Header Ads

test

ಪಾದಗಳಲ್ಲಿ ಬಿರುಕುಗಳಿವೆಯೇ? ಚಿಂತಿಸಬೇಡಿ.3 ರಾತ್ರಿ ಹೀಗೆ ಮಾಡಿ ಬಿರುಕುಗಳು ಮಾಯವಾಗುತ್ತವೆ!!

ಪಾದಗಳಲ್ಲಿನ ಬಿರುಕುಗಳು. ಇವುಗಳನ್ನು ನೋಡಿದರೇನೇ ಅಸಹ್ಯ ಹುಟ್ಟಿಸುವಂತಿರುತ್ತವೆ . ಇಂತಹ ಬಿರುಕುಗಳಿಂದಾಗಿ ಸಮಾಜದಲ್ಲಿ ನಮ್ಮ ಮರ್ಯಾದೆ ಕಡಿಮೆಯಾಗುತ್ತದೆ. ಬಿರುಕುಗಳಿದ್ದರೆ ಜನರು ನಮ್ಮನ್ನು ಮೇಲ್ದರ್ಜೆ ಜನರಂತೆ ಅಲ್ಲದೆ, ಒರಟು ಜನರಂತೆ ಕಾಣುವರೆಂದು ಹಲವರ ಅನಿಸಿಕೆ. ಜನರ ನಡುವೆ ಇರುವಾಗ ಬಿರುಕುಗಳು ಕಾಣದಂತೆ ಬಚ್ಚಿಟ್ಟುಕೊಳ್ಳುತ್ತಾರೆ. ಇದರ ಬಗ್ಗೆ ಟಿ.ವಿ.ಯಲ್ಲಿ ಬರುವ ಒಂದು ವಾಣಿಜ್ಯ ಪ್ರಕಟಣೆಯಲ್ಲಿ . ಓರ್ವ ಮಧ್ಯಮ ವರ್ಗದ ಮಹಿಳೆ ತನ್ನ ಪಾದಗಳ ಬಿರುಕುಗಳು ಯಾರಿಗೂ ಕಾಣದಂತೆ ಬಚ್ಚಿಟ್ಟುಕೊಳ್ಳುತ್ತಿರುವ ಆ ಪ್ರಕಟಣೆ ಎಷ್ಟು ಕ್ಲಿಕ್ ಆಗಿದೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಈ ಪ್ರಕಟಣೆಯನ್ನು ನೋಡಿ ಅದೆಷ್ಟು ಮಂದಿ ಆ ಉತ್ಪಾದನೆಯನ್ನು ಬಳಸಿ, ಅದರ ಪರಿಣಾಮವಾಗಿ ಎಷ್ಟು ಮಂದಿಗೆ ಬಿರುಕುಗಳು ಮಾಯವಾಗಿ ಪಾದಗಳು ಕೋಮಲವಾಗಿ ಬದಲಾಗಿವೆಯೋ ದೇವರೇ ಬಲ್ಲ. ಆದರೆ, ಆ ಕ್ರೀಂ ಮಾರಾಟ ಮಾಡಿದ ಕಂಪನಿಯು ಮಾತ್ರ ಕೋಟಿಗಟ್ಟಲೆ ಜನರ ಹಣ ಲೂಟಿಮಾಡಿದೆ. ಆದರೆ ಈಗ ನಿಮಗೆ ತಿಳಿಸಲಿರುವ ಉಪಾಯದಿಂದ ಖರ್ಚಿಲ್ಲದಂತೆ ಕೇವಲ 3 ರಾತ್ರಿಗಳಲ್ಲಿ ಪಾದಗಳಲ್ಲಿನ ಬಿರುಕುಗಳು ಮಾಯವಾಗುತ್ತವೆ. ನೈಸರ್ಗಿಕವಾದ ಆ ಉಪಾಯ ಏನೆಂದು ನೋಡೋಣ.


ಕಾಲದೊಡನೆ ಸಂಬಂಧವಿಲ್ಲದಂತೆ ಪೀಡಿಸುವ ಸಮಸ್ಯೆಗಳಲ್ಲಿ ಪಾದಗಳ ಬಿರುಕುಗಳು ಒಂದಾಗಿದೆ. ನೀರಿನಲ್ಲಿ ತುಂಬಾ ಹೊತ್ತು ನೆನೆಯುವುದು, ಪಾದಗಳಲ್ಲಿ ಸಾಕಷ್ಟು ತೇವಾಂಶವಿಲ್ಲದಿರುವುದು, ಬಿರುಕುಗಳಲ್ಲಿ ಧೂಳು, ಕೊಳೆ ಸೇರಿಕೊಳ್ಳುವುದು ಇವೆಲ್ಲವೂ ಪಾದಗಳ ಸಮಸ್ಯೆಗಳಿಗೆ ಕಾರಣಗಳಾಗಿವೆ. ಬಿರುಕು ಬಂದಾಗ ನಡೆಯಲೂ ತುಂಬಾ ತೊಂದರೆಯಾಗುತ್ತದೆ. ಅಷ್ಟೇ ಅಲ್ಲದೆ ಕೆಲವರಿಗೆ ಕೀವು, ರಕ್ತ ಕೂಡಾ ಬರುತ್ತದೆ. ಈ ಸಮಸ್ಯೆಯನ್ನು ಬಗೆಹರಿಸಲು ಕೆಲವು ಉಪಾಯಗಳು ಇಲ್ಲಿವೆ.

