Header Ads

test

ಜೀವನದಲ್ಲಿ ಇನ್ನೂ 'ಸ್ಥಿರಗೊಳ್ಳದ' 27 ವರ್ಷದ ಯುವಕನ ಆಲೋಚನೆಗಳು. ಇಂದಿನ ಎಲ್ಲ ಯುವಕರಿಗೂಹೋಲಿಸಬಹುದು!

ಬೆಳೆಯಬೇಕೆಂಬ ಅವಸರ ನಿನಗ್ಯಾಕೆ. ಬೆಳೆದ ಮೇಲೆ ನಿನ್ನ ಬಾಳೆಲ್ಲಾ ಅಸ್ತವ್ಯಸ್ತ’ ಚಿಕ್ಕಂದಿನಲ್ಲಿ ಈ ಹಾಡನ್ನು ಕೇಳುವಾಗ ನಗು ಬರುತ್ತಿತ್ತು. ದೊಡ್ಡವನಾದಮೇಲೆ ಓದಬೇಕಾಗಿಲ್ಲ, ಪರೀಕ್ಷೆಗಳನ್ನು ಬರೆಯಬೇಕಿಲ್ಲ, ಹಿರಿಯರು ಹೇಳಿದ್ದೆಲ್ಲವನ್ನೂ ಕೇಳಲೇ ಬೇಕೆಂದೇನಿಲ್ಲ , ಈ ಸ್ವಾತಂತ್ರ್ಯಕ್ಕಾಗಿ ಕಾಯುತ್ತಿದ್ದೆ.10 ನೇ ತರಗತಿಯಲ್ಲಿ ಒಳ್ಳೆಯ ಅಂಕಗಳನ್ನು ಗಳಿಸಿದೆ. ಪಿಯು ನಲ್ಲಿ ಚೆನ್ನಾಗಿ ಓದಿದೆ. ಸಿಇಟಿ ಯಲ್ಲಿ ಒಳ್ಳೆಯ ರ್ಯಾಂಕ್ ಬಂದಿತು. ಆಟೊಮೆಟಿಕ್ ಆಗಿ ಇಂಜಿನಿಯರಿಂಗ್ ಕೋರ್ಸ್ ಗೆ ಸೇರಿದೆ. ಆಗ ಪ್ರಾರಂಬವಾಯಿತು ನೋಡಿ.ಸರಿಗಮಪದನಿಸ ಮ್ಯೂಸಿಕ್ ಸ್ಟಾರ್ಟ್.


ಹೀಗೆಯೇ ಹಾಡುತ್ತಾ ,ಓಡುತ್ತಾ ಇಂಜಿನಿಯರಿಂಗ್ ಮುಗಿಸಿ ಹೊರಗೆ ಬಂದು ನೋಡಿದರೆ ,ಎಲ್ಲವೂ ಅಯೋಮಯ, ಅಗಮ್ಯ ಗೋಚರವಾಗಿದೆ. ಸಾಫ್ಟ್ ವೇರ್ ಕೋರ್ಸ್ ಒಳ್ಳೆಯದೆಂದು ಕೆಲವರು, ಸರಕಾರಿ ಕೆಲಸವಾದರೆ ಒಳ್ಳೆಯದು ಎಂದು ಇನ್ನು ಕೆಲವರು, ಹುಡುಗನನ್ನು ಸುಮ್ಮನೆ ಕೂರಲು ಬಿಡಬೇಡಿ ಎಂದು ಕೆಲವು ಮಹಾಶಯರ ಸಲಹೆಗಳು.’ ನನ್ನ ಬಳಿಗೆ ಕಳುಹಿಸಿ ಎಲ್ಲೋ ಒಂದು ಕಡೆ ಸೇರಿಸುತ್ತೇನೆ’ಎಂದು ಒಬ್ಬ ದೊಡ್ಡ ಮನುಷ್ಯನ ಹೇಳಿಕೆ. ಸರಿ, ಇವೆಲ್ಲವನ್ನೂ ದಾಟಿಕೊಂಡು ಬಂದು ಒಂದು ಕೆಲಸವನ್ನು ಸಂಪಾದಿಸಿಕೊಳ್ಳಲು ನೂರಾರು ಸಮಸ್ಯೆಗಳು, ಆಗಲೇ ಗೊತ್ತಾಗಿದ್ದು ನನಗೆ 27 ವರ್ಷಗಳೆಂದು. ಮನೆಯಲ್ಲಿ ಎಲ್ಲರೂ ಮದುವೆ ಮಾಡಿಕೋ ಎಂದು ಪೀಡಿಸತೊಡಗಿದರು. ಆಗ ಆಲೋಚನೆಗಳು ಪ್ರಾರಂಭವಾದುವು.

