Header Ads

test

ವನ್ಡೇ ಕ್ರಿಕೆಟ್‍ಗಳಿಗೆ ವೈಟ್, ಟೆಸ್ಟ್‌ಗಳಿಗೆ ಪಿಂಕ್ ಬಾಲ್ಸ್ ಯಾಕೆ ಬಳಸುತ್ತಾರೆ ಗೊತ್ತಾ?

ಫುಟ್‌ಬಾಲ್ ಬಳಿಕ ಜಗತ್ತಿನಾದ್ಯಂತ ಹೆಚ್ಚು ಜನಪ್ರಿಯವಾದ ಕ್ರೀಡೆ ಕ್ರಿಕೆಟ್. ಆ ಮಟ್ಟಕ್ಕೆ ಕ್ರಿಕೆಟ್ ಜನಪ್ರಿಯವಾಯಿತು. ಇನ್ನು ನಮ್ಮ ದೇಶದಲ್ಲಿ ಕ್ರಿಕೆಟ್ ಎಂದರೆ ಸಾಕು.ಆಫೀಸು, ಕಾಲೇಜುಗಳಿಗೆ ರಜೆ ಹಾಕಿ ಎಂಜಾಯ್ ಮಾಡುವ ಅಭಿಮಾನಿಗಳೂ ಇದ್ದಾರೆ. ಇದಲ್ಲಾ ಸರಿ.! ಇದೀಗ ಡೇ ಅಂಡ್ ನೈಟ್ ಟೆಸ್ಟ್‌ಗಳು ಬರುತ್ತಿವೆ. ಕೆಲವು ದೇಶಗಳು ಅದಾಗಲೆ ಈ ಟೆಸ್ಟ್‌ಗಳನ್ನು ಆಡಲು ಪ್ರಾರಂಭಿಸಿವೆ. ಆದರೆ ಈ ಟೆಸ್ಟುಗಳಲ್ಲಿ ಕೆಂಪು ಚೆಂಡು ಬದಲಾಗಿ ಪಿಂಕ್ ಬಾಲ್‌ ಬಳಸುತ್ತಿದ್ದಾರೆ. ಅದನ್ನು ಯಾಕೆ ಬಳಸುತ್ತಿದ್ದಾರೆ ಗೊತ್ತೇ? ಅದರ ಬಗ್ಗೆ ಈಗ ತಿಳಿದುಕೊಳ್ಳೋಣ.


ಒಂದು ಕಾಲದಲ್ಲಿ ಅಂದರೆ ಏಕದಿನ, ಟ್ವೆಂಟಿ20ಗಳು ಇಲ್ಲದಿದ್ದಾಗ ಮೊದಲು ಟೆಸ್ಟ್ ಮ್ಯಾಚ್‌ಗಳನ್ನು ಮಾತ್ರ ಆಡುತ್ತಿದ್ದರು. ಅದೂ ಸಹ ಟೆಸ್ಟ್ ಮಾನ್ಯತೆ ಪಡೆದ ಎರಡು ದೇಶಗಳ ನಡುವೆ ಆ ಮ್ಯಾಚ್‌ಗಳು ನಡೆಯುತ್ತಿದ್ದವು. ಆ ಮ್ಯಾಚ್‌ಗಳಲ್ಲಿ ಕೆಂಪು ಚೆಂಡು ಬಳಸುತ್ತಿದ್ದರು. ಆದರೆ ಕ್ರೀಡಾಸಕ್ತರನ್ನು ಇನ್ನಷ್ಟು ಆಕರ್ಷಿಸಲು ಒನ್ ಡೇಗಳನ್ನು ಆಡಲು ಪ್ರಾರಂಭಿಸಿದರು. ಮೊದಲು ಹಗಲು ಹೊತ್ತಲ್ಲಿ ಒನ್ ಡೇಗಳನ್ನು ಆಡುತ್ತಿದ್ದರು. ಆದರೆ ರಾತ್ರಿ ಹೊತ್ತಲ್ಲೂ ನಡೆಸಿದರೂ ಜನ ಇಷ್ಟಪಡುತ್ತಾರೆ ಎಂದುಕೊಂಡ ಕ್ರಿಕೆಟ್ ಬೋರ್ಡ್‍ಗಳು ಡೇ ಟೈಮಲ್ಲಿ ನಡೆಯುತ್ತಿದ್ದ ಒನ್ ಡೇಗಳನ್ನು ನೈಟ್ ಒನ್ ಡೇ ಆಗಿ ಬದಲಾಯಿಸಿದವು. ಆದರೆ ಚೆಂಡಿನ ಕಥೆ ಏನಾಯಿತೆಂದರೆ.ರಾತ್ರಿ ಹೊತ್ತು ಕೆಂಪು ಚೆಂಡು ಫ್ಲಡ್ ಲೈಟ್‌ಗಳ ಬೆಳಕಿಗೆ ಬ್ರೌನ್ ಬಣ್ಣದಲ್ಲಿ ಕಾಣಿಸುತ್ತಿತ್ತು. ಅದು ಪಿಚ್ ಬಣ್ಣದೊಂದಿಗೆ ಬೆರೆತುಹೋಗಿತ್ತು. ಇದಕ್ಕಾಗಿ ಆ ಸಮಸ್ಯೆಯನ್ನು ಬಗೆಹರಿಸಲು ಒನ್ ಡೇಗಳಿಗಾಗಿ ವಿಶೇಷವಾಗಿ ಬಿಳಿ ಚೆಂಡನ್ನು ಪರಿಚಯಿಸಲಾಯಿತು. ಆಗಿನಿಂದ ಬಿಳಿ ಚೆಂಡಿನಿಂದ ಡೇ, ಡೇ/ನೈಟ್ ಒನ್ ಡೇಗಳನ್ನು ಆಡುತ್ತಿದ್ದಾರೆ. ಆದರೆ ಟೆಸ್ಟ್ ಮ್ಯಾಚ್‌ಗಳಲ್ಲಿ ಮಾತ್ರ ಕೆಂಪು ಚೆಂಡಿನ ಬಳಕೆ ಮಾತ್ರ ಹಾಗೆಯೇ ಮುಂದುವರಿಯುತ್ತಿದೆ.

ಇತ್ತೀಚೆಗೆ ಟೆಸ್ಟುಗಳಿಗೆ ಸಹ ಇನ್ನಷ್ಟು ಜನಪ್ರಿಯತೆ ತರಲು ಡೇ ನೈಟ್ ಟೆಸ್ಟ್ ಮ್ಯಾಚ್‌ಗಳನ್ನು ನಿರ್ವಹಿಸಬೇಕೆಂದು ನಿರ್ಧರಿಸಿದರು. ಆದರೆ.ಇಲ್ಲೂ ಚೆಂಡಿನ ಸಮಸ್ಯೆ ಎದುರಾಯಿತು. ಮೊದಲೇ ತಿಳಿಸಿದಂತೆ ಫ್ಲಡ್ ಲೈಟ್ ಬೆಳಕಿನಲ್ಲಿ ಕೆಂಪು ಚೆಂಡು ಸರಿಯಾಗಿ ಕಾಣಿಸುವುದಿಲ್ಲ. ಹಾಗಾಗಿ ಅದಕ್ಕೆ ಬದಲಾಗಿ ಪಿಂಕ್ ಚೆಂಡನ್ನು ಬಳಕೆಗೆ ತಂದರು. ಹಾಗಿದ್ದರೆ ಪಿಂಕ್ ಬಣ್ಣವೇ ಯಾಕೆ. ಒನ್ ಡೇ ರೀತಿ ಬಿಳಿ ಬಣ್ಣದ ಚೆಂಡು ಬಳಸಬಹುದಲ್ಲವೇ? ಸಾಮಾನ್ಯವಾಗಿ ಒಂದು ಇನ್ನಿಂಗ್ಸ್‌ಗೆ ಎರಡು ಬಿಳಿ ಬಣ್ಣದ ಚೆಂಡಿ ಬಳಸುತ್ತಾರೆ. 30 ರಿಂದ 40 ಓವರ್‌ಗಳ ನಡುವೆ ಚೆಂಡು ಬದಲಾಯಿಸುತ್ತಾರೆ. ಅಷ್ಟೊತ್ತಿಗೆ ಚೆಂಡು ರೂಪ ಕಳೆದುಕೊಂಡು ಕೊಳೆಯಾಗಿ ಕಾಣುತ್ತದೆ. ಆ ರೀತಿಯ ಚೆಂಡನ್ನು ಒಂದು ವೇಳೆ ಡೇ ನೈಟ್ ಟೆಸ್ಟ್‌ಗಳಲ್ಲಿ ಬಳಸಿದರೆ ಆಗ ಆ ಚೆಂಡನ್ನು 30-40 ಓವರ್‌ಗಳಿಗೆ ಕಡ್ಡಾಯವಾಗಿ ಬದಲಾಯಿಸಬೇಕಾಗುತ್ತದೆ. ಟೆಸ್ಟ್ ಮ್ಯಾಚ್‌ಗಳೆಂದರೆ ಒನ್ ಡೇ ತರಹ ಅಲ್ಲ, ಸುದೀರ್ಘವಾಗಿ ಅಡುತ್ತಾರೆ. ಆ ರೀತಿ ಇರುವಾಗ ಪ್ರತಿ 30-40 ಓವರ್‌ಗಳಿಗೆ ಒಮ್ಮೆ ಚೆಂಡು ಬದಲಾಯಿಸುತ್ತಾ ಹೋಗುವುದು ಕಿರಿಕಿರಿ ಸಂಗತಿ. ಪಿಂಕ್ ಕಲರ್ ಆದರೆ ಅಷ್ಟು ಬೇಗ ಅದು ಬಣ್ಣ ಕಳೆದುಕೊಳ್ಳುವುದಿಲ್ಲ. ಹಾಗಾಗಿ ಈಗ ನಡೆಯುತ್ತಿರುವ ಡೇ ನೈಟ್ ಟೆಸ್ಟ್‌‍ಗಳಲ್ಲಿ ಪಿಂಕ್ ಬಣ್ಣದ ಚೆಂಡನ್ನು ಬಳಸುತ್ತಿದ್ದಾರೆ. ಇದು ಪಿಂಕ್ ಚೆಂಡಿನ ಹಿಂದಿರುವ ಅಸಲಿ ವಿಚಾರ.!

No comments