Header Ads

test

ಈ ಆಟೊ ಡ್ರೈವರ್ ಬಗ್ಗೆ ತಿಳಿದುಕೊಂಡರೆ…ಅಭಿನಂದಿಸಿ ಚಪ್ಪಾಳೆ ತಟ್ಟುತ್ತೀರಿ.!!!

ಆಟೋ ಡ್ರೈವರ್ ಎಂದರೆ, ಬಡತನದ ರಾಯಭಾರಿ ಯಂತೆ ಕಾಣಿಸುವ ಚಿತ್ರ ನಮ್ಮ ಮನದಲ್ಲಿ ಮೂಡುತ್ತದೆ. ಸೀಟಿನ ಮೇಲೆ ಹಾಕಿರುವ ಹರಿದ ಕೊಳಕು ಅಂಗಿ.ಪೇಲವವಾದ ಮುಖ.ಎಣ್ಣೆಯನ್ನೇ ಕಾಣದ ತಲೆ ಕೂದಲು.ಆಸೆ ನಿರಾಸೆಗಳ ನಡುವೆ ಹೋರಾಡುವ ಕಣ್ಣುಗಳು. ಇವಿಷ್ಟೂ ಶೇ.90 ಆಟೋ ಡ್ರೈವರ್ ಗಳ ಬಾಡಿ,ಬಾಡಿ ಲಾಂಗ್ವೇಜ್ ಈ ರೀತಿಯೇ ಇರುತ್ತದೆ. ಆದರೆ, ನಾವು ನೋಡಲು ಹೊರಟಿರುವ ಈ ಆಟೋ ಡ್ರೈವರ್ ಎಲ್ಲರಂತಲ್ಲ. ಆತನ ರೂಟೇ ಬೇರೆ. ಈತನ ಬಗ್ಗೆ ನೀವು ತಿಳಿದುಕೊಂಡ ಮೇಲೆ ಭೇಷ್ ಎನ್ನುತ್ತೀರಿ. ಅಭಿನಂದಿಸುತ್ತೀರಿ. ಪೂರ್ತಿ ಓದಿದ ಮೇಲೆ ಚಪ್ಪಾಳೆ ತಟ್ಟುತ್ತೀರಿ. ಮತ್ತೆ ತಡವೇಕೆ. ಬನ್ನಿ ವಿಶಿಷ್ಟ ಆಟೋ ಡ್ರೈವರ್ ಬಗ್ಗೆ ತಿಳಿದುಕೊಳ್ಳೋಣ.


