Header Ads

test

ನೀವು ಪ್ಯಾಕೆಟ್ ಹಾಲು ಕುಡಿಯುತ್ತಿದ್ದೀರಾ? ಅದರಿಂದಾಗುವ ನಷ್ಟಗಳ ಬಗ್ಗೆ ನಿಮಗೆ ಗೊತ್ತಾ.?

ಹಾಲು ಪೌಷ್ಟಿಕ ಆಹಾರ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಸಣ್ಣ ಮಕ್ಕಳಿಂದ ದಿಡಿದು ವೃದ್ಧರವರೆಗೆ ಎಲ್ಲರೂ ಹಾಲನ್ನು ಉಪಯೋಗಿಸುತ್ತಾರೆ. ಆದರೆ, ಇಂದಿನ ದಿನಗಳಲ್ಲಿ ನಾವು ಕುಡಿಯುತ್ತಿರುವ ಹಾಲು, ಹಾಲಿನ ಉತ್ಪನ್ನಗಳಲ್ಲಿ ಶೇ.70 ಸಂಸ್ಕರಿಸಿದ ಹಾಲುತ್ಪನ್ನಗಳೇ. ಟೀ ಸ್ಟಾಲ್, ಹೋಟೆಲ್ ಗಳಲ್ಲಿ ಉಪಯೋಗಿಸುವ ಹಾಲು ಸಂಸ್ಕರಿಸಿದ ಹಾಲೇ ಆಗಿರುತ್ತದೆ. ಇಷ್ಟಕ್ಕೂ ಹಾಲನ್ನು ಹೇಗೆ ಸಂಸ್ಕರಿಸುತ್ತಾರೆ, ನಾವು ಪ್ರತಿ ದಿನವೂ ಉಪಯೋಗಿಸುವ ಪ್ಯಾಕೆಟ್ ಹಾಲನ್ನು ತಯಾರಿಸುವ ಹಾಲಿನ ಪುಡಿ ಹೇಗೆ ತಯಾರಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳಿ.ಹಾಲಿನ ಸಂಸ್ಕರಣೆಯಲ್ಲಿ ಪ್ರಪ್ರಥಮವಾಗಿ ' ಸೆಂಟ್ರಿ ಫ್ಯೂಜ್ ' ಪದ್ಧತಿಯಲ್ಲಿ ಹಾಲಿನಲ್ಲಿರುವ ವ ಪ್ರೊಟೀನ್,ಕೊಬ್ಬು ಹಾಗೂ ನೀರನ್ನು ಬೇರ್ಪಡಿಸುತ್ತಾರೆ. ಕೊಬ್ಬನ್ನು ಐಸ್ ಕ್ರೀಂ ಕಂಪೆನಿಗಳಿಗೆ ಮಾರುತ್ತಾರೆ. ಮಿಕ್ಕುಳಿದಕ್ಕೆ ಹಾಲಿನ ಪುಡಿಯನ್ನು ಬೆರೆಸಿ ಅದನ್ನು ' ಪಾಶ್ಚರೀಕರಣ 'ಮಾಡುತ್ತಾರೆ. ಅಂದರೆ, ಹಾಲಿನ ಉಷ್ಣತೆಯನ್ನು ಒಮ್ಮೆಲೇ ಹೆಚ್ಚಿಸಿ, ನಂತರ ತಣಿಸಿ ಹಾಲಿನಲ್ಲಿರುವ ಸೂಕ್ಷ್ಮ ಜೀವಿಗಳನ್ನು ನಾಶಮಾಡುವ ಪ್ರಕ್ರಿಯೆ.ಇನ್ನು ಪ್ಯಾಕೆಟ್ ಹಾಲಿನ ತಯಾರಿಗೆ ಮೂಲವಾದ ಹಾಲಿನ ಪುಡಿಯನ್ನು ತಯಾರಿಸಲು.ಹಾಲನ್ನು ಅಧಿಕ ಒತ್ತಡದಿಂದ ಸೂಕ್ಷ್ಮ ರಂದ್ರಗಳ ಮೂಲಕ ಸ್ಪ್ರೇ ಮಾಡಿದಾಗ ಹಾಲಿನ ಪುಡಿ ತಯಾರಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಹಾಲಿನಲ್ಲಿರುವ ಕೊಬ್ಬು ಗಾಳಿಯಲ್ಲಿರುವ ನೈಟ್ರೇಟ್ ಗಳೊಂದಿಗೆ ಬೆರೆತು 'ಆಕ್ಸಿಡೈಸ್' ಆಗುತ್ತದೆ. ಕೊಲೆಸ್ಟ್ರಾಲ್ ನಮ್ಮ ಶರೀರಕ್ಕೆ ಒಳ್ಳೆಯದೇ, ಆದರೆ ಆಕ್ಸಿಡೈಸ್ಡ್ ಕೊಲೆಸ್ಟ್ರಾಲ್ ರಕ್ತನಾಳಗಳನ್ನು ಶೀಘ್ರವಾಗಿ ಮುಚ್ಚಿಬಿಡುತ್ತದೆ. ಇದು ಹೃದಯ ರೋಗಕ್ಕೆ ಹಾಗೂ ರಕ್ತ ನಾಳಗಳ ಖಾಯಿಲೆಗೆ ಹೇತುವಾಗುತ್ತದೆ ಎಂದು ಇತ್ತೀಚೆಗೆ ನಡೆಸಿದ ಸಂಶೋಧನೆಗಳಿಂದ ತಿಳಿದು ಬಂದಿದೆ.ಕಡಿಮೆ ಕೊಬ್ಬಿನಂಶವಿರುವ ಹಾಲು ಹೃದಯಕ್ಕೆ ಒಳ್ಳೆಯದೆಂದು ನಾವು ಪ್ಯಾಕೆಟ್ ಹಾಲನ್ನು ಉಪಯೋಗಿಸುತ್ತೇವೆ. ನಿಜ ಹೇಳಬೇಕೆಂದರೆ, ಅದರಿಂದಲೇ ಹೃದ್ರೋಗಗಳು ಹೆಚ್ಚಾಗುತ್ತಿವೆಯೆಂದು ಸಂಶೋಧಕರು ಎಚ್ಚರಿಸುತ್ತಿದ್ದಾರೆ. ಪ್ಯಾಕೆಟ್ ಹಾಲು ಹೆಚ್ಚುದಿನ ಕೆಡದಂತೆ ಇರಲು ಉಪಯೋಗಿಸುವ ಕೆಲವು ರಾಸಾಯನಿಕಗಳು ನಮ್ಮ ಶರೀರಕ್ಕೆ ಅತ್ಯಂತ ಹೆಚ್ಚು ಹಾನಿಮಾಡುತ್ತವೆ.

