Header Ads

test

ನಾವು ತಿನ್ನುವ "ಹಣ್ಣು" ಗಿಡದಲ್ಲೇ ಹಣ್ಣಾಗಿದ್ದೋ..? ಅಥವಾ ರಾಸಾಯನಿಕಗಳಿಂದ ಹಣ್ಣಾಗಿಸಿದ್ದೋ..? ಹೀಗೆಮಾಡಿ ತಿಳಿದುಕೊಳ್ಳಿ!

ಗಿಡದಲ್ಲಿ ಮಾಗಿದ ಹಣ್ಣುಗಳನ್ನೇ ತಿನ್ನಬೇಕು. ರಾಸಾಯನಿಕಗಳನ್ನು ಹಾಕಿ ಮಾಗಿಸಿದ ಹಣ್ಣುಗಳನ್ನು ತಿನ್ನಬಾರದು. ಈ ವಿಷಯ ಬಹಳಷ್ಟು ಮಂದಿಗೆ ಗೊತ್ತು. ಆದರೂ ಬಹಳಷ್ಟು ಮಂದಿಗೆ ಯಾವುದು ಸಹಜವಾಗಿ ಹಣ್ಣಾಗಿರುವುದು, ಯಾವುದು ರಾಸಾಯನಿಕಗಳನ್ನು ಹಾಕಿ ಹಣ್ಣಾಗಿಸಿದ್ದಾರೋ ಗೊತ್ತಿರಲ್ಲ. ವ್ಯಾಪಾರಿಗಳಿಗೆ ತಮ್ಮ ಲಾಭವೇ ಮುಖ್ಯವಾಗಿ ಯಥೇಚ್ಛವಾಗಿ ರಾಸಾಯನಿಕಗಳನ್ನು ಬಳಸುತ್ತಾ ಹಣ್ಣುಗಳನ್ನು ಮಾಗಿಸುತ್ತಿದ್ದಾರೆ. ಈ ಸೀಸನ್‌ನಲ್ಲಿ ಬರುತ್ತಿರುವ ಮಾವಿನ ಹಣ್ಣಷ್ಟೇ ಅಲ್ಲ, ಆಫಲ್, ಬಾಳೆಹಣ್ಣು, ಅವಕಾಡೋ (ಬೆಣ್ಣೆಹಣ್ಣು), ಕಿತ್ತಳೆ, ಪಪ್ಪಾಯ, ಸೀಬೆ, ಪೈನಾಪಲ್ ನಂತಹ ಅನೇಕ ಹಣ್ಣುಗಲನ್ನು ರಾಸಾಯನಿಕಗಳನ್ನು ಹಾಕಿ ಕೃತಕವಾಗಿ ಹಣ್ಣಾಗಿಸುತ್ತಿದ್ದಾರೆ. ಇದರ ಜತೆಗೆ ಟೊಮೊಟೋಗಳಂತಹ ತರಕಾರಿಗಳಿಗೂ ರಾಸಾಯನಿಕಗಳನ್ನು ಹಾಕಿ ಹಣ್ಣಾಗಿಸಿ ಹಣ ಮಾಡಿಕೊಳ್ಳುತ್ತಿದ್ದಾರೆ. ವ್ಯಾಪಾರಿಗಳು ಯಾವ್ಯಾವ ರಾಸಾಯನಿಕಗಳನ್ನು ಬಳಸಿ ಹಣ್ಣುಗಳನ್ನು ಕೃತಕವಾಗಿ ಮಾಗಿಸುತ್ತಾರೆ, ಅವುಗಳಿಂದ ಮನಗೆ ಯಾವ ರೀತಿಯ ಹಾನಿಯಾಗುತ್ತದೆ, ರಾಸಾಯನಿಕಗಳನ್ನು ಬಳಸಿ ಪಕ್ವವಾಗಿಸಿದ ಹಣ್ಣುಗಳನ್ನು ಹೇಗೆ ಗುರುತಿಸುವುದು ಎಂಬುದನ್ನು ಈಗ ತಿಳಿದುಕೊಳ್ಳೋಣ.


