Header Ads

test

ಅಂಬಾನಿ ಮಗ 108 ಕಿಲೋ ತೂಕ ಕಡಿಮೆ ಮಾಡಿಕೊಳ್ಳಲು ಆಕೆ ಏನು ತಿನ್ನಲು ಹೇಳಿದಳು ಗೊತ್ತಾ? ರುಜಿತಾದಿವೇಕರ್ ಸೂಚನೆಗಳು ಇವು..!

ಇಂದು ಸ್ಥೂಲಕಾಯ ಸಮಸ್ಯೆ ಎಲ್ಲರನ್ನೂ ಕಾಡುತ್ತಿದೆ. ವಯಸ್ಸಿನೊಂದಿಗೆ ಸಂಬಂಧ ಇಲ್ಲದಂತೆ ಹಿರಿಯ ಕಿರಿಯ ಎನ್ನದೆ ಎಲ್ಲರನ್ನೂ ಬೊಜ್ಜಿನ ಸಮಸ್ಯೆ ಕಾಡುತ್ತಿದೆ. ಇದಕ್ಕೆ ಅನೇಕ ಕಾರಣಗಳಿವೆ. ನಿತ್ಯ ಎದ್ದೆನೋ ಬಿದ್ದೆನೋ ಎಂಬ ಬಿಜಿ ಜೀವನ, ವ್ಯಾಯಾಮ ಇಲ್ಲದಿರುವುದು, ಜಂಕ್ ಫುಡ್ ಹೆಚ್ಚಾಗಿ ತಿನ್ನುವುದು.. ಹೀಗೆ ಅನೇಕ ಕಾರಣಗಳಿಂದ ತುಂಬಾ ಮಂದಿ ತೂಕ ಜಾಸ್ತಿಯಾಗುತ್ತಿದ್ದಾರೆ. ಇದರಿಂದ ಬಿಪಿ, ಶುಗರ್, ಹೃದ್ರೋಗಗಳ ಸಮಸ್ಯೆಗೆ ಸಿಲುಕಿ ಜೀವಕ್ಕೇ ಕುತ್ತು ತಂದುಕೊಳ್ಳುವಂತಾಗಿದೆ. ಅಂತಹವರು ಕೆಳಗೆ ಸೂಚಿಸಿದ ರೀತಿಯಲ್ಲಿ ನಿಯಮಗಳನ್ನು ಪಾಲಿಸಿದರೆ ತೂಕ ಕಡಿಮೆಯಾಗುವುದು ಅಂತಹ ದೊಡ್ಡ ವಿಷಯವೇ ಅಲ್ಲ. ಪ್ರಯತ್ನಿಸಿದರೆ ಯಾರೇ ಆಗಲಿ ಅಧಿಕ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.


ಕೆಳಗೆ ಕೊಟ್ಟಿರುವ ಸೂಚನೆಗಳನ್ನು ರುಜಿತಾ ದಿವೇಕರ್ ಎಂಬ ಜನಪ್ರಿಯ ನ್ಯೂಟ್ರಿಷಿಯನ್ ಕಮ್ ಡೈಟೀಷಿಯನ್ ತಿಳಿಸಿರುವಂತಹವು. ಅವರ ವಿಶೇಷತೆ ಎಂದರೆ… ಸೆಲೆಬ್ರಿಟಿಗಳಿಗೆ ಆಹಾರ, ಡೈಟಿಂಗ್ ವಿಷಯದಲ್ಲಿ ಸೂಚನೆ, ಸಲಹೆಗಳನ್ನು ಕೊಟ್ಟು ಅವರ ಕೊಬ್ಬನ್ನು ಇವರು ಕರಗಿಸುತ್ತಿದ್ದಾರೆ. ಇತ್ತೀಚೆಗೆ ಮುಕೇಶ್ ಅಂಬಾನಿ ಮಗ ಅನಂತ್ ಅಂಬಾನಿ 108 ಕಿಲೋ ತೂಕ ಕಳೆದುಕೊಂಡಿದ್ದಾನೆ. ಅದರ ಹಿಂದೆ ಇದ್ದದ್ದು ಇವರೇ. ಇವರು ಕೊಟ್ಟಂತಹ ಡೈಟ್ ಪ್ಲಾನ್, ಇತರೆ ಸೂಚನೆಗಳನ್ನು ಅನಂತ್ ಅಂಬಾನಿಯಂತಹ ದಢೂತಿ ಆಸಾಮಿ ಸಹ ಸ್ಲಿಮ್ ಆದ. ಹಾಗಿದ್ದರೆ ಅಧಿಕ ತೂಕವನ್ನು ಕಡಿಮೆ ಮಾಡಿಕೊಳ್ಳಲು ರುಜಿತಾ ನೀಡುತ್ತಿರುವ ಸೂಚನೆಗಳು ಏನು ಎಂಬುದನ್ನು ಈಗ ತಿಳಿದುಕೊಳ್ಳೋಣ.

