ಆತ 8 ನೇ ತರಗತಿ ಫೈಲಾದ. ಈಗ ಹ್ಯಾಕರ್ ಆಗಿ ಕೋಟಿ ಕೋಟಿ ಸಂಪಾದಿಸುತ್ತಿದ್ದಾನೆ.!
ಹ್ಯಾಕರ್. ಎಲ್ಲಿಯೋ ದೂರದಲ್ಲಿದ್ದರೂ ,ಯಾವುದಾದರೂ ಕಂಪ್ಯೂಟರ್ ಇಲ್ಲವೇ ಡಿವೈಸ್ ಅನ್ನು ತನ ಚಾಕಚಕ್ಯತೆಯಿಂದ ತನ ವಶಕ್ಕೆ ತೆಗೆದುಕೊಳ್ಳುವ ನೈಪುಣ್ಯತೆ ಪಡೆದವ.ಇದನ್ನು ಪಡೆಯಬೇಕಾದರೆ ಹಲವಾರು ಸಾಫ್ಟ್ ವೇರ್ ಕೋರ್ಸ್ ಗಳನ್ನು ಕಲಿತಿರಬೇಕು. ಅದೇ ರೀತಿ ಅಭ್ಯಾಸವನ್ನೂ ಮಾಡಬೇಕು. ಹಾಗಾದರೆ ಮಾತ್ರ ಹ್ಯಾಕಿಂಗ್ ಕೋರ್ಸ್ ನಲ್ಲಿ ನಿಷ್ಣಾತರಾಗುತ್ತಾರೆ. ಆದರೆ ಆ ಯುವಕ ಮಾತ್ರ ಹಾಗಲ್ಲ, 8 ನೇ ತರಗತಿಯಲ್ಲಿ ಫೈಲ್ ಆಗಿದ್ದರೂ. ಹ್ಯಾಕಿಂಗ್ ನಲ್ಲಿ ಮೇಲುಗೈ ಸಾಧಿಸಿದ್ದ. ದೊಡ್ಡ ದೊಡ್ಡ ಕಂಪೆನಿಗಳಲ್ಲಿ ಕೆಲಸಮಾಡುವ ಉದ್ಯೋಗಿಗಳಿಗೇನೂ ಇವನು ಕಡಿಮೆಯಿಲ್ಲ. ಈ ನಿಟ್ಟಿನಲ್ಲಿ ಆತ ಹ್ಯಾಕಿಂಗ್ ಕ್ಷೇತ್ರದಲ್ಲಿ ಹೆಸರುಗಳಿಸಿದ.
ಒಂದು ಕಂಪೆನಿಯನ್ನು ತೆರೆದು ದೊಡ್ಡ ದೊಡ್ಡ ಕಂಪೆನಿಗಳಿಗೆ, ಕಾರ್ಪೊರೇಟ್ ಸಂಸ್ಥೆಗಳಿಗೆ ಸೇವೆಗಳನ್ನು ಒದಗಿಸುತ್ತಾ ಪ್ರತಿ ವರ್ಷವೂ ಹಲವಾರು ಕೋಟಿ ರೂಪಾಯಿಗಳನ್ನು ಸಂಪಾದಿಸುತಿದ್ದಾನೆ. ಆತನೇ . ಲೂಧಿಯಾನಾದ ತ್ರಿಷ್ನಿತ್ ಅರೋರಾ. ಪಂಜಾಬ್ ನ ಲೂಧಿಯಾನದ ನಿವಾಸಿಯಾದ ತ್ರಿಷ್ನಿತ್ ಅರೋರಾಗೆ. ಚಿಕ್ಕಂದಿನಿಂದಲೂ ಕಂಪ್ಯೂಟರ್ ಗಳೆಂದರೆ ಅಚ್ಚು ಮೆಚ್ಚು. ಯಾವಾಗಲು ಕಂಪ್ಯೂಟರ್ ನಲ್ಲೇ ಕೆಲಸಮಾಡುತ್ತಿದ್ದ. ಪ್ರತಿ ದಿನವೂ ಹೊಸ ಹೊಸ ವಿಷಯಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದ. ಹೊಸ ಕೋರ್ಸ್ ಗಳನ್ನು ಕಲಿಯುತ್ತಾ ನೈಪುಣ್ಯತೆಯನ್ನು ಗಳಿಸಿಕೊಂಡ. ಆದರೆ, ಅವನು 8 ನೇ ತರಗತಿಯಲ್ಲಿ ಓದುತ್ತಿರುವಾಗ ಎರಡು ವಿಷಯಗಳಲ್ಲಿ ಫೈಲಾದ . ಇದರಿಂದ ವಿದ್ಯಾಭ್ಯಾಸ ಮುಂದುವರೆಸಲು ಈತನಿಂದ ಸಾಧ್ಯವಿಲ್ಲವೆಂದು ತಮಾಷೆ ಮಾಡಿದರು. ಆದರೆ,ಅರೋರಾ ಎದೆಗುಂದಲಿಲ್ಲ. ಓದುವುದನ್ನು ಬಿಟ್ಟು, ಕಂಪ್ಯೂಟರ್ ಕೋರ್ಸ್ ಗಳನ್ನು ಕಲಿಯಲಾರಂಭಿಸಿದ. ಈ ನಿಟ್ಟಿನಲ್ಲಿ ನೈಪುಣ್ಯತೆಯುಳ್ಳ ಹ್ಯಾಕರ್ ಆಗಿ ಹೆಸರುವಾಸಿಯಾದ. ಇದರಿಂದಾಗಿ ಅನೇಕ ಕಂಪೆನಿಗಳಿಂದ ಆಫರ್ ಗಳು ಬಂದವು. ಆದರೂ ಅವುಗಳನ್ನು ಸ್ವೀಕರಿಸಲಿಲ್ಲ. ಸ್ವಂತವಾಗಿ ಟಿ.ಏ.ಸಿ ಸೆಕ್ಯೂರಿಟಿ ಎಂಬ ಒಂದು ಸಾಫ್ಟ್ ವೇರ್ ಸೈಬರ್ ಸೆಕ್ಯೂರಿಟಿ ಕಂಪೆನಿಯನ್ನು ತೆರೆದ. ಆಗ ಆತನಿಗೆ ಕೇವಲ 22 ವರ್ಷ.
ಹೀಗೆ ತ್ರಿಷ್ನೀತ್ ಅರೋರಾ ದಿನೇ ದಿನೇ ಬೆಳೆಯಲಾರಂಭಿಸಿದ. ಈಗ ಆತನ ಕಂಪೆನಿಗೆ 50 ಕ್ಕಿಂತಲು ಹೆಚ್ಚು ಗಿರಾಕಿಗಳಿದ್ದಾರೆ. ಆ ಕಂಪೆನಿಗಳೆಲ್ಲವು ಪ್ರಪಂಚದಲ್ಲೇ ಟಾಫ್ 500 ಒಳಗಿನ ಕಂಪೆನಿಗಳೇ. ರಿಲಯೆನ್ಸ್, ಅಮೂಲ್, ಅವಾನ್ ಸೈಕಲ್ ಮುಂತಾದ ಖಾಸಗಿ ಕಂಪೆನಿಗಳೊಂದಿಗೆ, ಸಿ.ಬಿ.ಐ. ಪಂಜಾಬ್ ಪೊಲೀಸ್,ಗುಜರಾತ್ ಪೊಲೀಸ್, ಸಾರ್ವ ಜನಿಕ ಉದ್ದಿಮೆಗಳು ಸಹ ಈಗ ತ್ರಿಷ್ನಿತ್ ಅರೋರಾ ಕಂಪೆನಿಗೆ ಕ್ಲೈಂಟ್ ಗಳಾಗಿದ್ದಾರೆ.
ಆಯಾ ಕಂಪೆನಿಗಳಿಗೆ ಸೇರಿದ ಸೆಕ್ಯೂರಿಟಿ ಒದಗಿಸುವುದನ್ನು ಅರೋರಾ ಕಂಪೆನಿ ನಿರ್ವಹಿಸುತ್ತದೆ. ಅವು ಹ್ಯಾಕಿಂಗ್ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಅರೋರಾ ಕಂಪೆನಿಯದ್ದು. ಇದರಿಂದಾಗಿ ಈಗ ಆತನ ಜೀವನ ಶೈಲಿಯೇ ಬದಲಾಗಿದೆ. ಮತ್ತೊಂದು ವಿಷಯವೇನೆಂದರೆ, ಅರೋರಾ ಈಗಾಗಲೇ 3 ಪುಸ್ತಕಗಳನ್ನು ಬರೆದಿದ್ದಾನೆ. ಹ್ಯಾಕಿಂಗ್ ಟಾಕ್ ವಿತ್ ತ್ರಿಷ್ನಿತ್ ಅರೋರಾ, ದಿ ಹ್ಯಾಕಿಂಗ್ ಎರಾ, ಹ್ಯಾಕಿಂಗ್ ವಿತ್ ಸ್ಮಾರ್ಟ್ ಫೋನ್ಸ್.! ಈ ಮೂರೂ ಪುಸ್ತಕಗಳು ಈತನಿಗೆ ಒಳ್ಳೆಯ ಹೆಸರು ತಂದುಕೊಟ್ಟಿವೆ. ಒಂದು ಕಾಲದಲ್ಲಿ 8 ನೇ ತರಗತಿ ಫೈಲ್ ಆದರೂ ತನ್ನ ಗುರಿ ತಲುಪಿ ಕೋಟಾನು ಕೋಟಿ ರೂಪಾಯಿಗಳನ್ನು ಸಂಪಾದಿಸಿರುವ ತ್ರéಿಷ್ನಿತ್ ಅರೋರಾಗೆ ಹೃದಯಪೂರ್ವಕ ಅಭಿನಂದನೆಗಳು.

Post a Comment