Header Ads

test

ಮುಕೇಶ್ ಅಂಬಾನಿ ಪತ್ನಿ "ನೀತಾ ಅಂಬಾನಿ" ಒಂದು ದಿನ ಹೊರಗೆ ಅಡಿಯಿಟ್ಟರೆ ಆಗುವ ಖರ್ಚು ಎಷ್ಟು ಗೊತ್ತಾ..?

ನೀತಾ ಅಂಬಾನಿ.. ಈ ಹೆಸರು ಗೊತ್ತಿಲ್ಲದವರಿಲ್ಲ ಎಂದರೆ ಅತಿಶಯೋಕ್ತಿ ಅಲ್ಲ. ಕೇವಲ ಐಪಿಎಲ್ ಟೂರ್ನಮೆಂಟ್ ಸಮಯದಲ್ಲಿ ಮಾತ್ರ ಅಲ್ಲ, ಇತರೆ ಸಂದರ್ಭಗಳಲ್ಲೂ ಸಹ ಈಕೆ ನಮಗೆ ಕಾಣಿಸುತ್ತಿರುತ್ತಾರೆ. ಮುಖ್ಯವಾದ ಸಂದರ್ಭಗಳಲ್ಲಿ ಸುದ್ದಿಯಲ್ಲಿ ನಿಲ್ಲುತ್ತಾರೆ. ಮುಕೇಶ್ ಅಂಬಾನಿ ಪತ್ನಿ ನೀತಾ ಅಂಬಾನಿಗೆ ಏನೆಲ್ಲಾ ಲಗ್ಜುರಿ ಸೌಲಭ್ಯಗಳಿರುತ್ತವೆ ಎಂಬುದು ಎಲ್ಲರಿಗೂ ಗೊತ್ತು. ಆಕೆ ಮನೆಯಲ್ಲಿದ್ದರೂ, ಮನೆಯಿಂದ ಹೆಜ್ಜೆ ಹೊರಗಿಟ್ಟರೂ ಒಂದೇ ರೀತಿ ಸೌಲಭ್ಯಗಳು ಅವರಿಗೆ ಸಿಗುತ್ತವೆ. ಅವರು ನಿತ್ಯ ಎಷ್ಟು ಖರ್ಚು ಮಾಡುತ್ತಾರೆ, ಅವರು ಬಳಸುವ ಹಲವು ವಸ್ತುಗಳ ಬೆಲೆ ಎಷ್ಟು ಎಂಬುದನ್ನು ಈಗ ತಿಳಿದುಕೊಳ್ಳೋಣವೇ?


ನೀತಾ ಅಂಬಾನಿ ಹಾಕಿಕೊಳ್ಳುವ ಬಟ್ಟೆ, ಧರಿಸುವ ಚಪ್ಪಲಿ, ಇಯರ್ ರಿಂಗ್ಸ್, ಬಳೆ, ಓಡಾಡುವ ಕಾರುಗಳು… ಹೀಗೆ ಅನೇಕ ವಸ್ತುಗಳು ತುಂಬಾ ಬೆಲೆಬಾಳುವಂತಹವು. ವರ್ಲ್ಡ್ ಕ್ಲಾಸ್ ಬ್ರಾಂಡ್ ವಸ್ತುಗಳನ್ನೇ ಅವರು ಬಳಸುತ್ತಾರೆ. ಅವರ ದೇಹದ ಮೇಲೆ ಯಾವಾಗಲೂ ಆಯಾ ವಸ್ತುಗಳು, ಬಟ್ಟೆಗಳು ಬೆಲೆ ರೂ.10 ಲಕ್ಷ ದಿಂದ ರೂ.10 ಕೋಟಿವರೆಗೂ ಇರುತ್ತದೆಂದು ಅಂದಾಜು. ಬೆಳಗ್ಗೆ ಎದ್ದ ಕೂಡಲೆ ನೀತಾ ಅಂಬಾನಿ ಟೀ ಕುಡಿಯುವ ಕಪ್ಪಿನ ಬೆಲೆ ಸುಮಾರು ರೂ. 3 ಲಕ್ಷಗಳಷ್ಟಿರುತ್ತದೆ. ಯಾಕೆಂದರೆ ಆ ಟೀ ಕಪ್ ಬಾರ್ಡರ್‌ಗಳೆಲ್ಲಾ ಬಂಗಾದ ಲೇಪಿತ. ಆ ಕಪ್‌ಗಳು ಜಪಾನ್ ಮೂಲದ ಕಂಪೆನಿಯೊಂದು ತಯಾರಿಸುತ್ತದೆ. ಆ ಕಪ್‌ಗಳು 50 ಇರುವ ಒಂದ್ ಸೆಟ್ ಬೆಲೆ ರೂ.1.50 ಕೋಟಿ. ಮೊದಲು ಆರ್ಡರ್ ಮಾಡಿದರೆ ಹೊರತು ಆ ಕಂಪೆನಿ ತಯಾರಿಸಲ್ಲ.