 • ಇಂದು ಬಹಳಷ್ಟು ಮಂದಿ ತಾವಿರುವ ಕಡೆ ಸಿಗದಿದ್ದರೂ ಸರಿ ಇತರೆ ಪ್ರದೇಶಗಳಿಂದ, ಬೇರೆ ದೇಶಗಳ ಹಣ್ಣುಗಳನ್ನು ಹೆಚ್ಚು ತಿನ್ನುತ್ತಾರೆ. ಉದಾಹರಣೆಗೆ ಆಪಿಲ್ಸ್, ಕಿವಿ ಹಣ್ಣುಗಳು. ಆಪಲ್ ಕಾಶ್ಮೀರದಲ್ಲಿ ಬೆಳೆಯುತ್ತಾರೆ. ಅದೇ ರೀತಿ ಕಿವಿ ಹಣ್ಣು ನಮ್ಮ ದೇಶದ್ದಲ್ಲ. ಅದು ನ್ಯೂಜಿಲ್ಯಾಂಡ್‌ನಿಂದ ಇಲ್ಲಿಗೆ ಬರುತ್ತವೆ. ಆದರೆ ಇದ್ಯಾವುದನ್ನೂ ಆಲೋಚಿಸದವರು ಆ ಹಣ್ಣುಗಳನ್ನು ತಿನ್ನುತ್ತಾರೆ. ಆ ರೀತಿ ಮಾಡಬಾರದು. ಯಾರೇ ಆಗಲಿ ತಮಗೆ ಸ್ಥಾನಿಕವಾಗಿ ಸಿಗುವ, ಬೆಳೆಯುವ ಹಣ್ಣುಗಳನ್ನು ತಿನ್ನಬೇಕು. ಬಾಳೆಹಣ್ಣು, ದ್ರಾಕ್ಷಿ, ಸಪೋಟಾ, ಆರೇಂಜ್, ಮಾವು… ಇಂತಹ ಹಣ್ಣುಗಳನ್ನು ತಿನ್ನಬೇಕು. ಹಣ್ಣುಗಳಲ್ಲಿ ಫ್ರಕ್ಟೋಸ್ ಇರುತ್ತದೆ. ಇದು ರಕ್ತದಲ್ಲಿನ ಗ್ಲೂಕೋಸ್ ಅಂಶವನ್ನು ನಿಯಂತ್ರಿಸುತ್ತದೆ. ಆದಕಾರಣ ಹಣ್ಣುಗಳನ್ನು ತಿನ್ನುವ ಅಭ್ಯಾಸ ಇಟ್ಟುಕೊಳ್ಳಬೇಕು.

 • ಕಡಲೆ, ಎಳ್ಳು, ಕೊಬ್ಬರಿ, ಸಾಸಿವೆ, ಆಲೀವ್, ರೈಸ್ ಬ್ರಾನ್ ಎಣ್ಣೆಗಳನ್ನು ಅಡುಗೆಯಲ್ಲಿ ಬಳಸಬೇಕು.

