Header Ads

test

ಈ ಸಲಹೆಗಳನ್ನು ಪಾಲಿಸಿದರೆ ಆರ್ಥಿಕ ಸಮಸ್ಯೆಗಳು ಬರಲ್ಲ.ಹಣ ಸಹ ಹರಿದುಬರುತ್ತದಂತೆ ಗೊತ್ತಾ.?

ಒಳ್ಳೆಯ ಮನೆ, ವಿಲಾಸೀಜೀವನ, ಅದಕ್ಕೆ ತಕ್ಕಂತೆ ಹಣ.ಇವೆಲ್ಲಾ ಇದ್ದರೆ ಇನ್ನು ಅದಕ್ಕಿಂತಲೂ ಸಂತೋಷಕರವಾದ ಜೀವನ ಏನಿರುತ್ತದೆ ಹೇಳಿ. ಎಲ್ಲವೂ ಅಂದುಕೊಂಡ ರೀತಿಯಲ್ಲಿ ನಡೆದರೆ ಹಣ ಎಂದಿಗೂ ಲಭಿಸುತ್ತಿದ್ದರೆ ಯಾರೇ ಆಗಲಿ ಸಂತೋಷವಾಗಿರುತ್ತಾರೆ. ಆದರೆ ಎಲ್ಲಾ ದಿನಗಳೂ ನಮ್ಮದಲ್ಲ ಅಲ್ಲವೇ, ಕೆಲವು ಸಂದರ್ಭಗಳಲ್ಲಿ ಊಹಿಸದಂತೆ ಹಣ ಬರಲ್ಲ, ಇರುವ ಹಣವೂ ಖರ್ಚಾಗಿ ಬಿಡುತ್ತದೆ. ಆದರೆ ಅದಕ್ಕೆ ಮನೆಯಲ್ಲಿನ ವಾಸ್ತು ಸಹ ಕಾರಣವಾಗಬಹುದು. ಹಾಗಿದ್ದರೆ ಏನು ಮಾಡಿದರೆ ಚೆನ್ನಾಗಿರುತ್ತದೆ, ಏನು ಮಾಡಿದರೆ ಕಳೆದುಕೊಂಡ ಹಣ ಮರಳಿ ಬರುತ್ತದೆ. ಸಂಪತ್ತು ಮನೆಯಲ್ಲೇ ಉಳಿಯುತ್ತದೆ ಗೊತ್ತಾ.? ಆ ವಾಸ್ತು ಟಿಪ್ಸ್ ಬಗ್ಗೆ ಈಗ ತಿಳಿದುಕೊಳ್ಳೋಣ.



  1. ಕುಬೇರ:ಕುಬೇರನ ಬಗ್ಗೆ ಗೊತ್ತಲ್ಲವೇ. ಹಣ, ಐಶ್ವರ್ಯಕ್ಕೆ ಅಧಿಪತಿ ಈತ. ಇವರು ಉತ್ತರ ದಿಕ್ಕಿಗೆ ಅಧಿಪತಿ. ಆದಕಾರಣ ಉತ್ತರದ ಕಡೆಗೆ ಮುಖ ಮಾಡಿ ಲಾಕರ್‌ಗಳು, ವಾರ್ಡ್ ರೋಬ್ಸ್, ಕಪ್ ಬೋರ್ಡ್‌ಗಳನ್ನು ಇಡಬೇಕು. ಅವುಗಳನ್ನು ತೆರೆದ ಕೂಡಲೆ ಉತ್ತರಕ್ಕೆ ಅವು ಮುಖ ಮಾಡಿರುತ್ತವೆ. ಅದಕಾರಣ ಕುಬೇರನ ಅನುಗ್ರಹ ಸಿಗುತ್ತದೆ. ಆಗ ಹಣ ಹರಿದುಬರುತ್ತದೆ. ಹಣ ಅನಗತ್ಯವಾಗಿ ಖರ್ಚಾಗಲ್ಲ.

  2. ಕನ್ನಡಿ:ಲಾಕರ್ ಅಥವಾ ವಾರ್ಡ್ ರೋಬ್ ಎದುರಾಗಿ ಒಂದು ಕನ್ನಡಿ ಇಡಬೇಕು. ಇದರಿಂದ ಅದೃಷ್ಟ ಕೂಡಿಬರುತ್ತದೆ. ಎಲ್ಲರ ಆರೋಗ್ಯ ಚೆನ್ನಾಗಿರುತ್ತದೆ. ಹಣವನ್ನು ಧಾರಾಳವಾಗಿ ಸಂಪಾದಿಸುತ್ತಾರೆ. ಮುಟ್ಟಿದ್ದೆಲ್ಲಾ ಚಿನ್ನ ಆಗುತ್ತದೆ.

