Header Ads

test

ಇದನ್ನು 18 ವರ್ಷ ಮೀರಿದವರು ಮಾತ್ರ ಓದಿ..! ಯಾಕೆ ಗೊತ್ತಾ..? ಇಲ್ಲದಿದ್ದರೆ?

ಇದನ್ನು 18 ವರ್ಷ ಮೇಲ್ಪಟ್ಟವರು ಓದಿದರೆ ಮಾತ್ರ ಚೆನ್ನಾಗಿರುತ್ತದೆ ಎಂಬುದು ನನ್ನ ಅಭಿಪ್ರಾಯ. ಯಾಕೆಂದರೆ ಅವರಿಗೆ ಇದು ಚೆನ್ನಾಗಿ ಅರ್ಥವಾಗುತ್ತದೆ. ತಿಳಿದುಕೊಳ್ಳಬೇಕು ಕೂಡ. ದಯವಿಟ್ಟು ಓದಿ. ಆನಂದವಾಗಿ ಜೀವಿಸುವುದು ಹೇಗೆ ಎಂದು ತಿಳಿದುಕೊಂಡರೆ ಒಳ್ಳೆಯದು ಎಂಬುದು ನನ್ನ ಅಭಿಪ್ರಾಯ.ಬೆಳಗ್ಗೆ 6 ಗಂಟೆ ಸಮಯ. ಕಚೇರಿಗೆ ಹೋಗಬೇಕೆಂದು ಏಳಲು ಪ್ರಯತ್ನಿಸುತ್ತಿದ್ದೆ. ಆದರೆ.. ಏಳಲು ಸಾಧ್ಯವಾಗುತ್ತಿಲ್ಲ. ಯಾಕೆ ಏನೋ ಗೊತ್ತಿಲ್ಲ. “ಏನಾಗಿದೆ ನನಗೆ? ಯಾಕೆ ಎದ್ದೇಳಲು ಆಗುತ್ತಿಲ್ಲ?” ಒಂದು ನಿಮಿಷ ಆಲೋಚಿಸಿದೆ. ನಿನ್ನೆ ರಾತ್ರಿ ಮಲಗಲು ಕೋಣೆಗೆ ಬಂದಾಗ ನನಗೆ ಎದೆಯಲ್ಲಿ ತುಂಬಾ ನೋವು ಕಾಣಿಸಿಕೊಂಡಿತು… ಪ್ರಜ್ಞೆ ತಪ್ಪಿ ಬಿದ್ದುಬಿಟ್ಟೆ. ಬಳಿಕ ಏನು ನಡೆಯಿತು ನನಗೆ ಗೊತ್ತಾಗಲಿಲ್ಲ.


ಕಾಫಿ ಬೇಕು ನನಗೆ… ನನ್ನ ಪತ್ನಿ ಎಲ್ಲಿದ್ದಾಳೆ. ಯಾಕೆ ನನ್ನನ್ನು ಎಬ್ಬಿಸಲಿಲ್ಲ. ಕಚೇರಿಗೆ ಟೈಮ್ ಆಗುತ್ತಿದೆ ಅಲ್ಲವೇ! ನನ್ನ ಪಕ್ಕದಲ್ಲಿ ಯಾರೂ ಇಲ್ಲ. ಏನಾಗಿದೆ ನನಗೆ? ಹಾಲಲ್ಲಿ ಯಾರನ್ನೋ ಮಲಗಿಸಿದ್ದಾರೆ… ಮನೆ ಹೊರಗೆ ತುಂಬಾ ಮಂದಿ ಗುಂಪಾಗಿ ಇದ್ದಾರೆ. ಯಾರಾದರೂ ಸತ್ತಿದ್ದಾರಾ… ಅಯ್ಯೋ ಅದು ನಾನೇ! ನಾನು ಸತ್ತು ಹೋಗಿದ್ದೀನಾ? ಹೊರಗೆ ತುಂಬಾ ಮಂದಿ ಅಳುತ್ತಿದ್ದಾರೆ…. ಜೋರಾಗಿ ಕೂಗಿದೆ… ನನ್ನ ಮಾತು ಯಾರಿಗೂ ಕೇಳುತ್ತಿಲ್ಲ. ಭಯಬಿದ್ದು ನನ್ನ ಪಕ್ಕದ ಕೋಣೆಯ ಕಡೆಗೆ ನೋಡಿದೆ… ನನ್ನ ಪತ್ನಿ ತುಂಬಾ ಅಳುತ್ತಿದ್ದಳು. ಮಗನನ್ನು ಹಿಡಿದು. ಪತ್ನಿಯನ್ನು ಕರೆದೆ… ಅವಳಿಗೆ ನನ್ನ ಮಾತುಗಳು ಕೇಳಿಸುತ್ತಿಲ್ಲ… ಇನ್ನೊಂದು ಕೋಣೆಗೆ ಹೋಗಿ ನೋಡಿದೆ.