 • ಪ್ರತಿ ನಿತ್ಯ ಆಹಾರದಲ್ಲಿ ತುಪ್ಪ ಕಡ್ಡಾಯವಾಗಿ ಇರಬೇಕು. ತುಪ್ಪ ತಿನ್ನುವುದರಿಂದ ದೇಹದಲ್ಲಿನ ಕೊಲೆಸ್ಟರಾಲ್ ಕಡಿಮೆಯಾಗುತ್ತದೆ.

 • ನಿತ್ಯ ಆಹಾರದಲ್ಲಿ ಕೊಬ್ಬರಿಯನ್ನು ಕಡ್ಡಾಯವಾಗಿ ಬಳಸಬೇಕು. ಇಡ್ಲಿ, ದೋಸೆ, ಅನ್ನ ಇನ್ನಿತರೆ ಕೊಬ್ಬರಿ ಚಟ್ನಿ ತಿನ್ನಬೇಕು. ಕೊಬ್ಬರಿ ದೇಹದಲ್ಲಿರುವ ಕೊಲೆಸ್ಟರಾಲನ್ನು ಕಡಿಮೆಮಾಡುತ್ತದೆ. ಅಧಿಕ ತೂಕವನ್ನು ಕಡಿಮೆ ಮಾಡಿ ತೆಳ್ಳಗಾಗುವಂತೆ ಮಾಡುತ್ತದೆ.

 • ಓಟ್ಸ್ ಹೃದಯದ ಆರೋಗ್ಯಕ್ಕೆ ಒಳ್ಳೆಯದಾದರು ಅವನ್ನು ಪ್ಯಾಕ್ ಮಾಡಿ ಮಾರುತ್ತಾರೆ. ಆದಕಾರಣ ಅದನ್ನು ತಿನ್ನದಿರುವುದೇ ಉತ್ತಮ. ಇನ್ನು ಅವುಗಳಲ್ಲಿ ತಯಾರಾಗುವ ಬಿಸ್ಕೆಟ್‌ಗಳಿಂದ ಎಷ್ಟು ದೂರ ಇದ್ದರೆ ಅಷ್ಟು ಒಳ್ಳೆಯದು.
  ಹಣ್ಣಿನ ರಸಗಳನ್ನು ಕುಡಿಯಬೇಡಿ. ಹಣ್ಣನ್ನು ಕಚ್ಚಿ ಜಗಿದು ತಿನ್ನಬೇಕು. ಈ ರೀತಿ ಮಾಡಿದರೆ ಅವುಗಳಲ್ಲಿನ ಪೋಷಕಾಂಶಗಳನ್ನು ದೇಹ ಸೂಕ್ತ ರೀತಿಯಲ್ಲಿ ಗ್ರಹಿಸುತ್ತದೆ.

 • ನಿತ್ಯ ಕಬ್ಬಿನ ರಸ ಕುಡಿಯಿರಿ. ಇದು ದೇಹದಲ್ಲಿನ ವಿಷಕಾರಕ ಪದಾರ್ಥಗಳನ್ನು ಹೊರಗೆ ಹಾಕಿ ದೇಹವನ್ನು ಕ್ಲೀನ್ ಮಾಡುತ್ತದೆ. ಕಬ್ಬಿನ ರಸ ಕುಡಿಯದಿದ್ದರೆ ಕನಿಷ್ಟ ಕಬ್ಬನ್ನಾದರೂ ಜಗಿದು ತಿನ್ನಿ.

 • ಪ್ಯಾಕ್ ಮಾಡಿರುವ, ಪ್ರೊಸಸ್ ಮಾಡಿದ ಆಹಾರಗಳನ್ನು ತಿನ್ನಬೇಡಿ. ಅವು ದೇಹದ ತೂಕವನ್ನು ಹೆಚ್ಚಿಸುತ್ತವೆ.
  ಮಾಮೂಲಿ ಬೆಳ್ಳಗಿನ ಅನ್ನವನ್ನು ಚೆನ್ನಾಗಿ ತಿನ್ನಬಹುದು. ಬ್ರೌನ್ ರೈಸ್ ಆದರೂ ಪರವಾಗಿಲ್ಲ. ರೈಸ್‌ನಲ್ಲಿ ಗ್ಲೆಸಿಮಿಕ್ ಇಂಡೆಕ್ಸ್ (ತಿಂದ ಕೂಡಲೆ ದೇಹದಲ್ಲಿ ಹೆಚ್ಚಾಗುವ ಗ್ಲೂಕೋಸ್) ಸಾಮಾನ್ಯವಾಗಿಯೇ ಇರುತ್ತದೆ. ಅದು ಬೇಳೆ, ಹುಳಿ, ಮೊಸರಿನಂತಹ ಪದಾರ್ಥಗಳಲ್ಲಿ ಬೆರೆತರೆ ಅದರ ಗ್ಲೆಸಿಮಿಕ್ ಇಂಡೆಕ್ಸ್ ಇನ್ನಷ್ಟು ಕಡಿಮೆಯಾಗುತ್ತದೆ. ಇದರ ಜತೆ ತುಪ್ಪವನ್ನೂ ಸೇರಿಸಿದರೆ ಇನ್ನಷ್ಟು ಕಡಿಮೆಯಾಗುತ್ತದೆ. ಇವುಗಳ ಜತೆಗೆ ರೈಸ್ ತಿಂದರೆ ಏನೂ ಆಗಲ್ಲ. ಗ್ಲೂಕೋಸ್ ಪ್ರಮಾಣ ಕಂಟ್ರೋಲ್‌ನಲ್ಲೇ ಇರುತ್ತದೆ. ರೈಸ್‌ನಲ್ಲಿ ನಮ್ಮ ದೇಹಕ್ಕೆ ಅಗತ್ಯವಾಗುವ ಮಿನರಲ್ಸ್ ಇರುತ್ತವೆ. ಆದಕಾರಣ ನಿತ್ಯ ಮೂರು ಸಲ ರೈಸ್ ತಿನ್ನಬಹುದು.

 • ಹಸಿವು ತೀರುವವರೆಗೂ ತಿನ್ನಿ. ಎಷ್ಟೇ ಆಗಲಿ ತಿನ್ನಿ. ಆದರೆ ಹಸಿವಿಲ್ಲದೆ ಮಾತ್ರ ಏನೂ ತಿನ್ನಬೇಡಿ. ನಿಮ್ಮ ಹೊಟ್ಟೆ ಏನು ಹೇಳಿದರೆ ಅದನ್ನು ಫಾಲೋ ಆಗಿ.

 • ರೈಸ್, ಚಪಾತಿ ಎರಡೂ ತಿನ್ನಬಹುದು. ಅಥವಾ ರೈಸ್ ಮಾತ್ರ ತಿನ್ನಬಹುದು, ಅಥವಾ ಚಪಾತಿ ಮಾತ್ರ ತಿನ್ನಬಹುದು. ಅದು ನಿಮ್ಮಿಷ್ಟ. ಅದೇ ರೀತಿ ಮೂರು ಹೊತ್ತು ನಿಮ್ಮಿಷ್ಟದಂತೆ ಭಯಬೀಳದೆ ತಿನ್ನಿ. ನಿಮ್ಮ ಹಸಿವಿಗೆ ತಕ್ಕಂತೆ ತಿನ್ನಿ.

 • ನೀವು ತಿನ್ನುವ ಆಹಾರ ನಿಮ್ಮನ್ನು ಭಯಬೀಳಿಸಬಾರದು. ನೀವು ತಿನ್ನುವ ಆಹಾರ ನಿಮ್ಮಲ್ಲಿ ಒಳ್ಳೆಯ ಫೀಲ್ ಉಂಟಾಗುವಂತೆ ಮಾಡಬೇಕು.

 • ಎಷ್ಟು ಕ್ಯಾಲರಿಗಳ ಆಹಾರ ತಿನ್ನುತ್ತಿದ್ದೀವೋ ಎಂದು ಭಯಬೀಳಬೇಡಿ. ಎಷ್ಟು ಪೋಷಕಾಂಶಗಳುಳ್ಳ ಆಹಾರ ತಿನ್ನುತ್ತಿದ್ದೀರಾ ಎಂಬುದನ್ನು ನೋಡಿಕೊಳ್ಳಿ.