ಹಣ್ಣು ಅಥವಾ ತರಕಾರಿಗಳನ್ನು ಯಾವುದನ್ನೇ ಆಗಲಿ ಕೃತಕವಾಗಿ ಹಣ್ಣಾಗಿಸಲು ಇಂದು ಸಾಕಷ್ಟು ಮಂದಿ ಬಳಸುತ್ತಿರುವ ರಾಸಾಯನಿಕಗಳು ಯಾವುದೆಂದರೆ…ಕ್ಯಾಲ್ಸಿಯಂ ಕಾರ್ಬೈಡ್, ಎಥಿಲಿಲ್, ಎಥಿಪಾನ್‌ಗಳು ಮುಖ್ಯವಾದವು. ಇವುಗಳನ್ನೇ ಬಹಳಷ್ಟು ಮಂದಿ ವ್ಯಾಪಾರಿಗಳು ಹಣ್ಣನ್ನು ಕೃತಕವಾಗಿ ಪಕ್ವವಾಗಿಸಲು ಬಳಸುತ್ತಿದ್ದಾರೆ. ಇವುಗಳನ್ನು ಬಳಸಿ ಮಾಗಿದ ಹಣ್ಣುಗಳನ್ನು, ತರಕಾರಿಗಳನ್ನು ತಿನ್ನುವುದರಿಂದ ನಮಗೆ ಏನೆಲ್ಲಾ ತೊಂದರೆ ಆಗುತ್ತದೆ ಎಂದರೆ… ಅವುಗಳಲ್ಲಿರುವ ಪೋಷಕಾಂಶಗಳು ಮಾಯವಾಗುತ್ತವೆ, ಆದಕಾರಣ, ಅವುಗಳನ್ನು ತಿಂದರೂ ನಮಗೆ ಅಷ್ಟೇನು ಪ್ರಯೋಜನ ಇರಲ್ಲ. ಇದರ ಜತೆಗೆ ವಿಷ ಪದಾರ್ಥಗಳು ನಮ್ಮ ದೇಹವನ್ನು ಸೇರಿ ಅನಾರೋಗ್ಯವನ್ನುಂಟು ಮಾಡುತ್ತವೆ. ಅವೆಲ್ಲಾ ಕಾರ್ಸಿನೋಜನ್‌ಗಳನ್ನು ನಮ್ಮ ದೇಹಕ್ಕೆ ಕಳುಹಿಸುತ್ತವೆ. ಇದರಿಂದ ಕ್ಯಾನ್ಸರ್‌ನಂತಹ ಮಾರಣಾಂತಿಕ ಕಾಯಿಲೆಗಳು ಬರುತ್ತವೆ.

