Header Ads

test

ಎರಡು ಮಂಗಳಸೂತ್ರಗಳ ಹಿಂದಿರುವ ಅದ್ಭುತ ರಹಸ್ಯ ಏನು ತೊತ್ತಾ?!!

ಹಿಂದೂ ವಿವಾಹ ಪದ್ಧತಿಯಲ್ಲಿ ಮಾಂಗಲ್ಯಧಾರಣೆಗೆ ಅತ್ಯಂತ ಪ್ರಾಮುಖ್ಯತೆ ಇದೆ. ಮಂಗಳಸೂತ್ರ, ತಾಳಿ, ಪುಸ್ತೆ, ಶತಮಾನಂ ಎಂಬ ಹೆಸರುಗಳ ಮೂಲಕ ವಿವಿಧ ರೂಪಗಳಲ್ಲಿ ಸಹ ಇವೆ. ಮಾನವರಿಗೆ ಮದುವೆಯಾಗುವುದು ಎಷ್ಟು ಮುಖ್ಯವೋ, ಮದುವೆಯಾಗಲು ಮಂಗಳಸೂತ್ರ ಸಹ ಅಷ್ಟೇ ಮುಖ್ಯ. ಮಂಗಳಸೂತ್ರ ಅಥವಾ ಮಾಂಗಲ್ಯ ಹಿಂದೂ ಸಂಪ್ರದಾಯದಲ್ಲಿ ಮದುವೆ ನಡೆದ ಮಹಿಳೆಯ ಕೊರಳಲ್ಲಿ ಧರಿಸುವ ಸರದಂತಹದ್ದು. ಇದನ್ನು ತಾಳಿ ಅಥವಾ ಮಂಗಳಸೂತ್ರ, ಕೆಲವು ಕರಿಮಣಿ ಮುಂತಾದವನ್ನು ಹಾಕಿಕೊಳ್ಳುತ್ತಾರೆ.


ವಿವಾಹದ ಸಮಯದಿಂದ ಮಹಿಳೆಯರು ಮಂಗಳ ಸೂತ್ರ ಧರಿಸುವುದು ಭಾರತೀಯ ಸಂಪ್ರದಾಯ. ಈ ಆಚಾರ ಇಂದಿನದಲ್ಲ. ಮದುವೆ ದಿನ ವರನು ವಧುವಿಗೆ ತಾಳಿಕಟ್ಟುವ ಸಂಪ್ರದಾಯ ಆರನೇ ಶತಮಾನದಲ್ಲಿ ಆರಂಭವಾಯಿತು. ಮಂಗಳಸೂತ್ರ ಎಂಬ ಶಬ್ದ ಸಂಸ್ಕೃತದಿಂದ ಹುಟ್ಟಿದ್ದು. ಸಂಸ್ಕೃತದಲ್ಲಿ ’ಮಂಗಳ’ ಎಂದರೆ ಶೋಭಾಯಮಾನ, ಶುಭಪ್ರದ ಎಂಬ ಅರ್ಥಗಳಿವೆ. ಸೂತ್ರ ಎಂದರೆ ಆಧಾರ ಎಂದರ್ಥ. ಸಾಮಾನ್ಯವಾಗಿ ಮಂಗಳಸೂತ್ರವನ್ನು 108 ಚಿಕ್ಕ ದಾರಗಳಿಂದ, ಅರಿಶಿಣ ಹಚ್ಚಿ ತಯಾರಿಸುತ್ತಾರೆ. ಈ ರೀತಿ ಒಂಬತ್ತು ಅಥವಾ ಹನ್ನೊಂದರಿಂದಲೂ ತಾಳಿಯನ್ನು ತಯಾರಿಸುತ್ತಾರೆ. ಮಂಗಳಸೂತ್ರಧಾರಣೆ ನಡೆಯುವಾಗ ಈ ಮಂತ್ರವನ್ನು ಪಠಿಸುತ್ತಾರೆ.

