Header Ads

test

ಕೇವಲ ಅರ್ಧ ಎಕರೆ ಜಮೀನಿನಲ್ಲಿ 3,223 ಕೆ.ಜಿ. ಭತ್ತ ಬೆಳೆದು ಎಲ್ಲರಿಗೂ ಮಾದರಿಯಾದ ಶಿಕ್ಷಕಿ.!!

ಈಗ ನಮ್ಮ ದೇಶದಲ್ಲಿ ರೈತರ ಸ್ಥಿತಿ ಹೇಗಿದೆ ಎಂದು ಎಲ್ಲರಿಗೂ ತಿಳಿದಿರುವ ಸಂಗತಿ. ಬೆಳೆ ಇಡಲು ಹಣ ಇರುವುದಿಲ್ಲ, ಬ್ಯಾಂಕುಗಳು ಸಾಲನೂ ಕೊಡುವುದಿಲ್ಲ. ಇತರರಲ್ಲಿ ಅಧಿಕ ಬಡ್ಡಿಗೆ ಸಾಲ ಮಾಡಿ ಬೀಜ ಬಿತ್ತನೆ ಮಾಡಿ ಗೊಬ್ಬರ ಹಾಕಿ ಬೆವರು ಸುರಿಸಿ ಕಷ್ಟಪಟ್ಟು ಬೆಳೆ ಬೆಳೆದರೂ ಸರಿಯಾದ ಬೆಲೆ ಸಿಗುವುದಿಲ್ಲ. ಜೊತೆಗೆ ದಳ್ಳಾಳಿಗಳ ಮೋಸ ಹೀಗೆ ಎಷ್ಟೋ ಕಷ್ಟಗಳ ನಡುವೆ ರೈತರು ಅತಿ ಕಷ್ಟದಿಂದ ವ್ಯವಸಾಯ ಮಾಡುತ್ತಿದ್ದಾರೆ. ಗದ್ದೆಯಲ್ಲಿ ಭತ್ತವನ್ನು ನಾಟಿ ಮಾಡಿದವರ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಸರಿಯಾಗಿ ಬೆಳೆ ಬಂದರೆ ಒಂದು ಎಕರೆಗೆ 40 ಚೀಲ ಇಳುವರಿ ಬರಬೇಕು. ಆದರೆ ಇಂದು ಎರಡು ಎಕರೆಗೂ ಅಷ್ಟು ಇಳುವರಿ ಸಿಗುತ್ತಿಲ್ಲ. ಇದಕ್ಕೆ ಅನೇಕ ಕಾರಣಗಳಿವೆ. ಆದರೆ ತಮಿಳುನಾಡಿನ ಒಬ್ಬ ರೈತ ಮಹಿಳೆ ಮಾತ್ರ ಅರ್ಧ ಎಕರೆಗೆ 43 ಚೀಲ ಭತ್ತ ಬೆಳೆದು ದಾಖಲೆ ನಿರ್ಮಿಸಿದ್ದಾಳೆ. ಹೌದು ನೀವು ಕೇಳಿದ್ದು ನಿಜ. ಓರ್ವ ಮಹಿಳೆ ಇದನ್ನು ಸಾಧಿಸಿದ್ದಾಳೆ. ಆಕೆ ಶಾಲಾ ಶಿಕ್ಷಕಿಯಾಗಿರುವುದು ವಿಶೇಷ.


ಆಕೆಯ ಹೆಸರು ಪ್ರಸನ್ನ. ಖಾಸಗಿ ಶಾಲೆಯಲ್ಲಿ ವಿಜ್ಞಾನ ವಿಷಯದ ಶಿಕ್ಷಕಿ. ಆದರೆ ಪ್ರಸನ್ನರವರಿಗೆ ಚಿಕ್ಕಂದಿನಿಂದಲೇ ವ್ಯವಸಾಯದ ಬಗ್ಗೆ ಆಸಕ್ತಿ. ಹಾಗಾಗಿ ಆಕೆಯ ತಂದೆ ಪ್ರತಿದಿನ ಮಗಳನ್ನು ಜಮೀನಿಗೆ ಕರೆದುಕೊಂಡು ಹೋಗುತ್ತಿದ್ದರು. ಕಾಲೇಜಿಗೆ ಹೋಗುವ ಮುಂಚೆ ತೋಟಕ್ಕೆ ಹೋಗಿ ನಂತರವೇ ಕಾಲೇಜ್’ಗೆ ಹೋಗುತ್ತಿದ್ದರು. ಹೀಗೆ ಅವರು ಎಂ.ಎಸ್ಸಿ, .ಬಿ.ಎಡ್ ಮಾಡಿ ಟೀಚರ್ ಆಗಿ ಉದ್ಯೋಗ ಪ್ರಾರಂಭಿಸಿದರು. ಆದರೆ ವ್ಯವಸಾಯದ ಬಗ್ಗೆ ಆಸಕ್ತಿ ಇದ್ದದ್ದರಿಂದ ಒಬ್ಬ ರೈತನನ್ನೇ ವಿವಾಹವಾದರು.

ತಮಿಳುನಾಡಿನ ಕೃಷಿ ತಜ್ಞರು ಹೊಸದಾಗಿ ಶ್ರೀವರಿ ಎನ್ನುವ ಭತ್ತದ ತಳಿಯೊಂದನ್ನು ಕಂಡುಹಿಡಿದರು. ಆ ಬೀಜಗಳ ಬಗ್ಗೆ ತಿಳಿದುಕೊಂಡು ಅದನ್ನು ಬೆಳೆಸಬೇಕೆಂದು ನಿರ್ಣಯಿಸಿದರು ಈ ಶಿಕ್ಷಕಿ. ಅದಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಹಾಗೂ ಬಿತ್ತನೆ ಬೀಜ ಪಡೆಯಲು ತಜ್ಞರನ್ನು ಭೇಟಿ ಮಾಡಿ ಬೀಜ ಪಡೆದುಕೊಂಡು ಬೆಳೆ ಹಾಕಿದರು. ಆದರೆ ಮೊದಲ ಎರಡು ಸಲ ವಿಫಲವಾದರು. ಈ ಸಾರಿ ಹೇಗಾದರೂ ಮಾಡಿ ಅದೇ ತಳಿ ಬೀಜಗಳಿಂದ ಒಳ್ಳೆಯ ಇಳುವರಿ ಪಡೆಯಬೇಕೆಂದು ಕೊಂಡರು. ಗೊಬ್ಬರವನ್ನು ತಯಾರಿಸಿ ಅದನ್ನು ಬಳಸಿದರು. ಈ ಸಾರಿ ನಿರೀಕ್ಷಿಸಿದಂತೆ ಹೆಚ್ಚು ಇಳುವರಿ ಪಡೆದರು. ಸಾಮಾನ್ಯವಾಗಿ ಒಂದು ಎಕರೆ ಗದ್ದೆಯಲ್ಲಿ ಸುಮಾರು 40 ಚೀಲ ಭತ್ತ ಬೆಳೆಯಬಹುದು. ಆದರೆ ಪ್ರಸನ್ನರವರು ಮಾಡಿದ ಸಾಗುವಳಿಯಿಂದ ಶ್ರೀವರಿ ಬಿತ್ತನೆ ಬೀಜದ ಕಾರಣವಾಗಿ ಅವರು ಅರ್ಧ ಎಕರೆ ಜಮೀನಿನಲ್ಲಿ 43 ಚೀಲ (3,223 ಕೆ.ಜಿ) ಭತ್ತ ಬೆಳೆದರು. ಅವರು ಸಾಧಿಸಿದ ಇಳುವರಿ ದಾಖಲೆ ಮಾಡಿದ್ದರಿಂದ ಅವರಿಗೆ ಅಲ್ಲಿನ ಸರ್ಕಾರ ರೂ.5 ಲಕ್ಷ ನಗದು ಬಹುಮಾನ ನೀಡಿ ಗೌರವಿಸಿತು. ಈಗ ಪ್ರಸನ್ನರವರು ತಮ್ಮ ಹೆಚ್ಚಿನ ಆಸಕ್ತಿಯನ್ನು ಕೃಷಿಯ ಮೇಲೆ ವಹಿಸಿದ್ದಾರೆ. ಇದೇ ಕೃಷಿ ಪದ್ಧತಿಯಲ್ಲಿ ಇನ್ನೂ ಉತ್ತಮ ಬೆಳೆ ಬೆಳೆದು ಹೆಸರುಗಳಿಸಬೇಕೆಂಬುದು ಅವರ ಬಯಕೆ. ಏನೇಯಾಗಲಿ ಒಬ್ಬ ಮಹಿಳೆಯಾಗಿ ಕೃಷಿಯಲ್ಲಿ ತೊಡಗಿಸಿಕೊಂಡು ಅದ್ಭುತ ಸಾಧಿಸೆ ಮಾಡಿದ ಪ್ರಸನ್ನರವರನ್ನು ಅಭಿನಂದಿಸಲೇಬೇಕು..

1 comment: