Header Ads

test

ನಿಮ್ಮ "ಕೈ ಬೆರಳುಗಳು" ಈ ರೀತಿ ಇವೆಯೇ.? ಹಾಗಿದ್ದರೆ ನಿಮಗೆ ಯಾವಾಗಲೂ ಮನಶಾಂತಿ ಇರಲ್ಲವಂತೆ.!

ಬೇರೆಯವರು ನಡೆದುಕೊಳ್ಳುವ ರೀತಿ, ಅವರ ಅಭ್ಯಾಸ, ಮುಖಚರ್ಯೆ ಇನ್ನಿತರೆ ಅನೇಕ ಅಂಶಗಳನ್ನು ಪರಿಶೀಲಿಸಿ ಅವರ ವ್ಯಕ್ತಿತ್ವವವನ್ನು ಯಾರೇ ಆಗಲಿ ಹಾಗೆಯೇ ತಿಳಿದುಕೊಳ್ಳಬಹುದು. ಅದು ದೊಡ್ಡ ಕಷ್ಟವೇನು ಅಲ್ಲ. ಆದರೆ ಬೇರೆ ವಕ್ತಿಯ ಕೈ ಬೆರಳಿನ ಉದ್ದದ ಪ್ರಕಾರ ಸಹ ಅವರ ವ್ಯಕ್ತಿತ್ವ ಹೇಳಬಹುದು ಎಂದರೆ ನೀವು ನಂಬುತ್ತೀರಾ? ನಂಬಲ್ಲ ಅಲ್ಲವೇ. ಆದರೆ ಇದು ನಿಜ. ಫ್ರೀನಾಲಜಿ ಎಂಬ ವಿದ್ಯೆ ಮೂಲಕ ಕೇವಲ ಬೇರೆ ವ್ಯಕ್ತಿಗಳ ಕೈ ಬೆರಳಿನ ಉದ್ದವನ್ನು ನೋಡಿ ಅವರು ಎಂತಹವರು ಎಂದು ಸರಳವಾಗಿ ಹೇಳಿಬಿಡಬಹುದು. ಅವರ ಮನಸ್ಥಿತಿ ಸಹ ತಿಳಿಯುತ್ತದೆ. ಹಾಗಿದ್ದರೆ ಈಗ ಆ ವಿದ್ಯೆಯನ್ನು ಕಲಿಯಬೇಕೆ? ಎಂದರೆ. ಬೇಕಾಗಿಲ್ಲ. ಅದರಲ್ಲಿರುವ ಮೂರು ಮುಖ್ಯವಾದ ಪಾಯಿಂಟ್‌ಗಳನ್ನು ತಿಳಿದರೆ ಸಾಕು, ಬೇರೆಯವರ ಕೈ ಬೆರಳಿನ ಉದ್ದದ ಪ್ರಕಾರ ವ್ಯಕ್ತಿತ್ವ, ಮನಸ್ಥಿತಿಯನ್ನು ಹಾಗೆಯೇ ಹೇಳಬಹುದು. ಹಾಗಿದ್ದರೆ ಆ ಮೂರು ಪಾಯಿಂಟ್‍ಗಳು ಏನು ಎಂದು ತಿಳಿದುಕೊಳ್ಳೋಣವೇ.


1. ನಿಮ್ಮ ಎರಡೂ ಕೈಗಳನ್ನು ಒಮ್ಮೆ ಪರಿಶೀಲಿಸಿ ನೋಡಿಕೊಳ್ಳಿ. ನಿಮ್ಮ ಕೈ ಬೆರಳನ್ನು ನೋಡಿ. ಉಂಗುರ ಬೆರಳು, ತೋರು ಬೆರಳನ್ನು ಒಮ್ಮೆ ನೋಡಿಕೊಳ್ಳಿ. ನಿಮ್ಮ ಕೈಯ ಉಂಗುರ ಬೆರಳು ತೋರು ಬೆರಳಿಗಿಂತ ಉದ್ದವಾಗಿದ್ದರೆ ನೀವು ನೋಡಲು ತುಂಬಾ ಆಕರ್ಷಕವಾಗಿ ಇರುತ್ತೀರ. ಯಾವುದೇ ಪರಿಸ್ಥಿತಿಯಲ್ಲಾದರೂ ಅಂತರ್ಮುಖಿಯಾಗಿ ವ್ಯವಹರಿಸುತ್ತೀರ. ಅಂದರೆ ನಿಮ್ಮಲ್ಲಿ ನೀವೇ ಮಾತನಾಡಿಕೊಳ್ಳುವುದು, ನಿಮ್ಮ ಅಂತರಾತ್ಮದ ಜತೆಗೆ ಚರ್ಚೆ ಮಾಡುವಂತಹವು ಮಾಡುತ್ತಿರುತ್ತಾರೆ. ನೀವು ದುಡುಕಿನ ಸ್ವಭಾವ ಉಳ್ಳವರಾಗಿರುತ್ತೀರ. ಅನೇಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುತ್ತೀರಿ. ನೀವು ಸೈಂಟಿಸ್ಟ್, ಇಂಜಿನಿಯರ್, ಸೋಲ್ಜರ್, ಕ್ರಾಸ್‌ವರ್ಡ್, ಚೆಸ್ ಮಾಸ್ಟರ್ ಆಗಿ ಮುಂದೆ ಬರುವ ಅವಕಾಶಗಳು ಹೆಚ್ಚಾಗಿ ಇವೆ. ಹಾಗಿದ್ದರೆ ಆ ಮೂರು ಪಾಯಿಂಟ್‍ಗಳು ಏನು ಎಂದು ತಿಳಿದುಕೊಳ್ಳೋಣವೇ.