 • ಪಿಜ್ಜಾ, ಪಾಸ್ತಾ, ಬ್ರೆಡ್, ಬಿಸ್ಕೆಟ್, ಕೇಕ್ ಯಾವುದೂ ತಿನ್ನಬೇಡಿ. ಅವಕ್ಕೆ ಎಷ್ಟು ದೂರ ಇದ್ದರೆ ಅಷ್ಟು ಒಳ್ಳೆಯದು.
  ಒಂದು ಕಾಲದಲ್ಲಿ ಹಿರಿಯರು ತಿನ್ನುತ್ತಿದ್ದ ಆಹಾರವನ್ನು ತಿನ್ನಲು ಪ್ರಯತ್ನಿಸಿ. ನಿತ್ಯ ಸಾಧ್ಯವಾಗದಿದ್ದರೆ ಕನಿಷ್ಠ ಎಂದೋ ಒಮ್ಮೆಯಾದರೂ ಆ ಆಹಾರ ತಿನ್ನಲು ಪ್ರಯತ್ನಿಸಿ.

 • ಋತುಮಾನಕ್ಕೆ ತಕ್ಕಂತೆ ತಿನ್ನಿ. ಮಳೆಗಾಲದಲ್ಲಿ ಪಕೋಡಾ, ಜಿಲೇಜಿಗಳಂತಹವನ್ನು ತಿನ್ನಿ. ಯಾಕೆಂದರೆ ಹಸಿವು ಋತುಮಾನಕ್ಕೆ ತಕ್ಕಂತೆ ಇರುತ್ತದೆ. ಒಂದೊಂದು ಸೀಸನ್‌‌ನಲ್ಲಿ ಖಾದ್ಯ ಪದಾರ್ಥಗಳನ್ನೂ ತಿನ್ನಬೇಕು.

 • ಬೆಳಗ್ಗೆಯೇ ಟೀ ಕುಡಿಯಬೇಡಿ. ಅದೇ ರೀತಿ ಹಸಿವಿದ್ದಾಗಲೂ ಟೀ ಕುಡಿಯಬೇಡಿ. ನಿತ್ಯ ಎರಡು ಮೂರು ಸಲ ಸಕ್ಕರೆ ಹಾಕಿಕೊಂಡು ಟೀ ಕುಡಿಯಿರಿ.

 • ಗ್ರೀನ್ ಟೀ ಕುಡಿಯಬೇಡಿ. ಯಲ್ಲೋ ಟೇ, ಗುಲಾಬಿ ಟೀ, ನೀಲಿ ಟೀಗಳನ್ನೂ ಕುಡಿಯಬೇಡಿ. ಅದನ್ನು ದೂರ ಇಡಿ ಸಂಗ್ರಹಿಸಿದ ಪ್ಯಾಕ್ಡ್ ಫುಡ್, ಡ್ರಿಂಕ್ಸ್ ಯಾವುದೂ ತೆಗೆದುಕೊಳ್ಳಬೇಡಿ.

 • ನಿತ್ಯ ವ್ಯಾಯಾಮ ಮಾಡಿ. ಕಠಿಣ ವ್ಯಾಯಾಮಗಳನ್ನು ಮಾಡಲು ಸಾಧ್ಯವಾಗದಿದ್ದರೆ ಕನಿಷ್ಠ ನಿತ್ಯ ವಾಕಿಂಗ್ ಆದರೂ ಮಾಡಿ.

 • ಮೇಲೆ ತಿಳಿಸಿದ ನಿಯಮಗಳನ್ನು ಪಾಲಿಸಿದರೆ ಯಾರೇ ಆಗಲಿ ಅಧಿಕ ತೂಕವನ್ನು ಸುಲಭವಾಗಿ ಕಡಿಮೆ ಮಾಡಿಕೊಳ್ಳಬಹುದು.

3 comments: