Header Ads

test

ಇವರು ಒಂದು ಕಾಲದಲ್ಲಿ ಹಲವು ಕ್ರೀಡೆಗಳಲ್ಲಿ ಚಾಂಪಿಯನ್ಸ್.ಪ್ರೋತ್ಸಾಹ ಇಲ್ಲದೆ ಈಗ ಕಡುಬಡತನದಲ್ಲಿತೊಳಲಾಡುತ್ತಿದ್ದಾರೆ.!

ನಮ್ಮ ದೇಶದಲ್ಲಿ ಕ್ರಿಕೆಟ್‌ಗೆ ಎಷ್ಟೆಲ್ಲ ಪ್ರೋತ್ಸಾಹ ಇದೆ ಅಂತ ಎಲ್ಲರಿಗೂ ಗೊತ್ತು. ಕಣ್ಣುಕೋರೈಸುವ ಆದಾಯ ಸಿಗುತ್ತಿರುವ ಕಾರಣ ಬಹಳಷ್ಟು ಮಂದಿ ಆ ಕ್ರೀಡೆ ಕಡೆಗೆ ಆಸಕ್ತಿ ತೋರುತ್ತಿದ್ದಾರೆ. ಇದಕ್ಕೆ ತಕ್ಕಂತೆ ಸ್ಪಾನ್ಸರ್ಸ್ ಸಹ ಕ್ರಿಕೆಟರ್‌ಗಳಿಗೆ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಮ್ಯಾಚ್‌ಗಳು, ಪ್ಲೇಯರ್‌ಗಳಿಗೆ ಅವರು ಸ್ಪಾನ್ಸರ್‌ಶಿಪ್ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಸಂಖ್ಯೆಯ ಜನ ಆ ಕ್ರೀಡೆಯನ್ನು ನೋಡುತ್ತಿರುವ ಕಾರಣ, ಆ ಆಟ ಆಡುವವರಿಗಷ್ಟೇ ಅಲ್ಲದೆ, ಅದಕ್ಕೆ ಸ್ಪಾನ್ಸರ್‌ಶಿಪ್ ನೀಡುವ ಕಂಪೆನಿಗಳಿಗೂ ಸಹ ಬಹಳ ಲಾಭ ಆಗುತ್ತಿದೆ. ಆದರೆ ಕ್ರಿಕೆಟ್ ಸಂಗತಿ ಪಕ್ಕಕ್ಕಿಟ್ಟರೆ ಮಿಕ್ಕ ಕ್ರೀಡೆಗಳಿಗೆ ಅಷ್ಟಾಗಿ ಪ್ರೋತ್ಸಾಹ ಇಲ್ಲವೆಂದೇ ಹೇಳಬೇಕು. ಈ ಹಿಂದೆ ಆಯಾ ಕ್ರೀಡೆಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗಳಿಸಿದವರಿಗೆ ಸೂಕ್ತ ಪ್ರೋತ್ಸಾಹ ಇಲ್ಲದೆ ಅವರು ಬಹಳ ಕೆಟ್ಟ ಜೀವನ ನಡೆಸುತ್ತಿದ್ದಾರೆ. ಆಟಕ್ಕೆ ದೂರವಾಗಿ, ಸ್ಪಾನ್ಸರ್‌‍ಶಿಪ್‌ಗಳಿಲ್ಲದೆ, ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಆ ರೀತಿಯ ಕ್ರೀಡಾಕಾರರ ಬಗ್ಗೆ ಈಗ ತಿಳಿದುಕೊಳ್ಳೋಣ.

 • ಆಶಾರಾಯ್.ಈಕೆ ಒಂದು ಕಾಲದಲ್ಲಿ 100, 200 ಮೀಟರ್ ಓಟದ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದಲ್ಲಿ ಗೋಲ್ಡ್ ಮೆಡಲ್ ಸಾಧಿಸಿದ್ದರು. ಆದರೆ ಈಗ ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಕುಟುಂಬದ ಪೋಷಣೆಗಾಗಿ ಈಕೆ ಈಗ ತರಕಾರಿ ಮಾರುತ್ತಾ ಜೀವನ ನಡೆಸುತ್ತಿದ್ದಾರೆ.

 • ಸೀತಾ ಸಾಹು.ಈಕೆ ಒಲಂಪಿಕ್ಸ್‌ ಓಟದ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದಿದ್ದರು. ಆದರೆ ಈಗ ಒಂದು ಹೊತ್ತಿನ ಊಟಕ್ಕಾಗಿ ಪಾನಿಪೂರಿ ಮಾರಿಕೊಂಡು ಜೀವನ ಸಾಗಿಸುತ್ತಿದ್ದಾರೆ.

