Header Ads

test

ಲ್ಯಾಪ್‌ಟಾಪ್ ಚಾರ್ಜರ್‌‍ನಲ್ಲಿರುವ ಈ ಸಿಲಿಂಡರ್‌ನಂತಹ ವಸ್ತು ಗಮನಿಸಿದ್ದೀರಾ? ಇದು ಯಾಕಿರುತ್ತದೆ ಗೊತ್ತಾ?

ಇಂದು ತಂತ್ರಜ್ಞಾನ ಸಾಕಷ್ಟು ವೇಗವಾಗಿ ಬೆಳೆಯುತ್ತಿದೆ. ಕೆಲವನ್ನು ನೋಡುತ್ತಿರುತ್ತೇವೆ ಆದರೆ ಅಷ್ಟಾಗಿ ತಲೆಕೆಡಿಸಿಕೊಳ್ಳಲ್ಲ. ಉದಾಹರಣೆಗೆ ಹೇಳಬೇಕೆಂದರೆ ಪೆನ್‌ಡ್ರೈವ್‌ಗಳು, ಹಾರ್ಡ್‍ ಡಿಸ್ಕ್‌ಗಳ ಸ್ಟೋರೇಜ್ ಸರಿಯಾಗಿದೆಯಾ ಎಂಬುದನ್ನೂ ಯಾವತ್ತೂ ಗಮನಿಸಕ್ಕೆ ಹೋಗಲ್ಲ. ಫೇಸ್‌ಬುಕ್‍ನಲ್ಲಿ ಏನಾದರೂ ಹೊಸ ಫೀಚರ್ ಬಂದರೆ ತಲೆಕೆಡಿಸಿಕೊಳ್ಳುತ್ತೇವೆಯೇ ಹೊರತು ತಂತ್ರಜ್ಞಾನದ ಬಗ್ಗೆ ಅಷ್ಟಾಗಿ ಗಮನಹರಿಸಲ್ಲ.ಅದೇ ರೀತಿ ಲ್ಯಾಪ್‌ಟಾಪ್ ಚಾರ್ಜರ್‌ಗಳಲ್ಲಿ ಇರುವ ಈ ಸಿಲಿಂಡರ್ ನಂತಹ ವಸ್ತುವನ್ನು ಗಮನಿಸಿಯೇ ಇರುತ್ತೀರ. ಯಾಕೆ ಇದನ್ನು ಇಟ್ಟಿರುತ್ತಾರೆ ಗೊತ್ತಾ? ಈಗ ಅದರ ಬಗ್ಗೆಯೇ ತಿಳಿದುಕೊಳ್ಳೋಣ ಬನ್ನಿ.


ಚಾರ್ಜರ್‌ನಲ್ಲಿರುವ ಈ ಪುಟ್ಟ ಸಿಲಿಂಡರನ್ನು Ferrite Bead ಎಂದು ಕರೆಯುತ್ತಾರೆ. ಇದು ಎಲೆಕ್ಟ್ರೋ ಮ್ಯಾಗ್ನೆಟಿಕ್ ಧ್ವನಿಯನ್ನು ಬೇರ್ಪಡಿಸುತ್ತದೆ. ಎಸಿ-ಡಿಸಿ ಕನ್ವರ್ಟರ್‌ನಿಂದ ಆಗುವ ಸದ್ದನ್ನು ಇದು ತಡೆಯುತ್ತದೆ. ಇದು ಎಲೆಕ್ಟ್ರಾನಿಕ್ ಚೋಕ್ ಇದ್ದಂತೆ. ಇದರಲ್ಲಿನ ಫೆರೈಟ್ ಸೆರಾಮಿಕ್ ಅತಿ ಹೆಚ್ಚು ವಿದ್ಯುತ್ ಆವರ್ತನವನ್ನು ಚದುರಿಸಿ ಅತಿಹೆಚ್ಚು ವಿದ್ಯುತ್ ಪ್ರವಹಿಸುವುದನ್ನು ತಡೆಯುತ್ತದೆ. ಇದನ್ನು ಕೋರ್, ಬ್ಲಾಕ್ ಅಥವಾ ಇಎಂಐ ರಿಂಗ್ ಎಂತಲೂ ಕರೆಯುತ್ತಾರೆ. ಈಗ ಗೊತ್ತಾಯಿತಲ್ಲವೇ. ಇದನ್ನು ಯಾಕಿಟ್ಟಿರುತ್ತಾರೆ ಅಂತ.