  1. ನನ್ನಂತಹವನು ಮದುವೆಮಾಡಿಕೊಂಡು ಮಾಡುವುದಾದರೂ ಏನು? ಅವಳಗೆ ಏನನ್ನು ನೀಡಿ ಪೋಷಿಸಲಿ. ಈ ಕಾಲದ ಹುಡುಗಿಯರು ಬಹಳ ಜೋರು. ಬಹಳ ಅಪಾಯಕಾರಿಯಾಗಿದ್ದಾರೆ. ಒಳ್ಳೆಯ ಸಂಬಳ ಇಲ್ಲದಿದ್ದರೆ, ನಮ್ಮನ್ನು ನಿಷ್ಪ್ರಯೋಜಕ ಎಂದು ಭಾವಿಸುತ್ತಾರೆ. ಸರಿ, ಮೊದಲಿಗೆ ನನ್ನ ಭವಿಷ್ಯ ಮುಖ್ಯ.ಯಾವುದಾದರೂ ಒಂದು ಒಳ್ಳೆಯ ಕಂಪೆನಿಗೆ ಸೇರಿಕೊಳ್ಳೊಣ.

  2. ನನಗೇನೂ ಅಂತಹ ಹೊಟ್ಟೆ ಕಿಚ್ಚು ಇಲ್ಲ(ಹೌದು. ಸ್ವಲ್ಪ ಇದೆ) ಯಾಕಿರುವುದಿಲ್ಲ.? ನನ್ನ ಬ್ಯಾಚ್ ನಲ್ಲಿ ಓದಿದವರೆಲ್ಲರೂ ಚೆನ್ನಾಗಿ ಜೀವನದಲ್ಲಿ ನೆಲೆಕಂಡುಕೊಂಡಿದ್ದಾರೆ. ನಾನಿನ್ನೂ ಹೀಗೆ ಅಲೆದಾಡುತ್ತಿದ್ದರೆ, ಹೊಟ್ಟೆ ಕಿಚ್ಚು ಯಾಕಿರುವುದಿಲ್ಲ? ಇರುತ್ತದೆ. ಅವರೇನೋ ಹೊಸ ಕಾರು ಖರೀದಿಸಿ, ಸೆಲ್ಫಿ ತೆಗೆದುಕೊಂಡು ಫೇಸ್ ಬುಕ್ ನಲ್ಲಿ ಹಾಕುವುದು. ನಾನೇನೋ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಸೀಟಿಗಾಗಿ ಹೊಡೆದಾಡುವುದು.

  3.  ಒಮ್ಮೊಮ್ಮೆ ಈ ಬಂಧುಗಳ ಮುಖ ಮುಚ್ಚಿ ಚೆನ್ನಾಗಿ ಚಚ್ಚಬೇಕೆನಿಸುತ್ತದೆ. ಮೇಲೆ ಸಹಾನುಭೂತಿ ತೋರಿಸುತ್ತಾರೆ. ಒಳಗೊಳಗೆ ಸಂತಸದಿಂದ ಕುಣಿಯುತ್ತಾರೆ. ಏನೋ .ಇನ್ನೂ ಹೀಗೇ ಇದ್ದೀಯ. ಸ್ವಲ್ಪ ಚೆನ್ನಾಗಿ ಓದಿದ್ದರೆ, ಇಷ್ಟು ಕಷ್ಟಗಳು ಬರುತ್ತಿರಲಿಲ್ಲ ಎನ್ನುತ್ತಾರೆ. ಇವರು ಏನು ಹೇಳುತ್ತಾರೆಂದು ನನಗೇನು ಅಷ್ಟುಮಾತ್ರ ಗೊತ್ತಾಗೊಲ್ವಾ .ಮೊದಲು ಮದುವೆ ಮಾಡಿಕೋ ನಂತರ ಜೀವನದಲ್ಲಿ ಒಂದು ನೆಲೆ ಕಂಡುಕೊಳ್ಳುತ್ತೀಯ ಎನ್ನುತ್ತಾರೆ. ಜೀವನದಲ್ಲಿ ಸ್ಥಿರವಾಗದೆ ಹುಡುಗಿ ಬರುವುದಿಲ್ಲ. ಹುಡುಗಿ ಬಾರದೆ ಜೀವನ ಸ್ಥಿರವಾಗುವುದಿಲ್ಲ. ನಾನೇನು ಮಾಡಬೇಕೆಂದು ನೀವೇ ಹೇಳಿ.