2. ಒಂದು ವೇಳೆ ಉಂಗುರ ಬೆರಳು ತೋರು ಬೆರಳಿಗಿಂತ ಚಿಕ್ಕದಾಗಿದ್ದರೆ ನೀವು ಆತ್ಮವಿಶ್ವಾಸವುಳ್ಳವರಾಗಿದ್ದು ಅಂದುಕೊಂಡಿದ್ದನ್ನು ಸಾಧಿಸುವ ವ್ಯಕ್ತಿಯಾಗಿರುತ್ತೀರ. ಯಾವುದಾದರೂ ಕೆಲಸ ಮಾಡುವಾಗ ಒಂಟಿಯಾಗಿ ಆ ಕೆಲಸ ಮಾಡಲು ಪ್ರಾಧಾನ್ಯತೆ ನೀಡುತ್ತೀರ. ಹಾಗೆಂದು ನೀವು ಎಲ್ಲರಿಗೂ ದೂರ ಇರಲ್ಲ. ಕೆಲಸದ ಮೇಲೆ ಅಷ್ಟೆಲ್ಲಾ ಶ್ರದ್ಧೆ, ಹಿಡಿತ ಇರುತ್ತದೆ. ಗುರಿಸಾಧನೆಗಾಗಿ ನಿಮ್ಮ ಪ್ರಯಾಣ ಸಾಗುತ್ತಿರುತ್ತದೆ. ಇತರರು ನಿಮ್ಮ ದಿಕ್ಕಿನಲ್ಲಿ ಅಡ್ಡಬಂದರೆ ಸಹಿಸಲ್ಲ. ಇರುವುದರಲ್ಲಿ ಸಂತೃಪ್ತಿ ಪಡಲ್ಲ. ಅಂದುಕೊಂಡಿದ್ದನ್ನು ಸಾಧಿಸುವ ಲಕ್ಷಣಗಳು ನಿಮಗಿರುತ್ತವೆ.

3. ಉಂಗುರ ಬೆರಳು, ತೋರು ಬೆರಳು ಸಮಾನವಾಗಿ ಇದ್ದರೆ ನೀವು ಹೆಚ್ಚಾಗಿ ಮನಶಾಂತಿಗಾಗಿ ಒದ್ದಾಡುತ್ತಾ ಇರುತ್ತೀರ. ಹೆಚ್ಚಾಗಿ ಕೇಂದ್ರೀಕೃತ ಆಲೋಚನೆಗಳನ್ನು ಮಾಡುತ್ತಿರುತ್ತೀರ. ಹೆಚ್ಚಾಗಿ ತಮ್ಮ ಬಾಳಸಂಗಾತಿ ಬಗ್ಗೆ ಪ್ರೀತಿಯಿಂದ ಇರುತ್ತೀರ. ಆದರೆ ನಿಮಗೆ ವಿರುದ್ಧವಾಗಿ ಯಾರಾದರೂ ನಡೆದುಕೊಂಡರೆ, ನಿಮ್ಮಲ್ಲಿ ಎರಡನೇ ಮುಖ ಸಹ ಕಾಣಿಸುತ್ತದೆ. ಆ ಕೋನ ಅತ್ಯಂತ ಅಪಾಯಕಾರಿಯಾಗಿರುತ್ತದೆ. ಆದಕಾರಣ ಯಾರೂ ಸಹ ನಿಮ್ಮ ವಿರುದ್ಧ ಆಲೋಚಿಸದಂತೆ ಅವರ ಕಡೆಯೇ ಇರುವಂತೆ ನೋಡಿಕೊಳ್ಳಬೇಕು.

No comments