Header Ads

test

ಒಳ್ಳೆಯವರಿಗೆ ಕೆಟ್ಟದ್ದು ಬಯಸಿದರೂ, ಅವರಿಗೆ ಒಳ್ಳೆಯದೇ ಆಗುತ್ತದೆ. ಬೇಕಾದರೆ ಈ ಕಥೆ ಓದಿ.!

ಒಬ್ಬ ರಾಜನಿಗೆ ಮೂರು ಕಣ್ಣಿರುವ ಮಗಳು ಜನಿಸಿದಳು. ಹೀಗೆ ಮೂರು ಕಣ್ಣಿರುವ ಮಗಳ ಮುಖ ನೋಡಿದರೆ ರಾಜನಿಗೆ ಪ್ರಾಣಗಂಡ ಇದೆಯೆಂದು ಆಸ್ಥಾನದ ಜ್ಯೋತಿಷಿಗಳು ಹೇಳುತ್ತಾರೆ. ಮಗಳಿಗೆ ಮದುವೆ ವಯಸ್ಸು ಬಂದ ತಕ್ಷಣ ಯಾರಿಗಾದರೂ ಕೊಟ್ಟು ಮದುವೆ ಮಾಡಿ ಅವರನ್ನು ದೇಶದಿಂದ ಕಳುಹಿಸುವವರೆಗೂ.

ಈ ಗಂಡಾಂತರ ಹೋಗುವುದಿಲ್ಲ ಎಂದು ಜ್ಯೋತಿಷ್ಯರು ಹೇಳುತ್ತಾರೆ. ವಯಸ್ಸಿಗೆ ಬಂದ ತನ್ನ ಮಗಳ ಮದುವೆಗಾಗಿ. ಯಾರಾದರೂ ತನ್ನ ಮಗಳನ್ನು ಮದುವೆಯಾದರೆ ಲಕ್ಷ ಬಂಗಾರದ ನಾಣ್ಯಗಳನ್ನು ವರದಕ್ಷಿಣೆಯಾಗಿ ಕೊಡುತ್ತೇನೆ, ಮದುವೆ ಮಾಡಿಕೊಂಡವರು ತಮ್ಮ ರಾಜ್ಯವನ್ನು ಬಿಟ್ಟು ಹೋಗಬೇಕೆಂದು ಪ್ರಕಟಣೆ ಹೊರಡಿಸಿದ ರಾಜ. ಈ ಸುದ್ದಿ ದೇಶಾದ್ಯಂತ ಹರಡಿತು, ಆದರೆ ಮೂರು ಕಣ್ಣಿರುವ ಹುಡುಗಿಯನ್ನು ಮದುವೆಯಾಗಲು ಯಾರೂ ಮುಂದೆ ಬರಲಿಲ್ಲ. ಕೊನೆಗೆ ಈ ಸುದ್ದಿ ಒಬ್ಬ ಕುರುಡನ ಕಿವಿಗೆ ಬಿತ್ತು. ಆತ ಕುಂಟನಾದ ತನ್ನ ತಮ್ಮನ ಜೊತೆ ರಾಜನ ಬಳಿ ಬಂದು, ನಿಮ್ಮ ಮಗಳನ್ನು ನಾನು ಮದುವೆ ಮಾಡಿಕೊಳ್ಳುತ್ತೇನೆ ಎಂದು ಹೇಳಿ.. ರಾಜಕುಮಾರಿಯನ್ನು ವಿವಾಹವಾದ. ಕೊಟ್ಟ ಮಾತಿನಂತೆ ಲಕ್ಷ ಬಂಗಾರದ ನಾಣ್ಯಗಳನ್ನು ವರದಕ್ಷಿಣೆಯಾಗಿ ಕೊಟ್ಟು, ತನ್ನ ಮಗಳನ್ನು, ಕುರುಡನನ್ನು, ಕುಂಟನನ್ನು ಒಂದು ಹುಡುಗಿನಲ್ಲಿ ದೇಶಾಂತರ ಕಳಿಸುತ್ತಾನೆ ರಾಜ.