ಹೆಸರು ಅಣ್ಣಾದೊರೈ, ಸ್ವಂತ ಊರು. ಚೆನ್ನೈ . ವಯಸ್ಸು ಸುಮಾರು 32 ವರ್ಷ. ತಿರುವಾನ್ಮಿಯೂರ್ – ಷೋಲಿಂಗನಲ್ಲೂರ್ ನಡುವೆ ಷೇರಿಂಗ್ ಅಟೋ ಓಡಿಸುತ್ತಾನೆ. ಈತನ ಆಟೋ ಎಲ್ಲರ ಆಟೋ ನಂತಲ್ಲ. ಅದರಲ್ಲಿರುವ ಅನುಕೂಲತೆಗಳನ್ನು ನೋಡಿದರೆ ತಲೆ ತಿರುಗುತ್ತೆ. ಉಚಿತ ವೈ-ಫೈ, ಮೊಬೈಲ್ ಚಾರ್ಜಿಂಗ್ ಪೋರ್ಟ್, ಸುಮಾರು 40 ಮ್ಯಾಗಜಿನ್ಸ್ ,10 ವಾರ ಪತ್ರಿಕೆಗಳು, ಇವಿಷ್ಟೇ ಅಲ್ಲದೆ ಟಿ.ವಿ, ಲ್ಯಾಪ್ ಟಾಪ್, ಟ್ಯಾಬ್ ಇವೆಲ್ಲವೂ ಇರುತ್ತವೆ. ಆಟೊ ಹತ್ತಿದ ಪ್ರತಿಯೊಬ್ಬರೂ.’ಅಣ್ಣಾದೊರೈ ಆಟೊ ಅಮೇಜಿಂಜ್ ಆಟೋ’ ಎನ್ನುತ್ತಾರೆ. ಅಣ್ಣಾದೊರೈ ಹುಟ್ಟಿದ್ದು ತಂಜಾವೂರು ಎಂಬ ಪುಟ್ಟ ಊರಿನಲ್ಲಿ. ಆತನ ನಾಲಕ್ಕು ವರ್ಷ ವಯಸ್ಸಿನಲ್ಲಿ ತಂದೆ ತಾಯಿಗಳು ಸಂಸಾರವನ್ನು ಚೆನ್ನೈಗೆ ಬದಲಾಯಿಸಿದರು. ಹೈಸ್ಕೂಲ್ ವರೆಗೆ ಮಾತ್ರ ವಿದ್ಯಾಭ್ಯಾಸ ಮಾಡಿರುವ ಅಣ್ಣದೊರೈ, ತನ್ನ ಜೀವನ ಸಾಗಿಸಲು ಆಟೊ ಓಡಿಸಲು ಪ್ರಾರಂಭಿಸಿ, ಏಳು ವರ್ಷಗಳಿಂದ ಆಟೊ ಓಡಿಸುತ್ತಿದ್ದಾರೆ.
ಒಂದು ಆಟೊದಲ್ಲಿ ಇಷ್ಟು ಸೌಲಭ್ಯಗಳು ಇರುವುದು ಏತಕ್ಕೆ ಎಂದು ಅಣ್ಣಾ ದೊರೈರನ್ನು ಪ್ರಶ್ನಿಸಿದರೆ, ನಕ್ಕು ಸುಮ್ಮನಾಗುತ್ತಾರೆ. ಅಸಲಿಗೆ ನಿಮಗೆ ಇಂತಹ ಅಲೋಚನೆ ಬಂದಿದ್ದಾದರೂ ಹೇಗೆ ಎಂದು ಕೇಳಿದರೆ, ಹೇಗೆಂದು ಗೊತ್ತಿಲ್ಲವೆಂದು ತಲೆ ಕೆರೆದುಕೊಳ್ಳುತ್ತಾರೆ. ಕೊನೆಯದಾಗಿ ಆತ ಹೇಳುವುದೇನೆಂದರೆ. ನಾನೇನೇ ಮಾಡಿದರೂ ಎಲ್ಲವೂ ನನ್ನ ಗ್ರಾಹಕರ ಸಂತೋಷಕ್ಕಾಗಿಯೇ ಎಂದು ಹೇಳುತ್ತಾರೆ.

‘ಅತಿಥಿ ದೆವೋ ಭವ’. ಅಣ್ಣಾದೊರೈ ನಂಬಿದ್ದ ಸಿದ್ಧಾಂತವಿದು. ಎಲ್ಲಾ ಪ್ರಯಾಣಿಕರಿಂದ ಹಣ ತೆಗೆದುಕೊಳ್ಳುತ್ತಾರಾದರೂ ಶಿಕ್ಷಕರಿಂದ ಒಂದು ಪೈಸೆಯನ್ನೂ ತೆಗೆದುಕೊಳ್ಳುವುದಿಲ್ಲ. ಏಕೆಂದರೆ.ಈ ದೇಶದ ಡಾಕ್ಟರ್, ಇಂಜಿನಿಯರ್, ಕೊನೆಗೆ ಪ್ರೆಸಿಡೆಂಟ್ ಆಗಬೇಕಾದರೂ .ಶಿಕ್ಷಕ ಎಂಬುವರು ಕಲಿಸಿದ ವಿದ್ಯೆಯಿಂದಲೆ ಅಲ್ಲವೇ? ಹಾಗಾಗಿ ಅವರಿಂದ ಹಣ ಪಡೆದುಕೊಳ್ಳದೆ ,ಅವರನ್ನು ಗೌರವಿಸುತ್ತೇನೆ ಎನ್ನುತ್ತಾರೆ. ಆತನ ತರ್ಕದಲ್ಲಿ ಉನ್ನತ ಸಂಸ್ಕಾರವಿದೆಯಲ್ಲವೇ.