  3. ದೂಲಗಳು, ಮೆಟ್ಟಿಲು:ದೂಲಗಳು, ಮೆಟ್ಟಿಲುಗಳ ಕೆಳಗೆ ಸೇಫ್ಟಿ ಲಾಕರ್, ಕ್ಯಾಶ್ ಸೇಫ್‌ಗಳು, ಬಾಕ್ಸ್‌ಗಳು, ವಾರ್ಡ್ ರೋಬ್‍ಗಳನ್ನು ಇಡಬಾರದು. ಆ ರೀತಿ ಇಟ್ಟರೆ ಆರ್ಥಿಕ ಸಮಸ್ಯೆಗಳು ಎದುರಾಗುತ್ತವೆ. ಹಣ ಖರ್ಚಾಗುತ್ತದೆ. ಯಾವುದೇ ಕೆಲಸ ಮಾಡಿದರೂ ಕೂಡಿಬರಲ್ಲ.

  4. ಲಾಕರ್ ಇರುವ ಕೋಣೆ:ಹಣ ಇಡುವ ಕೋಣೆ, ಲಾಕರ್, ಸೇಫ್ಟಿ ಬಾಕ್ಸ್‌ಗಳನ್ನು ಇಡುವ ಕೋಣೆ ಯಾವಾಗಲೂ ಸ್ವಚ್ಛವಾಗಿ ಇರಬೇಕು. ವಿಶಾಲವಾಗಿ ಇರಬೇಕು. ಹೆಚ್ಚಿನ ಸಾಮಾನುಗಳು ಇರಬಾರದು. ಅದೇ ರೀತಿ ಆ ಕೋಣೆಯ ಉತ್ತರದಲ್ಲಿ ಕಿಟಕಿ ಏರ್ಪಾಟು ಮಾಡಿಕೊಂಡರೆ ಉತ್ತಮ. ಇದರಿಂದ ಹಣ ಹೆಚ್ಚು ಹೆಚ್ಚಾಗಿ ಹರಿದುಬರುತ್ತದೆ. ಅದೇ ರೀತಿ ಆ ಕೋಣೆಗೆ ಪೂರ್ವದ ಕಡೆಗೆ ಒಂದು ಕಿಟಕಿ ಇಟ್ಟುಕೊಂಡರೆ ವ್ಯಾಪಾರದಲ್ಲಿ ಲಾಭ, ಪ್ರಗತಿ ಸಾಧಿಸುತ್ತಾರೆ.

  5. ಮನಿಪ್ಲಾಂಟ್:ಮನೆಗಳಲ್ಲಿ ಬೆಳೆಸುವ ಮನಿ ಪ್ಲಾಂಟ್ ಬಗ್ಗೆ ಗೊತ್ತಿರುವುದೇ ಅಲ್ಲವೇ. ಆದರೆ ಈ ಪ್ಲಾಂಟನ್ನು ಮನೆಯಲ್ಲಿ ಎಲ್ಲೆಂದರಲ್ಲಿ ಇಡಬಾರದು. ಕೇವಲ ನೈರುತ್ಯ ದಿಕ್ಕಿನಲ್ಲಿ ಇಡಬೇಕು. ಆ ರೀತಿ ಇಟ್ಟರೆ ವಾಸ್ತು ದೋಷ ಇರಲ್ಲ. ಇದರಿಂದ ಹಣ ಲಭಿಸುತ್ತದೆ. ಬಯಸಿದ್ದು ನೆರವೇರುತ್ತದೆ.ಕುಬೇರನ ಬಗ್ಗೆ ಗೊತ್ತಲ್ಲವೇ. ಹಣ, ಐಶ್ವರ್ಯಕ್ಕೆ ಅಧಿಪತಿ ಈತ. ಇವರು ಉತ್ತರ ದಿಕ್ಕಿಗೆ ಅಧಿಪತಿ. ಆದಕಾರಣ ಉತ್ತರದ ಕಡೆಗೆ ಮುಖ ಮಾಡಿ ಲಾಕರ್‌ಗಳು, ವಾರ್ಡ್ ರೋಬ್ಸ್, ಕಪ್ ಬೋರ್ಡ್‌ಗಳನ್ನು ಇಡಬೇಕು. ಅವುಗಳನ್ನು ತೆರೆದ ಕೂಡಲೆ ಉತ್ತರಕ್ಕೆ ಅವು ಮುಖ ಮಾಡಿರುತ್ತವೆ. ಅದಕಾರಣ ಕುಬೇರನ ಅನುಗ್ರಹ ಸಿಗುತ್ತದೆ. ಆಗ ಹಣ ಹರಿದುಬರುತ್ತದೆ. ಹಣ ಅನಗತ್ಯವಾಗಿ ಖರ್ಚಾಗಲ್ಲ.

No comments