 • ರಶ್ಮಿಕಾ ಪಾತ್ರಾ.ಹಲವು ಅಂತಾರಾಷ್ಟ್ರೀಯ ಫುಟ್‌ಬಾಲ್ ಮ್ಯಾಚ್‌ಗಳಲ್ಲಿ ಈಕೆ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಈಗ ಬಹಳ ಕಷ್ಟದ ಜೀವನ ನಡೆಸುತ್ತಿದ್ದಾರೆ. ತಮ್ಮ ಗ್ರಾಮದಲ್ಲಿ ಒಂದು ಪಾನ್ ಬೀಡಾ ಅಂಗಡಿ ಹಾಕಿಕೊಂಡು ಪಾನ್ ಮಾರುತ್ತಾ ಜೀವನ ಸಾಗಿಸುತ್ತಿದ್ದಾರೆ.

 • ಭರತ್ ಕುಮಾರ್.ಭರತ್ ಕುಮಾರ್ ಪ್ಯಾರಾ ಒಲಂಪಿಂಕ್ ಸ್ವಿಮ್ಮರ್. ಭಾರತ ಪರವಾಗಿ ಅನೇಕ ಮ್ಯಾಚ್‌ಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಿದ್ದಾನೆ. ಎಲ್ಲಾ ಸೇರಿ 50 ಮೆಡಲ್ಸ್‌ವರೆಗೂ ಸಂಪಾದಿಸಿದ. ಆದರೆ ಈಗ ಪರಿಸ್ಥಿತಿ ತುಂಬಾ ದಾರುಣವಾಗಿದೆ. ಕಾರುಗಳನ್ನು ತೊಳೆಯುತ್ತಾ ಜೀವನ ಸಾಗಿಸುತ್ತಿದ್ದಾನೆ.

 • ಶಾಂತಿ ದೇವಿ.ಬಹುಶಃ ಈಕೆ ಹೆಸರು ಈಗ ಬಹಳಷ್ಟು ಮಂದಿಗೆ ಗೊತ್ತಿಲ್ಲ. ಆದರೆ ಒಂದು ಕಾಲದಲ್ಲಿ ಈಕೆ ಕಬಡ್ಡಿ ಚಾಂಪಿಯನ್. ಬಿಹಾರ್ ನಿವಾಸಿ. ಹಲವು ರಾಷ್ಟ್ರೀಯ ಮಟ್ಟದ ಮ್ಯಾಚ್‌ಗಳಲ್ಲಿ ಆಡಿ ತನ್ನ ಸಾಮರ್ಥ್ಯ ತೋರಿದ್ದರು. ಈಗ ತಮ್ಮ ಗ್ರಾಮದಲ್ಲಿ ತರಕಾರಿ ಮಾರುತ್ತಾ ಮಕ್ಕಳನ್ನು ನೋಡಿಕೊಂಡು ಇದ್ದಾರೆ.

 • ನಿಶಾ ರಾಣಿ ದತ್ತಾ.ಈಕೆ ಒಂದು ಕಾಲದಲ್ಲಿ ಆರ್ಚರಿ ಚಾಂಪಿಯನ್. ಅನೇಕ ಮೆಡಲ್ಸ್ ಸಾಧಿಸಿದರು. ಆದರೆ ಈಗ ಆಕೆಯ ಫ್ಯಾಮಿಲಿ ಬಹಳ ದಾರುಣವಾದ ಸ್ಥಿತಿಯಲ್ಲಿದೆ. ನಿತ್ಯ ಕನಿಷ್ಠ ಎರಡು ಹೊತ್ತು ಅಲ್ಲ ಒಂದು ಹೊತ್ತಿನ ಊಟಕ್ಕೂ ಈಕೆ ಕುಟುಂಬ ಪರದಾಡುವಂತಾಗಿದೆ. ಹಾಗಾಗಿ ಈಕೆ ಏನು ಮಾಡಬೇಕೆಂಬ ಗೊತ್ತಾಗದ ಅಯೋಮಯ ಪರಿಸ್ಥಿತಿಯಲ್ಲಿದ್ದಾರೆ.

 • ರಾಜ್ ಕುಮಾರ್ ತಿವಾರಿ.ಒಂದು ಕಾಲದಲ್ಲಿ ರಾಜ್ ಕುಮಾರ್ ಸ್ಕೇಟಿಂಗ್‍ನಲ್ಲಿ ಚಾಂಪಿಯನ್. ವಿಂಟರ್ ಒಲಂಪಿಕ್ಸ್‌ನಲ್ಲಿ ಪಾಲ್ಗೊಂಡು ಭಾರತಕ್ಕೆ ಗೋಲ್ಡ್ ಮೆಡಲ್ ತಂದುಕೊಟ್ಟಿದ್ದ. ಆದರೆ ಈಗ ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲದೆ ಬೀದಿಬದಿಯ ವ್ಯಾಪಾರಿಯಾಗಿ ಬದಲಾಗಿದ್ದಾರೆ.

 • ಶಾಂತಿ ಸೌಂದರಾಜನ್.ಈಕೆ ಒಂದು ಕಾಲದಲ್ಲಿ ಟ್ರಾಕ್‌ಫೀಲ್ಡ್ ಅಥ್ಲೆಟಿಕ್ಸ್‌ನಲ್ಲಿ ಚಾಂಪಿಯನ್. 2006ನೇ ವರ್ಷದಲ್ಲಿ 800 ಕಿ.ಮೀ ಟ್ರಾಕ್‌ಫೀಲ್ಡ್‌ನಲ್ಲಿ ಸಿಲ್ವರ್ ಮೆಡಲ್ ಸಾಧಿಸಿದ್ದರು. ಆದರೆ ಈಗ ಬಹಳ ದಯನೀಯ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ.

 • ನಾರಿ ಮುಂಡು.ಈಕೆ ಜಾರ್ಖಂಡ್ ನಿವಾಸಿ. ಹಾಕಿ ಚಾಂಪಿಯನ್. ಭಾರತದ ಪರವಾಗಿ ಹಲವು ಅಂತಾರಾಷ್ಟ್ರೀಯ ಮ್ಯಾಚ್‌ಗಳಲ್ಲಿ ಈಕೆ ಪಾಲ್ಗೊಂಡಿದ್ದರು. 19 ಮ್ಯಾಚ್‌ಗಳನ್ನು ಆಡಿದ್ದಾರೆ. ಸೂಕ್ತ ಪ್ರೋತ್ಸಾಹವಿಲ್ಲದೆ ಆಕೆ ಹಾಕಿ ಆಡುವುದನ್ನು ಬಿಟ್ಟಿದ್ದರು. ಈಗ ಕೃಷಿ ಕೂಲಿಯಾಗಿ ಸದ್ಯಕ್ಕೆ ಕೆಲಸ ಮಾಡುತ್ತಿದ್ದಾರೆ.

 • ಬಿರ್ ಬಹದೂರ್.ಒಂದು ಕಾಲದಲ್ಲಿ ಇವರು ಪ್ರಮುಖ ಫುಟ್‌ಬಾಲ್ ಪ್ಲೇಯರ್. ಭಾರತ ಫುಟ್‌ಬಾಲ್ ತಂಡದ ಸದಸ್ಯ. ಅನೇಕ ಅಂತಾರಾಷ್ಟ್ರೀಯ ಮ್ಯಾಚ್‌ಗಳಲ್ಲಿ ಆಡಿದ್ದಾರೆ. ಈಗ ಸೂಕ್ತ ಪ್ರೋತ್ಸಾಹ ಇಲ್ಲದೆ ಪಾನಿಪೂರಿ ಮಾರಿಕೊಂಡು ಜೀವನ ಸಾಗಿಸುತ್ತಿದ್ದಾರೆ.

 • ಸಂಧ್ಯಾರಾಣಿ ಸಿಂಘಾ.ಒಂದು ಕಾಲದಲ್ಲಿ ಈಕೆ ಫೆನ್ಸಿಂಗ್ ಚಾಂಪಿಯನ್. ರಾಷ್ಟ ಮಟ್ಟದ ಪಂದ್ಯಾವಳಿಯಲ್ಲಿ ಕಂಚು ಪದಕ ಪಡೆದಿದ್ದರು. ಈಗ ಕಡುಬಡತನದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಏನಾದರೂ ಮಾಡೋಣ ಎಂದರೆ ಆಕೆಗೆ ಈಗ ಯಾವುದೇ ಕೆಲಸ ಸಿಗುತ್ತಿಲ್ಲ. ಹಾಗಾಗಿ ಒಪ್ಪೊತ್ತಿನ ಊಟಕ್ಕೂ ಪರದಾಡುವಂತಾಗಿದೆ.

 • ಸರ್ವಾನ್ ಸಿಂಗ್.1954ರ ಏಷ್ಯನ್ ಗೇಮ್ಸ್‌ನಲ್ಲಿ ಇವರು ಅಥ್ಲೆಟಿಕ್ಸ್ ಗೋಲ್ಡ್ ಮೆಡಲ್ ಪಡೆದಿದ್ದರು. ಸದ್ಯಕ್ಕೆ ಅತ್ಯಂತ ಬಡತನದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಒಂದು ಹೊತ್ತಿನ ಊಟಕ್ಕೂ ಕಷ್ಟಪಡುವಂತಾಗಿದೆ. ಯಾರಾದರೂ ಕೆಲಸ ಕೊಡುತ್ತಾರಾ ಎಂದು ಎದುರುನೋಡುವಂತಾಗಿದೆ.

No comments