ನೀತಾ ಅಂಬಾನಿ ಬಳಸುವ ಹ್ಯಾಂಗ್ ಬ್ಯಾಗ್ ಬೆಲೆ ರೂ. 5 ಲಕ್ಷಗಳವರೆಗೆ ಇರುತ್ತದೆ. ಆಕೆ ಧರಿಸುವ ಚಪ್ಪಲಿ ಬೆಲೆ ರೂ. 1 ಲಕ್ಷದಷ್ಟಿರುತ್ತದೆ. ಇನ್ನು ನೀತಾ ಅಂಬಾನಿ ಒಮ್ಮೆ ಧರಿಸಿದ ಬಟ್ಟೆಯನ್ನು ಮತ್ತೆ ಹಾಕಿಕೊಳ್ಳಲ್ಲವಂತೆ. ಕಲರ್ ಕಾಂಬಿನೇಷನ್ ಇಷ್ಟವಾದರೆ ಎರಡನೇ ಸಲ ಆ ಬಟ್ಟೆಗಳನ್ನು ಧರಿಸುತ್ತಾರಂತೆ. ಅವರು ಬಳಸುವ ಐಫೋನ್ ಬೆಲೆ ರೂ.350 ಕೋಟಿಯಂತೆ. ಯಾಕೆಂದರೆ ಅದರಲ್ಲಿ ಎಲ್ಲವೂ ಡೈಮಂಡ್ಸ್ ಹುದುಗಿಸಿ ಮಾಡಲಾಗಿದೆ. ನೀತಾ ಅಂಬಾನಿ ಹುಟ್ಟಿದ ಹಬ್ಬದ ಉಡುಗೊರೆಯಾಗಿ ಅವರ ಪತಿ ಮುಕೇಶ್ ಅಂಬಾನಿ ಸುಮಾರು 62 ಬಿಲಿಯನ್ ಡಾಲರ್ ಬೆಲೆಬಾಳುವ ಜೆಟ್ ವಿಮಾನ ಕೊಟ್ಟಿದ್ದರು. ಇದರ ಜತೆಗೆ 2 ಹೆಲಿಕಾಫ್ಟರ್‌ಗಳು, ಒಂದು ಜೆಟ್ ಪ್ಲೇನ್ ಸಹ ಅವರಿಗಿದೆ.

ನೀತಾ ಅಂಬಾನಿ ವಾಸಿಸುವ ಮನೆ ಬೆಲೆ ರೂ. 2 ಸಾವಿರ ಕೋಟಿಗೂ ಅಧಿಕ ಇರುತ್ತದೆ. ಇದರಲ್ಲಿ 27 ಅಂತಸ್ತುಗಳು ಇರುತ್ತವೆ. ಒಂದೊಂದು ಅಂತಸ್ತಿಗೆ ಒಂದೊಂದು ವಿಶೇಷತೆ ಇದೆ. ಈ ಕಟ್ಟಡದಲ್ಲಿ ಒಮ್ಮೆಲೆ 120 ಕಾರುಗಳನ್ನು ಪಾರ್ಕ್ ಮಾಡಬಹುದು. ಇದರಲ್ಲಿ ಥಿಯೇಟರ್, ಸ್ಮಿಮ್ಮಿಂಗ್ ಫೂಲ್ ಇನ್ನಿತರೆ ಎಲ್ಲಾ ಸೌಲಭ್ಯಗಳೂ ಇವೆ. ರೂ. 3 ಕೋಟಿ ಬೆಲೆ ಬಾಳುವ ಬೆಂಟ್ಲೆ, 5 ಕೋಟಿಯ ಮೇಬ್ಯಾಕ್ 62, ರೂ. 50 ಕೋಟಿ ಬೆಲೆ ಬಾಳುವ ಡೈಮಂಡ್ ಕೋಟೆಡ್ ಕಾರುಗಳು ಇವೆ. ಈಗಾಗಲೆ ಅಂಬಾನಿ ಕುಟುಂಬಕ್ಕೆ ಝಡ್ ಪ್ಲಸ್ ಸೆಕ್ಯುರಿಟಿ ಇದೆ. ಇನ್ನು ನೀತಾ ಎಲ್ಲಿಗೇ ಹೋದರೂ ಆಕೆ ಸುತ್ತ 6 ಮಂದಿ ಗಾರ್ಡ್ಸ್ ಇರುತ್ತಾರೆ. ಒಮ್ಮೆ ನೀತಾ ಅಂಬಾನಿ ಹೊರಗೆ ಹೋದರೆ ಆ ದಿನ ಆಗುವ ಖರ್ಚು ರೂ.10 ಲಕ್ಷಗಳವರೆಗೂ ಇರುತ್ತದೆ.

ಇನ್ನು ನೀತಾ ಅಂಬಾನಿಗೆ ಇಷ್ಟೆಲ್ಲಾ ಅದೃಷ್ಟ ಬರಲು, ಎಲ್ಲಾ ಲಗ್ಜುರಿ ಸೌಲಭ್ಯಗಳು ಸಿಗಲು ಕಾರಣ ಅವರ ಪತಿ ಮುಕೇಶ್ ಅಂಬಾನಿ ಎಂದು ಎಲ್ಲರಿಗೂ ಗೊತ್ತು. ಒಮ್ಮೆ ನೀತಾ ಅಂಬಾನಿ ಕೊಟ್ಟ ಭರತನಾಟ್ಯ ಪ್ರದರ್ಶನ ನೋಡಿ ಪ್ರೇಮಾಂಕುರವಾಗಿ ಮುಕೇಶ್ ಅಂಬಾನಿ ಆಕೆಯ ಸ್ನೇಹಿತರ ಮೂಲಕ ಧೀರೂಭಾಯ್ ಅಂಬಾನಿ ಮಗ ಎಂದು ಹೇಳಿ ನೀತಾ ಫೋನ್ ನಂಬರ್ ತೆಗೆದುಕೊಂಡಿದ್ದ. ಆಕೆಗೆ ಫೋನ್ ಮಾಡಿ ತಾನು ಧೀರೂಭಾಯ್ ಅಂಬಾನಿ ಮಗ ಎಂದು ಹೇಳಿ ಪರಿಚಯ ಮಾಡಿಕೊಂಡಿದ್ದರು. ಬಳಿಕ ಮುಕೇಶ್ ತಂದೆ ಧೀರೂಭಾಯ್ ಅಂಬಾನಿ ಮಾತನಾಡಿದ ಬಳಿಕ ನೀತಾಗೂ, ಮುಕೇಶ್‌ಗೂ ಮದುವೆ ಮಾಡಿದರು. ಬಳಿಕ ಏನೆಲ್ಲಾ ಆಯಿತು ಎಂದು ಎಲ್ಲರಿಗೂ ಗೊತ್ತಿರುವುದೇ..!

No comments