Header Ads

test

11 ಸುತ್ತು ಗುಂಡುಗಳು ಹೊಟ್ಟೆಯೊಳಗೆ ಪ್ರವೇಶಿಸಿದರೂ.... ಪಾರ್ಲಿಮೆಂಟ್ ಭವನದೊಳಗೆ ಉಗ್ರವಾದಿಗಳುಪ್ರವೇಶಿಸದಂತೆ ತಡೆದ ಮಹಿಳೆ.

ಎಂತಹ ವಿಷಮ ಪರಿಸ್ಥಿತಿಗಳು ಎದುರಾದರೂ, ಹೆದರದೆ ದೇಶಕ್ಕಾಗಿ ಹೋರಾಡಬೇಕೆಂದು ಸಾರಿಹೇಳಿದಳು ಆ ವೀರವನಿತೆ.ಪ್ರತಿಯೊಬ್ಬರೂ ದೇಶಭಕ್ತಿ ಉಳ್ಳವರಾಗಿ,ಉಗ್ರವಾದಿಗಳಿಂದ ದೇಶವನ್ನು ಮತ್ತು ಪ್ರಜೆಗಳನ್ನು ರಕ್ಷಿಸಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯವೆಂದು ನೆನಪಿಸಿದಳು.ದೇಶದ ಪ್ರತಿಷ್ಠೆಯಾದ ಪಾರ್ಲಿಮೆಂಟ್ ಭವನದ ಮೇಲೆ ಉಗ್ರವಾದಿಗಳು ದಾಳಿಮಾಡುವುದನ್ನು ಮುಂಚಿತವಾಗಿಯೇ ಗ್ರಹಿಸಿ ರಕ್ಷಿಸಿದಳು. ಆದರೆ ಆ ದಾಳಿಯಲ್ಲಿ ಆ ಮಹಿಳಾ ಪೋಲಿಸ್ ಅಧಿಕಾರಿ ಮೃತಪಟ್ಟರು. ಆದರೂ , ಅವರು ದೇಶದ ಪ್ರಜೆಗಳ ಮನಸ್ಸಿನಲ್ಲಿ ಶಾಶ್ವತವಾಗಿದ್ದಾರೆ. ಭಾರತ ಸರಕಾರವು ಅವರ ಶೌರ್ಯವನ್ನು ಮೆಚ್ಚಿ ಅತ್ಯುನ್ನತ ಪ್ರಶಸ್ತಿಯನ್ನು ಅವರ ಕುಟುಂಬದವರಿಗೆ ನೀಡಿತು. ಆ ಮಹಿಳಾ ಅಧಿಕಾರಿಯ ಬಗ್ಗೆ ತಿಳಿಯೋಣ ಬನ್ನಿ.


ನಮ್ಮ ದೇಶದ ರಾಜಧಾನಿ ದೆಹಲಿಯ ವಿಕಾಸ್ ಪುರಿ ಪ್ರದೇಶದವರಾದ ಕಮಲೇಶ್ ಕುಮಾರಿ ಯಾದವ್ ಎಂಬ ಯುವತಿ 1994 ರಲ್ಲಿ ಸಿ.ಆರ್.ಪಿ.ಎಫ್ (CRPF) ವಿಭಾಗದಲ್ಲಿ ಪೇದೆಯಾಗಿ ಸೇರಿದರು. ತದನಂತರ ಅವರನ್ನು ಅಲಹಾಬಾದಿನ ಎಲೈಟ್ ರ್ಯಾಪಿಡ್ ಆಕ್ಷನ್ ಫೋರ್ಸ್ ಗೆ ವರ್ಗಾಯಿಸಿದರು. ನಂತರ 2001 ಜುಲೈ 12 ರಂದು 88 ನೇ ಮಹಿಳಾ ಬೆಟಾಲಿಯನ್ ನಲ್ಲಿ ಕೆಲಸ ನೀಡಿದರು. ಈ ಕೆಲಸದ ಭಾಗವಾಗಿ ‘ಬ್ರೇವೋ’ ಕಂಪೆನಿಯಲ್ಲಿ ಸಿಬ್ಬಂದಿಯಾದರು. ಪಾರ್ಲಿಮೆಂಟ್ ಅಧಿವೇಶನ ನಡೆಯುವಾಗ ಈ ‘ಬ್ರೇವೋ’ ಕಂಪೆಕನಿಯ ಸಿಬ್ಬಂದಿಯೇ ಆ ಭವನಕ್ಕೆ ರಕ್ಷಣೆಯನ್ನು ಒದಗಿಸುತ್ತಾರೆ.