ಆ ಕೋಣೆಯಲ್ಲಿ ನಮ್ಮಮ್ಮ…. ಅಪ್ಪ ಒಬ್ಬರಿಗೊಬ್ಬರು ಸಮಾಧಾನಪಡಿಸಿಕೊಳ್ಳುತ್ತಾ ಕುಳಿತಿದ್ದಾರೆ ದುಃಖದಲ್ಲಿ.”ನಾನು ಸತ್ತು ಹೋಗಿಲ್ಲ ಬದುಕಿಯೇ ಇದ್ದೇನೆ” ಎಂದು ಹೇಳಿದೆ…ಯಾರೂ ನನ್ನನ್ನು ನೋಡಲಿಲ್ಲ. ಹೊರಗೆ ಓಡಿ ಬಂದೆ….ಅಲ್ಲಿ ನನ್ನ ಪ್ರಾಣಸ್ನೇಹಿತ ಭಯಂಕರವಾಗಿ ಅಳುತ್ತಿದ್ದ… ಅವನನ್ನು ಉಳಿದವರು ಸಮಾಧಾನಪಡಿಸುತ್ತಿದ್ದರು…. ನನ್ನ ಸ್ನೇಹಿತನ ಬಳಿ ನಾನು ಜಗಳ ಮಾಡಿಕೊಂಡು… ಅವನನ್ನು ವರ್ಷದಿಂದ ನಾನು ಮಾತನಾಡುವುದನ್ನು ಬಿಟ್ಟಿದ್ದೆ… ಎಷ್ಟು ಸಲ ಕೇಳಿಕೊಂಡರೂ ಮಾತನಾಡಲಿಲ್ಲ. ಹಾಗಿದ್ದರೆ ಅವನ್ಯಾಕೆ ಅಳುತ್ತಿದ್ದಾನೆ….. ಹೌದು ನಾನು ಸತ್ತು ಹೋಗಿದ್ದೇನೆ… ನಿಜವಾಗಿ ಸತ್ತು ಹೋಗಿದ್ದೇನೆ.

“ದೇವರೇ ನನ್ನನ್ನು ಒಮ್ಮೆ ಬದುಕಿಸಿ ಬಿಡು ತಂದೆ! ಸ್ವಲ್ಪ ದಿನಗಳ ಕಾಲ ನನಗೆ ಸಮಯ ಕೊಡು… ಇಷ್ಟು ದಿನ ನಾನು ನನ್ನ ಉದ್ಯೋಗದ ಒತ್ತಡದಲ್ಲಿ ನನ್ನ ಪತ್ನಿಯನ್ನು ಚೆನ್ನಾಗಿ, ಪ್ರೀತಿಯಿಂದ ನೋಡಿಕೊಳ್ಳಲು ಸಾಧ್ಯವಾಗಲಿಲ್ಲ… ನೀನು ತುಂಬಾ ಸುಂದರವಾಗಿ ಇದ್ದೀಯ ಎಂದು… ನೀನು ನನ್ನ ಪತ್ನಿಯಾಗಿ ಸಿಕ್ಕಿದ್ದು ಅದೃಷ್ಟ ಎಂದು ಹೇಳಲು ಆಗಲಿಲ್ಲ…. ನನ್ನ ಮಗುವಿನ ಜತೆಗೆ ಚೆನ್ನಾಗಿ ಕಳೆಯಲು ಆಗಲಿಲ್ಲ… ನಾನು ಬರುವ ವೇಳೆ ಆ ಮಗು ಮಲಗಿರುತ್ತಿತ್ತು…. ಈಗಲೂ ನನ್ನನ್ನು ಹಸುಗೂಸಿನಂತೆ ನೋಡಿಕೊಳ್ಳುವ ನನ್ನ ತಂದೆತಾಯಿ ನೋವನ್ನು ನೋಡಲು ಆಗುತ್ತಿಲ್ಲ…. ಮಾಡಿದ ತಪ್ಪನ್ನು ತಿಳಿದುಕೊಂಡು ನನ್ನನ್ನು ಕ್ಷಮಿಸಿಬಿಡು ಎಂದು ಬೇಡಿಕೊಂಡ ಸ್ನೇಹಿತನನ್ನು ಕ್ಷಮಿಸದ ಪಾಪಿ ನಾನು” ಎಂದು ಬಿಕ್ಕಿಬಿಕ್ಕಿ ಅಳುತ್ತಿದ್ದೇನೆ… “ದೇವರೇ! ದಯವಿಟ್ಟು ನನ್ನನ್ನು ಬದುಕಿಸು… ನನ್ನ ತಾಯಿ ಮುಖದಲ್ಲಿ ನಗು ನೋಡಬೇಕು.. ನನ್ನನ್ನು ಕ್ಷಮಿಸಿ ನನಗೆ ಸ್ವಲ್ಪ ದಿನಗಳಿಗೆ ಪ್ರಾಣಭಿಕ್ಷೆ ನೀಡು ಸ್ವಾಮಿ!” ಷ್ಟರಲ್ಲಿ ಯಾರೋ ನನ್ನನ್ನು ತಟ್ಟಿ ಎಬ್ಬಿಸಿದರು… ಕಣ್ಣು ತೆರೆದು ನೋಡಿದೆ. ನನ್ನ ಪತ್ನಿ.. “ಏನಾಯಿತು? ಕನಸು ಬಿತ್ತಾ? ಹುಚ್ಚುಚ್ಚಾಗಿ ಅರಚಾಡುತ್ತಿದ್ದೀರಾ. ಏನಾಯಿತು ನಿಮಗೆ?” ಎಂದು ಕೇಳಿದಳು.