ಕೆಲ ದಿನಗಳ ಕಾಲ ಗಂಡನ ಜೊತೆ ಸಂಸಾರ ಮಾಡಿದ ರಾಜಕುಮಾರಿಯ ಮನಸ್ಸು ಗಂಡನ ತಮ್ಮ ಕುಂಟನಾದ ಮೈದುನನ ಮೇಲೆ ಬೀಳುತ್ತದೆ. ಆತನನ್ನು ಮೋಹಿಸಿ ಆತನ ಜೊತೆಗೆ ಅಕ್ರಮ ಸಂಬಂಧ ಇಟ್ಟುಕೊಳ್ಳುತ್ತಾಳೆ.. ಇದೇ ಸಮಯದಲ್ಲಿ ತಮ್ಮಿಬ್ಬರ ನಡುವಿನ ಗಂಡನನ್ನು ತೊಲಗಿಸಿ ಇಬ್ಬರು ಒಟ್ಟಿಗಿರೋಣ ಎಂದು ಮೈದುನ ಜೊತೆ ಸೇರಿ ಒಂದು ಉಪಾಯ ಮಾಡುತ್ತಾಳೆ. ಒಂದು ದಿನ ಮೈದುನ ಹಾವನ್ನು ಕೊಂದು ತಂದು, ಮೀನಿನ ಸಾಂಬಾರು ಎಂದು ಮಾಡಿ ಅಣ್ಣನಿಗೆ ಬಡಿಸು, ಇದನ್ನು ತಿಂದ ಅಣ್ಣ ಸಾವನ್ನಪ್ಪುತ್ತಾನೆ. ಆಗ ನಾವಿಬ್ಬರು ಜೊತೆಗೆ ಇರಬಹುದೆಂದು ಹೇಳುತ್ತಾನೆ.

ಆಗ ಕುರುಡನಾದ ಗಂಡನ ಬಳಿ ಬಂದು ರೀ ಇವತ್ತು ನಿಮಗೆ ಇಷ್ಟವಾದ ಮೀನಿನ ಸಾಂಬಾರು ಮಾಡುತ್ತಿದ್ದೇನೆ. ಸ್ವಲ್ಪ ಒಲೆಯ ಬಳಿ ಹೋಗಿ ಇದನ್ನು ಕಲಿಸುತ್ತೀರಿ.ಅಷ್ಟೊತ್ತಿಗೆ ನಾನು ಮನೆಕೆಲಸ ಮುಗಿಸುತ್ತೇನೆ ಎಂದು ಹೇಳಿ ಎಂದು ಒಲೆಯ ಮೇಲಿನ ಪಾತ್ರಯಲ್ಲಿರುವ ಮೂಳೆಗಳನ್ನು ಕಲಿಸುತ್ತಿದ್ದಾನೆ ಕುರುಡ. ಕುದಿಯುತ್ತಿರಬೇಕಾದರೆ ವಿಷಯ ಆವಿಯಾಗಿ ಬರುತ್ತಿದೆ. ಅದು ಕುಡುಕನ ಕಣ್ಣಿಗೆ ತಗುಲಿ ಕಣ್ಣು ಬರುತ್ತವೆ. ಒಲೆಯ ಮೇಲಿರುವ ಹಾವಿನ ಮೂಳೆಗಳನ್ನು ಆತನಿಗೆ. ಹೆಂಡತಿ ಮತ್ತು ಆತನ ತಮ್ಮ ಸೇರಿ ತನ್ನನ್ನು ಕೊಲ್ಲಬೇಕೆಂದು ಕೊಂಡಿರಬೇಕು ಎಂದು ಅನುಮಾನ ಬರುತ್ತದೆ.. ಹಾಗಾಗಿ ಕುರುಡನಂತೆ ನಟಿಸುತ್ತಾನೆ. ಅಷ್ಟೋತ್ತಿಗೆ ತಮ್ಮ ಬಂದು ತನ್ನ ಹೆಂಡತಿಯ ಮೇಲೆ ಕೈ ಹಾಕಿ ಸರಸವಾಗುತ್ತಾನೆ. ಇದನ್ನು ನೋಡಿದ ಆತ. ಅವರನ್ನು ಬಿಟ್ಟು ತನ್ನ ಸ್ವಂತ ರಾಜ್ಯಕ್ಕೆ ಹೋಗಿ ಅಲ್ಲಿನ ರಾಜನಿಗೆ ನಡೆದ ಸಂಗತಿಯನ್ನು ಹೇಳುತ್ತಾನೆ. ತನ್ನ ಗಂಡಾಂತರವನ್ನು ದೂರ ಮಾಡಿದ ಆ ವ್ಯಕ್ತಿಗೆ ಸುಂದರವಾದ ತನ್ನ ಎರಡನೆಯ ಮಗಳನ್ನು ಕೊಟ್ಟು ಮದುವೆ ಮಾಡಿಕೊಡುತ್ತೇನೆ ಆ ರಾಜ.

No comments