ಎಫ್1, ಎಫ್2. ಇವು ಕೀಬೊರ್ಡ್ ಮೇಲೆ ನೋಡಿರುತ್ತೇವೆ. ಮತ್ತೇ ಇವುಗಳ ಉಪಯೋಗ ಏನು ಗೊತ್ತಾ?? ಸಾಧಾರಣವಾಗಿ ಕಂಪ್ಯೂಟರ್ ಅಥವಾ ಲ್ಯಾಪ್ ಟಾಪ್ ಯಾವುದಾದರು ಸಂದರ್ಭದಲ್ಲಿ ಒಂದು ಸಾರಿಯಾದರು ಬಳಸಿರುತ್ತೇವೆ. ಕೀ ಬೊರ್ಡ್ ನ ಮೇಲೆ ಲೈನಾಗಿ ಎಫ್1, ಎಫ್2. ಹಾಗೆ ಎಫ್12 ವರೆಗೂ ಇರುತ್ತದೆ. ಇವುಗಳನ್ನು ಫಂಕ್ಷನ್ ಕೀಸ್ ಎಂದು ಹೇಳುತ್ತಾರೆ. ಇವುಗಳನ್ನು ನಾವು ಹೆಚ್ಚಾಗಿ ಬಳಸುವುದಿಲ್ಲ. ಆದರೆ ಅವುಗಳನ್ನು ಬಳಸುವುದನ್ನು ತಿಳಿದರೆ ಎಷ್ಟೋ ಸಮಯ ಉಳಿತಾಯವಾಗುತ್ತದೆ. ಮತ್ತು ಅದರಿಂದಾಗುವ ಉಪಯೋಗ ಏನು ಎಂದು ತಿಳಿಯೋಣ.

  • ಎಫ್1 – ಈ ಬಟನ್ ಅನ್ನು ಒತ್ತಿದರೆ ಯಾವುದೇ ಪ್ರೊಗ್ರಾಮ್ಗಾದರು ಹೆಲ್ಪ್ ಸ್ಕ್ರೀನ್ ಓಪೆನ್ ಆಗುತ್ತದೆ.

  • ಎಫ್2 – ಫೈಲ್ ಅಥವಾ ಫೋಲ್ಡರ್ ಹೆಸರನ್ನು ಬದಲಿಸಲು ಇದನ್ನು ಉಪಯೋಗಿಸಬಹುದು‌.

  • ಎಫ್ 3 – ಪ್ರಸ್ತುತ ಓಪೆನ್ ಇರುವ ಅಪ್ಲಿಕೇಷನ್ ನಲ್ಲಿ ಸರ್ಚ್ ಬಾಕ್ಸ್ ಓಪೆನ್ ಆಗುತ್ತದೆ.

  • ಎಫ್ 4 – ಆಲ್ಟ್ + 4 ಅನ್ನು ಒತ್ತಿದರೆ ಓಪೆನ್ ಮಾಡಿದ ವಿಂಡೋಸ್ ಎಲ್ಲಾ ಕ್ಲೋಜ಼್ ಆಗುತ್ತದೆ.

  • ಎಫ್ 5 – ಈ ಬಟನ್ ಒತ್ತಿದರೆ ಪ್ರಸ್ತುತ ಒಪೆನ್ ಆಗಿರುವ ಪೇಜ್ ಅಥವಾ ಡಾಕ್ಯುಮೆಂಟ್ ರಿಫ್ರೆಷ್ ಇಲ್ಲವೇ ರೀಲೋಡ್ ಆಗುತ್ತದೆ.

  • ಎಫ್ 6 – ಇಂಟರ್ನೆಟ್ ಬ್ರೌಸರ್ ನಲ್ಲಿನ ಅಡ್ರಸ್ ಬಾರ್ ಗೆ ಹೋಗುತ್ತದೆ.

  • ಎಫ್ 7 – ಮೈಕ್ರೊಸಾಫ್ಟ್ ಅಪ್ಲಿಕೇಷನ್ ನಲ್ಲಿ ಸ್ಪೆಲ್ಲಿಂಗ್ ಚೆಕ್ ಮಾಡಲು ಬಳಸಬಹುದು.

  • ಎಫ್ 8 – ಕಂಪ್ಯೂಟರ್ ಆನ್ ಮಾಡುವಾಗ ಬೂಟ್ ಮಾಡಬೇಕೆಂದರೆ ಈ ಬಟನ್ ಅನ್ನು ಒತ್ತಬೇಕು.

  • ಎಫ 9 – ಮೈಕ್ರೋಸಾಪ್ಟ್ ಅವುಟ್ ಲುಕ್ ನಿಂದ ಮೇಲ್ ಕಳುಹಿಸಲು ಉಪಯೋಗವಾಗುತ್ತದೆ.

  • ಎಫ್ 10 – ಓಪೆನ್ ಮಾಡಿರುವ ಅಪ್ಲಿಕೇಷನ್ ನಲ್ಲಿ ಮೆನ್ಯು ಬಾರ್ ಒಪೆನ್ ಆಗುತ್ತದೆ.

  • ಎಫ್ 11 – ಫುಲ್ ಸ್ಕ್ರೀನ್ ಬೇಕಾದರೆ ಈ ಬಟನ್ ಅನ್ನು ಒತ್ತಬೇಕು.

  • ಎಫ್ 12 – ಮೈಕ್ರೋಸಾಫ್ಟ್ ವರ್ಡ್ ನಲ್ಲಿ ‘ ಸೇವ್ ಯಸ್ ಡೈಲಾಗ್ ಬಾಕ್ಸ್’ ಓಪೆನ್ ಆಗುತ್ತದೆ.

No comments