ಅಂದರೆ ಇಷ್ಟು ಹೊತ್ತು ನಾನು ಕನಸು ಕಂಡೆನೇ! ಅಂದರೆ ನಾನು ಸತ್ತಿಲ್ಲ ಎಂದಂತಾಯಿತು. ನಿಜವಾಗಿಯೂ ಇದು ನನಗೆ ಮರುಜನ್ಮ! ಆಫೀಸಿಗೆ ಟೈಮಾಯಿತು ಎಂದ ನನ್ನ ಪತ್ನಿ ಮಾತನ್ನು ಕೇಳಿ ಅವಳನ್ನು ಒಮ್ಮೆ ಹತ್ತಿರಕ್ಕೆ ಕರೆದು” ನಿಜವಾಗಿಯೂ ನಾನು ತುಂಬಾ ಅದೃಷ್ಟವಂತ… ನಿನ್ನಂತಹ ಹುಡುಗಿ ನನಗೆ ಪತ್ನಿಯಾಗಿ ಸಿಕ್ಕಿದ್ದು…. ನಾನು ಗಮನಿಸಲಿಲ್ಲ ಈಹೊತ್ತು ಎಷ್ಟು ಸುಂದರವಾಗಿ ಇದ್ದೀಯ ಗೊತ್ತಾ?” ಎಂದು ಕೇಳಿದೆ… ಅಚ್ಚರಿಯಿಂದ ನನ್ನ ಕಡೆಗೆ ನೋಡಿ ಒಮ್ಮೆ ನನ್ನನ್ನು ನೋಡಿ… ಕಣ್ಣೀರಿನಿಂದ ನನ್ನನ್ನು ಅಪ್ಪಿಕೊಂಡಳು ಪತ್ನಿ…ಗೆಳೆಯರೇ! ನಿಮಗೆ ಇನ್ನೂ ತುಂಬಾ ಸಮಯ ಇದೆ…ನಿಮ್ಮ ಇಗೋಗಳನ್ನು ಪಕ್ಕಕ್ಕಿಟ್ಟು ನಿಮ್ಮ ಕುಟುಂಬವನ್ನು ಪ್ರೀತಿಸಿ.. ಎಲ್ಲವನ್ನೂ ಕಳೆದುಕೊಂಡ ಬಳಿಕ ನೋವನುಭವಿಸಿ ಏನೂ ಲಾಭ ಇಲ್ಲ.. ಕುಟುಂಬದ ಜತೆಗೆ ಕಳೆಯಿರಿ… ಸ್ನೇಹಿತರ ಜತೆಗೆ ಒಳ್ಳೆಯದಾಗಿ ನಡೆದುಕೊಳ್ಳಿ… ಈ ಜನ್ಮ ದೇವರು ಕೊಟ್ಟದ್ದು.. ಆನಂದದಿಂದ ಜೀವಿಸಿ ಅದೆಷ್ಟೋ ಮಂದಿಗೆ ಆದರ್ಶವಾಗಿ ಇರದಿದ್ದರೂ ಪರವಾಗಿಲ್ಲ ಕನಿಷ್ಠ ನಿಮ್ಮ ಕುಟುಂಬವಾದರೂ ನಿಮ್ಮಿಂದ ಆನಂದವಾಗಿ ಇರುವಂತೆ ನೋಡಿಕೊಳ್ಳಬೇಕಾದದ್ದು ಖಂಡಿತ ನೀವೆ!….ಇಷ್ಟು ವ್ಯವಧಾನದಿಂದ ಓದಿದ ನಿಮಗೆ ಧನ್ಯವಾದಗಳು. ಇಷ್ಟವಾದ ಲೈಕ್ ಮಾಡಿ.. ಇತರರಿಗೂ ಉಪಯೋಗವಾಗುತ್ತದೆ ಎಂದರೆ ಶೇರ್ ಮಾಡಿ…

1 comment: