ಮೀನುಗಳನ್ನು ತಿನ್ನುವಾಗ ಮುಳ್ಳು ಗಂಟಲಲ್ಲಿ ಸಿಕ್ಕಿಬಿತ್ತಾ..? ಹಾಗಿದ್ದರೆ ಹೀಗೆ ಸಿಂಪಲ್ ಆಗಿ ತೆಗೆಯಬಹುದು..!
ಮೀನು ಎಂದರೆ ಬಹಳಷ್ಟು ಮಂದಿಗೆ ಇಷ್ಟ. ಮಾಂಸಾಹಾರ ಪ್ರಿಯರಲ್ಲಿ ಬಹಳಷ್ಟು ಮಂದಿ ಇವನು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಮೀನಿನ ಸಾರು, ಖಾದ್ಯಗಳು, ಬಿರ್ಯಾನಿ…ಹೀಗೆ ಏನು ಮಾಡಿದರೂ, ಹೇಗೆ ಮಾಡಿದರೂ ಮೀನನ್ನು ಚೆನ್ನಾಗಿ ಅರಗಿಸುವವರಿಗೆ ಬರವಿಲ್ಲ. ಅದೆಲ್ಲಾ ಓಕೆ. ಮೀನು ಸವಿಯುವಾಗ ಅಚಾನಕ್ ಆಗಿ ಮುಳ್ಳು ಗಂಟಲಲ್ಲಿ ಸಿಕ್ಕಿಬಿದ್ದರೆ..? ಹೌದು ಒಮ್ಮೊಮ್ಮೆ ಈ ರೀತಿಯಾಗುವ ಸಾಧ್ಯತೆ ಇದೆ. ಹಾಗಾಗಿ ಕೆಲವರು ಮೀನನ್ನು ತಿನ್ನಬೇಕಾದರೆ ಹಿಂಜರಿಯುತ್ತಾರೆ. ತುಂಬಾ ನಿಧಾನಕ್ಕೆ ತಿನ್ನುತ್ತಾರೆ. ಎಷ್ಟೇ ಎಚ್ಚರಿಕೆ ವಹಿಸಿದರೂ ಒಮ್ಮೊಮ್ಮೆ ಅಚಾನಕ್ ಆಗಿ ಮೀನಿನ ಮುಳ್ಳು ಗಂಟಲಲ್ಲಿ ಸಿಕ್ಕಿಬೀಳುವ ಸಾಧ್ಯತೆಗಳಿವೆ. ಆಗ ಏನು ಮಾಡಬೇಕು ಗೊತ್ತಾ..? ಅದನ್ನೇ ಈಗ ತಿಳಿದುಕೊಳ್ಳೋಣ.
- ಮೀನಿನ ಮುಳ್ಳು ಗಂಟಲಲ್ಲಿ ಸಿಕ್ಕಿಕೊಂಡರೆ ಯಾರನ್ನಾದರೂ ಹೊಟ್ಟೆ ಮೇಲೆ ಗಟ್ಟಿಯಾಗಿ ಒತ್ತಿ ಎಂದು ಹೇಳಬೇಕು. ಇದರಿಂದ ಗಾಳಿ ಅನ್ನನಾಳಕ್ಕೆ ಪ್ರಸಾರವಾಗುತ್ತದೆ. ಅದೇ ಕೆಲಸವಾಗಿ ಒತ್ತುತ್ತಿದ್ದರೆ ಗಾಳಿಗೆ ಆ ಮುಳ್ಳು ಹೊರಬರುತ್ತದೆ. ಇಲ್ಲದಿದ್ದರೆ ಜೀರ್ಣಕೋಶಕ್ಕೆ ಸೇರುತ್ತದೆ. ಅಲ್ಲಿಗೆ ತಲುಪಿದರೆ ತೊಂದರೆ ಏನೂ ಇಲ್ಲ. ಯಾವುದೇ ರೀತಿಯ ಪದಾರ್ಥವನ್ನೂ ಕರಗಿಸುವ ಶಕ್ತಿ ನಮ್ಮ ಹೊಟ್ಟೆಯಲ್ಲಿನ ಆಸಿಡ್ಗೆ ಇರುತ್ತದೆ.
- ಮೀನಿನ ಮುಳ್ಳು ಗಂಟಲಲ್ಲಿ ಸಿಕ್ಕಿಬಿದ್ದ ವ್ಯಕ್ತಿಯನ್ನು ಬಗ್ಗಲು ಹೇಳಬೇಕು. ಆಗ ಯಾರಾದರೂ ಆ ವ್ಯಕ್ತಿಯ ಬೆನ್ನಿನ ಮೇಲೆ ನಿಧಾನಕ್ಕೆ ಗುದ್ದಬೇಕು. ಇದರಿಂದ ಮುಳ್ಳು ಹೊರಬರುತ್ತದೆ. ಆ ಸಮಯದಲ್ಲಿ ಬಾಯಿ ತೆರೆದುಕೊಂಡು ಇರಬೇಕಾಗುತ್ತದೆ.
ಮೀನಿನ ಮುಳ್ಳು ಗಂಟಲಲ್ಲಿ ಸಿಕ್ಕಿಬಿದ್ದಾಗ ಒಂದು ಕಪ್ ಅನ್ನವನ್ನು ಅಗಿಯದೆ ಹಾಗೆಯೇ ನುಂಗಬೇಕು. ಕೂಡಲೆ ನೀರು ಕುಡಿಯಬೇಕು. ಇದರಿಂದ ಗಂಟಲಲ್ಲಿ ಇರುವ ಮುಳ್ಳು ಹೋಗುತ್ತದೆ. - ಒಂದು ಬಾಳೆಹಣ್ಣು ತೆಗೆದುಕೊಂಡು ಅರ್ಧ ಕಚ್ಚಿಕೊಂಡು ಅಗಿಯದೆ ಅದೇ ರೀತಿ ಅದನ್ನು ನುಂಗಬೇಕು. ಆ ಬಳಿಕ ನೀರು ಕುಡಿಯಬೇಕು. ಈ ರೀತಿ ಮಾಡಿದರೆ ಗಂಟಲಲ್ಲಿ ಸಿಕ್ಕಿಬಿದ್ದ ಮುಳ್ಳು ಹೋಗುತ್ತದೆ.
- ಎರಡು ಟೇಬಲ್ ಸ್ಫೂನ್ ಕಳ್ಳೇಬೀಜ ತೆಗೆದುಕೊಂದು ಚೆನ್ನಾಗಿ ಜಗಿದು ನುಂಗಬೇಕು. ಇವು ಸಹ ಮುಳ್ಳನ್ನು ಒಳಗೆ ತೆಗೆದುಕೊಂಡು ಹೋಗುತ್ತವೆ.ಮೀನಿನ ಮುಳ್ಳು ಗಂಟಲಲ್ಲಿ ಸಿಕ್ಕಿಬಿದ್ದಾಗ ಒಂದು ಕಪ್ ಅನ್ನವನ್ನು ಅಗಿಯದೆ ಹಾಗೆಯೇ
- ನುಂಗಬೇಕು. ಕೂಡಲೆ ನೀರು ಕುಡಿಯಬೇಕು. ಇದರಿಂದ ಗಂಟಲಲ್ಲಿ ಇರುವ ಮುಳ್ಳು ಹೋಗುತ್ತದೆ.
ಬ್ರೌನ್ ಬ್ರೆಡ್ ಪೀಸ್ ಒಂದನ್ನು ತೆಗೆದುಕೊಂಡು ಅದಕ್ಕೆ ಎರಡೂ ಕಡೆ ಪೀನಟ್ ಬಟರ್ ಸವರಬೇಕು. ಆ ಬಳಿಕ ಬ್ರೆಡ್ಡನ್ನು ಬಾಯಲ್ಲಿ ಇಟ್ಟುಕೊಂಡು ಮೆತ್ತಗೆ ಆಗುವವರೆಗೂ ಹಾಗೆಯೇ ಇರಬೇಕು. ಆ ಬಳಿಕ ಅದನ್ನು ಅಗಿಯದೆ ನುಂಬಬೇಕು. - ಕೂಡಲೆ ನೀರು ಕುಡಿಯಬೇಕು. ಇದರಿಂದ ಬ್ರೆಡ್ಗೆ ಅಂಟಿಕೊಂಡು ಮುಳ್ಳು ಹೊಟ್ಟೆ ಸೇರುತ್ತದೆ.
- ಮೇಲೆ ತಿಳಿಸಿದ ಸಲಹೆಗಳು ಕೆಲಸ ಮಾಡದಿದ್ದರೆ ಇನ್ನು ಬೇರೆ ಪ್ರಯೋಗಗಳನ್ನು ಮಾಡುವುದನ್ನು ಬಿಟ್ಟು ವೈದ್ಯರನ್ನು ಭೇಟಿಯಾಗುವುದು ಉತ್ತಮ. ಇಲ್ಲದಿದ್ದರೆ ಗಾಯವಾಗಿ ಇನ್ಫೆಕ್ಷನ್ ಆಗುವ ಸಾಧ್ಯತೆಗಳಿರುತ್ತದೆ. ಆ ಬಳಿಕ ನೋವನುಭವಿಸಿ ಪ್ರಯೋಜನವಿಲ್ಲ.
Post a Comment