ಸಾಸಿವೆ ಎಣ್ಣೆಯೊಂದಿಗೆ ಮೇಣವನ್ನು ಬೆರೆಸಿ ಮಲಗುವ ಮುಂಚೆ ಬಿರುಕಗಳಲ್ಲಿ ಹಚ್ಚಿಕೊಂಡಲ್ಲಿ ಒಳ್ಳೆಯ ಫಲಿತಾಂಶ ದೊರೆಯುತ್ತದೆ. ಉಗುರುಬೆಚ್ಚಗಿನ ನೀರಿನಲ್ಲಿ ಒಂದು ಚಿಟಿಕೆ ಉಪ್ಪು, ಅರಿಶಿನವನ್ನು ಬೆರೆಸಿ ಪಾದಗಳಿಗೆ ಹಚ್ಚಿ 10 ನಿಮಿಷಗಳ ನಂತರ ಬಿಳಿ ಪೆಟ್ರೋಲಿಯಂ ಜೆಲ್ಲಿಯನ್ನು ಹಚ್ಚಿಕೊಂಡು ನಂತರ ತೊಳೆದುಕೊಂಡಲ್ಲಿ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು. ದೇಹದಲ್ಲಿ ಅಧಿಕವಾದ ಉಷ್ಣತೆಯಿಂದಲೂ ಪಾದಗಳಲ್ಲಿ ಬಿರುಕುಗಳು ಬರುತ್ತದೆ. ಅಂತಹ ಸಮಯದಲ್ಲಿ ಉಷ್ಣತೆಯನ್ನು ಕಡಿಮೆಗೊಳಿಸುವ ಗುಣವುಳ್ಳಂತಹ ಮೆಹಂದಿಯನ್ನು ನುಣ್ಣಗೆ ಅರೆದು ಪಾದಗಳಿಗೆ ಹಚ್ಚಿ ಸ್ವಲ್ಪ ಸಮಯದ ನಂತರ ಸ್ವಚ್ಛಗೊಳಿಸುವುದರಿಂದಲೂ ಒಳ್ಳೆಯ ಫಲಿತಾಂಶ ದೊರೆಯುತ್ತದೆ.

ಪ್ರತಿದಿನ ರಾತ್ರಿ ಮಲಗುವ ಮುಂಚೆ ಎಳ್ಳೆಣ್ಣೆಯನ್ನು ಅಥವಾ ಬಾಳೆಹಣ್ಣಿನ ತಿರುಳನ್ನು ಹಚ್ಚಿಕೊಳ್ಳುವುದು, ಅರಿಶಿನ, ತುಳಸಿ, ಕರ್ಪೂರವನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಇದನ್ನು ಅಲೊವೆರಾ ಜೆಲ್ ನೊಂದಿಗೆ ಬೆರೆಸಿ ಹಚ್ಚುವುದು, ಪ್ಲಾಸ್ಟಿಕ್ ಚಪ್ಪಲಿಗಳಿಗೆ ಬದಲಾಗಿ ಚರ್ಮದಿಂದ ತಯಾರಿಸಿದ ಚಪ್ಪಲಿಗಳನ್ನು ಬಳಸುವುದು ಒಳ್ಳೆಯದು. ಎತ್ತರದ ಚಪ್ಪಲಿಗಳನ್ನು ಬಳಸಬಾರದು. ಉಗುರುಬೆಚ್ಚಗಿನ ನೀರಿನಲ್ಲಿ ನಿಂಬೆರಸವನ್ನು 10 ನಿಮಿಷಗಳ ಕಾಲ ಪಾದಗಳನ್ನು ಇರಿಸಿ ಸ್ವಚ್ಚಮಾಡಿಕೊಳ್ಳುವುದು. ಪ್ರತಿನಿತ್ಯ ರಾತ್ರಿ ರೋಜ್ ವಾಟರ್ ಅನ್ನು ಬಿರುಕುಗಳ ಮೇಲೆ ಹಚ್ಚಿ ಮೃದುವಾಗಿ ಉಜ್ಜುವುದರಿಂದಲೂ ಒಳ್ಳೆಯ ಫಲಿತಾಂಶ ದೊರೆಯುತ್ತದೆ.

No comments