“ಮಾಂಗಲ್ಯಂ ತಂತುನಾನೇನಾ ಮಮಜೀವನ ಹೇತುನಾ! ಕಂಠೇ ಭದ್ನಾಮಿ ಸುಭಗೇ ತ್ವಂ ಜೀವ ಶರದಾಂ ಶತಂ!!”ಮಂಗಳಸೂತ್ರ ಗಂಡಹೆಂಡತಿ ಶಾಶ್ವತ ಸಂಬಂಧಕ್ಕೆ ನೆನಪು. ಅದು ವೈವಾಹಿಕ ಜೀವನದ ಸಮಸ್ತ ಕೇಡನ್ನು ತೊಲಗಿಸುತ್ತದೆ ಎಂಬುದು ಹಿಂದೂಗಳ ನಂಬಿಕೆ. ಶಕ್ತಿ ಸ್ವರೂಪಿಣಿ ಆದ ಮಹಿಳೆಯಯ ಕೊರಳಲ್ಲಿ ಮಂಗಳಸೂತ್ರ ಇರುವಷ್ಟು ವರೆಗೂ ಗಂಡನಿಗೆ ಆಯಸ್ಸು ಇರುತ್ತದೆ ಎಂದು ಹಿಂದೂಗಳು ನಂಬುತ್ತಾರೆ. ಹಾಗಾಗಿ ಹಿಂದೂ ಮಹಿಳೆಯರು ಮಂಗಳಸೂತ್ರ ಧರಿಸುತ್ತಾರೆ. ವಿವಾಹಿತ ಮಹಿಳೆ ಕೊರಳಲ್ಲಿ ಮಂಗಳ ಸೂತ್ರ ಇಲ್ಲ ಎಂದರೆ ಗಂಡ ಮೃತಪಟ್ಟಿದ್ದಾನೆಂದು ಅವರು ಭಾವಿಸುತ್ತಿದ್ದರು ಆ ಕಾಲದಲ್ಲಿ. ಭಾರತೀಯ ಸಂಪ್ರದಾಯ ಮಹಿಳೆಯರಿಗೆ ಮಂಗಳಸೂತ್ರಕ್ಕಿರುವ ಬೆಲೆ ಇನ್ಯಾವುದಕ್ಕೂ ಇಲ್ಲ.

ಅದೇ ರೀತಿ ಅವರವರ ಜಾತಿಯಪಗಡ ಧರಿಸುವುದನ್ನು ನಮ್ಮ ಮಹರ್ಷಿಗಳು ಹೇಳಿರುವುದಲ್ಲಿ ಗೂಡಾರ್ಥ ಇತ್ತು. ಅದೇನೆಂದರೆ ಮುತ್ತು, ಪಗಡ ಧರಿಸುವುದು ಹಳೆ ಕಾಲದ ಮಹಿಳೆಯರಿಗೆ ಆಪರೇಷನ್ ಎಂಬುದೇನು ಇರಲಿಲ್ಲ. ಆದರೆ ಇಂದಿನ ಮಹಿಳೆಯರಿಗೆ ಹೆರಿಗೆ ಆಪರೇಷನ್ ಎಂಬುದು ಸಾಮಾನ್ಯ ಸಂಗತಿ ಎಂಬಂತಾಗಿದೆ. ಮುತ್ತು, ಪಗಡ ಸೂರ್ಯನಿಂದ ಬರುವ ಕಿರಣಗಳಿಂದ ಕೆಂಪು (ಕುಜ) ಬಿಳಿ (ಚಂದ್ರ) ಸ್ವೀಕರಿಸಿ ಮಹಿಳೆಯ ಎಲ್ಲಾ ನಾಡಿ ಕೇಂದ್ರಗಳನ್ನು ಉತ್ತೇಜನಗೊಳಿಸಿ ದೈಹಿಕವಾಗಿ, ಬೌತಿಕವಾಗಿ ಆ ಜೋಡಿ ಗ್ರಹಗಳು ಮಹಿಳೆಗೆ ಆಗುವ ನಷ್ಟಗಳು, ದೋಷಗಳನ್ನು ತೊಲಗಿಸುವುದರಲ್ಲಿ ಯಾವುದೇ ಸಂದೇಹವಿಲ್ಲ.

ಆದಕಾರಣ ಚಂದ್ರ ಕುಜಗಳು ಪ್ರತಿ ಮಹಿಳೆಯರಲ್ಲೂ ತುಂಬಾ ಪ್ರಾಮುಖ್ಯತೆ ವಹಿಸುತ್ತವೆ. ಪಗಡ, ಮುತ್ಯ ಎರಡನ್ನೂ ಧರಿಸಿದ ಮಂಗಳಸೂತ್ರ ಮಹಿಳೆಗೆ ಅತ್ಯಂತ ಶುಭ ಫಲಿತಾಂಶಗಳನ್ನು ನೀಡುತ್ತದೆ. ಇನ್ನೊಂದು ವಿಷಯ ಏನೆಂದರೆ ಶುಕ್ರನು ವಿವಾಹಕಾರ ಮಾತ್ರ, ಆದರೆ ಸಾಂಸಾರಿಕ ಜೀವನ ನಡೆಸುವವನು ಕುಜ ಎಂಬುದು ಮರೆಯಬಾರದು. ಹಾಗಾಗಿ ಮೊದಲು ಕುಜ ದೋಷ ಇದೆಯೇ ಇಲ್ಲವೇ ಎಂದು ನೋಡುತ್ತಾರೆ. ಪ್ರತಿ ಮಹಿಳೆ ಜೀವನದಲ್ಲಿ ಮೇಲೆ ತಿಳಿಸಿದ ಮೂರು ಗ್ರಹಗಳು ಅವುಗಳ ಸ್ಥಿತಿಗತಿಗಳು ಚೆನ್ನಾಗಿದ್ದರೆ ಜೀವನ ಆನಂದಕರವಾಗಿರುತ್ತದೆ.

No comments