  4. ನನ್ನೊಡನೆ ಬಿಟೆಕ್ ಓದಿದವರು ಈಗ ಒಳ್ಳೆಯ ಸ್ಥಾನದಲ್ಲಿದ್ದು, ಅವರು ಮಾಡುವ ಓವರ್ ಆಕ್ಷನ್ ಎಷ್ಟರ ಮಟ್ಟಿಗಿದೆಯೆಂದು ಹೇಗೆ ಹೇಳಲಿ. ನಮ್ಮ ಕಂಪೆನಿಯಲ್ಲಿ ಕೆಲವುನ ಖಾಲಿ ಹುದ್ದೆಗಳಿವೆ ಅಪ್ಲೈ ಮಾಡು ಮಾಮ ನಾವೆಲ್ಲಾ ನೋಡಿಕೊಳ್ಳುತ್ತೇವೆ.ಎಂದು ಹೇಳಿದಾಗ ಆಸೆಯಿಂದ ಅರ್ಜಿ ಹಾಕಿದರೆ ಮುಗಿಯಿತು ಅವರ ಸುತ್ತಲೂ ಸುತ್ತುತ್ತಿರಬೇಕು. ಥೂ.ದರಿದ್ರವಲ್ಲದೇ ಇನ್ನೇನು. ನನ್ನಷ್ಟಕ್ಕೆ ನಾನು ಅಳುತ್ತಿದ್ದರೆ. ನಿನ್ನ ಗೋಳೇನು? ನನಗೆ ಮೊದಲಿಗೆ ಒಬ್ಬಳು ಗರ್ಲ್ ಫ್ರೆಂಡ್ ಇರಬೇಕು ,ಇವರಿಗೆ ಆಗ ನನ್ನ ಬೆಲೆ ಏನೆಂದು ತಿಳಿಯುತ್ತದೆ.

  5. ನಮ್ಮ ಹಿತಶತ್ರುವೆಂದರೆ ಯಾರೋ ಅಲ್ಲ. ಗಂಡು ಮಕ್ಕಳಿಗೆ ಎಲ್ಲಕ್ಕಿಂತಲು ಮುಖ್ಯವಾದದ್ದು ( ತಪ್ಪಾಗಿ ಏನೇನೋ ಯೋಚಿಸಬೇಡಿ) ಕೂದಲು. ನಾನು ತೋರಿಸುತ್ತಿರುವ ಅಕ್ಕರೆಗೆ, ಪ್ರಕೃತಿಯಲ್ಲಿರುವ ವಾಯುಮಾಲಿನ್ಯಕ್ಕೆ ನನ್ನ ತಲೆಗೂದಲು ಆಗಾಗಲೆ ಅರ್ಧ ಖಾಲಿಯಾಗಿದೆ. ಇರುವ ಕೂದಲನ್ನೇ ಮುಂದಕ್ಕೆ ಬಾಚಿಕೊಂಡು ಖಾಲಿ ಪ್ರದೇಶವನ್ನು ಮುಚ್ಚಿದ್ದೇನೆ. ಕೇವಲ ಹೊಟ್ಟೆಗೆ ಬಟ್ಟೆಗೆ ಮಾತ್ರ ಇದ್ದರೆ, ಹುಡುಗಿಯರು ಹುಡುಗರ ಕಡೆ ಕಣ್ಣೆತ್ತಿಯೂ ನೋಡುವುದಿಲ್ಲ. ಇಂತಹ ಕಷ್ಟ ಶತೃವಿಗೂ ಬರಬಾರದು ಎನಿಸುತ್ತದೆ.

