Header Ads

test

ಆ ಮಹಿಳೆ ಲಾಯರ್ ಶಿಕ್ಷಣ ಪಡೆದರು. ಆದರೂ ಟ್ರಕ್ ಡ್ರೈವರ್ ಆಗಿ ಒಳ್ಳೆಯ ಹೆಸರು ಗಳಿಸಿದರು. ಯಾಕೆ ಗೊತ್ತಾ.?

ಪುರುಷರೊಂದಿಗೆ ಮಹಿಳೆಯರೂ ಈಗ ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧಿಸುತ್ತಿದ್ದಾರೆ ಎಂದು ನಾವು ಆಗಾಗ ಮಾತನಾಡುತ್ತಿರುತ್ತೇವೆ. ಯಾವುದೇ ಕ್ಷೇತ್ರದಲ್ಲಿ ನೋಡಿದರೂ ಮಹಿಳೆಯರು ಪುರುಷರಿಗೆ ಸಮಾನವಾಗಿದ್ದಾರೆ, ಅದೇ ಮಾತಿಗೆ ಬಂದರೆ ಸ್ವಲ್ಪ ಹೆಚ್ಚಾಗಿಯೇ ಪ್ರತಿಭೆ ತೋರುತ್ತಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋದರೆ ಪುರುಷರನ್ನು ಮೀರಿ ಕೆಲಸ ಮಾಡುವ ಮಹಿಳೆಯರೂ ಕಾಣಸಿಗುತ್ತಾರೆ. ಆದರೆ ಇದು ತುಂಬಾ ಅಪರೂಪ ಎಂದು ಹೇಳಬಹುದು. ಆ ರೀತಿಯ ಮಹಿಳೆಯರಲ್ಲಿ ಆಕೆ ಸಹ ಒಬ್ಬರು. ಅಷ್ಟೆಲ್ಲಾ ಓದಿಕೊಂಡರೂ ಅನಿರೀಕ್ಷಿತವಾಗಿ ಬಂದ ಕಷ್ಟಗಳ ಹಿನ್ನೆಲೆಯಲ್ಲಿ ಭಾರಿ ಟ್ರಕ್‌ಗಳನ್ನು ಓಡಿಸುವ ಡ್ರೈವರ್ ಆದರು. ಆ ರೀತಿ ಆಗಿದ್ದಷ್ಟೇ ಅಲ್ಲ, ದೇಶದಲ್ಲೇ ಅತ್ಯುತ್ತಮ ಭಾರಿ ಟ್ರಕ್ ಡ್ರೈವರ್ ಆಗಿ ಆ ಮಹಿಳೆ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಆಕೆ ಯೋಗಿತಾ ರಘುವಂಶಿ.


ಮಧ್ಯಪ್ರದೇಶದ ಭೂಪಾಲ್‌ನಲ್ಲಿರುವ ಯೋಗಿತಾ ರಘುವಂಶಿ ವೃತ್ತಿಯಲ್ಲಿ ಲಾಯರ್. ಆಕೆ ಲಾಯರ್ ಆಗಿ ಕೆಲಸ ಮಾಡುತ್ತ ವ್ಯಕ್ತಿಯೊಬ್ಬರನ್ನು ಪ್ರೀತಿಸಿ ಮದುವೆಯಾದರು. ಅವರಿಗೆ ಯಶಿಕಾ, ಯಶ್ವಿನ್ ಎಂಬ ಇಬ್ಬರು ಮಕ್ಕಳು ಸಹ ಇದ್ದಾರೆ. ಅಲ್ಲಿಯವರೆಗೂ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಅಪಘಾತವೊಂದರಲ್ಲಿ ಯೋಗಿತಾ ತನ್ನ ಗಂಡನನ್ನು ಕಳೆದುಕೊಳ್ಳಬೇಕಾಯಿತು. ಹಾಗಾಗಿ ಮಕ್ಕಳ ಜವಾಬ್ದಾರಿ ಆಕೆಯ ಮೇಲೆ ಬಿತ್ತು. ಲಾಯರ್ ಪ್ರಾಕ್ಟೀಸ್ ಹೇಳಿಕೊಳ್ಳುವಂತಿಲ್ಲದ ಕಾರಣ ಟ್ರಕ್ ಡ್ರೈವರ್ ಆಗಿ ಕೆಲಸ ಮಾಡಬೇಕೆಂದುಕೊಂಡರು. ಆ ವೃತ್ತಿಯಲ್ಲಾದರೆ ವೇತನ ಕಾಲಕಾಲಕ್ಕೆ ಬರುತ್ತದೆ, ಇದರಿಂದ ತನ್ನ ಆರ್ಥಿಕ ಸಮಸ್ಯೆಗಳೂ ನಿವಾರಣೆಯಾಗುತ್ತವೆ ಎಂಬ ಭಾವನೆಯಿಂದ ಟ್ರಕ್ ಡ್ರೈವಿಂಗ್ ಕಲಿತು ಟ್ರಾನ್ಸ್‌ಪೋರ್ಟ್ ಕಂಪೆನಿಯೊಂದರಲ್ಲಿ ಸೇರಿದರು.

ಎಲ್ಲವೂ ಊಹಿಸಿದಂತೆ ನಡೆಯಬೇಕಲ್ಲವೇ? ಈ ಸಲ ಆಕೆಗೆ ವೃತ್ತಿಪರವಾಗಿ ಸಮಸ್ಯೆಗಳು ಎದುರಾದವು. ಸಾಮಾನ್ಯವಾಗಿ ಟ್ರಕ್ ಡ್ರೈವರ್ ಎಂದರೆ ಹೆಚ್ಚಿನ ಸಂಖ್ಯೆಯಲ್ಲಿ ಗಂಡಸರೇ ಇರುತ್ತಾರೆ. ಮಹಿಳೆಯರು ಆ ಕೆಲಸ ಮಾಡುವುದು ತುಂಬಾ ವಿರಳ. ಇದರಿಂದ ಇತರೆ ಪುರುಷ ಡ್ರೈವರ್‌ಗಳು ಆಕೆಯನ್ನು ನೋಡಿ ತಮಾಷೆ ಮಾಡುತ್ತಿದ್ದರು. ಆದರೂ ಅದೆಲ್ಲವನ್ನೂ ಆಕೆ ತಲೆಗೆ ಹಾಕಿಕೊಳ್ಳಲಿಲ್ಲ. ತನ್ನ ಕೆಲಸದ ಮೇಲೆ ದೃಷ್ಟಿ ಹರಿಸಿದರು. ಆ ರೀತಿಯಾಗಿ ಚಿಕ್ಕ ಟ್ರಕ್‌ಗಳಿಂದ ಆರಂಭಿಸಿ ದೊಡ್ಡ ದೊಡ್ಡ ಟ್ರಕ್‌ಗಳನ್ನು ಓಡಿಸುವ ಮಟ್ಟಕ್ಕೆ ಬೆಳೆದರು. ಕಳೆದ 16 ವರ್ಷಗಳಿಂದ ಯೋಗಿತಾ ಇದೇ ಕೆಲಸ ಮಾಡುತ್ತಿದ್ದಾರೆ. ಈಗಾಕೆ ನಿತ್ಯ ಭಾರಿ ಟ್ರಕ್‌ಗಳನ್ನು ಓಡಿಸುತ್ತಾ ಎಷ್ಟು ದೂರ ಪ್ರಯಾಣಿಸುತ್ತಾರೆ ಗೊತ್ತಾ? 500 ಕಿ.ಮೀಟರ್‌‍ಗಳು. ಅವರು ನಿತ್ಯ ಸರಕು ಸಾಗಿಸಲು 500 ಕಿ.ಮೀವರೆಗೂ ಟ್ರಕ್ ಓಡಿಸುತ್ತಾ ಗಂಡಸರಿಗಿಂತಲೂ ತಾನೆಷ್ಟೋ ಪಟ್ಟು ಹೆಚ್ಚು ಎಂದು ನಿರೂಪಿಸುತ್ತಿದ್ದಾರೆ. ಆಕೆಯ ಸೇವೆಯನ್ನು ಗುರುತಿಸಿ 2013ರಲ್ಲಿ ಮಹಿಂದ್ರಾ ಟ್ರಾನ್ಸ್‌ಪೋರ್ಟ್ ಎಕ್ಸಲೆನ್ಸ್ ಅವಾರ್ಡ್ ಪ್ರಶಸ್ತಿ ಲಭಿಸಿತು. ಅಷ್ಟೇ ಅಲ್ಲದೆ ಉನ್ನತ ಶಿಕ್ಷಣ ಪಡೆದ ಓವರ್ ಕ್ವಾಲಿಫೈಡ್ ಮಹಿಳಾ ಡ್ರೈವರ್ ಆಗಿಯೂ ಆಕೆ ಹೆಸರು ಗಳಿಸಿದ್ದಾರೆ. ಪುರುಷರ ಪ್ರಾಬಲ್ಯದ ಟ್ರಕ್ ಡ್ರೈವಿಂಗ್ ಕ್ಷೇತ್ರದಲ್ಲಿ ಅವರಿಗಿಂತಲೂ ಹೆಚ್ಚಾಗಿ ಪ್ರತಿಭೆ ತೋರುತ್ತಿರುವ ಯೋಗಿತಾರ ಧೈರ್ಯರನ್ನು ಮೆಚ್ಚಬೇಕಾದದ್ದೆ. ಮನಸ್ಸಿದ್ದರೆ ಮಾರ್ಗ ಅಲ್ಲವೇ?

No comments