2001 ರ ಡಿಸೆಂಬರ್ 13 ರಂದು ಕಮಲೇಶ್ ಕುಮಾರಿ ಯಾದವ್ ಪಾರ್ಲಿಮೆಂಟ್ ಭವನದ ಗೇಟ್ ನಂ.11 ರ ಪಕ್ಕದಲ್ಲೇ ಇರುವ ಗೇಟ್ ನಂ.1 ರಲ್ಲಿ ಎಂದಿಂತೆ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದರು. ಅದೇ ಸಮಯದಲ್ಲಿ DL3 CJ1527 ನಂಬರಿನ ಕಾರು ವಿಜಯ್ ಚೌಕ್ ನಿಂದ ಅವರಿರುವ ಗೇಟ್ ನಂ.1 ರ ಬಳಿಗೆ ಬರಲಾರಂಭಿಸಿತು. ಒಡನೆಯೇ ಆ ಕಾರುಬಳಿಗೆ ಹೋಗಿ ವಿಚಾರಿಸಲಾಗಿ ಅದರಲ್ಲಿ ಉಗ್ರವಾದಿಗಳಿದ್ದಾರೆಂಬ ಅನುಮಾನ ಬಂದಿತು. ಒಡನೆಯೇ ಹಿಂದಕ್ಕೆ ತಿರುಗಿ ಗೇಟನ್ನು ಮುಚ್ಚಲು ಹೊರಟರು. ಅಷ್ಟೊತ್ತಿಗೆ ಆ ಕಾರಿಗೆ ಬೆಂಕಿ ಹತ್ತಿಕೊಂಡಿತು. ಇದರಿಂದಾಗಿ ಮುಂದೆ ಹೋಗಲು ಅವರಿಗೆ ಕಷ್ಟವಾಯಿತು. ಒಡನೆಯೇ ಉಗ್ರವಾದಿಗಳು ಗುಂಡುಗಳನ್ನು ಹಾರಿಸಲು ಪ್ರಾರಂಭಿಸಿದರು. ಇದರಿಂದಾಗಿ ದುರದೃಷ್ಟವಶಾತ್ 11 ಬುಲೆಟ್ ಗಳು ಕಮಲೇಶ್ ಯಾದವ್ ಹೊಟ್ಟೆಯೊಳಗೆ ಪ್ರವೇಶಿಸಿದವು. ಅಂದು 11.50 ಗಂಟೆಗೆ ಸರಿಯಾಗಿ ಈ ಘಟನೆ ಸಂಭವಿಸಿತು. ಆದರೆ ಆತ್ಮಹತ್ಯಾ ಬಾಂಬರ್ ಗಳು ಪಾರ್ಲಿಮೆಂಟ್ ಭವನದೊಳಗೆ ಪ್ರವೇಶಿಸುವುದಕ್ಕೆ ಮೊದಲೇ,ಕಮಲೇಶ್ ಕುಮಾರಿ ಗೇಟ್ ನಂ.1 ನ್ನು ಮಚ್ಚಿ ಎಚ್ಚರಿಕೆಯ ಗಂಟೆ ಭಾರಿಸಿದ್ದರು. ಇದರಿಂದ ಭದ್ರತಾ ಸಿಬ್ಬಂದಿ ಕ್ಷಣಾರ್ಧದಲ್ಲಿ ಎಚ್ಚೆತ್ತುಕೊಂಡು ದೊಡ್ಡದುರ್ಗಟನೆ ಸಂಭವಿಸದಂತೆ ನೋಡಿಕೊಂಡರು. ಆದರೂ,ಎಷ್ಟೇ ಸಾಹಸ ಪ್ರದರ್ಶಿಸಿದರೂ ,ಕಮಲೇಶ್ ಕುಮಾರಿ ಯಾದವ್ ಬಾರದ ಲೋಕಕ್ಕೆ ತೆರಳಿದ್ದರು.

