Header Ads

test

ರೈಲು ಅಪಘಾತದಿಂದ ಮೂವರನ್ನು ಕಾಪಾಡಿ ಕೈ ಕಾಲು ಕಳೆದುಕೊಂಡ ಆತ, ಈಗ ಅತ್ಯಂತದೀನಾವಸ್ಥೆಯಲ್ಲಿದ್ದಾನೆ.

ಪ್ರಾಣಾಪಾಯ ಸ್ಥಿತಿಯಲ್ಲಿ ಇರುವ ವ್ಯಕ್ತಿಗಳನ್ನು ಕಾಪಾಡಬೇಕಾದರೆ ಅದು ಸಾಮಾನ್ಯ ಸಂಗತಿ ಅಲ್ಲ. ಅದಕ್ಕೆ ಯಾರೇ ಆಗಲಿ ಧೈರ್ಯ ಸಾಹಸಗಳನ್ನು ತೋರಬೇಕಾಗುತ್ತದೆ. ಆ ಸಮಯದಲಿ ಸ್ವಲ್ಪ ವ್ಯತ್ಯಾಸ ಆದರೂ ಸಾಕು. ಕಾಪಾಡುವವರ, ಸಹಾಯ ಪಡೆಯುವವರ ಇಬ್ಬರ ಜೀವಕ್ಕೂ ಗಂಡಾಂತರ ಕಾದಿರುತ್ತದೆ. ಆದರೆ ಅಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಸಹ ಆ ಬಾಲಕ ಒಮ್ಮೆಲೆ ಮೂವರನ್ನು ಕಾಪಾಡಿದ. ಆದರೆ ಆ ಘಟನೆಯಲ್ಲಿ ತನ್ನ ಎರಡು ಕೈಗಳನ್ನು, ಒಂದು ಕಾಲನ್ನು ಕಳೆದುಕೊಂಡ. ಅತ್ಯಂತ ಧೈರ್ಯ ಸಾಹಸಗಳನ್ನು ಪ್ರದರ್ಶಿಸಿ ಮೂವರನ್ನು ರಕ್ಷಿಸಿದ್ದಕ್ಕೆ ಬ್ರೇವರಿ ಅವಾರ್ಡ್ ಸಹ ಪಡೆದ. ಆದರೆ ಈಗ ದೀವಾವಸ್ಥೆಯಲ್ಲಿದ್ದು ದುರ್ಬರ ಜೀವನ ಕಳೆಯುತ್ತಿದ್ದಾನೆ.


ಆತನ ಹೆಸರು ರಿಯಾಜ್ ಅಹ್ಮದ್. ವಯಸ್ಸು 21 ವರ್ಷಗಳು. ಈತನದು ಉತ್ತರ ಪ್ರದೇಶ ರಾಜ್ಯದ ಲಕ್ನೋ. ಅಲ್ಲಿ ತೆಲಿಬಾಗ್ ಎಂಬ ಪ್ರದೇಶದಲ್ಲಿ ವಾಸಿಸುತ್ತಿದ್ದ. ಈತ ಅಕ್ಟೋಬರ್ 10, 1996ರಲ್ಲಿ ಜನಿಸಿದ. ಇವರ ತಂದೆ ಸಣ್ಣ ವ್ಯಾಪಾರಿ. ತಳ್ಳುವ ಗಾಡಿಯಲ್ಲಿ ಕೋಳಿಮೊಟ್ಟೆಯನ್ನು ಮಾರಿ ಜೀವನ ನಡೆಸುತ್ತಿದ್ದರು. ಇನ್ನು ರಿಯಾಜ್ ಕುಂಟುಂಬದಲ್ಲಿ ಒಟ್ಟು 8 ಮಂದಿ ಇದ್ದರು. ತಾಯಿ, ತಂದೆಯ ಜತೆಗೆ ರಿಯಾಜ್ ಅಣ್ಣ, ತಮ್ಮಂದಿರು, ಅಕ್ಕಂದಿರು, ತಂಗಿಯರು ಸೇರಿ ಒಟ್ಟು 6 ಮಂದಿ ಇದ್ದರು. ರಿಯಾಜ್ ಎರಡನೆಯವ. ಆದರೆ 2003ನೇ ವರ್ಷದಲ್ಲಿ ರಿಯಾಜ್‌ಗೆ ಆಗ 8 ವರ್ಷಗಳ ವಯಸ್ಸು ಇದ್ದಾಗ ಒಂದು ದಿನ ಘಟನೆಯೊಂದು ಎದುರಾಯಿತು. ಅದೇನೆಂದರೆ.

ದಲಿಗಂಜ್ ಕ್ರಾಸಿಂಗ್ ಬಳಿ ಬಾಲಕಿಯೊಬ್ಬಳು ರೈಲ್ವೆ ಹಳಿ ದಾಟುತ್ತಿರುವುದನ್ನು ರಿಯಾಜ್ ಗಮನಿಸಿದ. ಮೊದಲು ತಂದೆ ನಡೆಯುತ್ತಿದ್ದ. ಎದುರುಗಡೆಯಿಂದ ರೈಲು ಬರುತ್ತಿದೆ. ರೈಲು ಬರುತ್ತಿದೆ ಎಂದು ರಿಯಾಜ್ ಆ ಬಾಲಕಿ ತಂದೆಗೆ ತಿಳಿಸಿದ. ಆದರೂ ಆತ ಅದನ್ನು ಹಿಡಿಸಿಕೊಳ್ಳಲಿಲ್ಲ. ರೈಲು ತೀರಾ ಸಮೀಪಕ್ಕೆ ಬಂದು ಬಿಟ್ಟಿತು. ಇನ್ನೊಂದು ಕಡೆ ಆ ಬಾಲಕಿ ಕಾಲು ರೈಲಿನ ಹಳಿಗಳ ನಡುವೆ ಸಿಕ್ಕಿಕೊಂಡಿತು. ಅದನ್ನು ನೋಡಿ ರಿಯಾಜ್ ಜತೆಗೆ ಪಕ್ಕದಲ್ಲೇ ಇದ್ದ ಇನ್ನೊಬ್ಬ ಬಾಲಕ ಓಡಿ ಆ ಬಾಲಕಿ ಬಳಿಗೆ ಹೋದರು. ಆ ಬಾಲಕಿ ತಂದೆ ಸಹ ಆಕೆ ಬಳಿಗೆ ಹೋದ. ಹತ್ತಿರಕ್ಕೆ ಬಂದ ಟ್ರೈನ್ ನೋಡಿ ರಿಯಾಜ್ ಆ ಬಾಲಕಿಯನ್ನು ಎತ್ತಿಕೊಂಡು ದೂರ ಎಸೆದ. ಆ ಬಾಲಕಿ ತಂದೆಯ ಜತೆಗೆ ಹತ್ತಿರ ಬಂದ ಮತ್ತೊಬ್ಬ ಬಾಲಕನನ್ನೂ ಸಹ ದೂರ ತಳ್ಳಿದ. ಅದಾಗಲೆ ಆತ ರೈಲಿನ ಕೆಳಗೆ ಬಿದ್ದಿದ್ದ. ಆ ಅಪಘಾತದಲ್ಲಿ ತನ್ನೆರಡು ಕೈಗಳ ಜತೆಗೆ ಒಂದು ಕಾಲನ್ನು ಸಂಪೂರ್ಣ ಕಳೆದುಕೊಂಡ. ಆದರೂ ರಿಯಾಜ್ ಮೂವರ ಜೀವ ಕಾಪಾಡಿದ್ದ.

ತನ್ನ ಪ್ರಾಣವನ್ನೇ ಪಣವಾಗಿಟ್ಟು ಇಷ್ಟೆಲ್ಲಾ ಸಾಹಸ ಪ್ರದರ್ಶಿಸಿದ ರಿಯಾಜ್‌ಗೆ ಅಂದಿನ ಭಾರತ ರಾಷ್ಟ್ರಪತಿ ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಅವರಿಂದ ಜನವರಿ 24, 2003ರಂದು ಸಂಜಯ್ ಚೋಪ್ರಾ ನ್ಯಾಷನಲ್ ಬ್ರೇವರಿ ಅವಾರ್ಡ್ ಪಡೆಡಿದ್ದರು. ಅಂದಿನ ಪ್ರಧಾನಿ ವಾಜಪೇಯಿ ಅವರಿಂದ ರಿಯಾಜ್ ಸಾಹಸ ಬಾಲಕರಿಗೆ ನೀಡುವ ಪ್ರಶಸ್ತಿಯನ್ನೂ ದೆಹಲಿಯಲ್ಲಿ ಸ್ವೀಕರಿಸಿದ್ದ. ಇದರ ಜತೆಗೆ ಮಾರಿಷಸ್ ಪ್ರೆಸಿಡೆಂಟ್ ಗ್ರೇಟ್ ಹೀರೋಸ್ ಗ್ಲೋಬಲ್ ಬ್ರೇವರಿ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಅಂದಿನಿಂದ ರಿಯಾಜ್ ತನ್ನ ಒಂದೇ ಕಾಲಿನಲ್ಲಿ ಬರೆಯುವುದನ್ನು ಅಭ್ಯಾಸ ಮಾಡಿದ. ಮುಂದೆ ಬೋರ್ಡ್ ಎಗ್ಜಾಮ್ ಬರೆದು ಪಾಸ್ ಆದ. ಕಾಲೇಜನ್ನೂ ಸೇರಿದ. ಆದರೆ ಈಗ ಆತನ ಕುಟುಂಬ ಇನ್ನಷ್ಟು ಹೀನಾಯ ಸ್ಥಿತಿ ತಲುಪಿದೆ. ಒಂದು ಹೊತ್ತು ಊಟಕ್ಕಾಗಿ ಪರದಾಡುವಂತಾಗಿದೆ. ತನಗೆ ಸಹಾಯ ಮಾಡುವ ಕೈಗಳಿಗಾಗಿ ಆತ ಎದುರುನೋಡುತ್ತಿದ್ದಾನೆ. ಇಂತಹ ಪರಿಸ್ಥಿತಿ ಯಾರಿಗೇ ಆಗಲಿ ಬರಬಾರದು ಅಲ್ಲವೇ.?

No comments