ಇನ್ನು ಆ ರೀತಿಯ ಕೃತಕ ಹಣ್ಣುಗಳನ್ನು ತಿನ್ನುವುದರಿಂದ ಇನ್ನೂ ಏನೆಲ್ಲಾ ಆಗುತ್ತದೆಂದರೆ…ವಾಂತಿಗಳು, ಬೇಧಿ, ಡಯೇರಿಯಾ ಸಮಸ್ಯೆಗಳು ಬರುತ್ತವೆ. ಅಸಿಡಿಟಿ, ಗ್ಯಾಸ್, ಅಜೀರ್ಣ ಸಮಸ್ಯೆಗಳು ಸಹ ಬರುತ್ತವೆ. ತಿಂದ ಆಹಾರ ಸರಿಯಾಗಿ ಜೀರ್ಣವಾಗಲ್ಲ. ಚರ್ಮದ ಮೇಲೆ ನವೆ, ದದ್ದುಗಳು ಆಗುತ್ತವೆ. ದೃಷ್ಟಿ ಸರಿಯಾಗಿ ಇರಲ್ಲ. ದೃಷ್ಟಿ ಕ್ಷೀಣಿಸುತ್ತದೆ. ವಿಪರೀತವಾದ ದಾಹ ಉಂಟಾಗುತ್ತದೆ. ಬಾಯಿ, ಮೂಗು, ಗಂಟಲು ಸೋಂಕಿಗೆ ಒಳಗಾಗುತ್ತದೆ. ನೆಗಡಿ, ಕೆಮ್ಮು, ಉಸಿರಾಟ ತೊಂದರೆಗಳು ಸಹ ಬರುತ್ತವೆ. ಕರುಳಿನ ಅಲ್ಸರ್ ಆಗುತ್ತದೆ. ಶ್ವಾಸಕೋಶಗಳಲ್ಲಿ ನೀರು ಸೇರಿಕೊಳ್ಳುತ್ತದೆ. ತಲೆನೋವು, ಜ್ಞಾಪಕಶಕ್ತಿ ಕಡಿಮೆಯಾಗುವುದು, ಕತ್ತಲಾಗಿ ಕಾಣಿಸುವುದು, ನಿದ್ರಾಹೀನತೆ, ಫಿಟ್ಸ್ ಸಹ ಬರಬಹುದು. ಇನ್ನು ಕೆಲವು ಸಂದರ್ಭಗಳಲ್ಲಿ ಬಿಪಿ ಹೆಚ್ಚುತ್ತದೆ. ಇದರ ಜತೆಗೆ ಕೈಗಳು, ಕಾಲುಗಳು ಸ್ಪರ್ಶವನ್ನೂ ಕಳೆದುಕೊಳ್ಳುವ ಸಾಧ್ಯತೆಗಳಿವೆ. ಅದೇ ಗರ್ಭಿಣಿಯರಿಗಾದರೆ ಹೊಟ್ಟೆಯಲ್ಲಿನ ಮಗುವಿಗೆ ಹಾನಿಯಾಗುತ್ತದೆ. ಮಗು ಸರಿಯಾಗಿ ಬೆಳವಣಿಗೆಯಾಗಲ್ಲ.

ಕೃತಕವಾಗಿ ಮಾಗಿಸಿದ ಹಣ್ಣುಗಳನ್ನು ಗುರುತಿಸುವುದು ಹೇಗೆ :

  • ಕೃತಕವಾಗಿ ಮಾಗಿಸಿದ ಹಣ್ಣುಗಳೆಲ್ಲಾ ಸರಿಸುಮಾರು ಒಂದೇ ಬಣ್ಣದಲ್ಲಿರುತ್ತವೆ. ಬಣ್ಣಗಳಲ್ಲಿ ಯಾವುದೇ ವ್ಯತ್ಯಾಸ ಕಾಣಿಸಲ್ಲ. ಅದೇ ಸಹಜಸಿದ್ಧವಾಗಿ ಮಾಗಿದ ಹಣ್ಣುಗಳ ಬಣ್ಣಗಳಲ್ಲಿ ವ್ಯತ್ಯಾಸ ಇರುತ್ತದೆ. ಎಲ್ಲಾ ಹಣ್ಣುಗಳು ಒಂದೇ ಬಣ್ಣದಲ್ಲಿ ಇರಲ್ಲ.

  • ಒಂದೇ ಜಾತಿ ಆಗಿದ್ದರೂ ಬೇರೆಬೇರೆ ಬಣ್ಣಗಳಲ್ಲಿರುತ್ತವೆ ಕೃತಕವಾಗಿ ಮಾಗಿದ ಹಣ್ಣುಗಳ ಮೇಲೆ ಬೂದಿ ಬಣ್ಣದ ಪ್ಯಾಚ್‌ಗಳು ಕಾಣಿಸುತ್ತವೆ. ಸೂಕ್ಷ್ಮವಾಗಿ ಗಮನಿಸಿದರೆ ಕಾಣುತ್ತದೆ.

  • ಬಾಳೆಹಣ್ಣು ತೊಟ್ಟು ಹಸಿರು ಬಣ್ಣದಲ್ಲಿದ್ದು ಹಣ್ಣು ಹಳದಿ ಬಣ್ಣದಲ್ಲಿ ಇದ್ದರೆ ಅವನ್ನು ಕೃತಕವಾಗಿ ಮಾಗಿಸಲಾಗಿದೆ ಎಂದು ತಿಳಿದುಕೊಳ್ಳಬೇಕು. ಸಹಜಸಿದ್ಧವಾಗಿ ಮಾಗಿದ ಹಣ್ಣಾದರೆ ತೊಟ್ಟು ಸಹ ಹಳದಿ ಬಣ್ಣದಲ್ಲಿರುತ್ತದೆ.

