ್ ಆರ್ಮಿ ಸೇರಿದರು. ಅದೆಷ್ಟೋ ಸಂದರ್ಭಗಳಲ್ಲಿ ಸೈನಿಕನಾಗಿ ದೇಶಕ್ಕಾಗಿ ಹೋರಾಡಿದ್ದಾರೆ. ಆದರೆ ಈಗ ಅವರ ಜೀವನ ನೋಡಿದರೆ ಯಾರಿಗೇ ಆಗಲಿ ಕನಿಕರ ಬಾರದೆ ಇರಲ್ಲ. ಒಂದು ಕಾಲದಲ್ಲಿ ದೇಶಕ್ಕಾಗಿ ಹೋರಾಡಿದ ವ್ಯಕ್ತಿ, ಸೈನಿಕನಾಗಿದ್ದಂತಹ ವ್ಯಕ್ತಿ ಇಂದು ತಿನ್ನಲು ತಿಂಡಿ ಇಲ್ಲದೆ, ಇರಲು ಗೂಡಿಲ್ಲದೆ ಭಿಕ್ಷೆ ಬೇಡಿ ಬದುಕುತ್ತಿದ್ದಾರೆ. ರಸ್ತೆ ಮೇಲೆ, ಖಾಲಿ ಜಾಗಗಳಲ್ಲಿ, ಪಾರ್ಕ್‌ನಲ್ಲಿ ಎಲ್ಲೆಂದರೆಲ್ಲಿ ಮಲಗುತ್ತಿದ್ದಾರೆ. ಬಿಸಿಲಿಗೆ ಬಾಡುತ್ತಾ, ಮಳೆಗೆ ನೆನೆಯುತ್ತಾ, ಚಳಿಗೆ ನಡುಗುತ್ತಾ ಇನ್ನಷ್ಟು ದಾರುಣ ಸ್ಥಿತಿಗೆ ಅವರು ತಲುಪಿದ್ದಾರೆ.

ಆದರೆ ಶ್ರಿಪಜಿತ್ ಕುಟುಂಬ ಮಾತ್ರ ಒಂದು ಕಾಲದಲ್ಲಿ ಚೆನ್ನಾಗಿದ್ದವರು. ಆದರೆ ಮಗನ ವ್ಯಸನದ ಕಾರಣ ಇರುವ ಜಮೀನು, ಮನೆಯನ್ನು ಕಳೆದುಕೊಳ್ಳಬೇಕಾಯಿತು. ಹಾಗಾಗಿ ಮಗನನ್ನು ನಿಯಂತ್ರಿಸುವ ಸಲುವಾಗಿ ಆತ ಮಾಡಿದ ಪ್ರಯತ್ನಗಳು ವಿಫಲವಾದವು. ಇದರಿಂದ ಕುಟುಂಬದ ಭಾರವೆಲ್ಲಾ ಶ್ರಿಪಜಿತ್ ಮೇಲೆ ಬಿತ್ತು. ಈ ಕಾರಣದಿಂದ ಆತ ಕುಟುಂಬ ಭಾರವನ್ನು ಹೊರಲಾರದೆ ಇಂದು ಭಿಕ್ಷುಕನಾಗಿ ಬದಲಾಗಿದ್ದಾನೆ. ಇವರಷ್ಟೇ ಅಲ್ಲ, ಪ್ರಯಾಗ್‌ಪುರ ಮೂಲದ ಓರಿಲಾಲ್ ಎಂಬ ಇನ್ನೊಬ್ಬ ವ್ಯಕ್ತಿಯದ್ದೂ ಸಹ ಇಂತಹದ್ದೇ ಪರಿಸ್ಥಿತಿ. ಈತ ಸಹ ನೇತಾಜಿ ಕಟ್ಟಿದ ಆರ್ಮಿಯಲ್ಲಿ ಸೇರಿ ಅನೇಕ ಹೋರಾಟಗಳನ್ನು ಮಾಡಿದ್ದಾನೆ. ಆದರೆ ಇಂದು 99 ವರ್ಷಗಳ ವಯಸ್ಸಲ್ಲಿ ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಭಿಕ್ಷೆ ಬೇಡುತ್ತಾ ಬದುಕುತ್ತಿದ್ದಾರೆ.

ಆದರೆ ಶ್ರಿಪಜಿತ್, ಓರಿಲಾಲ್ ಮಾತ್ರವಷ್ಟೇ ಅಲ್ಲ, ಇನ್ನೂ ದೇಶದಲ್ಲಿ ಈ ರೀತಿಯವರು ಬಹಳಷ್ಟು ಮಂದಿ ಇದ್ದಾರೆ. ಇವರೆಲ್ಲರನ್ನೂ ಸರಕಾರ ಕಡ್ಡಾಯವಾಗಿ ರಕ್ಷಿಸಬೇಕು. ಇಲ್ಲದಿದ್ದರೆ ನಮಗೆ ಸ್ವಾತಂತ್ರ್ಯ ಬಂದು ಸಹ ಅರ್ಥ ಇಲ್ಲ. ಅದನ್ನು ಅನುಭವಿಸಲು ನಮಗೂ ಅರ್ಹತೆ ಇಲ್ಲ. ಅಷ್ಟೇ ಅಲ್ಲವೇ.! ನೀವೇನಂತೀರಾ.!

No comments