ವಿಷಕಾರಿ ಕೃತಕ ಹಾಲು : ಇತ್ತೀಚಿನ ದಿನಗಳಲ್ಲಿ ಉಂಟಾದ ಬರಗಾಲದಿಂದಾಗಿ ಹೈನು ಸಂತತಿ ಕ್ಷೀಣಿಸಿದೆ. ಇದರಿಂದಾಗಿ ಹಾಲಿನ ಬೇಡಿಕೆಯನ್ನು ಪೂರೈಸಲು ಕೆಲವರು ಕೃತಕ ಹಾಲನ್ನು ತಯಾರಿಸಿ ವಿತರಿಸುತ್ತಿದ್ದಾರೆ. ಇಂತಹ ಹಾಲನ್ನು ಉಪಯೋಗಿಸುವುದರಿಂದ ನಮ್ಮ ದೇಹದ ಎಲ್ಲಾ ಅವಯವಗಳ ಮೇಲೂ ದುಷ್ಪರಿಣಾಮ ಬೀರುತ್ತದೆ. ಯೂರಿಯಾ ಹಾಗೂ ಇತರೆ ರಾಸಾಯನಿಕಗಳನ್ನು ಉಪಯೋಗಿಸಿ ತಯಾರಿಸಲಾಗುವ ಇಂತಹ ಕೃತಕ ಹಾಲನ್ನು ಕುಡಿದ ಮಕ್ಕಳಿಗೆ ವಾಂತಿ, ಬೇಧಿ ಉಂಟಾಗಿ ಅಸ್ವಸ್ಥತೆಗೆ ಗುರಿಯಾಗುತ್ತಾರೆ. ಜೀರ್ಣಕೋಶದ ವ್ಯಾಧಿಗಳು, ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಿದೆ.ನಾವು ಪ್ರತಿನಿತ್ಯ ಉಪಯೋಗಿಸುವ ಹಾಲಿಗೆ ಮಿಶ್ರಮಾಡುವ ಕೆಮಿಕಲ್ಸ್ ಗಳು: ಕಾರ್ಬೊನೇಟ್, ಬೈಕಾರ್ಬೊನೇಟ್, ಸ್ಟಾರ್ಚ್, ಯೂರಿಯಾ, ಹೈಡ್ರೇಟೆಡ್ ಲೈಮ್, ಫರ್ಮಾಲೀನ್ ಮತ್ತು ಅಮೋನಿಯಮ್ ಸಲ್ಫೇಟ್ ಎಂದು ತಜ್ಞರು ಹೇಳುತ್ತಾರೆ.ಪ್ಯಾಕೆಟ್ ಹಾಲು ಕುಡಿಯುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ತಿಳಿದುಕೊಂಡಿರಲ್ಲಾ ? ಆದುದರಿಂದ ಟೀ, ಕಾಫೀ ಕುಡಿಯುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ.

No comments