ಈತನ ಬಗ್ಗೆ ಮತ್ತೊಂದು ವಿಷಯವನ್ನು ನಿಮಗೆ ಹೇಳಲೇ ಬೇಕು. ಈತನಲ್ಲಿ ಮತ್ತೊಂದು ದೊಡ್ಡಗುಣವಿದೆ ಅದೇನೆಂದರೆ.ಪ್ರೇಮಿಗಳ ದಿನಾಚರಣೆಯಂದು ಪ್ರೇಮಿಗಳನ್ನು, ತಾಯಂದಿರ ದಿನಾಚರಣೆಯಂದು, ಹಸುಗೂಸಿನ ತಾಯಿಯನ್ನೂ, ಅಪ್ಪಂದಿರ ದಿನಾಚರಣೆಯಂದು ಅಪ್ಪಂದಿರನ್ನು ಉಚಿತವಾಗಿ ಆಟೊದಲ್ಲಿ ಕರೆದುಕೊಂಡು ಹೋಗುತ್ತಾರೆ. amazingauto ಎಂಬ ವೆಬ್ ಸೈಟ್ ಕೂಡಾ ಇತ ಹೊಂದಿದ್ದಾನೆ. ಇದರೊಂದಿಗೆ ಮೊಬೈಲ್ ಆಪ್ ಸಹ ಇದೆ. ಫೇಸ್ ಬುಕ್ ಪೇಜನ್ನೂ ಹೊಂದಿದ್ದಾನೆ. ಈತನ ಪೇಜ್ ಗೆ 10 ಸಾವಿರ ಮಂದಿ ಫಾಲೋವರ್ಸ್ ಇದ್ದಾರೆ. ಜನರನ್ನು ಪ್ರೇರೇಪಿಸುವ ಭಾಷಣವನ್ನು ಮಾಡುವುದರಲ್ಲಿ ಅಣ್ಣಾದೊರೈ ಎತ್ತಿದಕೈ. ಆದುದರಿಂದ ಬಹಳಷ್ಟು ಸಭೆ ಸಮಾರಂಭಗಳಿಗೆ ಈತನನ್ನು ಅಹ್ವಾನಿಸುತ್ತಾರೆ. ಎರಡು ಸಲ TED tax (technology, entertainment, design) ಸಹ ಕಟ್ಟಿದ್ದಾರೆ. ಈತ ಒಂದು ಟ್ರಸ್ಟನ್ನು ಸಹ ನಡೆಸುತ್ತಿದ್ದಾರೆ.

ಏನೇ ಮಾಡಿದರೂ.ಎಷ್ಟೇ ಮಾಡಿದರೂ.ಆಟೋವಾಲಾಗಳ ಜೀವನಗಳಲ್ಲಿ ಬದಲಾವಣೆ ತರಬೇಕೆನ್ನುವುದೇ ಈತನ ಜೀವನದ ಗುರಿ. ದಶಕಗಳಿಂದ ನಂದಿ ಹೋಗಿರುವ ಬಾಳಿನಲ್ಲಿ ಹೊಸ ಬೆಳಕನ್ನು ತುಂಬುವುದೇ ತನ್ನ ಜೀವನದ ಆಶಯ ಎನ್ನುತ್ತಾರೆ. ಆತನ ಆಶಯವನ್ನು ನಾವೂ ಗೌರವಿಸೋಣ . ಆತನ ಆಶಯ ಗುರಿ ತಲುಪಲೆಂದು ಹಾರೈಸೋಣ . ಶುಭವಾಗಲಿ ನಿಮಗೆ ಅಣ್ಣಾ ದೊರೈ.

No comments