ಕಮಲೇಶ್ ಯಾದವ್ ಪ್ರದರ್ಶಿಸಿದ ದೈರ್ಯಕ್ಕಾಗಿ, 2002 ರ ಗಣರಾಜ್ಯೋತ್ಸವದಂದು ಅಶೋಕ ಚಕ್ರ ಪ್ರಶಸ್ತಿಯನ್ನು , ಅಂದಿನ ರಾಷ್ಟ್ರಪತಿ ಡಾ.ಎ.ಪಿ.ಜೆ ಅಬ್ದುಲ್ ಕಲಾಂ, ಕಮಲೇಶ್ ಯಾದವ್ ರ ಕುಟುಂಬ ಸಭ್ಯರಿಗೆ ನೀಡಿದರು.ಭಾರತದ ಅಂದಿನ ಪ್ರಧಾನ ಮಂತ್ರಿ ವಾಜಪೇಯಿ ಕಮಲೇಶ್ ಗೆ ಗೌರವ ವಂದನೆ ಸಲ್ಲಿಸಿದ್ದರು. ಆದರೆ, ಪಾರ್ಲಿಮೆಂಟ್ ಭವನದ ಮೇಲಿನ ದಾಳಿಯ ಸೂತ್ರದಾರನಾದ ಮಹಮ್ಮದ್ ಅಫ್ಜಲ್ ಗೆ ಸರ್ವೋಚ್ಚ ನ್ಯಾಯಾಲಯ ಮರಣ ದಂಡನೆ ವಿಧಿಸಿತು. ಅಫ್ಜಲ್ ಕುಟುಂಬ ಕ್ಷಮಾಭಿಕ್ಷೆಯ ಅರ್ಜಿಯನ್ನು ರಾಷ್ಟ್ರಪತಿಗಳಿಗೆ ಸಲ್ಲಿಸಿತು. ಅವರು ಅದರ ಕಡೆ ತಲೆಯೆತ್ತಿಯೂ ನೋಡಲಿಲ್ಲ. 2006 ಡಿಸೆಂಬರ್ 13 ರಂದು ಕಮಲೇಶ್ ಯಾದವ್ ಕುಟುಂಬದವರೊಂದಿಗೆ, ದಾಳಿಯ ಸಂದರ್ಭ ಸಾಹಸ ಮೆರೆದ ಕೆಲವು ಅಧಿಕಾರಿಗಳಿಗೆ ನೀಡಲಾದ ‘ಶೌರ್ಯ ಪ್ರಶಸ್ತಿ’ಯನ್ನು ಸರಕಾರಕ್ಕೆ ಹಿಂದಿರುಗಿಸಿದರು. ಉಗ್ರವಾದಿ ಮಹಮ್ಮದ್ ಅಫ್ಜಲ್ ಗೆ ನೀಡಬೇಕಾದ ಗಲ್ಲು ಶಿಕ್ಷೆ ತಡವಾಗುತ್ತಿರುವುದಕ್ಕೆ ಅಸಮ್ಮತಿ ಸೂಚಿಸಿ ಈ ರೀತಿ ಮಾಡುತ್ತಿರುವುದಾಗಿ ತಿಳಿಸಿದರು.

ಆದರೆ,2013 ರಲ್ಲಿ ಕಲಾಂ ನಂತರ ರಾಷ್ಟ್ರಪತಿಯಾಗಿ ಪದವಿ ಸ್ವೀಕರಿಸಿದ ಪ್ರಣಬ್ ಮುಖರ್ಜಿ, ಅಪ್ಜಲ್ ಗುರುವಿನ ಕುಟುಂಬದವರ ಕ್ಷಮಾಬಿಕ್ಷೆಯ ಪಿಟಿಷನ್ ತಿರಸ್ಕರಿಸಿ, 2013 ಫೆಬ್ರವರಿ 9 ರಂದು ಬಾರತೀಯ ಕಾಲಮಾನದ ಪ್ರಕಾರ ಬೆಳಿಗ್ಗೆ 8 ಗಂಟೆಗೆ ತಿಹಾರ್ ಜೈಲಿನಲ್ಲಿ ಮಹಮ್ಮದ್ ಅಫ್ಜಲ್ ನನ್ನು ನೇಣಿಗೇರಿಸಿದರು. ಆನಂತರ ಕಮಲೇಶ್ ಕುಮಾರಿ ಯಾದವ್ ಕುಟುಂಬ ಹಾಗೂ ಇತರೇ ಅಧಿಕಾರಿಗಳ ಕುಟುಂಬದವರು ತಮ್ಮ ಮೆಡಲ್ ಗಳನ್ನು ಸರಕಾರದಿಂದ ಮತ್ತೆ ಪಡೆದುಕೊಂಡರು. ಆದರೆ, ಎಷ್ಟೇ ಪದಕ, ಪ್ರಶಸ್ತಿಗಳನ್ನು ನೀಡಿದರೂ ದೇಶವನ್ನು ರಕ್ಷಿಸಬೇಕೆನ್ನುವ ಕಮಲೇಶ್ ಯಾದವ್ ರವರ ನಿರ್ಣಯ ಮಾತ್ರ ಅಭಿನಂದನಾರ್ಹ. ಅವರ ಸೇವಾ ತತ್ಪರತೆ ಇತರೆ ಅಧಿಕಾರಿಗಳಿಗಲ್ಲದೇ ಇಡೀ ದೇಶಕ್ಕೇ ಆದರ್ಶಪ್ರಾಯವಾಗಿದೆ.

No comments