  • ಸಹಜಸಿದ್ಧವಾಗಿ ಪಕ್ವವಾದ ತರಕಾರಿಗಳು, ಹಣ್ಣುಗಳು ಆಕರ್ಷಕವಾಗಿ ಇರಲ್ಲ. ಆದರೆ ಕೃತಕವಾಗಿ ಬೆಳೆದ ಹಣ್ಣುಗಳು ಮಾತ್ರ ಹೊಳೆಯುತ್ತಿರುತ್ತವೆ. ಕಣ್ಣಿಗೆ ಆಕರ್ಷಕವಾಗಿ ಕಾಣುತ್ತವೆ.

  • ಸೀಸನ್ ಆರಂಭವಾಗುವುದಕ್ಕೂ ಮೊದಲೇ ಮಾರುಕಟ್ಟೆಗೆ ಬರುವ ಹಣ್ಣುಗಳನ್ನು ಕೊಳ್ಳಬಾರದು. ಅವುಗಳನ್ನು ಕೃತಕವಾಗಿ ಹಣ್ಣಾಗಿಸಿರುತ್ತಾರೆ.

  • ಕೃತಕವಾಗಿ ಪಕ್ವವಾದ ಹಣ್ಣುಗಳು ಮೆತ್ತಗೆ, ಮೃದುವಾಗಿ ಇರುತ್ತವೆ. ಸಹಜಸಿದ್ಧವಾಗಿ ಪಕ್ವವಾದ ಹಣ್ಣುಗಳು ಸ್ವಲ್ಪ ಗಟ್ಟಿಯಾಗಿ ಇರುತ್ತವೆ.

ಈ ರೀತಿ ಕೃತಕವಾಗಿ ಹಣ್ಣುಗಳನ್ನು ಮಾಗಿಸುವುದನ್ನು ಅನೇಕ ದೇಶಗಳು ನಿಷೇಧಿಸಿವೆ. ನಮ್ಮ ದೇಶದಲ್ಲೂ ಈ ರೀತಿ ಮಾಡುವುದರ ಬಗ್ಗೆ ನಿಷೇಧವಿದೆ. ಆದರೂ ಕೆಲವು ವ್ಯಾಪಾರಿಗಳು ಲಾಭಾಪೇಕ್ಷೆಯಿಂದ ಆ ರೀತಿ ಹಣ್ಣುಗಳನ್ನು ಪಕ್ವವಾಗಿಸಿ ಜನರ ಆರೋಗ್ಯದೊಂದಿಗೆ ಚಲ್ಲಾಟ ಆಡುತ್ತಿದ್ದಾರೆ. ಈ ರೀತಿಯ ಅಪರಾಧಗಳನ್ನು ತಡೆಯಲು ವಿಶೇಷ ವಿಜಿಲೆನ್ಸ್ ಇದ್ದರೂ ಅದು ಅಷ್ಟು ಆಕ್ಟೀವ್ ಆಗಿ ಇರುವಂತೆ ಆ ಇಲಾಖೆ ಕಾಣುತ್ತಿಲ್ಲ. ಹಾಗಾಗಿ ವ್ಯಾಪಾರಿಗಳ ಆಟ ನಡೆಯುತ್ತಿದೆ. ಏನೇ ಆಗಲಿ ನೀವು ಮಾತ್ರ ಹಣ್ಣನ್ನು, ತರಕಾರಿಗಳನ್ನು ಕೊಳ್ಳುವ ಮುನ್ನ ಒಂದೆರಡು ಬಾರಿ ಪರೀಕ್ಷಿಸಿ ಕೊಂಡುಕೊಳ್ಳಿ. ಇಲ್ಲದಿದ್ದರೆ ಗೊತ್ತಲ್ಲವೇ, ಅನಾರೋಗ್ಯಕ್ಕೆ ತುತ್ತಾಗುತ್ತೀರ.

No comments