  6. ನಾನು ಇಷ್ಟೆಲ್ಲಾ ಕಷ್ಟಗಳನ್ನು ಅನುಭವಿಸುತ್ತಿದ್ದರೆ, ಒಬ್ಬ ಗೆಳೆಯನಿಗೂ ನನ್ನ ಹೆಸರು ನೆನಪಿಗೆ ಬರುವುದಿಲ್ಲ. ಫೋನ್ ಮಾಡಿ ಹೇಳುತ್ತಾರೆ. ಮಾಮಾ ನನ್ನ ಮದುವೆ ಕಣೋ. ನೀನು ಬರದಿದ್ದರೆ ಹೇಗೋ ಎನ್ನುತ್ತಾರೆ ( ಇವನಮ್ಮಾ ಇವನಿಗೂ ಮದುವೆ ಆಗುತ್ತಿದೆಯಾ. ಅಸಲಿಗೆ ಬಿಟೆಕ್ ಪಾಸ್ ಆಗುತ್ತಾನೋ ಇಲ್ಲವೋ ಎಂದುಕೊಂಡಿದ್ದೆ.) ಯಾವ ಮುಖ ಹೊತ್ತು ಮದುವೆಗೆ ಹೋಗಲಿ . ವಾರದ ಕೊನೆಯಲ್ಲಿ ಕೆಲಸ ಹೆಚ್ಚಾಗಿದೆಯೆಂದೋ, ರಜೆ ಸಿಗಲಿಲ್ಲವೆಂದೋ ಸುಳ್ಳು ಹೇಳಿದರೆ ತಪ್ಪಿಸಿಕೊಂಡರೆ ಆಯಿತು.

  7. ನನ್ನ ಹತಾಶೆಯಲ್ಲಿ ನಾನಿದ್ದರೆ, ಅಪ್ಪ ಅಮ್ಮ ಬಂದು ನೋಡೋ ಅವರ ಮಗನನ್ನ ಜೀವನದಲ್ಲಿ ಹೇಗೆ ಸ್ಥಿರವಾಗಿದ್ದಾನೆ. ಶೇಖರ್ ಅವರ ಮಗ ಫ್ರಾನ್ಸ್ ಗೆ ಹೋಗಿದ್ದಾನೆ, ಪ್ರಸಾದ್ ಮಗಳು ಸಿಂಗಪುರ್ ನಲ್ಲಿ ಸ್ಥಿರವಾಗಿದ್ದಾಳಂತೆ. ವೆಂಕಟ್ರಾವ್ ಮಗ ಉಗಾಂಡಾದಲ್ಲಿ ಈರುಳ್ಳಿ ವ್ಯಾಪಾರ ಮಾಡುತ್ತಿದ್ದಾನಂತೆ ಎಂದು ಇಲ್ಲ ಸಲ್ಲದ ಹೋಲಿಕೆಗಳನ್ನು ನೀಡಿ ಪ್ರಾಣ ತೆಗೀತಾರೆ.

  8. ನನಗಿರುವ ಕಷ್ಟಗಳಿಗೆ ಗರ್ಲ್ ಫ್ರೆಂಡೊಂದು ಕೇಡು. ಹಾಗೇನಾದರೂ ಇದ್ದಿದ್ದರೆ, ಆಗ ನನ್ನ ಪರಿಸ್ಥಿತಿ ಹೇಗಿರಬಹುದೆಂದು ಹೇಳುತ್ತೇನೆ. ನನಗೆ ಗರ್ಲ್ ಫ್ರೆಂಡ್ ಆದವಳು ಎಷ್ಟು ಇನ್ನೋಸೆಂಟ್ ಆಗಿರಬಹುದು ಎಂದು ಊಹಿಸಬಹುದು. ಇಷ್ಟು ವಯಸಾಗಿದ್ದರೂ ಕೊನೇ ಪಕ್ಷ ಶಾಪಿಂಗ್ ಗೆ ಆದರೂ ಕರೆದುಕೊಂಡು ಹೋಗಲಿಲ್ಲ ಎಂದು ನೆಪಹೇಳಿ ಸಂಬಂಧ ಕೊನೆಗಾಣಿಸುತ್ತಾಳೆ( ಎಲ್ಲರೂ ಇದೇ ರೀತಿ ಇರುತ್ತಾರೆಂದು ನಾನು ಹೇಳುತ್ತಿಲ್ಲ.ಕೆಲವು ಒಳ್ಳೇ ಲವರ್ಸ್ ಇರುತ್ತಾರೆ)

ಒಂದು ಕಡೆ ಮದುವೆ ಮತ್ತೊಂದು ಕಡೆ ಭವಿಷ್ಯ ಮಧ್ಯದಲ್ಲಿ ಸ್ಯಾಂಡ್ ವಿಚ್ ಆಗುತ್ತಿದೆ ನನ್ನ ಜೀವನ.ಅಳ ಬೇಕೆಂದುಕೊಂಡರೂ ಅಳಲಾಗುತ್ತಿಲ್ಲ ‘ ಬೆಳೆಯಬೇಕೆಂಬ ಅವಸರ ನಿನಗ್ಯಾಕೆ. ಬೆಳೆದ ಮೇಲೆ ನಿನ್ನ ಬಾಳೆಲ್ಲಾ ಅಸ್ತವ್ಯಸ್ತ’

1 comment: